Udupi Travel Guide: ಉಡುಪಿಗೆ ಹೋಗ್ತಿದ್ದೀರಾ? ಈ ಸ್ಥಳಗಳಿಗೆ ಮಿಸ್ ಮಾಡ್ದೆ ಹೋಗಿ

| Updated By: ಆಯೇಷಾ ಬಾನು

Updated on: Dec 31, 2022 | 11:03 AM

ಉಡುಪಿಯ ಅಜುಬಾಜು ಡಜನ್​ಗಟ್ಟಲೆ ಬೀಚ್​ಗಳಿವೆ. ಅದರಲ್ಲಿ ಮುಖ್ಯವಾಗಿ ಮಲ್ಪೆ ಬೀಚ್, ಮಲ್ಪೆಯಿಂದ ಒಂದು ಕಿ.ಮೀ ಅಂತರದಲ್ಲಿ ಸಿಗುವ ಸೀವಾಕ್, ವಾಟರ್‌ಸ್ಪೋರ್ಟ್ಸ್, ಸೇಂಟ್ ಮೇರಿಸ್ ದ್ವೀಪ, ಮಟ್ಟು ಬೀಚ್, ಕಾಪು ಲೈಟ್‌ಹೌಸ್, ಡೆಲ್ಟಾ ಬೀಜ್ ನಿಮಗೆ ಹೊಸತನ ತರಿಸುತ್ತೆ.

Udupi Travel Guide: ಉಡುಪಿಗೆ ಹೋಗ್ತಿದ್ದೀರಾ? ಈ ಸ್ಥಳಗಳಿಗೆ ಮಿಸ್ ಮಾಡ್ದೆ ಹೋಗಿ
ಸೇಂಟ್ ಮೇರಿಸ್ ದ್ವೀಪ
Follow us on

ಧೂಳು, ಹೊಗೆ, ದಾರಿ ಉದ್ದಕ್ಕೂ ಗುಂಡಿ ಬಿದ್ದಿರುವ ಕಾಂಕ್ರಿಟ್ ರಸ್ತೆ, ಗಂಟೆಗಟ್ಟಲೆ ನಿಲ್ಲಿಸುವ ಟ್ರಾಫಿಕ್, ಮನಸೋ ಇಚ್ಛೆ ಬದಲಾಗುವ ಹವಮಾನ, ಬಿಜಿ ಲೈಫು, ಕೆಲಸದ ಒತ್ತಡ, ಇಷ್ಟೆಲ್ಲದರ ಮಧ್ಯೆ ವೀಕೆಂಡ್ ಬಂತಂದ್ರೆ ಸಾಕು. ಇದೆಲ್ಲದರಿಂದಲೂ ಎರಡೇ ಎರಡು ದಿನ ಸಿಗುವ ಬ್ರೇಕ್ ಮನಸಲ್ಲಿ ಅದೆನೋ ಒಂದು ರೀತಿಯ ಖುಷಿ ತರುತ್ತೆ. ಎಲ್ಲರನ್ನು ಬಿಟ್ಟು, ಎಲ್ಲವನ್ನೂ ಮರೆತು ಮರೆಯಾಗುವ ಆಸೆ… ಅಲ್ಲದೆ ಕ್ರಿಸ್ಮಸ್(Christmas), ಹೊಸ ವರ್ಷಾಚರಣೆಯನ್ನು(New Year Celebration) ಒಂದೊಳ್ಳೆ ಜಾಗದಲ್ಲಿ ಸೆಲೆಬ್ರೇಟ್ ಮಾಡಲು, ಈ ಚಿಲ್ಡ್ ವೆದರ್​ಗೆ ವೀಕೆಂಡ್​ನಲ್ಲಿ ನಿಮ್ಮ ಮನಸಿಗೆ ನೆಮ್ಮದಿ ನೀಡುವ ಪ್ರವಾಸಿ ತಾಣದ ಬಗ್ಗೆ ಇಲ್ಲಿದೆ ಟ್ರಿಪ್ ಪ್ಲಾನ್. ಬೆಂಗಳೂರಿನಿಂದ ಯಾವುದೇ ಆಯಾಸವಿಲ್ಲದೆ ನೆಮ್ಮದಿಯಿಂದ ಡ್ರೈವ್ ಮಾಡಿಕೊಂಡು ಅಥವಾ ಬಸ್​, ರೈಲು, ವಿಮಾನದ ಮೂಲಕ ಹೋಗಿ ಬರಬಹುದಾದಂತಹ ಜಾಗ ಉಡುಪಿ(Udupi).

