Auto News: ಕೇವಲ 1 ಲಕ್ಷ ರೂ. ಗೆ ಹೊಸ ಮಾರುತಿ ಬಲೆನೊ CNG ಕಾರು ಮನೆಗೆ ತನ್ನಿ
ನೀವು ಮಾರುತಿ ಬಲೆನೊ CNG ಕಾರು ಖರೀದಿಸುವ ಪ್ಲ್ಯಾನ್ನಲ್ಲಿದ್ದರೆ ಕಾರ್ ಲೋನ್‌ನಲ್ಲಿ ಹೇಗೆ ಖರೀದಿಸಬಹುದು, ತಿಂಗಳ ಇಎಮ್ಐ ಎಷ್ಟು ಎಂಬ ಕುರಿತ ಮಾಹಿತಿ ನಾವು ಹೇಳುತ್ತೇವೆ. ಇಲ್ಲಿ ಬಲೆನೊ ಕಾರಿನ ಎಕ್ಸ್ ಶೋರೂಂ ಬೆಲೆ ಮತ್ತು ಆನ್-ರೋಡ್ ಬೆಲೆ, ವೈಶಿಷ್ಟ್ಯಗಳು, ಮೈಲೇಜ್, ಡೌನ್ ಪೇಮೆಂಟ್ ಸೇರಿದಂತೆ ಬಲೆನೊದ ಡೆಲ್ಟಾ ಸಿಎನ್‌ಜಿ ಮತ್ತು ಝೀಟಾ ಸಿಎನ್‌ಜಿ ರೂಪಾಂತರಗಳ ಹಣಕಾಸು ವಿವರಗಳನ್ನು ನೀಡಲಾಗಿದೆ.
ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಕಳೆದ ನವೆಂಬರ್‌ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು. ಇದು ಹ್ಯುಂಡೈ ಕ್ರೆಟಾ, ಟಾಟಾ ಪಂಚ್ ಮತ್ತು ನೆಕ್ಸಾನ್, ಮಹೀಂದ್ರ ಸ್ಕಾರ್ಪಿಯೊ ಸೇರಿದಂತೆ ಅನೇಕ ಜನಪ್ರಿಯ ಕಾರುಗಳನ್ನು ಹಿಂದಿಕ್ಕಿತು. ಈಗ, ಈ ಕಾರು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿರುವುದರಿಂದ, ಹೆಚ್ಚಿನ ಸಂಖ್ಯೆಯ ಜನರು ಇದನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ನೀವು ಕೂಡ ಈ ಕಾರು ಖರೀದಿಸುವ ಪ್ಲ್ಯಾನ್ನಲ್ಲಿದ್ದರೆ ಕಾರ್ ಲೋನ್‌ನಲ್ಲಿ ಬಲೆನೊವನ್ನು ಹೇಗೆ ಖರೀದಿಸಬಹುದು, ತಿಂಗಳ ಇಎಮ್ಐ ಎಷ್ಟು ಎಂಬ ಕುರಿತ ಮಾಹಿತಿ ನಾವು ಹೇಳುತ್ತೇವೆ.
ನಾವು ನಿಮಗೆ ಬಲೆನೊ ಕಾರಿನ ಎಕ್ಸ್ ಶೋರೂಂ ಬೆಲೆ ಮತ್ತು ಆನ್-ರೋಡ್ ಬೆಲೆ, ವೈಶಿಷ್ಟ್ಯಗಳು, ಮೈಲೇಜ್, ಡೌನ್ ಪೇಮೆಂಟ್ ಸೇರಿದಂತೆ ಬಲೆನೊದ ಡೆಲ್ಟಾ ಸಿಎನ್‌ಜಿ ಮತ್ತು ಝೀಟಾ ಸಿಎನ್‌ಜಿ ರೂಪಾಂತರಗಳ ಹಣಕಾಸು ವಿವರಗಳನ್ನು ನೀಡುತ್ತೇವೆ.
ಉತ್ತಮ ಮೈಲೇಜ್ ಹೊಂದಿರುವ ಪ್ರೀಮಿಯಂ CNG ಹ್ಯಾಚ್‌ಬ್ಯಾಕ್:
ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರು ಮಾರುತಿ ಸುಜುಕಿ ಬಲೆನೊ ಎರಡು ಸಿಎನ್‌ಜಿ ರೂಪಾಂತರಗಳನ್ನು ಹೊಂದಿದೆ. ಇದರಲ್ಲಿ ಡೆಲ್ಟಾ ಸಿಎನ್‌ಜಿಯ ಎಕ್ಸ್ ಶೋ ರೂಂ ಬೆಲೆ ರೂ. 8.40 ಲಕ್ಷ ಮತ್ತು ಝೀಟಾ ಸಿಎನ್‌ಜಿ ಎಕ್ಸ್ ಶೋ ರೂಂ ಬೆಲೆ ರೂ. 9.33 ಲಕ್ಷ ಆಗಿದೆ. ಈ ಕಾರು 1197 cc ಪೆಟ್ರೋಲ್ ಎಂಜಿನ್ ಮತ್ತು CNG ಕಿಟ್ ಅನ್ನು ಹೊಂದಿದ್ದು, ಜಂಟಿಯಾಗಿ 76.43 bhp ಮತ್ತು 98.5 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಕಾರು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ, ಇದರ ಮೈಲೇಜ್ ಪ್ರತಿ ಕಿಲೋಗ್ರಾಂಗೆ 30.61 ಕಿಲೋಮೀಟರ್ ವರೆಗೆ ಇರುತ್ತದೆ. ನೋಡಲು ಸ್ಟೈಲಿಶ್ ಆಗಿ ಕಾಣುವ ಈ ಕಾರಿನ ವೈಶಿಷ್ಟ್ಯಗಳು ಕೂಡ ಅದ್ಭುತವಾಗಿದೆ. ಇದು ದೊಡ್ಡ ಡಿಸ್ಪ್ಲೇ ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಸಾಕಷ್ಟು ಫೀಚರ್ಸ್ ಹೊಂದಿದೆ.
