ಹೈಸ್ಕೂಲ್ ನಲ್ಲಿದಾಗ ನಮ್ಮ ತರಗತಿಗೆ ಹೊಸದಾಗಿ ಹುಡಿಗಿಯೊಬ್ಬಳ ಆಗಮವಾಗಿತ್ತು. ನೋಡಲು ಅಂದವಾಗಿ, ಮಾತು ಮಧುರವಾಗಿತ್ತು. 2 ವಾರ ತಡವಾಗಿ ಬಂದ ಕಾರಣ, ನೋಟ್ಸ್ ಕೊಡುವ ಮೂಲಕ ಮೊದಲ ಮಾತು ಆರಂಭವಾಯಿತು. ಹೀಗೆ ದಿನ ನಿತ್ಯ ಪಿಸು ಮಾತುಗಳು. ನಾನು ಯಾವಾಗ ರಜೆ ಮಾಡಿದಾಗ, ಆಕೆಯ ನೋಟ್ಸ್ ತೆಗೆದುಕೊಂಡು ಮನೆಗೆ ಬರುತ್ತಿದೆ. ಮನೆಯಲ್ಲಿ ಯಾರಿಗೂ ತಿಳಿಬಾರದೆಂದು ರಾತ್ರಿ ವೇಳೆ ನೋಟ್ಸ್ ಬರೆಯತ್ತಿದ್ದೆ. ಆಕೆಯ ಹುಟ್ಟುಹಬ್ಬದ ದಿನದಂದು ಚಿಕ್ಕ ಟೆಡ್ಡಿಯ ಕೀ ಚೈನ್ ಉಡುಗೊರೆಯಾಗಿ ನೀಡಿದೆ. ಆಸಕ್ತಿಕರ ವಿಚಾರವೆಂದರೆ ಶಾಲೆಯ ಕೊನೆಯ ಗಂಟೆಯ ನಂತರ ಅವಳಿಗಾಗಿ ಕಾಯುತ್ತಿದ್ದೆ. ಸರಿಸುಮಾರು 400 ಮೀಟರ್ ಅನಿಸುತ್ತೆ, ಒಟ್ಟಿಗೆ ಮಾತನಾಡುತ್ತ ಹೋಗುತ್ತಿದೆವು. ಶಾಲೆಯ ಹತ್ತಿರ ಇರುವ ಸರ್ಕಲ್ ಬಳಿ ನಮ್ಮಿಬ್ಬರ ಪಯಣದ ಹಾದಿ ಬದಲಾಗುತ್ತಿತ್ತು. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ಟಾದಾಗ ಆಗುವಷ್ಟೇ ಸಂಭ್ರಮ, ಮನಸ್ಸಿಗೆ ಉಲ್ಲಾಸ ನನಗೆ ಆ 400 ಮೀಟರ್ ಪಯಣವಾಗಿತ್ತು. ಯಾವ ದಿನವಾದರೂ ಶಾಲೆಗೆ ಹೋಗಲು ಬೇಸರವೆನಿಸುವುದಿಲ್ಲ. ಆದರೆ ರಕ್ಷಾ ಬಂಧನದೊಂದು ಮಾತ್ರ ಶಾಲೆಗೆ ಹೋಗಲು ಸ್ವಲ್ಪ ಬೇಜಾರು. ಅಂದು ಮಧ್ಯಾಹ್ನ ಊಟದ ನಂತರ ಗೆಳತಿ ನನ್ನ 4 ಗೆಳೆಯರಿಗೆ ರಾಖಿ ಕಟ್ಟುತ್ತಾ ಬರುತ್ತಿರುವಾಗ ನನ್ನ ಹೃದಯ ಬಡಿತ ಹೆಚ್ಚಾಗುತ್ತಿತು. ಕೊನೆದಾಗಿ ನನ್ನ ಬಳಿಗೆ ಬಂದು ರಾಕಿ ಬದಲು ಪಿಸು ನಗುತ್ತಾ ಹೋದಳು.
ಆಕೆ ಟ್ಯೂಷನ್ ಹೋಗುತ್ತಿದ್ದನ್ನು ತಿಳಿದು. ನಾನು ಟ್ಯೂಷನ್ ಗೆ ಸೇರಿಕೊಂಡೆ. ಹೋಮ್ ವರ್ಕ್ ಮಾಡುಲು ಉದಾಸೀನ, ಮಾಡದಿದ್ದರೆ ಆಕೆಯ ಮುಂದೆ ಅವಮಾನ ಹಾಗಾಗಿ ನಾನು ತಪ್ಪದೆ ಹೋಮ್ ವರ್ಕ್ಮ ಮಾಡುತ್ತಿದೆ. ಕೆಲವೊಮ್ಮೆ ಮಾತಿನ ಮುಖಾಂತರ ಹೇಳಲಾಗುವುದನ್ನು ಕವನ, ಕಾವ್ಯ, ಚಿತ್ರ, ಸಂಗೀತ ಮೂಲಕ ವ್ಯಕ್ತಪಡಿಸಬಹುದು ಅನ್ನುತ್ತಾರೆ ಅದು ನಿಜ. ಅದ್ಯಾವಾಗ ಅವಳ ಮೇಲಿನ ಸ್ನೇಹ ಪ್ರೀತಿ ಆಯಿತು ಗೊತ್ತಿಲ್ಲ. ಆದರೆ ಇಲ್ಲಿಯ ತನಕ ಪ್ರೀತಿ ಅಭಿವ್ಯಕ್ತಿಪಡಿಸುವ ವಿಚಾರವನ್ನು ಹೇಳಲಿಲ್ಲ. ಶಾಲಾ ದಿನಗಳಲ್ಲಿ ಒಳ್ಳೆ ಸ್ನೇಹಿತೆಯಾಗಿದ್ದಳು.
ಇದನ್ನೂ ಓದಿ: ನಮ್ಮ ಈ ಪ್ರೀತಿಯ ಕಥೆಗೆ ಏನೆಂದು ಹೆಸರಿಡಲಿ? ಪ್ರೀತಿಯಲ್ಲಿ ಇವೆಲ್ಲ ಸಹಜ
ಓ ನನ್ನ ಪ್ರೀತಿಯ ಗೆಳತಿ
ರಜೆ ಯಾದಾಗ ಬೇಕಿತ್ತು ನಿನ್ನ ನೋಟ್ಸು
ಲಗೋರಿ ಆಟದಲ್ಲಿ ನಿನ್ನ ನೋಟ
ಕಂಡ ಕ್ಷಣ ಮೌನವಾಯಿತು ಈ ಮನಸ್ಸು
ರಾಖಿ ಕಟ್ಟಿ ಬಂದಿಸಲಿಲ್ಲ,
ಪ್ರೀತಿ ಹೇಳಿ ಪ್ರೀತಿಸಲಿಲ್ಲ,
ಸಿಹಿ ನೆನಪುಗಳೊಂದಿಗೆ ಸದಾ ಮನದಲ್ಲಿರುವೆ….
ಪ್ರೇಮ ಪತ್ರ: ಆನಂದ ಜೇವೂರ್,