ಉಡುಪಿಗೆ ಹೋಗುವುದು ಹೇಗೆ?

ಸಾಮಾನ್ಯವಾಗಿ ಬೆಂಗಳೂರಿಗರು ವೀಕೆಂಡ್ ಸಮಯದಲ್ಲಿ ಮಡಿಕೇರಿ, ಚಿಕ್ಕಮಗಳೂರು, ಸಕಲೇಶಪುರಕ್ಕೆ ಹೆಚ್ಚಾಗಿ ಪ್ಲಾನ್ ಮಾಡುತ್ತಾರೆ. ಅಥವಾ ಗೋಕರ್ಣ, ಗೋವಾಕ್ಕೆ ಹೋದರೂ ಉಡುಪಿ, ಮಂಗಳೂರು ಕಡೆ ಹೋಗುವುದು ಕಡಿಮೆ. ಹೀಗಾಗಿ ಈ ಲೇಖನದಲ್ಲಿ ಉಡುಪಿಯಲ್ಲಿ ನೀವು ನೋಡಲೆ ಬೇಕಾದ ಕೆಲವು ಪ್ರಸಿದ್ಧ ಸ್ಥಳಗಳ ಬಗ್ಗೆ ಆದಷ್ಟು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದ್ದೇವೆ.

ದೇಗುಲಗಳ ನಗರ, ಭಾರತೀಯ ಪಾಕಪದ್ಧತಿಯಲ್ಲಿ ಸಸ್ಯಾಹಾರಿ ಆಹಾರಕ್ಕೆ ಹೆಸರುವಾಸಿಯಾದ ಉಡುಪಿ ಡಜನ್​ಗಟ್ಟಲೆ ಪ್ರಶಾಂತವಾದ ಕಡಲತೀರಗಳು, ಐ ಲ್ಯಾಂಡ್, ಮನಸಿಗೆ ಮುದ ನೀಡುವ ಸೂರ್ಯಾಸ್ತ ಸ್ಥಳಗಳು, ನಂಬಿಕಾರ್ಹ ಜನ, ಕರಾವಳಿಯ ಸಂಸ್ಕೃತಿ, ದೈವಾರಾಧನೆಯಂತಹ ಪದ್ಧತಿಗಳು ಜನರನ್ನು ಆಕರ್ಷಿಸದೇ ಇರದು. ಉಡುಪಿಗೆ ಹೋಗಲು ಪ್ಲಾನ್ ಮಾಡಿಕೊಳ್ಳುತ್ತಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ. ಇಲ್ಲಿದೆ ಉಡುಪಿ ಟ್ರಿಪ್​ನ ಕಂಪ್ಲೀಟ್ ಪ್ಲಾನ್.

ಉಡುಪಿಯಲ್ಲಿ ಉಳಿದುಕೊಳ್ಳುವುದೆಲ್ಲಿ?

