ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್(Tata Motors) ತನ್ನ ಪ್ರಮುಖ ಕಾರು ಮಾದರಿಗಳ ಖರೀದಿ ಮೇಲೆ ಫೆಬ್ರವರಿ ಅವಧಿಗಾಗಿ ಆಕರ್ಷಕ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳನ್ನು ಈ ತಿಂಗಳಾಂತ್ಯದ ತನಕ ಪಡೆದುಕೊಳ್ಳಬಹುದಾಗಿದೆ. ಟಾಟಾ ಮೋಟಾರ್ಸ್ ಹೊಸ ಆಫರ್ ಗಳಲ್ಲಿ ಗ್ರಾಹಕರು ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದ್ದು, ಟಿಯಾಗೋ, ಟಿಗೋರ್, ಆಲ್ಟ್ರೊಜ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಮೇಲೆ ಆಕರ್ಷಕ ಆಫರ್ ಗಳು ಲಭ್ಯವಿವೆ.
ಟಾಟಾ ಮೋಟಾರ್ಸ್ ಹೊಸ ಆಫರ್ ಗಳು 2023ರ ಮಾದರಿಗಳ ಮೇಲೆ ಮಾತ್ರ ಲಭ್ಯವಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 45 ಸಾವಿರದಿಂದ ರೂ. 1.25 ಲಕ್ಷದ ತನಕ ಆಫರ್ ಪಡೆಯಬಹುದಾಗಿದೆ.
ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಫರ್ ಗಳಲ್ಲಿ ಟಿಯಾಗೋ ಹ್ಯಾಚ್ ಬ್ಯಾಕ್ ಮತ್ತು ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಖರೀದಿಸುವ ಗ್ರಾಹಕರಿಗೆ ರೂ. 75 ಸಾವಿರ ತನಕ ಆಫರ್ ನೀಡಲಾಗುತ್ತಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಟಿಯಾಗೋ ಮತ್ತು ಟಿಗೋರ್ ಕಾರುಗಳ ಸಿಎನ್ ಜಿ ಆವೃತ್ತಿಗಳ ಖರೀದಿಯ ಮೇಲೂ ಆಫರ್ ನೀಡಲಾಗುತ್ತಿದ್ದು, ಇದರಲ್ಲಿ ಬರೋಬ್ಬರಿ ರೂ. 30 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಈ ತಿಂಗಳು ಬಿಡುಗಡೆಯಾಗಲಿರುವ ಟಾಪ್ 5 ಹೊಸ ಕಾರುಗಳಿವು!
ಹೊಸ ಆಫರ್ ಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಖರೀದಿಯ ಮೇಲೆ ರೂ. 45 ಸಾವಿರ ಮೌಲ್ಯದ ಆಫರ್ ಗಳನ್ನು ಘೋಷಿಸಿದ್ದು, ಇದರಲ್ಲಿ ರೂ. 35 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಮೂರು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, 1.2 ಲೀಟರ್ ಎನ್ಎ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.
ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಹ್ಯಾರಿಯರ್ ಮತ್ತು ಸಫಾರಿ ಫೇಸ್ ಲಿಫ್ಟ್ ಮಾದರಿಗಳನ್ನು ಬಿಡುಗಡೆ ಮಾಡಿದ್ದರೂ ಸಹ ಸ್ಟಾಕ್ ನಲ್ಲಿರುವ 2023ರ ಸಫಾರಿ ಮತ್ತು ಹ್ಯಾರಿಯರ್ ಮಾದರಿಗಳ ಮೇಲೆ ಆಫರ್ ನೀಡಲಾಗುತ್ತಿದೆ. ಹೊಸ ಆಫರ್ ಗಳಲ್ಲಿ ಸಫಾರಿ ಮತ್ತು ಹ್ಯಾರಿಯರ್ ಕಾರು ಖರೀದಿಸುವ ಗ್ರಾಹಕರು ರೂ. 1.25 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದ್ದು, ಇದರಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಒಳಗೊಂಡಿರಲಿವೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಕಡ್ಡಾಯವಾಗಿರುವ ಫಾಸ್ಟ್‌ಟ್ಯಾಗ್ ಕೆವೈಸಿ ಮಾಡುವುದು ಹೇಗೆ?
ಇನ್ನು ಹೊಸ ಆಫರ್ ಗಳಲ್ಲಿ ನೆಕ್ಸಾನ್ ಕೂಡಾ ಭಾರೀ ಪ್ರಮಾಣದ ಡಿಸ್ಕೌಂಟ್ ನಲ್ಲಿ ಖರೀದಿಗೆ ಲಭ್ಯವಿದೆ. 2023ರ ನೆಕ್ಸಾನ್ ಕಾರು ಖರೀದಿಯ ಮೇಲೆ ಒಟ್ಟು ರೂ. 60 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ನೆಕ್ಸಾನ್ ಕಾರಿನ ಪೆಟ್ರೋಲ್ ಮ್ಯಾನುವಲ್ ಆವೃತ್ತಿಗಳ ಮೇಲೆ ರೂ. 40 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್ ಮತ್ತು ಪೆಟ್ರೋಲ್ ಎಎಂಟಿ ಆವೃತ್ತಿಗಳ ಮೇಲೆ ರೂ. 20 ಸಾವಿರ ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದೆ.
Published On - 10:20 pm, Fri, 9 February 24