Yamaha Bikes: ಪ್ರಮುಖ ಬೈಕ್ ಮತ್ತು ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಯಮಹಾ

|

Updated on: Nov 14, 2023 | 7:11 PM

ಯಮಹಾ ಇಂಡಿಯಾ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಆಕರ್ಷಕ ಕ್ಯಾಶ್ ಡಿಸ್ಕೌಂಟ್ ಆಫರ್ ನೀಡಲಾಗುತ್ತಿದೆ.

Yamaha Bikes: ಪ್ರಮುಖ ಬೈಕ್ ಮತ್ತು ಸ್ಕೂಟರ್ ಗಳ ಮೇಲೆ ಭರ್ಜರಿ ಆಫರ್ ಘೋಷಿಸಿದ ಯಮಹಾ
ಯಮಹಾ ಆಫರ್ ಘೋಷಣೆ
Follow us on

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಯಮಹಾ ಇಂಡಿಯಾ (Yamaha India) ಕಂಪನಿಯು ತನ್ನ ಜನಪ್ರಿಯ ಬೈಕ್ ಮಾದರಿಗಳಾದ ಎಫ್‌ಜೆಡ್ಎಕ್ಸ್, ಎಫ್‌ಜೆಡ್ಎಸ್ ವಿ3, ಎಫ್‌ಜೆಡ್ಎಸ್ ವಿ4 ಮತ್ತು ಸ್ಕೂಟರ್ ಮಾದರಿಗಳಾದ ಫ್ಯಾಸಿನೋ 125 ಮತ್ತು ಜೆಡ್ಆರ್ 125 ಖರೀದಿ ಮೇಲೆ ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದೆ. ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಬೈಕ್ ಖರೀದಿದಾರರಿಗೆ ಇದು ಉತ್ತಮ ಅವಕಾಶ ಎನ್ನಬಹುದು.

ಹೊಸ ಆಫರ್ ಗಳಲ್ಲಿ ಎಫ್‌ಜೆಡ್ಎಕ್ಸ್ ಬೈಕ್ ಮಾದರಿಯನ್ನು ಖರೀದಿಸುವ ಗ್ರಾಹಕರಿಗೆ ರೂ. 5 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಸಿಗಲಿದ್ದರೆ ಎಫ್‌ಜೆಡ್ಎಸ್ ವಿ3, ಎಫ್‌ಜೆಡ್ಎಸ್ ವಿ4 ಬೈಕ್ ಮಾದರಿಗಳ ಮೇಲೆ ರೂ. 3 ಸಾವಿರ ಕ್ಯಾಶ್ ಬ್ಯಾಕ್ ಆಫರ್ ಲಭ್ಯವಿದೆ. ಹಾಗೆಯೇ ಫ್ಯಾಸಿನೋ 125 ಮತ್ತು ಜೆಡ್ಆರ್ 125 ಸ್ಕೂಟರ್ ಗಳ ಖರೀದಿ ಮೇಲೂ ರೂ. 3 ಸಾವಿರ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗುತ್ತಿದ್ದು, ಆಯ್ದ ಡೀಲರ್ಸ್ ಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಆಫರ್ ನೀಡಲಾಗುತ್ತಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ ಸವಾರನ ವೈರಲ್ ವಿಡಿಯೋ ನೋಡಿ ಹೊಸ ಪ್ಲ್ಯಾನ್ ಮಾಡುತ್ತಿದ್ದಾರೆ ಓಲಾ ಸಿಇಒ!

