ಎಲೆಕ್ಟ್ರಿಕ್ ಸ್ಕೂಟರ್ ಸವಾರನ ವೈರಲ್ ವಿಡಿಯೋ ನೋಡಿ ಹೊಸ ಪ್ಲ್ಯಾನ್ ಮಾಡುತ್ತಿದ್ದಾರೆ ಓಲಾ ಸಿಇಒ!

ಹೊಸ ಎಲೆಕ್ಟ್ರಿಕ್ ವಾಹನಗಳಲ್ಲಿ ಇತ್ತೀಚೆಗೆ ಹಲವಾರು ಹೊಸ ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಇವು ವಾಹನ ಸವಾರಿಗೆ ಸಾಕಷ್ಟು ಸಹಕಾರಿಯಾಗುತ್ತಿವೆ. ಆದರೆ ಹೊಸ ಮಾದರಿಯ ತಾಂತ್ರಿಕ ಸೌಲಭ್ಯಗಳಿಂದ ಅನೇಕ ಲಾಭಗಳಿದ್ದರೂ ಕೆಲವು ಬಾರಿ ವಾಹನ ಸವಾರರ ಮಾಡುವ ಸಣ್ಣಪುಟ್ಟ ತಪ್ಪುಗಳೇ ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್ ಸವಾರನ ವೈರಲ್ ವಿಡಿಯೋ ನೋಡಿ ಹೊಸ ಪ್ಲ್ಯಾನ್ ಮಾಡುತ್ತಿದ್ದಾರೆ ಓಲಾ ಸಿಇಒ!
ವೈರಲ್ ವಿಡಿಯೋ ನೋಡಿ ಹೊಸ ಪ್ಲ್ಯಾನ್ ಮಾಡುತ್ತಿದ್ದಾರೆ ಓಲಾ ಸಿಇಒ!
Follow us
TV9 Web
| Updated By: Praveen Sannamani

Updated on: Nov 07, 2023 | 4:46 PM

ಭಾರತೀಯ ಆಟೋ ಉದ್ಯಮದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳ (Electric Scooters) ಮೂಲಕ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ (Ola Electric) ಕಂಪನಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ತನ್ನ ಪ್ರತಿಸ್ಪರ್ಧಿ ಇವಿ ಸ್ಕೂಟರ್ ಮಾದರಿಗಿಂತಲೂ ಹೆಚ್ಚಿನ ಫೀಚರ್ಸ್ ಹೊಂದಿರುವ ಓಲಾ ಇವಿ ಸ್ಕೂಟರ್ ಗಳು ಗ್ರಾಹಕರಿಗೆ ಹೊಸ ಚಾಲನಾ ಅನುಭವ ನೀಡುತ್ತಿದ್ದರೂ ಸಹ ಓಲಾ ಇವಿ ಸ್ಕೂಟರ್ ನಲ್ಲಿರುವ ಕೆಲವು ಫೀಚರ್ಸ್ ಗಳು ಅನಾವಶ್ಯಕ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಓಲಾ ಇವಿ ಸ್ಕೂಟರ್ ನಲ್ಲಿರುವ ಕೆಲವು ಫೀಚರ್ಸ್ ಕುರಿತಾಗಿ ಈಗಾಗಲೇ ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗಿದ್ದು, ಇದೀಗ ವ್ಯಕ್ತಿಯೊಬ್ಬ ಕೋಲ್ಕತ್ತಾದ ಟ್ರಾಫಿಕ್ ದಟ್ಟಣೆಯಿರುವ ರಸ್ತೆಯಲ್ಲೂ ಕ್ರೂಸ್ ಕಂಟ್ರೋಲ್ ಸೌಲಭ್ಯ ಬಳಸಿರುವುದು ಸಾಕಷ್ಟು ವೈರಲ್ ಆಗುತ್ತಿದೆ. ಅಜಯಿತ ಎಂಬ ಆಯುರ್ವೇದ ವೈದ್ಯರೊಬ್ಬರು ಹಂಚಿಕೊಂಡಿರುವ X (ಹಿಂದಿನ ಟ್ವಿಟರ್) ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸಿ ಓಲಾ ಇವಿ ಸ್ಕೂಟರ್ ಅನ್ನು ಆಟೋ ಪೈಲಟ್ ಮೋಡ್‌ ಮೂಲಕ ಕೈಬಿಟ್ಟು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಕ್ರೂಸ್ ನಿಯಂತ್ರಣವು ಸ್ವಯಂಚಾಲಿತವಾಗಿ ನಿಯಂತ್ರಣ ಹೊಂದಿದ್ದರೂ ಕೂಡಾ ಅನಾವಶ್ಯಕ ಬಳಕೆಯು ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: ಬರೋಬ್ಬರಿ ನೂರು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಈ ಮಹಾಶಯ ತೆತ್ತ ದಂಡವೆಷ್ಟು ನೋಡಿ..

