- Kannada News Photo gallery Raksha Bandhan 2022: Here are photos of President Draupadi, PM Modi celebrating Raksha Bandhan with children
Raksha Bandhan 2022: ರಾಷ್ಟ್ರಪತಿ ದ್ರೌಪದಿ, ಪ್ರಧಾನಿ ಮೋದಿ ಮಕ್ಕಳ ಜೊತೆಗಿನ ರಕ್ಷಾ ಬಂಧನ ಆಚರಣೆಯ ಫೋಟೋಗಳು ಇಲ್ಲಿವೆ
ರಾಜಕೀಯ ಗಣ್ಯರು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ದೇಶ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಅನೇಕ ರಾಜಕೀಯ ಗಣ್ಯರು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಭಾರತದಲ್ಲಿ ಈ ಸಡಗರಕ್ಕೆ ಸಾಕ್ಷಿಯಾಗಿದೆ ಈ ಹಬ್ಬ ಇದೀಗ ಇದಕ್ಕೆ ಮತ್ತಷ್ಟು ಸಾಕ್ಷಿಯಾಗಿದ್ದಾರೆ ರಾಜಕೀಯ ನಾಯಕರು.
Updated on:Aug 11, 2022 | 2:18 PM

Raksha Bandhan

Raksha Bandhan

ರಾಷ್ಟ್ರಪತಿ ದ್ರೌಪದಿ ಅವರಿಗೆ ಇದು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ನಂತರ ಇದು ಮೊದಲ ಹಬ್ಬವಾಗಿದೆ, ರಾಷ್ಟ್ರಪತಿ ಭವನಕ್ಕೆ ಅನೇಕರು ಬಂದು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 11ರ ಗುರುವಾರ ತಮ್ಮ ನಿವಾಸದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು.

ಪ್ರಧಾನ ಕಚೇರಿಯಲ್ಲಿರುವ ಸ್ವೀಪರ್‌ಗಳು, ಪ್ಯೂನ್‌ಗಳು, ಗಾರ್ಡನರ್‌ಗಳು, ಡ್ರೈವರ್‌ಗಳು ಸೇರಿದಂತೆ ಪಿಎಂಒದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪುತ್ರಿಯರೊಂದಿಗೆ ಪಿಎಂ ಮೋದಿ ಹಬ್ಬವನ್ನು ಆಚರಿಸಿದ್ದರಿಂದ ಇದು ವಿಶೇಷ ರಕ್ಷಾ ಬಂಧನ ಆಚರಣೆಯಾಗಿದೆ.

ಪಿಎಂಒ ಹಂಚಿಕೊಂಡ ವಿಡಿಯೋದಲ್ಲಿ ಮಕ್ಕಳು ಮತ್ತು ಅಲ್ಲಿರುವ ಸಿಬ್ಬಂದಿಗಳು ಪ್ರಧಾನಿಗೆ ಸುಂದರವಾದ ರಾಖಿಗಳನ್ನು ಕಟ್ಟುತ್ತಿರುವುದು ಕಂಡುಬಂದಿದೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಶುಭಾಶಯ ಕೋರಿದರು. ರಕ್ಷಾ ಬಂಧನದ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇಂದು ರಕ್ಷಾ ಬಂಧನವನ್ನು ಆಚರಿಸುವ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನನ್ನ ಶಕ್ತಿ ಮತ್ತು ಧೈರ್ಯ ಎಂದು ಕರೆದಿದ್ದಾರೆ.

ನನ್ನ ಸಹೋದರಿ, ಪ್ರಿಯಾಂಕಾ ಮತ್ತು ನಾನು ನಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಒಟ್ಟಿಗೆ ನೋಡಿದ್ದೇವೆ ಮತ್ತು ಯಾವಾಗಲೂ ಒಬ್ಬರಿಗೊಬ್ಬರು ಧೈರ್ಯ ಮತ್ತು ಶಕ್ತಿಯಾಗಿದ್ದೇವೆ. ಇಂದು ರಾಖಿ ದಿನದಂದು ನಾನು ಪ್ರತಿಯೊಬ್ಬ ಸಹೋದರನ ನಡುವೆ ಪ್ರೀತಿಯನ್ನು ಬಯಸುತ್ತೇನೆ. ಅವರು ನನ್ನ ಸಹೋದರಿಯಾಗಿ ಶಾಶ್ವತವಾಗಿ ಉಳಿಯುತ್ತಾಳೆ ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ಅವರ ನಿವಾಸದಲ್ಲಿ ರಾಖಿ ಕಟ್ಟಿದರು. ಜೊತೆಗೆ ಶುಭಾಶಯವನ್ನು ತಿಳಿಸಿದರು.
Published On - 2:17 pm, Thu, 11 August 22



















