ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ. ಪ್ರತಿ ಸಹೋದರಿಯು ಪ್ರತಿ ವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ’ ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟಲು ಕಾಯುತ್ತಾಳೆ. ಈ ಹಬ್ಬವನ್ನು ಒಡಹುಟ್ಟಿದ ಸಹೋದರ ಸಹೋದರಿಯರು ಮಾತ್ರ ಆಚರಿಸಬೇಕು ಎಂಬ ನಿಯಮವೆನಿಲ್ಲ. ಒಂದು ಹುಡಗಿ ಒಬ್ಬ ಹುಡಗನಿಗೆ ಅಣ್ಣ ಅಥವಾ ತಮ್ಮ ಎಂದು ಕರೆದರೆ ಸಾಕು ಅವರು ಸಹ ಈ ಹಬ್ಬವನ್ನು ಆಚರಿಸಬಹುದು.
ಶಾಲಾ ಕಾಲೇಜುಗಳಲ್ಲಿ ಮತ್ತು ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಸಹೋದರ ಸಹೋದರಿ ಸಂಬಂಧಗಳು ಇರುವುದು ಸಾಮಾನ್ಯ. ಹಾಗೇ ನನ್ನ ಜೀವನದಲ್ಲಿ ರಕ್ಷಾಬಂಧನ ಹಬ್ಬದಂದು ತಮಾಷೆಯ ಜರುಗಿತ್ತು. ಆ ತಮಾಷೆಯ ಸಂಗತಿಯನ್ನು ಹೇಳುವುದೇ ಒಂದು ಮಜಾ. ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲೇ ಕೆಲಸ ಮಾಡುತ್ತಿದ್ದ ದಿವಾಕರ್ ಎಂಬ ಹುಡುಗ ನನ್ನ ತಮ್ಮನ ಸ್ನೇಹಿತ. ಅವನಿಗೆ ನನ್ನ ಮೇಲೆ ಕ್ರಶ್ ಆಗಿತ್ತು ಅದು ನನಗೆ ಗೊತ್ತಿರಲಿಲ್ಲ. ಅದಲ್ಲದೆ ನಂಗೆ ಅಣ್ಣ ಇಲ್ಲ ಆದರೆ ನಂಗೆ ಅಣ್ಣ ಅಂದರೆ ತುಂಬಾ ಇಷ್ಟ, ಅದಕ್ಕೆ ನಾನು ಅಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಹುಡುಗರನ್ನು ನನ್ನ ಅಣ್ಣದಂದಿರು ಎಂದು ಅಂದುಕೊಂಡಿದ್ದೆ, ಅವರು ಅದೇ ರೀತಿ ನನ್ನನ್ನೂ ತಂಗಿಯಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.
ರಕ್ಷಾಬಂಧನ ಎಂದರೆ ನನ್ನ ನೆಚ್ಚಿನ ಹಬ್ಬ.
ಅಂದು ಅಲ್ಲಿ ಕೆಲಸ ಮಾಡುತ್ತಿರುವ ನನ್ನ ಎಲ್ಲ ಸಹೋದರರಿಗೆ ರಾಖಿ ಕಟ್ಟಬೇಕು ಎಂದು ರಾಕಿಯನ್ನು ತೆಗೆದುಕೊಂಡು ಹೋದೆ. ಎಲ್ಲರೂ ನನ್ನ ಹತ್ತಿರ ಖುಷಿ ಖಷಿಯಿಂದ ರಾಕಿಯನ್ನು ಕಟ್ಟಿಸಿಕೊಂಡರು. ಆದರೆ ದಿವಾಕರ್‌ನಿಗೆ ರಾಖಿ ಕಟ್ಟಬೇಕೆಂದರೆ, ಅವನು ನನ್ನ ಹತ್ತಿರನೂ ಬರವ ಸಹಾಸ ಮಾಡಲಿಲ್ಲ. ಹುಡುಕಿದೆ ಸಿಗಲೇ ಇಲ್ಲ ಸರಿ ಹೋಗಲಿ ಬಿಡು ಎಂದು ಸುಮ್ಮನಾದೆ. ಸಾಯಂಕಾಲ ಒಂದು ಸ್ಥಳದಲ್ಲಿ ಕುಳಿತಿದ್ದ ನಾನು ನೀರು ಕುಡಿಯಲೇಂದು ನಾನು ನನ್ನ ಸ್ನೇಹಿತಿ ಹೊರಟಿದ್ದೇವು ಆಗ ನನ್ನ ಸ್ನೇಹಿತೆಯ ಕಣ್ಣಿಗೆ ಕಾಣಿಸಿಕೊಂಡ, ಆಗ ನನ್ನ ಸ್ನೇಹಿತೆ ಬಾರೆ ದಿವಾಕರ್ ಅಣ್ಣ ಅಲ್ಲಿ ಕುಳಿತಿದ್ದಾನೆ ರಾಖಿ ಕಟ್ಟುವ ಎಂದು ಕರೆದುಕೊಂಡು ಹೋದಳು.
ನನ್ನ ಸ್ನೇಹಿತೆ ಕಡೆ ಖುಷಿಯಿಂದ ರಾಖಿ ಕಟ್ಟಿಸಿಕೊಂಡನು, ನಾನು ಕಟ್ಟುವಾಗ ಕಸಿವಿಸಿ ಮಾಡಿಕೊಂಡನು, ಅದನ್ನು ನಾನು ಗಮನಿಸಿರಿಲಿಲ್ಲ. ನಾನು ರಾಖಿ ಕಟ್ಟಿ ಹೋದ ಮೇಲೆ ದಿವಾಕರ್ ನನ್ನ ಸ್ನೇಹಿತೆಯನ್ನು ಕರೆದು ಅವಳು ನನಗೆ ಕಟ್ಟಿರುವುದು ರಾಖಿ ಅಲ್ಲ ಪ್ರೇಮ ಬಂಧನ ಎಂದು ಅವಳಿಗೆ ಹೇಳು ಎಂದು ನನ್ನ ಸ್ನೇಹಿತೆಗೆ ಹೇಳಿ ಕಳಿಸಿದ್ದನು. ಆಗ ನನಗೆ ಗೊತ್ತಾಯಿತು ಅವನು ಬೆಳಿಗ್ಗೆಯಿಂದ ಯಾಕೆ ನನ್ನ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ ಎಂದು. ಈ ಸಂಗತಿ ರಕ್ಷಾಬಂಧನ ದಿನದಂದು ನನ್ನ ಜೀವನದಲ್ಲಿ ನಡೆದ ತಮಾಷೆ ಸಂಗತಿಯಾಯಿತು. ಅದಕ್ಕೆ ಯಾರೆ ಮೇಲೆ ಆದ್ರೂ ಪ್ರೀತಿಯಾಗಿದ್ದರೆ ಹೇಳಿಕೊಂಡು ಬಿಡಿ ಇಲ್ಲದಿದ್ದರೆ ಈ ರೀತಿ ಸಂದರ್ಭಗಳು ನಿಮಗೂ ಬರುವ ಸಾಧ್ಯತೆಗಳಿರುತ್ತವೆ.
ಗೀತಾ ಗಾಣೀಗೆರ
ವಿಜಯಪುರ
ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Thu, 11 August 22