ಐತಿಹಾಸಿಕ ತೀರ್ಪು: FIR ವಿಳಂಬಕ್ಕಾಗಿ ಕದ್ದ ವಾಹನಗಳಿಗೆ ವಿಮಾ ಕ್ಲೈಮ್‌ ನಿರಾಕರಿಸುವಂತಿಲ್ಲ!

ಎಫ್‌ಐಆರ್ ಸಲ್ಲಿಸುವಲ್ಲಿನ ವಿಳಂಬದ ಕಾರಣದಿಂದಾಗಿ ಕದ್ದ ವಾಹನಗಳಿಗೆ ಕ್ಲೈಮ್‌ ಅನ್ನು ವಿಮಾ ಕಂಪನಿಗಳು ತಿರಸ್ಕರಿಸುವಂತಿಲ್ಲ ಎಂದು ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.

ಐತಿಹಾಸಿಕ ತೀರ್ಪು: FIR ವಿಳಂಬಕ್ಕಾಗಿ ಕದ್ದ ವಾಹನಗಳಿಗೆ ವಿಮಾ ಕ್ಲೈಮ್‌ ನಿರಾಕರಿಸುವಂತಿಲ್ಲ!
ಗ್ರಾಹಕರ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು
Follow us
|

Updated on:May 29, 2024 | 8:09 PM

ಭಾರತದಲ್ಲಿ ವಾಹನ ಕಳ್ಳತನ ( Vehicle Theft ) ಪ್ರಕರಣಗಳು ಸಾಮಾನ್ಯವಾಗಿದ್ದು, ವಾಹನಗಳ ಕಳ್ಳತನ ತಡೆಯಲು ಹಲವಾರು ಕಠಿಣ ಕ್ರಮಗಳ ಹೊರತಾಗಿಯೂ ದಿನಂಪ್ರತಿ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ವಾಹನಗಳ ಕಳ್ಳತನದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಮಾಲೀಕರಿಗೆ ವಿಮೆ ಸಹಕಾರಿಯಾಗಿದ್ದು, ವಿವಿಧ ವಿಮಾ ಆಯ್ಕೆಗಳು ಕಳ್ಳತನ ಸೇರಿದಂತೆ ಸಂಭಾವ್ಯ ನಷ್ಟಗಳನ್ನು ಭರಿಸಲು ಸಹಕಾರಿಯಾಗಿವೆ. ಆದರೆ ಕಳ್ಳತನವಾದ ವಾಹನಗಳಿಗೆ ವಿಮೆ ಪರಿಹಾರ ಪಡೆದುಕೊಳ್ಳಲು ಕೆಲವು ನಿಯಮಗಳನ್ನು ಪಾಲನೆ ಮಾಡುವುದು ಕೂಡಾ ತುಂಬಾ ಮುಖ್ಯವಾಗಿದೆ.

