AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2023: ಹೈಸ್ಕೂಲ್​ನಲ್ಲಿ ಮೂಡಿದ ಪ್ರೀತಿಯ ಕ್ಷಣ, ಆಕೆ ಪ್ರೇಮದ ಮೊದಲ ಸ್ಪರ್ಶ ನೀಡಿದ ಹುಡುಗಿ

ಹೈಸ್ಕೂಲ್ ನಲ್ಲಿದಾಗ ನಮ್ಮ ತರಗತಿಗೆ ಹೊಸದಾಗಿ ಹುಡಿಗಿಯೊಬ್ಬಳ ಆಗಮವಾಗಿತ್ತು. ನೋಡಲು ಅಂದವಾಗಿ, ಮಾತು ಮಧುರವಾಗಿತ್ತು. 2 ವಾರ ತಡವಾಗಿ ಬಂದ ಕಾರಣ, ನೋಟ್ಸ್ ಕೊಡುವ ಮೂಲಕ ಮೊದಲ ಮಾತು ಆರಂಭವಾಯಿತು. ಹೀಗೆ ದಿನ ನಿತ್ಯ ಪಿಸು ಮಾತುಗಳು.

Valentine's Day 2023: ಹೈಸ್ಕೂಲ್​ನಲ್ಲಿ ಮೂಡಿದ ಪ್ರೀತಿಯ ಕ್ಷಣ, ಆಕೆ ಪ್ರೇಮದ ಮೊದಲ ಸ್ಪರ್ಶ ನೀಡಿದ ಹುಡುಗಿ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 14, 2023 | 6:54 PM

Share

ಹೈಸ್ಕೂಲ್ ನಲ್ಲಿದಾಗ ನಮ್ಮ ತರಗತಿಗೆ ಹೊಸದಾಗಿ ಹುಡಿಗಿಯೊಬ್ಬಳ ಆಗಮವಾಗಿತ್ತು. ನೋಡಲು ಅಂದವಾಗಿ, ಮಾತು ಮಧುರವಾಗಿತ್ತು. 2 ವಾರ ತಡವಾಗಿ ಬಂದ ಕಾರಣ, ನೋಟ್ಸ್ ಕೊಡುವ ಮೂಲಕ ಮೊದಲ ಮಾತು ಆರಂಭವಾಯಿತು. ಹೀಗೆ ದಿನ ನಿತ್ಯ ಪಿಸು ಮಾತುಗಳು. ನಾನು ಯಾವಾಗ ರಜೆ ಮಾಡಿದಾಗ, ಆಕೆಯ ನೋಟ್ಸ್ ತೆಗೆದುಕೊಂಡು ಮನೆಗೆ ಬರುತ್ತಿದೆ. ಮನೆಯಲ್ಲಿ ಯಾರಿಗೂ ತಿಳಿಬಾರದೆಂದು ರಾತ್ರಿ ವೇಳೆ ನೋಟ್ಸ್ ಬರೆಯತ್ತಿದ್ದೆ. ಆಕೆಯ ಹುಟ್ಟುಹಬ್ಬದ ದಿನದಂದು ಚಿಕ್ಕ ಟೆಡ್ಡಿಯ ಕೀ ಚೈನ್ ಉಡುಗೊರೆಯಾಗಿ ನೀಡಿದೆ. ಆಸಕ್ತಿಕರ ವಿಚಾರವೆಂದರೆ ಶಾಲೆಯ ಕೊನೆಯ ಗಂಟೆಯ ನಂತರ ಅವಳಿಗಾಗಿ ಕಾಯುತ್ತಿದ್ದೆ. ಸರಿಸುಮಾರು 400 ಮೀಟರ್ ಅನಿಸುತ್ತೆ, ಒಟ್ಟಿಗೆ ಮಾತನಾಡುತ್ತ ಹೋಗುತ್ತಿದೆವು. ಶಾಲೆಯ ಹತ್ತಿರ ಇರುವ ಸರ್ಕಲ್ ಬಳಿ ನಮ್ಮಿಬ್ಬರ ಪಯಣದ ಹಾದಿ ಬದಲಾಗುತ್ತಿತ್ತು. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ಟಾದಾಗ ಆಗುವಷ್ಟೇ ಸಂಭ್ರಮ, ಮನಸ್ಸಿಗೆ ಉಲ್ಲಾಸ ನನಗೆ ಆ 400 ಮೀಟರ್ ಪಯಣವಾಗಿತ್ತು. ಯಾವ ದಿನವಾದರೂ ಶಾಲೆಗೆ ಹೋಗಲು ಬೇಸರವೆನಿಸುವುದಿಲ್ಲ. ಆದರೆ ರಕ್ಷಾ ಬಂಧನದೊಂದು ಮಾತ್ರ ಶಾಲೆಗೆ ಹೋಗಲು ಸ್ವಲ್ಪ ಬೇಜಾರು. ಅಂದು ಮಧ್ಯಾಹ್ನ ಊಟದ ನಂತರ ಗೆಳತಿ ನನ್ನ 4 ಗೆಳೆಯರಿಗೆ ರಾಖಿ ಕಟ್ಟುತ್ತಾ ಬರುತ್ತಿರುವಾಗ ನನ್ನ ಹೃದಯ ಬಡಿತ ಹೆಚ್ಚಾಗುತ್ತಿತು. ಕೊನೆದಾಗಿ ನನ್ನ ಬಳಿಗೆ ಬಂದು ರಾಕಿ ಬದಲು ಪಿಸು ನಗುತ್ತಾ ಹೋದಳು.

