Budget 2023: ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 5.93 ಲಕ್ಷ ಕೋಟಿ ರೂ ಘೋಷಣೆ, ಕಳೆದ ವರ್ಷಕ್ಕಿಂತ ಶೇ.13ರಷ್ಟು ಹೆಚ್ಚು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಎರಡನೇ ಅವಧಿಗೆ ಫೆಬ್ರವರಿ 1 ರಂದು ಪೂರ್ಣ ಬಜೆಟ್ ಮಂಡಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಎರಡನೇ ಅವಧಿಗೆ ಫೆಬ್ರವರಿ 1 ರಂದು ಪೂರ್ಣ ಬಜೆಟ್ ಮಂಡಿಸಿದರು. ಕೇಂದ್ರ ಬಜೆಟ್‌ನಲ್ಲಿ, 2023-24ನೇ ಸಾಲಿಗೆ ರಕ್ಷಣಾ ವಲಯಕ್ಕೆ ಒಟ್ಟು 5.94 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ. ಸರ್ಕಾರದ ಗಮನವು ಯಾವಾಗಲೂ ರಕ್ಷಣಾ ಕ್ಷೇತ್ರದ ಮೇಲೆ ಹೆಚ್ಚಿರುತ್ತದೆ, ಅದೇ ಸಮಯದಲ್ಲಿ, ಕಳೆದ ಕೆಲವು ತಿಂಗಳುಗಳಲ್ಲಿ, ಚೀನಾ ಮತ್ತು ಭಾರತೀಯ ಸೇನೆಯ ನಡುವೆ ಉದ್ವಿಗ್ನತೆಯ ವರದಿಗಳು ಬಂದಿವೆ.
ನಿರೀಕ್ಷೆಯಂತೆ ಸರ್ಕಾರ ಈ ಬಾರಿ ರಕ್ಷಣಾ ಬಜೆಟ್ ಹೆಚ್ಚಿಸಿದೆ. 2022-23ನೇ ಸಾಲಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 5.25 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು, ಇದು ಒಟ್ಟು ಬಜೆಟ್‌ನ ಶೇ.13.31ರಷ್ಟಿತ್ತು. ಇದರಲ್ಲಿ ರಕ್ಷಣಾ ಪಿಂಚಣಿಗಾಗಿ 1.19 ಲಕ್ಷ ಕೋಟಿ ರೂ. ಈ ಬಜೆಟ್ ಹಿಂದಿನ ವರ್ಷಕ್ಕಿಂತ ಶೇ.13ರಷ್ಟು ಹೆಚ್ಚಿಸಿದಂತಾಗಿದೆ.
ಮೇಕ್ ಇನ್ ಇಂಡಿಯಾಗೆ ಸರ್ಕಾರ ಹೆಚ್ಚಿನ ಒತ್ತು ನೀಡಿತ್ತು. ಈ ರಕ್ಷಣಾ ಬಜೆಟ್ ಅನ್ನು ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ, ಪ್ರತಿ ಬಾರಿಯಂತೆ ಈ ಬಾರಿಯೂ ಈ ಕ್ಷೇತ್ರದಲ್ಲಿ ಹೆಚ್ಚು ಬಜೆಟ್ ಬಂದಿದೆ.
2017-18ನೇ ಸಾಲಿನ ರಕ್ಷಣಾ ಬಜೆಟ್ 2.74 ಕೋಟಿ ರೂ. ಮತ್ತು 2019-20ರಲ್ಲಿ ರಕ್ಷಣಾ ಬಜೆಟ್‌ಗೆ 3.05 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದೇ ರೀತಿ 2020-21ನೇ ಸಾಲಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ 471378 ಲಕ್ಷ ಕೋಟಿ ರೂ. ನೀಡಲಾಗಿತ್ತು.
ರಕ್ಷಣಾ ಉಪಕರಣಗಳ ಖರೀದಿಗೆ ಸರ್ಕಾರ 1.52 ಲಕ್ಷ ಕೋಟಿ ರೂ ಶಾಸ್ತ್ರಾಸ್ತ್ರ, ವಿಮಾನಗಳು, ಯುದ್ಧನೌಕೆಗಳು ಹಾಗೂ ಇತರೆ ಮಿಲಿಟರಿ ಉಪಕರಣಗಳನ್ನು ಖರೀದಿಗಳನ್ನು ಒಳಗೊಂಡಿದೆ. ಇದರಲ್ಲಿ ಭಾರತೀಯ ಸೇನೆಗೆ 32,015 ಕೋಟಿ ರೂ. ನೀಡಲಾಗಿದೆ. ಭಾರತೀಯ ನೌಕಾಪಡೆಗೆ 47,590 ಕೋಟಿ ರೂ ಮತ್ತು ಭಾರತೀಯ ವಾಯುಪಡೆಗೆ 55,586 ಕೋಟಿ ರೂ. ಮೀಸಲಿಡಲಾಗಿದೆ.
ವಾಣಿಜ್ಯಕ್ಕೆ ಸಂಬಂಧಿಸಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