Valentine’s Day 2023: ನಮ್ಮ ಈ ಪ್ರೀತಿಯ ಕಥೆಗೆ ಏನೆಂದು ಹೆಸರಿಡಲಿ? ಪ್ರೀತಿಯಲ್ಲಿ ಇವೆಲ್ಲ ಸಹಜ

ನಂಗೆ ಯಾಕೆ ಮೆಸೇಜ್ ಮಾಡಿದ್ದಿರಾ? ಎಂಬ ಪ್ರಶ್ನೆಯ ಮೂಲಕ ಆರಂಭವಾದ ಸಂಭಾಷಣೆ ಇಂದು ಯಾಕೋ ಮೆಸೇಜ್ ಮಾಡಿಲ್ಲಾ? ನನ್ನ ಮರೆತು ಹೊದ್ಯಾ? ಅನ್ನೋವಷ್ಟು ಸಲುಗೆ. ತಿಳಿ ನೀರಿನಂತಿದ್ದ ನನ್ನ ಮನದಲ್ಲಿ ಅಂದು ಪ್ರೀತಿಯ ಬೀಜ ಬಿತ್ತಿ ಹೃದಯದಾಳದಲ್ಲಿ ಪ್ರೀತಿಯ ಚಿಗುರು ಬೆಳೆದಿದ್ದು ನನಗೇ ಆಶ್ಚರ್ಯ.

Valentine's Day 2023: ನಮ್ಮ ಈ ಪ್ರೀತಿಯ ಕಥೆಗೆ ಏನೆಂದು ಹೆಸರಿಡಲಿ? ಪ್ರೀತಿಯಲ್ಲಿ ಇವೆಲ್ಲ ಸಹಜ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 14, 2023 | 5:58 PM

ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಬಂದು ಮೊಬೈಲ್ ಹಿಡಿದುಕೊಂಡೆ. ಡಾಟಾ ಆನ್ ಮಾಡಿ ವಾಟ್ಸಾಪ್ ಓಪನ್ ಮಾಡಿದಾಗ ಪ್ರತೀ ದಿನ ಬರುತ್ತಿದ್ದ ಸಂದೇಶಗಳ ಜೊತೆಗೆ ಒಂದು ಅಪರಿಚಿತ ನಂಬರ್‌ನಿಂದ ‘ಹಾಯ್’ ಅನ್ನೋ ಸಂದೇಶ ಬಂದಿತ್ತು. ಯಾರಿದು? ನಂಗೆ ಯಾಕೆ ಮೆಸೇಜ್ ಮಾಡಿದ್ದಿರಾ? ಎಂಬ ಪ್ರಶ್ನೆಯ ಮೂಲಕ ಆರಂಭವಾದ ಸಂಭಾಷಣೆ ಇಂದು ಯಾಕೋ ಮೆಸೇಜ್ ಮಾಡಿಲ್ಲಾ? ನನ್ನ ಮರೆತು ಹೊದ್ಯಾ? ಅನ್ನೋವಷ್ಟು ಸಲುಗೆ. ತಿಳಿ ನೀರಿನಂತಿದ್ದ ನನ್ನ ಮನದಲ್ಲಿ ಅಂದು ಪ್ರೀತಿಯ ಬೀಜ ಬಿತ್ತಿ ಹೃದಯದಾಳದಲ್ಲಿ ಪ್ರೀತಿಯ ಚಿಗುರು ಬೆಳೆದಿದ್ದು ನನಗೇ ಆಶ್ಚರ್ಯ. ಲವ್ ಅಂದ್ರೆ ಹುಚ್ಚಾಟ, ಇನ್ನು ನಂಬಿಕೆ ಅಂತೂ ದೂರದ ಮಾತು. ಅರೆ, ನಾನು ಪ್ರೀತೀಲಿ ಬೀಳ್ತೀನಾ? ಸಾಧ್ಯಾನೇ ಇಲ್ಲಾ ಅಂತಿದ್ದೋಳು ಅವನ ಮುಖ ದರ್ಶನವೂ ಆಗದೇ, ಬರೀ ಮಾತಿನ ಶೈಲಿಗೇ ಮನಸೋತಿದ್ದೆ. ದಿನೇ ದಿನೇ ನನಗೆ ಅರಿವಿಲ್ಲದಂತೆಯೇ ಒಂದೊಂದೇ ಹೆಜ್ಜೆ ಎಂಬಂತೆ ಪ್ರೇಮಲೋಕಕ್ಕೆ ಪ್ರವೇಶ ಮಾಡಿದ್ದೆ.

