AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2023: ಇನ್ಮುಂದೆ ಈ ಒಂಬತ್ತು ಹೊಸ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿರುವ ವಿವಿಧ ಕಾರು ಕಂಪನಿಗಳು ಈ ಹಿಂದಿನ ಕೆಲವು ಕಾರುಗಳ ಮಾದರಿಗಳ ಮಾರಾಟ ಸ್ಥಗಿತಕ್ಕೆ ಸಿದ್ದವಾಗುತ್ತಿದ್ದು, ಹೊಸ ವರ್ಷದಿಂದ ಪ್ರಮುಖ ಕಾರಗಳ ಮಾರಾಟವು ಅಧಿಕೃತವಾಗಿ ಸ್ಥಗಿತವಾಗುವುದು ಬಹುತೇಕ ಖಚಿತವಾಗಿದೆ.

Year Ender 2023: ಇನ್ಮುಂದೆ ಈ ಒಂಬತ್ತು ಹೊಸ ಕಾರುಗಳು ಖರೀದಿಗೆ ಸಿಗುವುದಿಲ್ಲ..
ಇನ್ಮುಂದೆ ಈ ಹೊಸ ಕಾರುಗಳು ಖರೀದಿಗೆ ಸಿಗುವುದಿಲ್ಲ
Praveen Sannamani
Praveen Sannamani|

Updated on:Dec 28, 2023 | 10:22 PM

Share

ಹೊಸ ವರ್ಷದಲ್ಲಿ ವಿವಿಧ ಕಾರು ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರುಗಳ(Cars) ಬಿಡುಗಡೆಗೆ ಸಿದ್ದವಾಗುತ್ತಿವೆ. ಇದೇ ವೇಳೆ ಮಾರುಕಟ್ಟೆಯಲ್ಲಿರುವ ಕೆಲವು ಕಾರುಗಳು ಮಾರುಕಟ್ಟೆಯಿಂದ ನಿರ್ಗಮಿಸಲು ಸಿದ್ದವಾಗಿದ್ದು, ಇನ್ಮುಂದೆ ಈ ಕಾರುಗಳು ಗ್ರಾಹಕರಿಗೆ ಖರೀದಿಗೆ ಲಭ್ಯವಿರುವುದಿಲ್ಲ ಎನ್ನಬಹುದು. ಹಾಗಾದ್ರೆ ಮಾರುಕಟ್ಟೆಯಿಂದ ಈ ವರ್ಷ ನಿರ್ಗಮಿಸುತ್ತಿರುವ ಕಾರುಗಳು ಯಾವುವು? ನಿರ್ಗಮನಕ್ಕೆ ಕಾರಣವೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.

ಪ್ರಸ್ತುತ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಆಧರಿಸಿ ಹಲವಾರು ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಹಳೆಯ ಆವೃತ್ತಿಗಳ ಮಾರಾಟವನ್ನು ಸ್ಥಗಿತಗೊಳಿಸಿ ಹೊಸ ಆವೃತ್ತಿಗಳ ಬಿಡುಗಡೆ ಮಾಡಲಾಗುತ್ತಿದೆ. ಸ್ಥಗಿತಗೊಳ್ಳುವ ಕಾರುಗಳಲ್ಲಿ ಮಾರುತಿ ಸುಜುಕಿ, ಮಹೀಂದ್ರಾ, ಹೋಂಡಾ, ನಿಸ್ಸಾನ್, ಸ್ಕೋಡಾ ಮತ್ತು ಕಿಯಾ ಕಾರುಗಳು ಹೆಚ್ಚಿನ ಸಂಖ್ಯೆಯಲಿದ್ದು, ಸ್ಥಗಿತಗೊಳ್ಳಲಿರುವ ಹಳೆಯ ಕಾರುಗಳಲ್ಲಿ ಕೆಲವು ಕಾರುಗಳಲ್ಲಿ ಮಾತ್ರ ಹೊಸ ಆವೃತ್ತಿಯನ್ನು ಪರಿಚಯಿಸಲಾಗುತ್ತಿದೆ.

