AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Car Buying Guide: ಮೊದಲ ಬಾರಿ ಹೊಸ ಕಾರು ಖರೀದಿಸುತ್ತಿದ್ದೀರಾ? ಈ ವಿಚಾರಗಳು ತಪ್ಪದೇ ತಿಳಿದಿರಲಿ..

ಹೊಸ ಕಾರು ಖರೀದಿಯ ವೇಳೆ ಹಲವಾರು ಗ್ರಾಹಕರು ಗೊಂದಲಕ್ಕೆ ಒಳಗಾಗುವುದು ಸಹಜ. ಯಾಕೆಂದ್ರೆ ಯಾವ ಮಾದರಿಯ ಕಾರು ಖರೀದಿಸಬೇಕು? ಯಾವುದನ್ನು ಖರೀದಿಸಿದರೆ ಸೂಕ್ತ? ಎನ್ನುವ ಮಾಹಿತಿಯನ್ನು ತಪ್ಪದೇ ತಿಳಿಯಬೇಕು. ಇಲ್ಲವಾದಲ್ಲಿ ಕಾರು ಖರೀದಿಯು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಬಹುದಾಗಿದ್ದು, ಕೆಲವು ಅಂಶಗಳನ್ನು ಗಮನದಲ್ಲಿಡುವುದು ಮುಖ್ಯವಾಗಿರುತ್ತದೆ.

Car Buying Guide: ಮೊದಲ ಬಾರಿ ಹೊಸ ಕಾರು ಖರೀದಿಸುತ್ತಿದ್ದೀರಾ? ಈ ವಿಚಾರಗಳು ತಪ್ಪದೇ ತಿಳಿದಿರಲಿ..
ಹೊಸ ಕಾರು ಖರೀದಿಗೂ ಮುನ್ನ ತಿಳಿಯಬೇಕಾದ ವಿಚಾರಗಳು
Praveen Sannamani
|

Updated on: Feb 12, 2024 | 7:33 PM

Share

ಹೊಸ ಕಾರುಗಳನ್ನು (New Cars) ಖರೀದಿಸುವುದು ಪ್ರತಿಯೊಬ್ಬರ ಕನಸು ಅಂದ್ರೆ ತಪ್ಪಾಗುವುದಿಲ್ಲ. ಆದರೆ ನಾವು ಖರೀದಿಸುವ ಹೊಸ ಕಾರು ತಮ್ಮ ಅಗತ್ಯಕ್ಕೆ ತಕ್ಕಂತೆ ಇದೆಯಾ ಅನ್ನೋದು ಮುಖ್ಯ ವಿಚಾರ. ಹೀಗಾಗಿ ನಾವು ಖರೀದಿ ಮಾಡಬೇಕಾದ ಹೊಸ ಕಾರು ಹೇಗಿರಬೇಕು? ಯಾವ ಮಾದರಿಯ ಕಾರು ಖರೀದಿ ಮಾಡಿದ್ರೆ ಸೂಕ್ತವಾಗಿರುತ್ತೆ? ಅನ್ನೋದು ಕೂಡಾ ತುಂಬಾ ಮುಖ್ಯವಾಗಿರುತ್ತೆ. ಹೀಗಾಗಿ ಹೊಸ ಕಾರು ಖರೀದಿಸುವ ಮುನ್ನ ಕೆಲವು ವಿಚಾರಗಳನ್ನು ತಪ್ಪದೇ ತಿಳಿದುಕೊಳ್ಳಬೇಕಿದ್ದು, ಇವು ನಿಮ್ಮ ಕಾರು ಖರೀದಿಯ ಯೋಜನೆಯನ್ನು ಸುಲಭಗೊಳಿಸುತ್ತವೆ.