ಬೆಂಗಳೂರಿನಿಂದ ಉಡುಪಿಗೆ ಸುಮಾರು 450 ಕಿ.ಮೀ ಆಗುತ್ತೆ. ಬಸ್​, ರೈಲು, ವಿಮಾನಯಾನ, ಕಾರ್ ಬುಕಿಂಗ್ ಮಾಡಿಕೊಂಡು ಉಡುಪಿಗೆ ಪ್ರಯಾಣಿಸಬಹುದು. ವಿಮಾನದಲ್ಲಿ ಪ್ರಯಾಣಿಸಲು ಬಯಸುವವರು ಉಡುಪಿಗೆ ಹತ್ತಿರವಿರುವ ಮಂಗಳೂರು ಏರ್​ಪೋರ್ಟ್​ನಿಂದ ಇಲ್ಲಿಗೆ ಬರಬಹುದು. ರೈಲು, ಬಸ್​ನಿಂದ ಪ್ರಯಾಣಿಸುವವರಿಗೆ 10ರಿಂದ 15 ಸಾವಿರ ಬಜೆಟ್​ ಇದ್ರೆ ಸಾಕು. ಮೂರು ದಿನ ನಾಲ್ಕೈದು ಮಂದಿ ಆರಾಮಾಗಿ ಪ್ರವಾಸವನ್ನು ಎಂಜಾಯ್ ಮಾಡಬಹುದು. ಬೆಂಗಳೂರಿನಿಂದ ಉಡುಪಿಗೆ ಹೋಗಲು ಕೆಲವೇ ಕೆಲವು ರೈಲುಗಳಿರುವುದರಿಂದ ಟ್ರಿಪ್​ಗೆ ಹೋಗುವ ಮೂರು ನಾಲ್ಕು ವಾರಗಳ ಮುಂಚೆಯೇ ಬುಕಿಂಗ್ ಮಾಡಿಕೊಳ್ಳಿ ಇಲ್ಲದಿದ್ದರೆ ಸೀಟು ಸಿಗುವುದೇ ಕಷ್ಟ. ಜನರಲ್ ಬೋಗಿಯಲ್ಲಿ ಪ್ರಯಾಣಿಸಬೇಕಂದ್ರೆ ಕುರಿ ಮಂದೆ ರೀತಿ ಪ್ರಯಾಣಿಸುವ ಜನರ ಮಧ್ಯೆ ನಾವೂ ಒಂದಾಗಿ ತಕರಾರು ಮಾಡದೇ ಅವರೊಂದಿಗೆ ಬೆರೆತು ಪ್ರಯಾಣಿಸಬೇಕು. ಕೆಲವೊಮ್ಮೆ ಸೀಟ್ ಸಿಗುವುದಿಲ್ಲ. ನಿಲ್ಲಲೂ ಜಾಗ ಇರದು. ಆದ್ರೆ ಈ ರೀತಿಯ ಜರ್ನಿ ಕೂಡ ಒಂದು ರೀತಿ ಚೆನ್ನಾಗಿರುತ್ತೆ.

ಇನ್ನು ಉಡುಪಿಯಲ್ಲಿ ತಂಗಲು ಅನೇಕ ಸವಲತ್ತುಗಳಿವೆ. ಉಡುಪಿ ಮಠದ ಆವರಣದಲ್ಲೇ ದಾರಿ ಉದ್ದಕ್ಕೂ ಅನೇಕ ಹೋಟೆಲ್ಸ್, ರೂಂಗಳು ಸಿಗುತ್ತವೆ. ನಿಮ್ಮ ಬಜೆಟ್​ ಪ್ರಕಾರ ಹುಡುಕಾಡಿ ರೂಂಗಳನ್ನು ಪಡೆಯಬಹುದು. ಇಲ್ಲ ಅಂದ್ರೆ ಪ್ರವಾಸಿ ತಾಣಗಳಲ್ಲಿ ರೂಂ ಬುಕಿಂಗ್​ಗಾಗಿಯೇ ಇರುವಂತಹ ಆ್ಯಪ್​ಗಳ ಮೂಲಕ ಪ್ರೀ ಬುಕಿಂಗ್ ಮಾಡಿಕೊಳ್ಳಬಹುದು.

ಉಡುಪಿಯಲ್ಲಿ ಈ ಆಹಾರಗಳನ್ನು ಮಿಸ್ ಮಾಡದೆ ಟ್ರೈ ಮಾಡಿ

ಪತ್ರೊಡೆ, ನೀರ್ ದೋಸೆ, ಮಂಗಳೂರು ಬನ್ಸ್, ಗೋಳಿ ಬಜೆ, ಮೀನೂಟ, ತಿಮ್ಮಪ್ಪ ಹೋಟೆಲ್​ನಲ್ಲಿ ಫಿಶ್ ಫ್ರೈ ಮಿಸ್ ಮಾಡಬೇಡಿ. ಯಕ್ಷಗಾನ, ದೈವಾರಾಧನೆಗೆ ಹೆಸರು ಮಾಡಿರುವ ಉಡುಪಿಯಲ್ಲಿ ಜನವರಿ ಹಾಗೂ ಮಾರ್ಚ್​ ತಿಂಗಳಲ್ಲಿ ಕೋಲ ನಡೆಯುತ್ತೆ. ಈ ಬಗ್ಗೆ ಮುಂಚೆಯೇ ವಿಚಾರಿಸಿಕೊಂಡರೆ ಪ್ರತ್ಯಕ್ಷವಾಗಿ ನೋಡಿ ವಿಶಿಷ್ಟ ಅನುಭವಗಳನ್ನು ಪಡೆಯಬಹುದು.