Discontinued Cars (1)

ಮಾರುತಿ ಆಲ್ಟೊ 800

ಅತಿ ಕಡಿಮೆ ಬೆಲೆಯ ಕಾರುಗಳಲ್ಲಿ ಪ್ರಮುಖ ಆವೃತ್ತಿಯಾಗಿದ್ದ ಮಾರುತಿ ಸುಜುಕಿ ಐಕಾನಿಕ್ ಕಾರು ಮಾದರಿಯಾದ ಆಲ್ಟೊ 800 ಮಾದರಿಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಇದು ತ್ರಿ ಸಿಲಿಂಡರ್ 796 ಸಿಸಿ ಎಂಜಿನ್ ಹೊಂದಿತ್ತು. ಈ ವರ್ಷದ ಏಪ್ರಿಲ್ ನಲ್ಲಿ ಜಾರಿಗೆ ಬಂದ ರಿಯಲ್ ಡ್ರೈವ್ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಆಲ್ಟೊ 800 ಮಾರಾಟ ಸ್ಥಗಿತಗೊಳಿಸಿದ ಮಾರುತಿ ಸುಜುಕಿ ಕಂಪನಿಯು ಕೇವಲ K10 ಸರಣಿ ಮಾದರಿಯ ಮೇಲೆ ಗಮನಹರಿಸುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅತ್ಯುತ್ತಮ ರೀಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಮಹೀಂದ್ರಾ ಕೆಯುವಿ100 ನೆಕ್ಸ್ಟ್

ಮಹೀಂದ್ರಾ ಕಂಪನಿಯ ಅತ್ಯಂತ ಕೈಗೆಟುಕುವ ಕಾರು ಮಾದರಿಯಾಗಿದ್ದ ಕೆಯುವಿ100 ನೆಕ್ಸ್ಟ್ ಮಾದರಿಯನ್ನು ಈ ವರ್ಷದ ಆರಂಭದಲ್ಲಿ ಸ್ಥಗಿತಗೊಳಿಸಲಾಗಿದೆ. ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಅನುವಾಗಿ ಭಾರೀ ಬದಲಾವಣೆ ಅವಶ್ಯಕವಾಗಿದ್ದರಿಂದ ಕೆಯುವಿ100 ನೆಕ್ಸ್ಟ್ ಕಾರನ್ನು ಸ್ಥಗಿತಗೊಳಿಸಿದ ಮಹೀಂದ್ರಾ ಕಂಪನಿಯು ಇದೀಗ ಹೊಸ ತಲೆಮಾರಿನ ಕಾರು ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಹೋಂಡಾ ಜಾಝ್, ಸಿಟಿ, ಡಬ್ಲ್ಯುಆರ್-ವಿ

ಏಪ್ರಿಲ್ 1ರಿಂದ ಜಾರಿಗೆ ಬಂದ ಬಿಎಸ್-6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳಿಂದಾಗಿ ಜಾಝ್ ಹ್ಯಾಚ್ ಬ್ಯಾಕ್, ನಾಲ್ಕನೇ ತಲೆಮಾರಿನ ಸಿಟಿ ಸೆಡಾನ್ ಮತ್ತು ಡಬ್ಲ್ಯುಆರ್-ವಿ ಕಾರುಗಳನ್ನು ಹೋಂಡಾ ಕಂಪನಿಯು ಸ್ಥಗಿತಗೊಳಿಸಿದೆ. ಡಬ್ಲ್ಯುಆರ್-ವಿ ಸ್ಥಾನಕ್ಕೆ ಹೊಸ ಎಲಿವೇಟ್ ಬಿಡುಗಡೆ ಮಾಡಲಾಗಿದ್ದು, ಸೆಡಾನ್ ವಿಭಾಗದಲ್ಲಿ 5ನೇ ತಲೆಮಾರಿನ ಸಿಟಿ ಕಾರು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಆದರೆ ಜಾಝ್ ಕಾರಿನ ಸ್ಥಾನಕ್ಕೆ ಹೊಸ ಫೇಸ್ ಲಿಫ್ಟ್ ಆವೃತ್ತಿಯ ಬಿಡುಗಡೆ ಮಾಡಬಹುದಾಗಿದ್ದು, ಇದು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಯಾಗಬಹುದಾಗಿದೆ.