ಹೌದು, ಭಾರತದಲ್ಲಿ ಪ್ರತಿಯೊಂದು ವಾಹನಗಳಿಗೂ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದು, ವಿವಿಧ ವಿಮಾ ಆಯ್ಕೆಗಳೊಂದಿದೆ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಕಳ್ಳತನ ಸೇರಿದಂತೆ ಸಂಭಾವ್ಯ ನಷ್ಟಗಳನ್ನು ಭರಿಸಲು ಸಹಕಾರಿಯಾಗಿದೆ. ಹೀಗಾಗಿ ಕಳ್ಳತನವಾದ ವಾಹನಗಳಿಗೆ ವಿಮೆ ಪಡೆದುಕೊಳ್ಳಲು ಬಯಸುವುದಾರೇ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ವಾಹನ ಕಳ್ಳತನದ ನಂತರ ಎಫ್‌ಐಆರ್ ದಾಖಲು ಮಾಡುವುದರಿಂದ ಹಿಡಿದು ಅನೇಕ ನಿಯಮಗಳನ್ನು ಪಾಲಿಸಬೇಕಿದ್ದು, ತದನಂತರವಷ್ಟೇ ಮಾಲೀಕರಿಗೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಆದರೆ ಇಲ್ಲದೊಂದು ಪ್ರಕರಣದಲ್ಲಿ ವಾಹನದ ಮಾಲೀಕನು ಎಫ್‌ಐಆರ್ ಸಲ್ಲಿಕೆಯ ವಿಳಂಬದಿಂದಾಗಿ ವಿಮಾ ಕ್ಲೈಮ್ ಮಾಡಲು ಪರದಾಡಿದ ಘಟನೆ ನಡೆದಿದೆ. ಕೊನೆಗೆ ವಾಹನ ಮಾಲೀಕನ ಪರ ನಿಂತಿರುವ ಗ್ರಾಹಕ ನ್ಯಾಯಾಲವು ಐತಿಹಾಸಿಕ ತೀರ್ಪು ಪ್ರಕಟಿಸಿದ್ದು, ಎಫ್‌ಐಆರ್ ವಿಳಂಬದಿಂದಾಗಿ ಕದ್ದ ವಾಹನಗಳಿಗೆ ವಿಮಾ ಕ್ಲೈಮ್‌ ನಿರಾಕರಿಸುವಂತಿಲ್ಲ ಎಂದು ತೀರ್ಪು ಪ್ರಕಟಿಸಿದೆ.

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ರೈತರೊಬ್ಬರ ಟ್ರ್ಯಾಕ್ಟರ್ ಕಳ್ಳತನ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯವು ಈ ತೀರ್ಪು ಪ್ರಕಟಿಸಿದ್ದು, ಎಫ್‌ಐಆರ್ ನೋಂದಣಿಯಲ್ಲಿನ ವಿಳಂಬದ ಆಧಾರದ ಮೇಲೆ ಹಕ್ಕು ನಿರಾಕರಿಸುವುದು ಅನ್ಯಾಯ ಮತ್ತು ಅಸಮಂಜಸವಾಗಿದೆ ಎಂದು ತೀರ್ಪು ಪ್ರಕಟಿಸಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಇನ್ನು ಪ್ರಕರಣದ ಹಿನ್ನಲೆ ನೋಡುವುದಾದರೇ, ಲಾತೂರ್ ಜಿಲ್ಲೆಯ ರೈತರೊಬ್ಬರಿಗೆ ಸೇರಿದ ಟ್ರ್ಯಾಕ್ಟರ್ ಕಳೆದ ಕೆಲವು ವರ್ಷಗಳ ಹಿಂದೆ ಕಳ್ಳತನವಾಗಿತ್ತು.  ಟ್ರ್ಯಾಕ್ಟರ್ ಕಳ್ಳತನವಾದ ಸಂದರ್ಭದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ. ಆದರೆ ಸುದೀರ್ಘ ಹೋರಾಟ ಮತ್ತು ಹಲವು ಪ್ರತಿಭಟನೆಗಳ ನಂತರವಷ್ಟೇ ಪೊಲೀಸರು ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಕಳ್ಳತನವಾದ ವಾಹನವು ಟಾಟಾ ಎಜಿಐ ಇನ್ಸುರೆನ್ಸ್ ಹೊಂದಿತ್ತು. ಹೀಗಾಗಿ ಎಫ್ಐಆರ್ ನಂತರ ರೈತನು ವಿಮಾ ಕಂಪನಿಯನ್ನು ಕ್ಲೈಮ್‌ಗಾಗಿ ಸಂಪರ್ಕಿಸಿದ್ದಾರೆ. ಆದರೆ ಎಫ್‌ಐಆರ್ ದಾಖಲಿಸಲು ವಿಳಂಬವಾದ ಕಾರಣಕ್ಕೆ ವಿಮಾ ಕಂಪನಿಯು ರೈತನ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ರೈತನಿಗೆ ಇದೀಗ ವಿಮೆ ಪರಿಹಾರ ದೊರೆತಿದ್ದು, ಇದೊಂದು ಐತಿಹಾಸ ತೀರ್ಪು ಎನ್ನಬಹುದಾಗಿದೆ.

Published On - 8:00 pm, Wed, 29 May 24