ಉಡುಪಿಯಲ್ಲಿ ಭೇಟಿ ನೀಡಲೇ ಬೇಕಾದ ದೇವಸ್ಥಾನಗಳು

ಉಡುಪಿ ಎಂದಾಕ್ಷಣ ಮೊದಲು ಕಣ್ಣ ಮುಂದೆ ಬರುವುದೇ ಕನಕನ ಕಿಂಡಿಯ ಮೂಲಕ ದರ್ಶನ ನೀಡುವ ಶ್ರೀ ಕೃಷ್ಣ. ಹೀಗಾಗಿ ಉಡುಪಿಗೆ ಭೇಟಿ ನೀಡುತ್ತಿದ್ದಂತೆ ಉಡುಪಿ ದರ್ಶನ ಮಾಡಿಕೊಳ್ಳಿ. ಉಡುಪಿ ಮಠದ ಬಳಿಯೇ ರೂಂ ಮಾಡಿಕೊಂಡರೆ ಇದಷ್ಟು ದಿನವೂ ಕೃಷ್ಣನನ್ನು ನೋಡಬಹುದು. ಇನ್ನು ಉಡುಪಿ ಮಠದ ರಥ ಬೀದಿಯಲ್ಲಿ ಅಷ್ಟ ಮಠಗಳಿವೆ. ಒಂದೊಂದು ಮಠವೂ ಒಂದೊಂದು ರೀತಿಯ ವಿಸ್ಮಯವನ್ನು ಅಡಗಿಸಿಟ್ಟುಕೊಂಡಿವೆ. ಅಷ್ಟ ಮಠಗಳ ಒಳಗೆ ಚಿಕ್ಕ ಚಿಕ್ಕ ದೇವಸ್ಥಾನಗಳಿದ್ದು ಆಕರ್ಷಿತವಾಗಿವೆ. ಅದರಲ್ಲೂ ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲೇ ಇರುವ ಶ್ರೀ ಕಾಣಿಯೂರು ಮಠ ತುಂಬಾ ಸುಂದರವಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಜಿಲ್ಲೆಯ ಹಲವಾರು ದೇವಾಲಯಗಳು ಬಹಳ ಜನಪ್ರಿಯವಾಗಿವೆ.

ಉಡುಪಿ ಕೃಷ್ಣ ಮಠ

ಇನ್ನು ಉಡುಪಿಯ ಸುಂದರ, ಆಕರ್ಷಕ ಪ್ಲೇಸ್​ಗಳನ್ನು ಮಿಸ್ ಮಾಡಿಕೊಳ್ಳಬಾರದೆಂದರೆ ಅಲ್ಲೇ ಸಿಗುವ ಆಟೋ ಚಾಲಕರ ಬಳಿ ಮಾತನಾಡಿ ಇಲ್ಲಿನ ಪ್ರಸಿದ್ದ ಸ್ಥಳಗಳನ್ನು ತೋರಿಸುವಂತೆ ಡೀಲ್ ಮಾಡಿಕೊಳ್ಳಿ. ಇಲ್ಲಿ ವಿಶೇಷ ಅಂದ್ರೆ ಆಟೋ ಚಾಲಕರೂ ಯಾವುದೇ ವೈಟಿಂಗ್ ಚಾರ್ಜ್ ಹಾಕದೇ, ಮೀಟರ್ ಚಾರ್ಜ್​ ಮಾತ್ರ ಪಡೆಯುತ್ತಾರೆ. ಮಿನಿಮಮ್ 2 ಸಾವಿರದೊಳಗೆ 5ರಿಂದ 8 ಬೆಸ್ಟ್ ಪ್ಲೇಸ್​ಗಳನ್ನು ನೀವು ನೋಡಬಹುದು.

