2024 ರ ವರ್ಷಕ್ಕೆ ಈಗ ವಿದಾಯ ಹೇಳುವತ್ತ ಸಾಗುತ್ತಿದ್ದೇವೆ. ಈ ವರ್ಷ ಆಟೋಮೊಬೈಲ್ ಕ್ಷೇತ್ರ ಹಲವು ಹೊಸ ಮೈಲಿಗಲ್ಲುಗಳನ್ನು ಸಾಧಿಸಿದೆ. ಕಂಪನಿಗಳು ಮಾರುಕಟ್ಟೆಯಲ್ಲಿ ಅನೇಕ ಹೊಸ ವಾಹನಗಳನ್ನು ಪ್ರಾರಂಭಿಸಿದವು, ಇದು ಬಹಳಷ್ಟು ಸದ್ದು ಮಾಡಿದೆ. ಕೆಲವು ಹೊಸ ಎಲೆಕ್ಟ್ರಿಕ್ ಕಾರುಗಳು ಕೂಡ ಅನಾವರಣಗೊಂಡಿತು. ಕೆಲವು ಕಾರು ಮಾದರಿಗಳನ್ನು ನವೀಕರಣಗೊಂದಿಗೆ ರೋಡ್ಗೆ ಬಂದವು, ಅದುಕೂಡ ಮೊದಲಿಗಿಂತ ಸುರಕ್ಷಿತವಾಗಿ. ಅನೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಕೂಡ ಮಾರುಕಟ್ಟೆಗೆ ಪರಿಚಯಿಸಲಾಯಿತು.
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಕಾರು ಟಾಟಾ ಪಂಚ್ ಅನ್ನು ಎಲೆಕ್ಟ್ರಿಕ್ ಅವತಾರ್‌ನಲ್ಲಿ ಈ ವರ್ಷದ ಆರಂಭದಲ್ಲಿ 17 ಜನವರಿ 2024 ರಂದು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಇದರ ನಂತರ, ಟಾಟಾ ಮೋಟಾರ್ಸ್ ತನ್ನ ಮತ್ತೊಂದು ಹೊಸ ಎಲೆಕ್ಟ್ರಿಕ್ ಕಾರ್ ಟಾಟಾ ಕರ್ವ್ EV ಅನ್ನು ಸಹ ಪರಿಚಯಿಸಿತು. ನಂತರ ಈ ಕಾರಿನ ಪೆಟ್ರೋಲ್ ಆವೃತ್ತಿಯನ್ನು ಸಹ ಬಿಡುಗಡೆ ಮಾಡಲಾಯಿತು. ಇದರ ಹೊರತಾಗಿ, ಎಲೆಕ್ಟ್ರಿಕ್ ಕಾರ್ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಅನ್ನು ಸಹ ಈ ವರ್ಷ ಬಿಡುಗಡೆ ಮಾಡಲಾಯಿತು. ಇದರ ಹೊರತಾಗಿ, BYD ಸೀಲ್, BMW i5 M60 XDrive, Porsche Macan EV, ಮೆರ್ಸಿಡೀಸ್-ಬೆನ್ಜ್ EQA, ಮೆರ್ಸಿಡೀಸ್-ಬೆನ್ಜ್ EQB ಫೇಸ್‌ಲಿಫ್ಟ್, MG ವಿಂಡ್ಸರ್ EV, ಕಿಯಾ EV9, BYD eMax7, ಮಹೀಂದ್ರ BE 6 ಬಿಡುಗಡೆ ಆದವು.
ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಸೆಡಾನ್ ಡಿಜೈರ್‌ನ ಹೊಸ ಆವೃತ್ತಿಯು ಈ ವರ್ಷ ಭಾರೀ ಸುದ್ದಿ ಮಾಡಿದೆ. ಕಂಪನಿಯು ಈ ಕಾರಿನ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿ ರಿಲೀಸ್ ಮಾಡಿತು. ಗ್ಲೋಬಲ್ ಎನ್‌ಸಿಎಪಿಯಿಂದ ಸುರಕ್ಷತೆಯ ದೃಷ್ಟಿಯಿಂದ ಮೊದಲ ಬಾರಿಗೆ ಕಾರು 5 ಸ್ಟಾರ್‌ಗಳನ್ನು ಪಡೆದುಕೊಂಡಿದೆ ಎಂಬುದು ಪ್ರಮುಖ ವಿಷಯ. ಈ ಕಾರಿನ ಪರಿಚಯದೊಂದಿಗೆ, ಕಂಪನಿಯು ಈ ವಿಭಾಗದಲ್ಲಿ ಸ್ಪರ್ಧೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಆದಾಗ್ಯೂ, ಹೋಂಡಾ ಕಾರ್ಸ್ ಡಿಜೈರ್‌ನ ಪ್ರತಿಸ್ಪರ್ಧಿ ಹೋಂಡಾ ಅಮೇಜ್‌ನ ಹೊಸ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕೇವಲ 1 ಲಕ್ಷ ರೂ. ಗೆ ಹೊಸ ಮಾರುತಿ ಬಲೆನೊ CNG ಕಾರು ಮನೆಗೆ ತನ್ನಿ
ಬಹುನಿರೀಕ್ಷಿತ ಐದು-ಬಾಗಿಲಿನ ಥಾರ್ ಮಾದರಿ, ರಾಕ್ಸ್ ಅನ್ನು 15 ಆಗಸ್ಟ್ 2024 ರಂದು ಬಿಡುಗಡೆ ಮಾಡಲಾಯಿತು. ಮಹೀಂದ್ರ ಥಾರ್ ರಾಕ್ಸ್ ಅನ್ನು ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ – MX ಮತ್ತು AX. ಮಹೀಂದ್ರ ಥಾರ್ ROXX ಬೆಲೆ ರೂ. 12.99 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್- ಎಂಡ್ ಮಾದರಿಗೆ ರೂ. 22.49 ಲಕ್ಷದವರೆಗೆ ಹೋಗುತ್ತದೆ. ಥಾರ್ ROXX 18 ರೂಪಾಂತರಗಳಲ್ಲಿ ಲಭ್ಯವಿದೆ.
ವರ್ಷಾಂತ್ಯದಲ್ಲಿ ಸ್ಕೋಡಾ ಕೈಲಾಕ್ ಕೂಡ ಸುದ್ದಿಯಲ್ಲಿದೆ. ಕಂಪನಿಯು ಈಗಾಗಲೇ ಅದರ ಬೆಲೆ, ರೂಪಾಂತರಗಳು ಮತ್ತು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ವಿತರಣೆಗಳು ಜನವರಿ 27, 2024 ರಿಂದ ಪ್ರಾರಂಭವಾಗಲಿದ್ದು, ಎಸ್‌ಯುವಿಗಾಗಿ ಬುಕಿಂಗ್‌ಗಳು ಈಗಾಗಲೇ ತೆರೆದಿವೆ ಮತ್ತು ಸ್ಕೋಡಾ ಇದುವರೆಗೆ 10,000 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಸ್ವೀಕರಿಸಿದೆ. ಕೈಲಾಕ್ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ – ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್+ ಮತ್ತು ಪ್ರೆಸ್ಟೀಜ್.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 am, Mon, 23 December 24