Father’s Day 2022: ಅಪ್ಪ ಎಂಬ ಪದವೇ ಸುಂದರ, ಶಾಂತ ಸ್ವಭಾವದ ಗಂಗೆ ಅಪ್ಪ
ನೀನೆಂದೂ ನನ್ನಿಂದ ದೂರಾಗಿಲ್ಲ ನನ್ನ ಆಲೋಚನೆ, ನನ್ನ ಪ್ರತಿ ಕ್ಷಣದಲ್ಲೂ ನೀನು ತುಂಬಿರುವೆ. ಬದುಕಿನ ಪಯಣದ ಲೆಕ್ಕವಿಲ್ಲದ ತಿರುವುಗಳಲ್ಲಿ ಸಿಗುವಂತಹ ನೂರಾರು ಜನರು ಅಪ್ಪನ ಸಮಾನ ನಿಲ್ಲಲು ಸಾಧ್ಯವೇ? ಹೆಣ್ಣೆಂದರೆ ದೂರ ಸರಿಯುವ ಜನರ ಮಧ್ಯೆ ತನ್ನೆಲ್ಲಾ ಬೇಕು ಬೇಡಗಳನ್ನು ಬದಿಗಿರಿಸಿ ತನ್ನ ಮಕ್ಕಳು ಕೇಳಿದ್ದನ್ನೆಲ್ಲಾ ನೀಡುವಂತಹ ತ್ಯಾಗಮಯಿ. ನಿನ್ನನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ.
ಅಪ್ಪ ಎಂಬ ಪದವೇ ಸುಂದರ. ಅಪ್ಪ ಎಂದರೆ ತ್ಯಾಗ . ನೀನಿದ್ದರೆ ಕಷ್ಟಗಳೆಲ್ಲವೂ ದೂರ. ಮಗಳಿಗೆ ಅಪ್ಪನೇ ಪ್ರಪಂಚ. ಆತನಿಗೆ ತನ್ನ ಮಗಳೇ ಸರ್ವಸ್ವ ಮಗಳ ಜೊತೆ ತಾನೂ ಮಗುವಾಗುವ. ಮಗಳ ಜೀವನದಲ್ಲಿ ಒಬ್ಬ ಗುರುವಾಗಿ, ಸ್ನೇಹಿತನಾಗಿ, ತಂದೆಯಾಗಿ, ಅವಳ ಬಾಳಿನಲ್ಲಿ ಸಂತೋಷ , ಕಷ್ಟ ,ನೋವು ನಲಿವಿನ ಸಂದರ್ಭದಲ್ಲಿ ಸದಾ ಹೆಗಲಾಗಿ ನಿಲ್ಲುವವನು ಅಪ್ಪ. ತನ್ನ ಮಗಳ ಸಂತೋಷ, ನಗು ನೋಡಿ ತನ್ನ ಕಷ್ಟಗಳನ್ನು ಮರೆಯುವವನು. ಇಂದು ನೀನು ಲೋಕದ ಕಣ್ಣಿಗೆ ನನ್ನೊಂದಿಗೆ ಜೀವಂತವಾಗಿ ಇಲ್ಲದಿದ್ದರೂ ಕಾಣದ ಲೋಕದಲ್ಲಿ ಸದಾ ನನ್ನೊಂದಿಗೆ ಜೀವಂತವಾಗಿರುವೆ.
ಹಣದಲ್ಲಿ ಬಡವನಾದರೂ ಪ್ರೀತಿಯಲ್ಲಿ ಅತೀ ಶ್ರೀಮಂತ. ಅವನ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ನೀನೆಂದೂ ನನ್ನಿಂದ ದೂರಾಗಿಲ್ಲ ನನ್ನ ಆಲೋಚನೆ, ನನ್ನ ಪ್ರತಿ ಕ್ಷಣದಲ್ಲೂ ನೀನು ತುಂಬಿರುವೆ. ಬದುಕಿನ ಪಯಣದ ಲೆಕ್ಕವಿಲ್ಲದ ತಿರುವುಗಳಲ್ಲಿ ಸಿಗುವಂತಹ ನೂರಾರು ಜನರು ಅಪ್ಪನ ಸಮಾನ ನಿಲ್ಲಲು ಸಾಧ್ಯವೇ? ಹೆಣ್ಣೆಂದರೆ ದೂರ ಸರಿಯುವ ಜನರ ಮಧ್ಯೆ ತನ್ನೆಲ್ಲಾ ಬೇಕು ಬೇಡಗಳನ್ನು ಬದಿಗಿರಿಸಿ ತನ್ನ ಮಕ್ಕಳು ಕೇಳಿದ್ದನ್ನೆಲ್ಲಾ ನೀಡುವಂತಹ ತ್ಯಾಗಮಯಿ. ನಿನ್ನನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಅಪ್ಪ ಎಂದರೆ ಅಪರಿಮಿತ ಶಕ್ತಿ
ಒಡಲಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹವಿದ್ದರೂ ನೋಡಲು ಮಾತ್ರ ಶಾಂತ ಸ್ವಭಾವದ ಗಂಗೆಯಂತೆ. ನನ್ನ ಜೀವನದಲ್ಲಿ ನಾನೇಷ್ಟೇ ಕರೆದರೂ ಮರಳಿ ಬಾರದವ ನೀನು. ಸಮಯ ಎಲ್ಲವೂ ಎಲ್ಲರನ್ನೂ ಬದಲಿಸುವುದು, ಆದರೆ ನಿನ್ನ ನೆನಪು ಸದಾ ಜೀವಂತ. ಅದೆಷ್ಟೇ ಸಮಯ ಕಳೆದರೂ ನಿನ್ನ ನೆನಪುಗಳು ಜೀವಂತ… ಆದರೂ ಕಾಣದ ನಿನಗಾಗಿ ಹಂಬಲಿಸಿದೆ ಮನಸ್ಸು. ಮಿಸ್ ಯೂ ಅಪ್ಪಾ
ಕಾಣದ ನಿನಗಾಗಿ ಹಂಬಲಿಸಿದೆ ಮನ ಕಾಳಜಿ ಎಂಬ ಪದವ ಹುಟ್ಟುಹಾಕಿದ ಜನುಮದಾತ…. ಪ್ರೀತಿಯೆಂಬ ಪದಕೆ ಅವನೇ ಸ್ಫೂರ್ತಿಯ ಪರ್ವತ… ನಿನಗೆ ಕೋಟಿ ನಮನಗಳು ಅಪ್ಪಾ
ಪೂಜಾಶ್ರೀ
Published On - 6:30 am, Sun, 19 June 22