ಆದ್ಯತೆಗೆ ಅನುಗುಣವಾಗಿ ಕಾರು ಮಾದರಿ ಆಯ್ಕೆ

ಹೊಸ ಕಾರನ್ನು ಖರೀದಿಸುವ ಮೊದಲು ನೀವು ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಆ ಅವಶ್ಯಕತೆಗೆ ಸರಿಹೊಂದುವ ಕಾರನ್ನು ಖರೀದಿಸುವುದು ಬಹಳ ಮುಖ್ಯವಾಗಿರುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದೆ ಎನ್ನುವ ಆಧಾರದ ಮೇಲೆ ಕಾರು ಖರೀದಿಸಲು ಮುಂದಾದರೆ ಅದು ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವುದಿಲ್ಲ. ಹೀಗಾಗಿ ನಿಮ್ಮ ಆದ್ಯತೆಗೆ ಅನುಗುಣವಾಗಿ ಹ್ಯಾಚ್ ಬ್ಯಾಕ್, ಎಸ್ ಯುವಿ ಅಥವಾ ಸೆಡಾನ್ ಸೆಗ್ಮೆಂಟ್ ಕಾರುಗಳನ್ನು ಖರೀದಿಸಿ. ಜೊತೆಗೆ ಅಗತ್ಯಕ್ಕೆ ತಕ್ಕಂತೆ ಮ್ಯಾನುವಲ್, ಆಟೋಮ್ಯಾಟಿಕ್ ಅಥವಾ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಗಳನ್ನು ಆಯ್ಕೆ ಮಾಡಬಹುದಾಗಿದೆ.

ಬಜೆಟ್ ಮೇಲೆ ಕಾರು ಖರೀದಿಸಿ

ನಿಮ್ಮ ಹೊಸ ಕಾರನ್ನು ಖರೀದಿಸಲು ಹೊರಡುವ ಮೊದಲು ಬಜೆಟ್ ಎಷ್ಟಿದೆ ಮತ್ತು ಬಜೆಟ್ ಹೊಂದಿಸಲು ಇರುವ ಆಯ್ಕೆಗಳನ್ನು ದೃಡಪಡಿಸಿಕೊಳ್ಳಿ. ಆಗ ನೀವು ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ಹೊಸ ಕಾರನ್ನು ಆಯ್ಕೆ ಮಾಡಬಹುದಾಗಿದ್ದು, ಇದು ನಿಮ್ಮ ಭವಿಷ್ಯದ ಹಣಕಾಸು ಯೋಜನೆಗೆ ಅಡ್ಡಿಯಾಗುವುದನ್ನು ತಪ್ಪಿಸುತ್ತದೆ. ಇಲ್ಲವಾದಲ್ಲಿ ಹೊಸ ಕಾರು ಖರೀದಿ ನಿಮ್ಮನ್ನು ನಿಧಾನವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಅತ್ಯುತ್ತಮ ರೀಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಮಾರುಕಟ್ಟೆ ಅರ್ಥೈಸಿಕೊಳ್ಳಿ

ಹೊಸ ಕಾರು ಖರೀದಿಗೆ ಯೋಜನೆ ರೂಪಿಸಿದ ನಂತರ ಮೊದಲು ವಾಹನ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ಖರೀದಿ ಆಯ್ಕೆಗಳನ್ನು ವಿಶ್ಲೇಷಣೆ ಮಾಡಿ. ತದನಂತರವಷ್ಟೇ ನಿಮ್ಮ ಹೊಸ ಆಯ್ಕೆ ಮಾಡುವ ಮೂಲಕ ಅಗತ್ಯವಿರುವ ವೈಶಿಷ್ಟ್ಯಗಳು ಮತ್ತು ಆದ್ಯತೆಗಳ ಪಟ್ಟಿಯನ್ನು ಮಾಡಿ. ಇವು ಅನಗತ್ಯ ಆಕ್ಸೆಸರಿಸ್ ಆಯ್ಕೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಲಿದ್ದು, ಆರ್ಥಿಕ ಹೊರೆ ತಗ್ಗಿಸಬಹುದಾಗಿದೆ.