ಆಕೆ ಟ್ಯೂಷನ್ ಹೋಗುತ್ತಿದ್ದನ್ನು ತಿಳಿದು. ನಾನು ಟ್ಯೂಷನ್ ಗೆ ಸೇರಿಕೊಂಡೆ. ಹೋಮ್ ವರ್ಕ್ ಮಾಡುಲು ಉದಾಸೀನ, ಮಾಡದಿದ್ದರೆ ಆಕೆಯ ಮುಂದೆ ಅವಮಾನ ಹಾಗಾಗಿ ನಾನು ತಪ್ಪದೆ ಹೋಮ್ ವರ್ಕ್ಮ ಮಾಡುತ್ತಿದೆ. ಕೆಲವೊಮ್ಮೆ ಮಾತಿನ ಮುಖಾಂತರ ಹೇಳಲಾಗುವುದನ್ನು ಕವನ, ಕಾವ್ಯ, ಚಿತ್ರ, ಸಂಗೀತ ಮೂಲಕ ವ್ಯಕ್ತಪಡಿಸಬಹುದು ಅನ್ನುತ್ತಾರೆ ಅದು ನಿಜ. ಅದ್ಯಾವಾಗ ಅವಳ ಮೇಲಿನ ಸ್ನೇಹ ಪ್ರೀತಿ ಆಯಿತು ಗೊತ್ತಿಲ್ಲ. ಆದರೆ ಇಲ್ಲಿಯ ತನಕ ಪ್ರೀತಿ ಅಭಿವ್ಯಕ್ತಿಪಡಿಸುವ ವಿಚಾರವನ್ನು ಹೇಳಲಿಲ್ಲ. ಶಾಲಾ ದಿನಗಳಲ್ಲಿ ಒಳ್ಳೆ ಸ್ನೇಹಿತೆಯಾಗಿದ್ದಳು.

ಇದನ್ನೂ ಓದಿ: ನಮ್ಮ ಈ ಪ್ರೀತಿಯ ಕಥೆಗೆ ಏನೆಂದು ಹೆಸರಿಡಲಿ? ಪ್ರೀತಿಯಲ್ಲಿ ಇವೆಲ್ಲ ಸಹಜ

ಓ ನನ್ನ ಪ್ರೀತಿಯ ಗೆಳತಿ ರಜೆ ಯಾದಾಗ ಬೇಕಿತ್ತು ನಿನ್ನ ನೋಟ್ಸು ಲಗೋರಿ ಆಟದಲ್ಲಿ ನಿನ್ನ ನೋಟ

ಕಂಡ ಕ್ಷಣ ಮೌನವಾಯಿತು ಈ ಮನಸ್ಸು ರಾಖಿ ಕಟ್ಟಿ ಬಂದಿಸಲಿಲ್ಲ, ಪ್ರೀತಿ ಹೇಳಿ ಪ್ರೀತಿಸಲಿಲ್ಲ, ಸಿಹಿ ನೆನಪುಗಳೊಂದಿಗೆ ಸದಾ ಮನದಲ್ಲಿರುವೆ….

ಪ್ರೇಮ ಪತ್ರ: ಆನಂದ ಜೇವೂರ್,

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್