ಆ ದಿನ ಇನ್ನೂ ನೆನಪಿದೆ ಒಂದು ಬಾರಿಯೂ ಮುಖವೇ ತೋರದ ಆತ ಪ್ರೀತಿಯ ಮೊದಲನೇ ಕಾಣಿಕೆಯೆಂಬಂತೆ ನಿಲ್ಲಿಸಿದ್ದ ನನ್ನ ಸ್ಕೂಟರ್‌ನ ಮೇಲೆ ಕೆಂಪು ಗುಲಾಬಿಯೊಂದನ್ನು ಇಟ್ಟು ಹೋಗಿದ್ದ. ಅದನ್ನು ಕಂಡ ನನ್ನ ಮನದಲ್ಲಿ ಆತಂಕದ ಜೊತೆಗೆ ಹೆಳಲಾಗದ ಅನುಭವ. ಅಂದ ಹಾಗೆ ಆತನನ್ನು ಕಂಡುಹಿಡಿಯಲು ದೊಡ್ಡ ಕಾರ್ಯಚರಣೆ ಮಾಡಲಾಗಿತ್ತು. ದಿನವಿಡೀ ಸಂದೇಶ ಕಳುಹಿಸುತ್ತಿದ್ದರೂ ನಿಮ್ಮ ಫೋಟೋ ಕಳಿಸಿ ಅಂದಾಗಲೆಲ್ಲ ಇಲ್ಲ ಎನ್ನುತ್ತಲೇ ಅದರ ವಿಷಯ ಮರೆಸಿ ಬೇರೆ ವಿಚಾರ ಮಾತನಾಡುತ್ತಿದ್ದ. ಏನೇ ಆಗಲಿ ಕಂಡು ಹಿಡಿಯಲೇಬೇಕು ಎಂದು ಪಣತೊಟ್ಟ ನಾನು ಆತ ಕಳುಹಿಸಿದ ಫೋಟೋಗಳೆಲ್ಲವನ್ನೂ ಸಂಗ್ರಹಿಸತೊಡಗಿದೆ. ಹೀಗೇ ಒಂದು ದಿನ ಕಾಲೇಜಿಗೆ ಹೋಗುತ್ತಿದ್ದ ನನಗೆ ಮಾರ್ಗ ಮಧ್ಯೆ ಗೆಳತಿಯ ಕರೆ ಬಂದ ಕಾರಣ ಸ್ಕೂಟರ್ ಬದಿಗೆ ನಿಲ್ಲಿಸಿ ಕರೆ ಸ್ವೀಕರಿದೆ.

