Best Compact SUVs: ಅತಿಹೆಚ್ಚು ಮಾರಾಟವಾದ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!
ಕಂಪ್ಯಾಕ್ಟ್ ಎಸ್ ಯುವಿ ಕಾರು ಮಾರಾಟವು ಸದ್ಯ ಅತಿ ಹೆಚ್ಚು ಬೇಡಿಕೆಯ ಕಾರು ವಿಭಾಗವಾಗಿ ಹೊರಹೊಮ್ಮಿದ್ದು, ಈ ವಿಭಾಗದಲ್ಲಿರುವ ವಿವಿಧ ಕಾರು ಮಾದರಿಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಇವುಗಳಲ್ಲಿ ಹ್ಯುಂಡೈ, ಟಾಟಾ ಮೋಟಾರ್ಸ್ ಮತ್ತು ಕಿಯಾ ಕಾರುಗಳು ಪ್ರಮುಖವಾಗಿದ್ದು, ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಹೊಸ ಕಾರುಗಳಿಗೆ (New Cars) ಭರ್ಜರಿ ಬೇಡಿಕೆ ದಾಖಲಾಗುತ್ತಿದೆ. ಹೊಸ ಕಾರುಗಳ ಮಾರಾಟ ಪ್ರಮಾಣವು ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದರಲ್ಲಿ ಕಂಪ್ಯಾಕ್ಟ್ ಎಸ್ ಯುವಿಗಳ (Compact SUV’s) ಅಬ್ಬರ ಜೋರಾಗಿದೆ. ಕಂಪ್ಯಾಕ್ಟ್ ಎಸ್ ಯುವಿ ಕಾರುಗಳು ದಿನಬಳಕೆ ಜೊತೆಗೆ ದೂರದ ಪ್ರಯಾಣಕ್ಕೂ ಸಾಕಷ್ಟು ಅನುಕೂಲಕವಾಗಿದ್ದು, ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಹಾಗಾದ್ರೆ ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳು ಯಾವವು? ಅವುಗಳ ವಿಶೇಷತೆಯೇನು? ಎನ್ನುವ ಮಾಹಿತಿ ಇಲ್ಲಿದೆ.
ಕಂಪ್ಯಾಕ್ಟ್ ಎಸ್ ಯುವಿ ಕಾರು ವಿಭಾಗದಲ್ಲಿ ಸದ್ಯ ಹ್ಯುಂಡೈ ಕ್ರೆಟಾ ಮೊದಲ ಸ್ಥಾನದಲ್ಲಿದೆ. ಇದು ಕಳೆದ ತಿಂಗಳು ಬರೋಬ್ಬರಿ 15,276 ಯುನಿಟ್ ಮಾರಾಟದೊಂದಿಗೆ ಪ್ರತಿಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ. ಶೇ. 46.59 ವಾರ್ಷಿಕ ಬೆಳವಣಿಗೆಯೊಂದಿಗೆ ತನ್ನ ವಿಭಾಗದಲ್ಲಿ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಇದು ಇತ್ತೀಚೆಗೆ ಎನ್ ಲೈನ್ ಆವೃತ್ತಿಯಲ್ಲೂ ಬಿಡುಗಡೆಯಾಗಿದ್ದು, ವಿವಿಧ ಎಂಜಿನ್ ಆಯ್ಕೆ ಹೊಂದಿದೆ.
ಇದನ್ನೂ ಓದಿ: ಮೊದಲ ಬಾರಿ ಹೊಸ ಕಾರು ಖರೀದಿಸುತ್ತಿದ್ದೀರಾ? ಈ ವಿಚಾರಗಳು ತಪ್ಪದೇ ತಿಳಿದಿರಲಿ..
ಕ್ರೆಟಾ ನಂತರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕೂಡಾ ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಗ್ರ್ಯಾಂಡ್ ವಿಟಾರಾ ಕಾರು ಆಕರ್ಷಕ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿದ್ದು, ಇದು ಕಳೆದ ತಿಂಗಳು 11,002 ಯುನಿಟ್ ಮಾರಾಟಗೊಂಡಿದೆ. ಹಾಗೆಯೇ ಕಂಪ್ಯಾಕ್ಟ್ ಎಸ್ ಯುವಿ ಕಾರು ವಿಭಾಗದಲ್ಲಿ ಕಿಯಾ ಸೆಲ್ಟೊಸ್ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಸೆಲ್ಟೊಸ್ ಕಾರು ಮಾದರಿಯು ಕಳೆದ ತಿಂಗಳು 6,265 ಯುನಿಟ್ ಮಾರಾಟಗೊಂಡಿದ್ದು, ಇದು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.
ಹಾಗೆಯೇ ಕಿಯಾ ಸೆಲ್ಟೊಸ್ ಗೆ ಉತ್ತಮ ಪೈಪೋಟಿ ನೀಡಿರುವ ಟೊಯೊಟಾ ಹೈರೈಡರ್ ಕೂಡಾ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಇದು ಕಳೆದ ತಿಂಗಳು 5,601 ಯುನಿಟ್ ಮಾರಾಟಗೊಂಡಿದೆ. ಹೈರೈಡರ್ ಕಾರು ಮಾದರಿಯು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ರೀಬ್ಯಾಡ್ಜ್ ಮಾದರಿಯಾಗಿದ್ದು, ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಅತ್ಯುತ್ತಮ ಫೀಚರ್ಸ್ ಹೊಂದಿದೆ.
ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಇನ್ನು ಕಂಪ್ಯಾಕ್ಟ್ ಎಸ್ ಯುವಿ ಕಾರು ವಿಭಾಗಕ್ಕೆ ಇತ್ತೀಚೆಗೆ ಎಂಟ್ರಿ ಕೊಟ್ಟಿರುವ ಹೋಂಡಾ ಎಲಿವೇಟ್ ಸಹ ಗಮನಸೆಳೆಯುತ್ತಿದೆ. ಇದು ಪ್ರಮುಖ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಿದ್ದು, ಇದು ಕಳೆದ ತಿಂಗಳು 3,184 ಯುನಿಟ್ ಮಾರಾಟಗೊಂಡಿದೆ. ಎಲಿವೇಟ್ ನೊಂದಿಗೆ ಫೋಕ್ಸ್ ವ್ಯಾಗನ್ ಟೈಗುನ್, ಎಂಜಿ ಆಸ್ಟರ್ ಮತ್ತು ಸಿಟ್ರನ್ ಸಿ3 ಏರ್ ಕ್ರಾಸ್ ಕಾರುಗಳು ಕೂಡಾ ಉತ್ತಮ ಬೆಳವಣಿಗೆ ಸಾಧಿಸಿದ್ದು, ಈ ಮೂರು ಕಾರುಗಳು ಕಳೆದ ತಿಂಗಳು 3 ಸಾವಿರಕ್ಕೂ ಅಧಿಕ ಯುನಿಟ್ ಮಾರಾಟಗೊಂಡಿವೆ.