ಸುರಕ್ಷತೆಯಲ್ಲಿ ಹೊಸ ಮೈಲಿಗಲ್ಲು: ಸ್ಕೋಡಾ ಕಾರುಗಳು ಇನ್ಮುಂದೆ ಮತ್ತಷ್ಟು ಸೇಫ್!
ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಹೊಸ ಕಾರುಗಳ ಸುರಕ್ಷತೆ ಹೆಚ್ಚಿಸಲು ಮಹತ್ವದ ತೀರ್ಮಾನ ಕೈಗೊಂಡಿದ್ದು, ಹೊಸ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳನ್ನು ಹೊಸ ಸೇಫ್ಟಿ ಫೀಚರ್ಸ್ ಗಳೊಂದಿಗೆ ಉನ್ನತೀಕರಿಸಿದೆ.
ದೇಶಾದ್ಯಂತ ಸುರಕ್ಷಿತ ಕಾರುಗಳ ಖರೀದಿ ಟ್ರೆಂಡ್ ಜೋರಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಾರು ಉತ್ಪಾದನಾ ಕಂಪನಿಗಳು ಹೊಸ ಸೇಫ್ಟಿ ಫೀಚರ್ಸ್ ಗಳೊಂದಿಗೆ ತಮ್ಮ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುತ್ತಿವೆ. ಸ್ಕೋಡಾ ಇಂಡಿಯಾ (Skoda India) ಕಂಪನಿಯು ಸಹ ತನ್ನ ಹೊಸ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳನ್ನು ಹೆಚ್ಚುವರಿ ಏರ್ ಬ್ಯಾಗ್ ಗಳ ಸೌಲಭ್ಯಗಳೊಂದಿಗೆ ಉನ್ನತೀಕರಿಸಿದೆ.
ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ಸ್ಕೋಡಾ ಕಂಪನಿಯು ಇನ್ಮುಂದೆ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದ್ದು, ಇವು ಅಪಘಾತಗಳ ಸಂದರ್ಭದಲ್ಲಿ ಸಂಭಾವ್ಯ ಪ್ರಾಣಿಹಾನಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲಿದೆ. ಇತ್ತೀಚೆಗೆ ವಿವಿಧ ಕಾರು ಮಾದರಿಗಳು ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳನ್ನು ಪಡೆದುಕೊಂಡಿದ್ದು, ಇದೀಗ ಸ್ಕೋಡಾ ಕೂಡಾ ತುಸು ಹೆಚ್ಚುವರಿ ಬೆಲೆಯೊಂದಿಗೆ ಹೊಸ ಫೀಚರ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲು ನಿರ್ಧರಿಸಿದೆ.
ಈ ಮೊದಲ ಮೂಲ ಮಾದರಿಗೂ ಅನ್ವಯಿಸುವಂತೆ 4 ಏರ್ ಬ್ಯಾಗ್ ಗಳನ್ನು ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 6 ಏರ್ ಬ್ಯಾಗ್ ಗಳನ್ನು ನೀಡುತ್ತಿದ್ದ ಸ್ಕೋಡಾ ಕಂಪನಿಯು ಇದೀಗ ಎಲ್ಲಾ ಮಾದರಿಗಳೂ ಒಂದೇ ಮಾದರಿಯಲ್ಲಿ ಏರ್ ಬ್ಯಾಗ್ಸ್ ಜೋಡಣೆ ಮಾಡಿದ್ದು, ಹೊಸ ಫೀಚರ್ಸ್ ಜೋಡಣೆ ನಂತರ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳ ಬೆಲೆಯಲ್ಲಿ ರೂ. 10 ಸಾವಿರದಿಂದ ರೂ. 35 ಸಾವಿರ ತನಕ ಬೆಲೆ ಹೆಚ್ಚಳವಾಗಿದೆ.
ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ
ಇನ್ನು ಗುಣಮಟ್ಟದ ಉತ್ಪಾದನೆ ಮತ್ತು ಗರಿಷ್ಠ ಸುರಕ್ಷಾ ಸೌಲಭ್ಯಗಳ ಮೂಲಕ ಈಗಾಗಲೇ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ಹೊಂದಿರುವ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ಏರ್ ಬ್ಯಾಗ್ ಉನ್ನತೀಕರಣ ಜೊತೆಗೆ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಹೊಸ ಕಾರುಗಳಲ್ಲಿ ಮೊದಲ ಬಾರಿಗೆ 360 ಡಿಗ್ರಿ ಕ್ಯಾಮೆರಾ ಸೌಲಭ್ಯವನ್ನು ಒಳಗೊಂಡ ಲೆವಲ್ 2 ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.
ಸಂಭಾವ್ಯ ಅಪಘಾತಗಳನ್ನು ತಗ್ಗಿಸುವಲ್ಲಿ ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸಾಕಷ್ಟು ಸಹಕಾರಿಯಾಗುತ್ತಿದ್ದು, ಇದು ಕಾರು ಚಾಲನೆಯಲ್ಲಿರುವಾಗ ಚಾಲಕನ ಅರಿವಿಗೆ ಬಾರದೇ ಆಗಬಹುದಾದ ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತಿದೆ. ಹೀಗಾಗಿ ಇತ್ತೀಚೆಗೆ ಬಿಡುಗಡೆಯಾಗಿರುವ ಹಲವು ಕಾರುಗಳಲ್ಲಿ ಈ ಹೊಸ ಸುರಕ್ಷಾ ಸೌಲಭ್ಯ ಪರಿಚಯಿಸಿದ್ದು, ಇದು ಗ್ರಾಹಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರಿಂದ ಸ್ಕೋಡಾ ಕಂಪನಿ ಸಹ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಿಗಾಗಿ ಹೊಸ ಫೀಚರ್ಸ್ ನೀಡಲು ಸಿದ್ದವಾಗುತ್ತಿದ್ದು, ಹೊಸ ಫೀಚರ್ಸ್ ಅನ್ನು ಹೈ ಎಂಡ್ ವೆರಿಯೆಂಟ್ ಗಳಲ್ಲಿ ನೀಡಬಹುದಾಗಿದೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಇನ್ನು ಕುಶಾಕ್ ಮತ್ತು ಸ್ಲಾವಿಯಾ ಸದ್ಯಕ್ಕೆ 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಎಲೆಗೆನ್ಸ್ ಮತ್ತು ಮಾಂಟೆ ಕಾರ್ಲೊ ಎಡಿಷನ್ ಗಳನ್ನು ಹೊಂದಿವೆ.
Published On - 5:42 pm, Tue, 30 April 24