ನಿಸ್ಸಾನ್ ಕಿಕ್ಸ್

ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿದ್ದ ನಿಸ್ಸಾನ್‌ ಕಿಕ್ಸ್ ಕಾರು ಮಾದರಿಯು ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳಿಂದಾಗಿ ಸ್ಥಗಿತಗೊಂಡಿದ್ದು, ಇದು ಮುಂಬರುವ ದಿನಗಳಲ್ಲಿ ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿವೆ. 1.3 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಕಿಕ್ಸ್ ಕಾರಿನಲ್ಲಿ ಸದ್ಯ ಹಲವಾರು ಬದಲಾವಣೆಗಳ ಅವಶ್ಯವಿದ್ದು, ಸದ್ಯ ನಿಸ್ಸಾನ್ ಕಂಪನಿಯು ಮಾಗ್ನೈಟ್ ಕಾರು ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಸ್ಕೋಡಾ ಸೂಪರ್ಬ್ ಮತ್ತು ಆಕ್ಟಿವಿಯಾ

ಮಧ್ಯಮ ಕ್ರಮಾಂಕದ ಅತ್ಯುತ್ತಮ ಸೆಡಾನ್ ಕಾರು ಮಾದರಿಗಳಾಗಿದ್ದ ಸೂಪರ್ಬ್ ಮತ್ತು ಆಕ್ಟಿವಿಯಾ ಕಾರುಗಳು ಕಾರಣಾಂತರಗಳಿಂದ ಭಾರತದಲ್ಲಿ ಸ್ಥಗಿತಗೊಂಡಿವೆ. 2.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದ ಸೂಪರ್ಬ್ ಮತ್ತು ಆಕ್ಟಿವಿಯಾ ಸೆಡಾನ್ ಕಾರುಗಳು ಮುಂಬರುವ ದಿನಗಳಲ್ಲಿ ಹೈಬ್ರಿಡ್ ಪವರ್ ಟ್ರೈನ್ ನೊಂದಿಗೆ ಭಾರೀ ಬದಲಾವಣೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಯುಬಿಯು ಯನಿಟ್ ಮೂಲಕ ಭಾರತದಲ್ಲಿ ಮಾರಾಟಗೊಳ್ಳಬಹುದಾಗಿದೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಬೆಸ್ಟ್ ಮೈಲೇಜ್ ಸಿಎನ್​ಜಿ ಕಾರುಗಳಿವು!

ಕಿಯಾ ಕಾರ್ನಿವಾಲ್

ಮಧ್ಯಮ ಕ್ರಮಾಂಕದ ಐಷಾರಾಮಿ ಎಂಪಿವಿ ಆವೃತ್ತಿಯಾಗಿದ್ದ ಕಿಯಾ ಕಾರ್ನಿವಾಲ್ ಮಾರಾಟವು ಭಾರತದಲ್ಲಿ ಸದ್ಯ ಸ್ಥಗಿತಗೊಂಡಿದ್ದು, ಏಪ್ರಿಲ್ ನಲ್ಲಿ ಜಾರಿಯಾದ ಹೊಸ ಮಾಲಿನ್ಯ ನಿಯಂತ್ರಣ ಮಾನದಂಡದ ಪರಿಣಾಮ ಮಾರುಕಟ್ಟೆಯಿಂದ ನಿರ್ಗಮಿಸಿದೆ. ಕಾರ್ನಿವಾಲ್ ಕಾರು ಇತ್ತೀಚೆಗೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ತಲೆಮಾರಿನ ಆವೃತ್ತಿಯೊಂದಿಗೆ ಬಿಡುಗಡೆಗೊಂಡಿದ್ದು, ಭಾರತದಲ್ಲೂ ಮುಂದಿನ ಕೆಲವೇ ತಿಂಗಳಿನಲ್ಲಿ ಮಹತ್ವದ ಬದಲಾವಣೆಯೊಂದಿಗೆ ಹೊಸ ಎಂಜಿನ್ ಆಯ್ಕೆಯಲ್ಲಿ ಖರೀದಿ ಲಭ್ಯವಾಗಬಹುದಾಗಿದೆ.

Published On - 8:16 pm, Thu, 28 December 23

Follow Us
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?
ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ
ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