TATA Sierra: ಭಾರತದಲ್ಲಿ ಬಹುನಿರೀಕ್ಷಿತ ಟಾಟಾ ಸಿಯೆರಾ ಕಾರು ಅನಾವರಣ: ಮೂಲೆಗುಂಪಾಗುತ್ತ ಕ್ರೆಟಾ?
ಟಾಟಾ ಸಿಯೆರಾ ಭಾರತದಲ್ಲಿ ಅನಾವರಣಗೊಂಡಿದೆ. ಇದು ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದು ಪನೋರಮಿಕ್ ರೂಫ್, ಟ್ರಿಪಲ್-ಸ್ಕ್ರೀನ್ ಸೆಟಪ್ ಮತ್ತು ಡಾಲ್ಬಿ ಅಟ್ಮಾಸ್ ಆಡಿಯೊ ಸಿಸ್ಟಮ್‌ನಂತಹ ವೈಶಿಷ್ಟ್ಯಗಳೊಂದಿಗೆ ಆಧುನಿಕ ವಿನ್ಯಾಸವನ್ನು ಹೊಂದಿರುತ್ತದೆ. ಉಳಿದಂತೆ ಇದರಲ್ಲಿ ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಬೆಂಗಳೂರು (ನ. 17): ಟಾಟಾ ಕಂಪನಿಯ ಬಹುನಿರೀಕ್ಷಿತ ಹೊಸ ಟಾಟಾ ಸಿಯೆರಾವನ್ನು (TATA Car) ನವೆಂಬರ್ 25, 2025 ರಂದು ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ, ಇದೀಗ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಈ ಎಸ್‌ಯುವಿ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ – ಬಹು ಪವರ್‌ಟ್ರೇನ್ ಆಯ್ಕೆಗಳಲ್ಲಿ ಬರಲಿದೆ ಎಂದು ವಾಹನ ತಯಾರಕರು ದೃಢಪಡಿಸಿದ್ದಾರೆ. ಟಾಟಾ ಸಿಯೆರಾ 90 ರ ದಶಕದ ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದು. ನಂತರ ಇದನ್ನು ಸ್ಥಗಿತಗೊಳಿಸಲಾಯಿತು, ಈಗ ಕಂಪನಿಯು ಇದನ್ನು ಹೊಸ ಅವತಾರದಲ್ಲಿ ಪರಿಚಯಿಸಿದೆ. ಈ ಹೊಸ ಕಾರು ಹಳೆಯ ವಿನ್ಯಾಸವನ್ನು ಉಳಿಸಿಕೊಂಡಿದೆಯಾದರೂ ಹೊಸ ವೈಶಿಷ್ಟ್ಯಗಳು ಮತ್ತು ನೋಟದೊಂದಿಗೆ ಜನರವನ್ನು ಬೆರಗುಗೊಳಿಸಿದೆ.
ಹೊಸ ಸಿಯೆರಾದ ವಿನ್ಯಾಸವು ಹಳೆಯ ಮಾದರಿಯನ್ನು ನೆನಪಿಸುತ್ತದೆ ಆದರೆ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಹಲವು ಉತ್ತಮ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇದು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಹಿಂಭಾಗದ ಸನ್‌ಶೇಡ್‌ಗಳು, 360 ಡಿಗ್ರಿ ಕ್ಯಾಮೆರಾ, ಲೆವೆಲ್-2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ನಂತಹ ಹಲವು ಹೈಟೆಕ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಪ್ರಯಾಣಿಕರ ಸುರಕ್ಷತೆಗಾಗಿ, 6 ಏರ್‌ಬ್ಯಾಗ್‌ಗಳು, ABS (ಆಂಟಿ-ಕ್ರ್ಯಾಶ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ನಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ಒದಗಿಸಲಾಗಿದೆ. ಇದರ ಹೊರತಾಗಿ, ಲೇನ್ ಅಸಿಸ್ಟ್ ಮತ್ತು ಆಟೋ ಬ್ರೇಕಿಂಗ್ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ. ಆಟೋ ಡಿಮ್ಮಿಂಗ್ IRVM, ಪನೋರಮಿಕ್ ಸನ್‌ರೂಫ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಆಂಬಿಯೆಂಟ್ ಲೈಟಿಂಗ್ ಇತ್ಯಾದಿಗಳನ್ನು ಒಳಗೊಂಡಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಒದಗಿಸಿದೆ.
Pakistan Car Price: ಪಾಕಿಸ್ತಾನದಲ್ಲಿ ಗಗನಕ್ಕೇರಿದ ಕಾರುಗಳ ಬೆಲೆ: ವ್ಯಾಗನ್ಆರ್ ಬೆಲೆ ಬರೋಬ್ಬರಿ 32 ಲಕ್ಷ
ಹೊಸ ಟಾಟಾ ಸಿಯೆರಾದ ಒಳಭಾಗವನ್ನು ಸಹ ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಕ್ಯಾಬಿನ್ ಟ್ರಿಪಲ್-ಸ್ಕ್ರೀನ್ ಸೆಟಪ್ ಅನ್ನು ಒಳಗೊಂಡಿದೆ, ಇದರಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮುಂಭಾಗದ ಪ್ರಯಾಣಿಕರಿಗೆ 12.3-ಇಂಚಿನ ಡಿಸ್ಪ್ಲೇ ಸೇರಿವೆ. ಕಂಪನಿಯು ಡಾಲ್ಬಿ ಅಟ್ಮಾಸ್‌ನೊಂದಿಗೆ 12-ಸ್ಪೀಕರ್ JBL ಬ್ಲಾಕ್ ಆಡಿಯೊ ಸಿಸ್ಟಮ್ ಅನ್ನು ದೃಢಪಡಿಸಿದೆ.
ಸಿಯೆರಾದ ICE ಮಾದರಿಯು 1.5L ಪೆಟ್ರೋಲ್ ಮತ್ತು 1.5L ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಎಲೆಕ್ಟ್ರಿಕ್ (EV) ಆವೃತ್ತಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಲಿದ್ದು, 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಮಧ್ಯಮ ಗಾತ್ರದ SUV ವಿಭಾಗದಲ್ಲಿ, ಹೊಸ ಸಿಯೆರಾ, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ವಿಕ್ಟೋರಿಸ್ ಮತ್ತು ಟೊಯೋಟಾ ಹೈ ರೈಡರ್‌ಗಳೊಂದಿಗೆ ಸ್ಪರ್ಧಿಸಲಿದೆ. ಆರಂಭಿಕ ಹಂತದ ಪೆಟ್ರೋಲ್ ಆವೃತ್ತಿಯ ಬೆಲೆ ಸುಮಾರು ₹11 ಲಕ್ಷ ಆಗಿರುವ ನಿರೀಕ್ಷೆಯಿದ್ದರೆ, ಟಾಪ್-ಎಂಡ್ ICE ಟ್ರಿಮ್ ಸುಮಾರು ₹20 ಲಕ್ಷ ಆಗುವ ನಿರೀಕ್ಷೆಯಿದೆ. ಟಾಟಾ ಸಿಯೆರಾ EV ಬೆಲೆ ₹20 ಲಕ್ಷದಿಂದ ₹25 ಲಕ್ಷದವರೆಗೆ ಇರಲಿದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




