Tata Curvv: ಟಾಟಾ ಕರ್ವ್ ಎಸ್​ಯುವಿ ಕೂಪೆ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್

|

Updated on: Jul 19, 2024 | 6:12 PM

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಕರ್ವ್ ಎಸ್ ಯುವಿ ಕೂಪೆ ಅನಾವರಣಗೊಳಿಸಿದ್ದು, ಹೊಸ ಕಾರು ಕೇವಲ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾತ್ರವಲ್ಲದೆ ಪೆಟ್ರೋಲ್, ಡೀಸೆಲ್ ಆಯ್ಕೆಯಲ್ಲೂ ಗಮನಸೆಳೆಯಲಿದೆ.

Tata Curvv: ಟಾಟಾ ಕರ್ವ್ ಎಸ್​ಯುವಿ ಕೂಪೆ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್
ಟಾಟಾ ಕರ್ವ್ ಎಸ್​ಯುವಿ ಕೂಪೆ
Follow us on

ಹೊಸ ತಲೆಮಾರಿನ ವೈಶಿಷ್ಟ್ಯತೆಗಳ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸತ್ತಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಹೊಸದಾಗಿ ಕರ್ವ್ ಎಸ್ ಯುವಿ ಕೂಪೆ ಶೈಲಿಯ ಕಾರು ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಎಲೆಕ್ಟ್ರಿಕ್ ಮತ್ತು ಸಾಂಪ್ರಾದಾಯಿಕ ಪೆಟ್ರೋಲ, ಡೀಸೆಲ್ ಎಂಜಿನ್ ಆಯ್ಕೆ ಹೊಂದಿರಲಿದೆ. ಇದರಲ್ಲಿ ಮೊದಲಿಗೆ ಎಲೆಕ್ಟ್ರಿಕ್ ಆವೃತ್ತಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಾಗುತ್ತಿದ್ದು, 2025ರ ಮೊದಲಾರ್ಧದಲ್ಲಿ ಸಾಮಾನ್ಯ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಅಗಸ್ಟ್ 7ರಂದು ಟಾಟಾ ಹೊಸ ಕರ್ವ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಏರೋಡೈನಾಮಿಕ್ ವಿನ್ಯಾಸದೊಂದಿಗೆ ಸಖತ್ ಸ್ಪೋರ್ಟಿಯಾಗಲಿದೆ. ಹೊಸ ಕಾರಿನಲ್ಲಿ ಎತ್ತರದ ವ್ಹೀಲ್ ನೊಂದಿಗೆ ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯೆರೆನ್ಸ್ ನೀಡಲಾಗಿದ್ದು, ಇದು ವೇಗ ಚಾಲನೆಯ ಸಂದರ್ಭದಲ್ಲೂ ಅತ್ಯುತ್ತಮ ರೀತಿಯಲ್ಲಿ ನಿಯಂತ್ರಣ ಹೊಂದಿದೆ.

ಇದನ್ನೂ ಓದಿ: ಐತಿಹಾಸಿಕ ತೀರ್ಪು: FIR ವಿಳಂಬಕ್ಕಾಗಿ ಕದ್ದ ವಾಹನಗಳಿಗೆ ವಿಮಾ ಕ್ಲೈಮ್‌ ನಿರಾಕರಿಸುವಂತಿಲ್ಲ!

ಹೊಸ ಕರ್ವ್ ಇವಿ ಕಾರು ಮಾದರಿಯು ನೆಕ್ಸಾನ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣಗೊಂಡಿದ್ದು, ಇದು ವಿನೂತನ ಫೀಚರ್ಸ್ ಗಳೊಂದಿಗೆ ಕೂಪೆ ಎಸ್ ಯುವಿ ವೈಶಿಷ್ಟ್ಯತೆ ಹೊಂದಿದೆ. ಜೊತೆಗೆ ಹೊಸ ಇವಿ ಮಾದರಿಯಲ್ಲಿ ನೆಕ್ಸಾನ್ ಇವಿಗಿಂತೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಮತ್ತು ಹೊಸ ಸುರಕ್ಷಾ ಮಾನದಂಡಗಳನ್ನು ಒಳಗೊಂಡ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, ಇದು ಪ್ರತಿ ಚಾರ್ಜ್ ಗೆ 450 ರಿಂದ 500 ಕಿ.ಮೀ ಮೈಲೇಜ್ ನೀಡಬಹುದಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹರಿಗೆ ಪನೊರಮಿಕ್ ಗ್ಲಾಸ್ ರೂಫ್ ಅಳವಡಿಸಲಾಗಿದ್ದು, ಇದು ಕ್ಯಾಬಿನ್‌ ಒಳಭಾಗದಲ್ಲಿ ಹೆಚ್ಚಿನ ಮಟ್ಟದ ನೈಸರ್ಗಿಕ ಬೆಳಕು ನೀಡುತ್ತದೆ. ಇದರೊಂದಿಗೆ ದೂರದ ಪ್ರಯಾಣಕ್ಕೂ ಅನೂಕರವಾಗುವಂತೆ ಒಳಭಾಗದಲ್ಲಿ ಸಾಕಷ್ಟು ಸ್ಥಳಾವಕಾಶ ನೀಡಲಾಗಿದ್ದು, ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬೂಟ್ ಸ್ಪೇಸ್ ಅನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಹಾಗೆಯೇ ಹೊಸ ಕಾರಿನಲ್ಲಿ ಸುಧಾರಿತ ಮಾಹಿತಿಗಾಗಿ ದೊಡ್ಡದಾದ ಟಚ್ ಸ್ಕ್ರೀನ್‌ ಮತ್ತು ಸಂಪರ್ಕಿತ ಕಾರ್ ತಂತ್ರಜ್ಞಾನನೊಂದಿಗೆ ಸ್ಮಾರ್ಟ್ ಫೀಚರ್ಸ್ ನೀಡಲಾಗಿದ್ದು, ಸುರಕ್ಷತೆಯಲ್ಲೂ ಹೊಸ ಕಾರು ಗಮನಸೆಳೆಯಲಿದೆ. ಸದ್ಯಕ್ಕೆ ಕರ್ವ್ ಇವಿ ಕಾರಿನ ಉತ್ಪಾದನಾ ಮಾದರಿಯನ್ನು ಮಾತ್ರ ಅನಾವರಣಗೊಳಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಅಗಸ್ಟ್ 7ರಂದು ಸಂಪೂರ್ಣ ತಾಂತ್ರಿಕ ಮಾಹಿತಿಯೊಂದಿಗೆ ಬೆಲೆ ವಿವರಗಳನ್ನು ಹಂಚಿಕೊಳ್ಳಲಿದೆ.