ನೆಮ್ಮದಿ ನೀಡುವ ಕಡಲ ತೀರಗಳು

ಉಡುಪಿಯ ಅಜುಬಾಜು ಡಜನ್​ಗಟ್ಟಲೆ ಬೀಚ್​ಗಳಿವೆ. ಅದರಲ್ಲಿ ಮುಖ್ಯವಾಗಿ ಮಲ್ಪೆ ಬೀಚ್, ಮಲ್ಪೆಯಿಂದ ಒಂದು ಕಿ.ಮೀ ಅಂತರದಲ್ಲಿ ಸಿಗುವ ಸೀವಾಕ್, ವಾಟರ್‌ಸ್ಪೋರ್ಟ್ಸ್, ಸೇಂಟ್ ಮೇರಿಸ್ ದ್ವೀಪ, ಮಟ್ಟು ಬೀಚ್, ಕಾಪು ಲೈಟ್‌ಹೌಸ್, ಡೆಲ್ಟಾ ಬೀಜ್ ನಿಮಗೆ ಹೊಸತನ ತರಿಸುತ್ತೆ. ಮೈಂಡ್ ಫ್ರೆಶ್ ಮಾಡುತ್ತೆ. ಮಲ್ಪೆ ಬೀಚ್​ನಲ್ಲಿ ಅನೇಕ ರೀತಿಯ ಜಲ ಕ್ರೀಡೆಗಳನ್ನು ಆಡಬಹುದು.

ಮಲ್ಪೆ ಬೀಜ್​ಗೆ ಹೋದರೆ ಸೇಂಟ್ ಮೇರಿಸ್ ದ್ವೀಪಕ್ಕೆ ಹೋಗುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಮಲ್ಪೆ ಬೀಜ್​ನಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಈ ಐ ಲ್ಯಾಂಡ್ ಫೋಟೋಶೂಟ್ ಮಾಡಿಸಿಕೊಳ್ಳುವವರಿಗೆ ಹೇಳಿ ಮಾಡಿಸಿದ ಜಾಗ. ಹಾಗೂ ಮನಸ್ಸಿಗೆ ತುಂಬ ಖುಷಿ ಕೊಡುವ ಜಾಗ. ಅದರಲ್ಲೂ ಸಂಜೆ ಭೇಟಿ ಕೊಟ್ಟರೆ ತಂಪು ನೀರಿನ ಮಧ್ಯೆ ಮುಳುಗುವ ಸೂರ್ಯ ನಮ್ಮಲ್ಲಿರುವ ಎಲ್ಲಾ ಟೆನ್ಶನ್​ಗಳನ್ನು ತನ್ನೊಂದಿಗೆ ಹೊತ್ತು ಮುಳುಗುತ್ತಾನೆ.

ಸೇಂಟ್ ಮೇರಿಸ್ ದ್ವೀಪ ಇನ್ನು ಉಡುಪಿಯಲ್ಲಿ ಸಂತ ಲಾರೆನ್ಸ್ ಬೆಸಿಲಿಕಾ ಚರ್ಚ್, ಮೌಂಟ್ ರೋಸರಿ ಚರ್ಚ್​ಗಳು ಸುಂದರವಾಗಿವೆ. ಮಣಿಪಾಲ್​ನಲ್ಲಿರುವ ಮ್ಯೂಸಿಯಂ ಸೈನ್ಸ್ ಓದುತ್ತಿರುವವರಿಗೆ ಜ್ಞಾನ ಭಂಡಾರ.