ಕ್ರೂಸ್ ನಿಯಂತ್ರಣವು ಒಂದು ವಿಶೇಷ ತಾಂತ್ರಿಕ ವೈಶಿಷ್ಟ್ಯವಾಗಿದ್ದು, ಇದು ಸ್ಕೂಟರ್ ಅಥವಾ ಬೈಕ್ ಸವಾರರಿಗೆ ನಿರ್ದಿಷ್ಟ ವೇಗವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ವೇಗವರ್ಧಕವನ್ನು ಬಳಸದೆಯೇ ಚಾಲಕನು ಆ ವೇಗವನ್ನು ನಿರ್ವಹಿಸಬಹುದಾಗಿದ್ದು, ಒಮ್ಮೆ ನೀವು ನಿರ್ದಿಷ್ಟ ವೇಗವನ್ನು ಗೊತ್ತುಪಡಿಸಿದ ನಂತರ ವೇಗವರ್ಧಕದಿಂದ ಕೈಯನ್ನು ಹಿಂದಕ್ಕೆ ತೆಗೆದಾಗ ಅದೇ ವೇಗದಲ್ಲಿ ಬೈಕು ಅಥವಾ ಸ್ಕೂಟರ್ ಅನ್ನು ಚಾಲನೆ ಮಾಡಬಹುದಾಗಿದೆ. ಆದರೆ ಭಾರತೀಯ ರಸ್ತೆಗಳಲ್ಲಿನ ನೈಜ ಪರಿಸ್ಥಿತಿಗಳಿಂದ ಕೆಲವು ಬಾರಿ ನಿಯಂತ್ರಣ ಕಳೆದುಕೊಳ್ಳಬಹುದಾದ ಸಾಧ್ಯತೆಗಳಿವೆ.

ಓಲಾ ಇವಿ ಸ್ಕೂಟರ್ ಮಾಲೀಕನು ಕ್ರೂಸ್ ಕಂಟ್ರೋಲ್ ಬಳಕೆಯ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ವಿಡಿಯೋವನ್ನು ಹಂಚಿಕೊಂಡಿರುವ ಓಲಾ ಸಿಇಒ ಭವಿಶ್ ಅಗರ್ವಾಲ್ ಸಹ ಇದರ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಹೆಚ್ಚಿನ ಮಟ್ಟದ ಫೀಚರ್ಸ್ ಗಳು ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗಬಹುದಾದ ಸಾಧ್ಯತೆಗಳ ಕುರಿತು ಯೋಚಿಸುತ್ತಿರುವ ಓಲಾ ಮುಖ್ಯಸ್ಥರು ‘ಈ ವಿಡಿಯೋ ನೋಡಿದ ನಂತರ ಕ್ರೂಸ್ ಕಂಟ್ರೋಲ್ ಬಳಕೆಗಾಗಿ ಚಂದಾದಾರಿಕೆ ಶುಲ್ಕವನ್ನು ವಿಧಿಸುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದಿದ್ದಾರೆ.

ಓಲಾ ಸಿಇಒ ಪೊಸ್ಟ್ ಗೆ ಪ್ರತಿಕ್ರಿಯೆಸಿರುವ ಹಲವರು ಈ ರೀತಿಯ ಗುಣಮಟ್ಟದ ವೈಶಿಷ್ಟ್ಯಗಳಿಗಾಗಿ ಚಂದಾದಾರಿಕೆ ಶುಲ್ಕಗಳು ಯೋಗ್ಯವಾಗಿವೆ ಎಂದಿದ್ದು, ಇನ್ನು ಕೆಲವು ಬಳಕೆದಾರರು ಓಲಾ ಇವಿ ಸ್ಕೂಟರ್ ನಲ್ಲಿರುವ ಫೀಚರ್ಸ್ ಗಳನ್ನು ಟೆಸ್ಲಾದ ಆಟೋಪೈಲಟ್ ವೈಶಿಷ್ಟ್ಯಕ್ಕೆ ಹೋಲಿಸಿದ್ದಾರೆ. ಇನ್ನು ಕೆಲವರು ಸ್ಕೂಟರ್‌ನಲ್ಲಿ ಕ್ರೂಸ್ ಕಂಟ್ರೋಲ್ ಅನಾವಶ್ಯಕವಾಗಿದ್ದು, ಅದು ಅಪಾಯಕಾರಿಯಾಗಿ ಕಾಣುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!

ಇನ್ನು ಕೆಲವು ಎಕ್ಸ್ ಬಳಕೆದಾರರು ವೈರಲ್ ವಿಡಿಯೋವನ್ನು ಟ್ರೋಲ್ ಆಗಿ ಬಳಕೆ ಮಾಡುತ್ತಿದ್ದು, ಕೆಲಸದ ಮಧ್ಯೆ ಪತ್ನಿಯ ಫೋನ್ ಕರೆಯ ಮೇರೆಗೆ ಜಾಲಿಯಾಗಿ ಮನೆಗೆ ತೆರಳುತ್ತಿರಬಹುದೆಂದು ತಮಾಷೆ ಮಾಡಿದ್ದಾರೆ. ಆದರೆ ಅದೆನೆ ಇರಲಿ ಹೊಸ ವಾಹನಗಳಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ಗಳು ಅರಾಮದಾಯಕ ಚಾಲನೆಗೆ ಅನುಕೂಲಕವಾಗಿದ್ದರೂ ಅವು ಮತ್ತೊಬ್ಬರ ಜೀವಕ್ಕೆ ಹಾನಿ ಉಂಟು ಮಾಡುವಂತಿದ್ದರೆ ಅವುಗಳ ಬಳಕೆ ಮೇಲೆ ನಿಯಂತ್ರಣ ಅವಶ್ಯಕವಾಗಿದೆ ಎನ್ನಬಹುದು.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