ಇದನ್ನೂ ಓದಿ: ಕನಸನು ಗುಣಿಸುವಂಥಾ ನೆನಪನು ಎಣಿಸುವಂಥ ಹೃದಯದ ಗಣಿತ ನೀನು ನನ್ನ ಮನದ ಅರಸ

ಮಾತನಾಡುತ್ತಾ ಸುತ್ತ ಕಣ್ಣು ಹಾಯಿಸಿದ ಬದಿಯಲ್ಲಿದ್ದ ಆ ಜಾಗ ಎಲ್ಲೋ ನೋಡಿದ ನೆನಪು. ತಕ್ಷಣ ಮೊಬೈಲ್ ಗ್ಯಾಲರಿ ತೆರೆದು ನೋಡಿದರೆ ಅದೇ ಜಾಗ ಅಂತೂ ಒಂದು ಕ್ಲೂ ಸಿಕ್ಕಿತು. ಹೀಗೆ ಒಂದೊಂದೇ ಕ್ಲೂ ಸಂಗ್ರಹಿಸಿದ್ದ ನನಗೆ ಕೊನೆಗೂ ಎಡಿಟ್ ಮಾಡಿ ಕಳುಹಿಸಿದ್ದ ಆ ಫೋಟೋಗೆ ಸರಿ ಹೊಂದುವ ಮುಖ ಕಂಡು ಹಿಡಿದಿದ್ದೆ. ನಗುಮೊಗದ ಚೆಲುವ, ಮೆರುಗು ಹೆಚ್ಚಿಸುವ ಗುಂಗುರು ಕೂದಲು ಆತನಿಗೆ ಗೊತ್ತಿಲ್ಲದೇ ದೂರದಿಂದಲೇ ಮುಖ ನೋಡಿ ನಾಚಿದ್ದೆ. ಅಲ್ಲಿಯವರೆಗೂ ಹೇಳಿಕೊಂಡಿರದ ಮನದಾಳದ ಪ್ರೀತಿ ಇಂದೇ ಹೇಳಿಕೊಂಡುಬಿಡಲೇ? ಇಲ್ಲ! ಅಷ್ಟು ಸಲೀಸಾಗಿ ಹೇಳುವುದು ಬೇಡ ಇಷ್ಟು ದಿನ ನನ್ನ ಕಾಯಿಸಿದವನವನ ಮೇಲೆ ಅಂದು ಮೂಡಿದ್ದು ಪ್ರೀತಿಯ ತಿರಸ್ಕಾರದ ಭಾವನೆ.

ಅಲ್ಲಿಗೆ ಆತ ಆರಂಭಿಸಿದ್ದ ಕಣ್ಣಾ ಮುಚ್ಚಾಲೆ ಆಟದಲ್ಲಿ ಗೆಲುವು ಸಾಧಿಸಿದ್ದು ನಾನು. ದೊಡ್ಡ ಸುಳ್ಳಿನಿಂದಲೇ ಆರಂಭವಾದ ಪ್ರೀತಿಯಲ್ಲಿ ಆತ ಅಲ್ಪ ಸ್ವಲ್ಪ ಸುಳ್ಳು ಹೇಳಿದರೂ ನಿಜ ಗೊತ್ತಾಗುವ ಹೊತ್ತಿಗೆ ನನ್ನ ಸಿಟ್ಟು ಆತನ ಕುಡಿ ಮೀಸೆ ಹಿಂದಿನ ನಗುವಿಗೆ ಕರಗಿ ತುಟಿಯ ಮೇಲೆ ನಗುವಿನ ಬಣ್ಣ ಮೂಡುವುದಂತೂ ನಿಜ. ದಿನ ಕಳೆದಂತೆ ಮಾತು-ಕತೆ, ತಮಾಷೆ, ತುಂಟಾಟ, ಹುಚ್ಚಾಟ ಹೆಚ್ಚಾಗುವುದರ ಜೊತೆ ಜೊತೆಗೆ ಜಗಳವೂ ಹೊರತಾಗಿಲ್ಲವೆಂಬಂತೆ ಈ ಎಲ್ಲಾ ಅಂಶಗಳು ಮಿಶ್ರಿತವಾದ ಪರಿಪೂರ್ಣ ಪ್ರೀತಿ ನಮ್ಮದು. ಈ ನಮ್ಮ ಪ್ರೀತಿಯ ಕಥೆಗೆ ಏನೆಂದು ಹೆಸರಿಡಲಿ?

ಪ್ರೇಮ ಪತ್ರ: ಪ್ರೀತಿ ಹಡಪದ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