ಕೆಮ್ಮಣ್ಣು ಹ್ಯಾಂಗಿಂಗ್ ಬ್ರಿಡ್ಜ್, ಕಡಲ ಕಿನಾರೆಯಲ್ಲಿ ಕಯಾಕಿಂಗ್

ಉಡುಪಿಯಲ್ಲಿ ನೋಡಲೇ ಬೇಕಾದ ಮತ್ತೊಂದು ಸ್ಥಳವೆಂದರೆ ಕೆಮ್ಮಣ್ಣು ಹ್ಯಾಂಗಿಂಗ್ ಬ್ರಿಡ್ಜ್. ಇಲ್ಲಿ ಅನೇಕರು ಫೋಟೋಶೂಟ್​ಗಾಗಿ ಬರುತ್ತಾರೆ. ಹಾಗೂ ಇಲ್ಲಿ ಕಯಾಕಿಂಗ್ ಮಾಡಲು ಅವಕಾಶ ಇದೆ. ಸುತ್ತ ಹಸಿರಿನ ರಮ್ಯ ಮನೋಹರವಾದ ನೀಲಿ ನೀರಿನ ಮೇಲೆ ಸ್ನೇಹಿತರೊಂದಿಗೆ ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಎಂದು ಹಾಡುತ್ತ ಕಾಯಕಿಂಗ್ ಮಾಡೋದೇ ಒಂದು ಮಜಾ. ಜಲ್ಲಿ ಫಿಶ್, ಏಡಿ, ಮೀನುಗಳನ್ನು ಕೈಯಲ್ಲಿ ಹಿಡಿಯುವಷ್ಟು ಹತ್ತಿರ ಕಾಣಸಿಗುತ್ತವೆ. ಇಲ್ಲಿ ಕಾಯಕಿಂಗ್ ಮಾಡಲು ಒಬ್ಬರಿಗೆ 50 ರೂ ಪಡೆಯಲಾಗುತ್ತೆ. ಹಾಗೂ ಸನ್ ರೈಸ್, ಸನ್ ಸೆಟ್ ವ್ಯೂ ಸೇರಿದಂತೆ ಅನೇಕ ರೀತಿ ಪ್ಯಾಕೇಜ್ಸ್​ ಇವರ ಬಳಿ ಇದೆ.

ಕೆಮ್ಮನ್ನು ಹ್ಯಾಂಗಿಂಗ್ ಬ್ರಿಡ್ಜ್

ವರಂಗ ಜೈನ ಬಸದಿ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗ ಎಂಬ ಪುಟ್ಟ ಹಳ್ಳಿಯಲ್ಲಿರುವ ವರಂಗ ಜೈನ ಬಸದಿ 14 ಎಕರೆ ವಿಸ್ತಾರದ ಕರೆಯ ಮಧ್ಯದಲ್ಲಿರುವ ನಕ್ಷತ್ರಾಕಾರದ ಚತುರ್ಮುಖ ಬಸದಿ. ಮುಂಗಾರು ಮಳೆ-2 ಚಿತ್ರದಲ್ಲಿ ಇದರ ಸೌಂದರ್ಯವನ್ನು ನೀವು ನೋಡಿರುತ್ತೀರಾ. ಆದ್ರೆ ಸರಿಯಾದ ನಿರ್ವಹಣೆ, ಭದ್ರತೆ ಇಲ್ಲ. ಆದ್ರೆ ಇದೊಂದು ನೋಡಲೇ ಬೇಕಾದ ಸುಂದರ ಬಸದಿ.

ವರಂಗ ಜೈನ ಬಸದಿ

 

ಬೀಚ್ಸ್ ದೇವಸ್ಥಾನಗಳು
1. ಮಲ್ಪೆ ಮತ್ತು ಸೆಂಟ್ ಮೇರಿಸ್ ಐಲ್ಯಾಂಡ್ 1. ಉಡುಪಿ ಕೃಷ್ಣ ಮಠ
2. ಕೋಡಿ ಬೆಂಗ್ರೆ 2. ಕೊಲ್ಲೂರು ಮೂಕಾಂಬಿಕೆ
3. ಮರವಂತೆ 3. ಮಂದಾರ್ತಿ
4. ಕೋಡಿ ಬೀಚ್ 4. ಕಲ್ಲು ಗಣಪತಿ
5. ಕಾಪು ಬೀಚ್.. ಇತ್ಯಾದಿ 5. ಕುಂಡೇಶ್ವರ
6. ಸಾಲಿಗ್ರಾಮ, ಗುರುನರಸಿಂಹ ದೇವಸ್ಥಾನ
ಜಲಪಾತಗಳು
1. ಅರ್ಬಿ (ಮಣಿಪಾಲ) ಉದ್ಯಾನವನ
2 ಜೋಮ್ಲು (ಹೆಬ್ರಿ ಬಳಿ) 1. ಮಣಿಪಾಲ ಟ್ರೀ ಪಾರ್ಕ್
3. ತೊಂಬಟ್ಟು ಜಲಪಾತ 2. ಅಜ್ಜರಕಾಡು ಭುಜಂಗ ಪಾರ್ಕ್
4. ಬೆಲ್ಕಲ್ ತೀರ್ಥ 3. ಎಂಡ್‌ಪಾಯಿಂಟ್ ಪಾರ್ಕ್.. ಇತ್ಯಾದಿ
5. ಕೂಸಳ್ಳಿ.. ಇತ್ಯಾದಿ

 

 

Published On - 4:13 pm, Fri, 23 December 22