ಮಾರುತಿ ಸುಜುಕಿ ಬಲೆನೊ ಡೆಲ್ಟಾ CNG ಹಣಕಾಸು ವಿವರಗಳು:
ಮಾರುತಿ ಸುಜುಕಿಯ ಟಾಪ್ ಸೆಲ್ಲಿಂಗ್ ಕಾರ್ ಬಲೆನೊದ ಸಿಎನ್‌ಜಿ ಮಾಡೆಲ್‌ಗಳಲ್ಲಿ, ಹೆಚ್ಚು ಮಾರಾಟವಾಗುವ ಬಲೆನೊ ಡೆಲ್ಟಾ ಸಿಎನ್‌ಜಿಯ ಆನ್-ರೋಡ್ ಬೆಲೆ 9.44 ಲಕ್ಷ ರೂ. ಆಗಿದೆ. ಕೇವಲ ಒಂದು ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡುವ ಮೂಲಕ ನೀವು ಇದನ್ನು ಮನೆಗೆ ತರಬಹುದು. 1 ಲಕ್ಷದ ಮುಂಗಡ ಪಾವತಿಯ ನಂತರ, ನೀವು 8.44 ಲಕ್ಷ ರೂಪಾಯಿಗಳ ಕಾರು ಸಾಲವನ್ನು ಪಡೆಯಬೇಕಾಗುತ್ತದೆ. ನೀವು 5 ವರ್ಷಗಳವರೆಗೆ 10 ಪ್ರತಿಶತ ಬಡ್ಡಿ ದರದಲ್ಲಿ ಕಾರು ಸಾಲವನ್ನು ಪಡೆದರೆ, ಮುಂದಿನ 5 ವರ್ಷಗಳವರೆಗೆ ಪ್ರತಿ ತಿಂಗಳು 17,933 ರೂಪಾಯಿಗಳನ್ನು EMI ಆಗಿ ಪಾವತಿಸಬೇಕಾಗುತ್ತದೆ. ಬಡ್ಡಿ ಸುಮಾರು 2.32 ಲಕ್ಷ ರೂ. ಆಗುತ್ತದೆ.
ಇದನ್ನೂ ಓದಿ: ICOTY 2025 ವರ್ಷದ ಭಾರತೀಯ ಕಾರು ಪ್ರಶಸ್ತಿಗೆ ಹೆಸರು ಘೋಷಣೆ: ಯಾವ ಕಾರೆಲ್ಲ ಇದೆ ನೋಡಿ
ಬಲೆನೊ ಝೀಟಾ ಸಿಎನ್‌ಜಿ ಹಣಕಾಸು ವಿವರಗಳು:
ಬಲೆನೊದ ಝೀಟಾ CNG ರೂಪಾಂತರದ ಆನ್-ರೋಡ್ ಬೆಲೆ 10.45 ಲಕ್ಷ ರೂ. ನೀವು ಈ ಕಾರಿಗೆ 1 ಲಕ್ಷ ರೂ. ಡೌನ್ ಪೇಮೆಂಟ್ ಮಾಡಿದರೆ, 9.45 ಲಕ್ಷ ರೂ. ಕಾರ್ ಲೋನ್ ತೆಗೆದುಕೊಳ್ಳಬೇಕಾಗುತ್ತದೆ. 5 ವರ್ಷಗಳವರೆಗೆ ಕಾರ್ ಲೋನ್ ತೆಗೆದುಕೊಂಡು ಬಡ್ಡಿ ದರವು 10 ಪ್ರತಿಶತ ಎಂದು ಭಾವಿಸಿದರೆ, ಮುಂದಿನ 5 ವರ್ಷಗಳವರೆಗೆ ಪ್ರತಿ ತಿಂಗಳು 20,078 ರೂಪಾಯಿಗಳನ್ನು EMI ಆಗಿ ಪಾವತಿಸಬೇಕಾಗುತ್ತದೆ.
ಇದು ಕೇವಲ ಮಾಹಿತಿಯ ಉದ್ದೇಶಕ್ಕೆ ನೀಡಿದ ಸುದ್ದಿಯಾಗಿದೆ. ನೀವು ಹತ್ತಿರದ ಮಾರುತಿ ಸುಜುಕಿ ನೆಕ್ಸಾ ಡೀಲರ್‌ಶಿಪ್‌ಗೆ ಭೇಟಿ ನೀಡಿ, ಕಾರ್ ಲೋನ್ ಮತ್ತು ಇಎಂಐ ವಿವರಗಳನ್ನು ಪರಿಶೀಲಿಸಬೇಕು.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