ಹಬ್ಬದ ಋತುವಿನಲ್ಲಿ ಸಾಮಾನ್ಯವಾಗಿ ಹೊಸ ವಾಹನಗಳ ಖರೀದಿ ಭರಾಟೆ ಹೆಚ್ಚಳವಾಗುವ ಕಾರಣ ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹಲವಾರು ಆಫರ್ ಗಳನ್ನು ನೀಡುತ್ತಿದ್ದು, ಯಮಹಾ ಕಂಪನಿಯು ಕೂಡಾ ತನ್ನ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹೊಸ ಆಫರ್ ಗಳ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ದೇಶದ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಸ್ಯಾಮ್) ಪ್ರಕಟಿಸಿರುವ ವರದಿಯಲ್ಲಿ ಹೊಸ ವಾಹನಗಳ ಮಾರಾಟವು ಈ ವರ್ಷದ ಅಕ್ಟೋಬರ್ ನಲ್ಲಿ ಕಳೆದ ವರ್ಷದ ಅಕ್ಟೋಬರ್ ಅವಧಿಯಲ್ಲಿನ ಮಾರಾಟಕ್ಕಿಂತಲೂ ಹೆಚ್ಚಳವಾಗಿದೆ. ಕಳೆದ ತಿಂಗಳು ಅಕ್ಟೋಬರ್ ನಲ್ಲಿ ಎಲ್ಲಾ ಮಾದರಿಯ ವಾಹನಗಳು ಸೇರಿ ಬರೋಬ್ಬರಿ 23,14,197 ಯುನಿಟ್ ಮಾರಾಟಗೊಂಡಿದ್ದು, ಇದು ಕಳೆದ ವರ್ಷದ ಅಕ್ಟೋಬರ್ ಅವಧಿಯಲ್ಲಿ 19,23,721 ಯುನಿಟ್ ವಾಹನಗಳು ಮಾರಾಟಗೊಂಡಿದ್ದವು. ಈ ಮೂಲಕ ಹೊಸ ವಾಹನಗಳ ಮಾರಾಟದಲ್ಲಿ ನಿರಂತರ ಬೆಳವಣಿಗೆ ದಾಖಲಾಗುತ್ತಿದ್ದು, ದೀಪಾವಳಿ ಸಂಭ್ರಮದಲ್ಲಿ ಮತ್ತಷ್ಟು ಹೆಚ್ಚಿನ ಬೇಡಿಕೆ ದಾಖಲಾಗುವ ನೀರಿಕ್ಷೆಗಳಿವೆ.

ಇನ್ನು ಗ್ರಾಹಕರ ಬೇಡಿಕೆಯೆಂತೆ ವಿವಿಧ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿರುವ ಯಮಹಾ ಕಂಪನಿಯು ರೇಸಿಂಗ್ ಪ್ರಿಯರಿಗಾಗಿ ದಿ ಕಾಲ್ ಆಫ್ ದಿ ಬ್ಲೂ ಅಭಿಯಾನದಡಿಯಲ್ಲಿ ಮಾನ್‌ಸ್ಟರ್ ಎನರ್ಜಿ ಮೋಟೋಜಿಪಿ ಆವೃತ್ತಿಗಳ ಅತ್ಯಾಕರ್ಷಕ ಶ್ರೇಣಿಯನ್ನು ಪರಿಚಯಿಸಿದೆ. ಹೊಸ ಆವೃತ್ತಿಗಳು ದೇಶಾದ್ಯಂತ ಹರಡಿಕೊಂಡಿರುವ ಯಮಹಾ ಕಂಪನಿಯ ಎಲ್ಲಾ ಪ್ರೀಮಿಯಂ ಬ್ಲೂ ಸ್ಕ್ವೇರ್ ಶೋರೂಂಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಆವೃತ್ತಿಗಳು ಆಕರ್ಷಕ ಸ್ಪೋರ್ಟಿ ಗ್ರಾಫಿಕ್ಸ್ ಪಡೆದುಕೊಂಡಿವೆ.

ಇದನ್ನೂ ಓದಿ: ಹೀರೋ ಜೂಮ್ 125ಆರ್ ಮತ್ತು ಜೂಮ್ 160 ಮ್ಯಾಕ್ಸಿ ಸ್ಕೂಟರ್ ಅನಾವರಣ!

ಮಾನ್ಸ್ಟರ್ ಎನರ್ಜಿ ಮೊಟೊ ಜಿಪಿ ವರ್ಷನ್ ಗಳಲ್ಲಿ ಯಮಹಾ ಕಂಪನಿಯು ಫ್ಯೂಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳ ಮೇಲೆ ಆಕರ್ಷಕವಾದ ಗ್ರಾಫಿಕ್ ನೀಡಲಾಗಿದ್ದು, ಇವು ರೇಸಿಂಗ್ ಹಿನ್ನಲೆಯನ್ನು ಪ್ರದರ್ಶಿಸುತ್ತವೆ. ಆದರೆ ಹೊಸ ಆವೃತ್ತಿಗಳಲ್ಲಿನ ಎಂಜಿನ್ ಆಯ್ಕೆ ಸಾಮಾನ್ಯ ಮಾದರಿಗಳಲ್ಲಿರುವಂತೆ ಮುಂದುವರೆಯಲಿದ್ದು, ಮುಂಬರುವ ಹಬ್ಬದ ಋತುವಿನಲ್ಲಿ ಹೆಚ್ಚಿನ ಬೇಡಿಕೆ ದಾಖಲಿಸಲು ಇವು ಸಹಕಾರಿಯಾಗಲಿವೆ.