ಟೆಸ್ಟ್ ಡ್ರೈವ್‌ಗಳನ್ನು ತೆಗೆದುಕೊಳ್ಳಿ

ಹೊಸ ಕಾರು ಖರೀದಿಗೂ ಮುನ್ನ ಟೆಸ್ಟ್ ಡ್ರೈವ್‌ಗಳನ್ನು ತೆಗೆದುಕೊಳ್ಳಿ. ಮೊದಲ ಡ್ರೈವ್‌ನಲ್ಲಿಯೇ ನಿಮಗೆ ಕಾರನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದರೆ ದೀರ್ಘಾವಧಿಯ ಟೆಸ್ಟ್ ಡ್ರೈವ್‌ಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಸಾಧ್ಯವಾದರೆ ದೀರ್ಘಾವಧಿಯ ಟೆಸ್ಟ್ ಡ್ರೈವ್‌ಗಾಗಿ ಶೋರೂಂ ಕಾರ್ಯನಿರ್ವಾಹಕರಲ್ಲಿ ವಿನಂತಿ ಮಾಡಬಹುದಾಗಿದೆ. ವಾಸ್ತವವಾಗಿ ಅನೇಕ ಶೋರೂಮ್‌ಗಳು ಗ್ರಾಹಕರಿಗೆ ದೀರ್ಘಾವಧಿಯ ಟೆಸ್ಟ್ ಡ್ರೈವ್ ಅನ್ನು ಒದಗಿಸುತ್ತಿದ್ದು, ಇದು ನಿಮ್ಮ ಹೊಸ ಕಾರನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ತದನಂತರ ನೀವು ಆ ಕಾರನ್ನು ಖರೀದಿಸಬೇಕೋ ಅಥವಾ ಬೇಡಾ ಎಂಬುವುದನ್ನು ನಿರ್ಧರಿಸಬಹುದು.

ಟಾಪ್-ಸ್ಪೆಕ್ ವೈಶಿಷ್ಟ್ಯತೆಗೆ ಮರಳಾಗಬೇಡಿ

ಬಹುತೇಕ ಕಾರು ಡೀಲರ್‌ಶಿಪ್‌ಗಳು ಟಾಪ್ ಸ್ಪೆಕ್ ಆವೃತ್ತಿಗಳನ್ನೇ ತಮ್ಮ ಡೆಮೊ ಮಾದರಿಗಳಾಗಿ ಬಳಕೆ ಮಾಡುತ್ತಾರೆ. ಜೊತೆಗೆ ಡೆಮೊ ಮಾದರಿಗಳು ಕೆಲವೊಮ್ಮೆ ಸ್ಟ್ಯಾಂಡರ್ಡ್ ಅಲ್ಲದ ಕೆಲವು ಹೆಚ್ಚುವರಿ ಬಿಡಿಭಾಗಗನ್ನು ಹೊಂದಿರುತ್ತವೆ. ಹೀಗಾಗಿ ನೀವು ಖರೀದಿ ಮಾಡಬೇಕಾದ ವೆರಿಯೆಂಟ್ ಅನ್ನು ತೋರಿಸಲು ಡೀಲರ್ ಬಳಿ ಕೇಳಿ. ಆಗ ನಿಮಗೆ ನೀವು ಖರೀದಿ ಮಾಡುವ ವೆರಿಯೆಂಟ್ ವಾಸ್ತವದಲ್ಲಿ ಹೇಗಿರುತ್ತೆ ಎಂಬುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.

ಇದನ್ನೂ ಓದಿ: ಈ ತಿಂಗಳು ಬಿಡುಗಡೆಯಾಗಲಿರುವ ಟಾಪ್ 5 ಹೊಸ ಕಾರುಗಳಿವು!

ರಿಯಾಯ್ತಿಗಳ ಬಗೆಗೆ ಚರ್ಚಿಸಿ

ನೀವು ಹೊಸದಾಗಿ ಬಿಡುಗಡೆಯಾದ ಕಾರನ್ನು ಖರೀದಿ ಮಾಡುವ ಯೋಜನೆಯಿದ್ದಲ್ಲಿ ಹೆಚ್ಚಿನ ಮಟ್ಟದ ರಿಯಾಯಿತಿಗಳನ್ನು ನೀರಿಕ್ಷೆ ಮಾಡುವುದು ಕಷ್ಟ. ಆದರೆ ಡೀಲರ್‌ನಲ್ಲಿ ಈಗಾಗಲೇ ಸ್ಟಾಕ್‌ನಲ್ಲಿರುವ ಕಾರುಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಇದರಲ್ಲಿ ಕ್ಯಾಶ್ ಬ್ಯಾಕ್ ಡಿಸ್ಕೌಂಟ್ ಜೊತೆಗೆ ವಿಸ್ತರಿತ ವಾರಂಟಿ ಯೋಜನೆಗಳನ್ನು ಪಡೆದುಕೊಳ್ಳುವ ಅವಕಾಶಗಳಿರುತ್ತವೆ.