ಬಜೆಟ್ 2024: ಇನ್ಷೂರೆನ್ಸ್ ವಲಯದ ಕೆಲ ನಿರೀಕ್ಷೆಗಳು

|

Updated on: Jan 28, 2024 | 12:52 PM

2047ರಷ್ಟರಲ್ಲಿ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡುವ ಸಂಕಲ್ಪ ಇದೆ. ಬಜೆಟ್​ನಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಇನ್ಷೂರೆನ್ಸ್ ವಲಯದಲ್ಲಿ ಇರುವ ಪ್ರಮುಖ ನಿರೀಕ್ಷೆಗಳಲ್ಲಿ ಡಿಜಿಟಲ್ ಹೆಲ್ತ್ ರೆಕಾರ್ಡ್, ಆಭಾ ಐಡಿ, ತೆರಿಗೆ ವಿನಾಯಿತಿ ಇತ್ಯಾದಿ ಸೇರಿವೆ. ಫೆಬ್ರುವರಿ 1ರಂದು ಮಂಡನೆಯಾಗುವ ಬಜೆಟ್​ನಲ್ಲಿ ಇವೆಲ್ಲಾ ನಿರೀಕ್ಷೆಗಳು ಈಡೇರುತ್ತವಾ ಎಂಬುದು ಕುತೂಹಲ ಮೂಡಿಸಿದೆ.

ಬಜೆಟ್ 2024: ಇನ್ಷೂರೆನ್ಸ್ ವಲಯದ ಕೆಲ ನಿರೀಕ್ಷೆಗಳು
ಇನ್ಷೂರೆನ್ಸ್
Follow us on

ಫೆಬ್ರುವರಿ 1ರಂದು ಮಂಡಿಸಲಾಗುವ ಮಧ್ಯಂತರ ಬಜೆಟ್​ನಲ್ಲಿ (Interim Budget 2024) ಹೆಚ್ಚೇನೂ ದೊಡ್ಡ ಕ್ರಮಗಳು ಪ್ರಕಟವಾಗುವುದಿಲ್ಲವಾದರೂ ಪ್ರತೀ ಕ್ಷೇತ್ರಗಳಲ್ಲೂ ಒಂದಷ್ಟು ನಿರೀಕ್ಷೆಗಳಂತೂ ಇರುತ್ತವೆ. 2047ರೊಳಗೆ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡುವ ಸಂಕಲ್ಪ ಹೊಂದಿರುವ ಸರ್ಕಾರ ಈ ನಿಟ್ಟಿನಲ್ಲಿ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಪ್ರತೀ ಬಜೆಟ್​ನಲ್ಲಿ ಏನಾದರೂ ಹೊಸತನ್ನು ನಿರೀಕ್ಷಿಸಬಹುದು. ಈ ಬಜೆಟ್​ನಲ್ಲಿ ಇನ್ಷೂರೆನ್ಸ್ ವಲಯದಿಂದ ಏನು ನಿರೀಕ್ಷೆಗಳಿವೆ ಎಂಬ ಪುಟ್ಟ ವಿವರ ಇಲ್ಲಿದೆ. 2047ರಷ್ಟರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ವಿಮಾ ಕವರೇಜ್ ಇರಬೇಕೆಂಬ ಕನಸು ಕೇಂದ್ರ ಸರ್ಕಾರದ್ದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತೀ ಬಜೆಟ್​ನಲ್ಲೂ ಇನ್ಷೂರೆನ್ಸ್ ವಲಯಕ್ಕೆ ಏನಾದರೂ ಕೊಡುಗೆ ಸಿಗಬಹುದಾ ಎಂಬ ನಿರೀಕ್ಷೆಗಳಿರುತ್ತವೆ.

ಡಿಜಿಟಲ್ ಹೆಲ್ತ್ ರೆಕಾರ್ಡ್ಸ್

2023ರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಪೂರಕವಾಗಿರುವ ಕೆಲವಿಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಾಷ್ಟ್ರೀಯ ಹೆಲ್ತ್ ಕ್ಲೈಮ್ ಎಕ್ಸ್​ಚೇಂಜ್ ಆದ ಬಿಮಾ ಸುಗಮ್ ಮತ್ತು ಇನ್ಷೂರೆನ್ಸ್ ತಿದ್ದುಪಡಿ ಮಸೂದೆ ಇತ್ಯಾದಿ ಹೊಸ ಯೋಜನೆಗಳನ್ನು ಆರಂಭಿಸಿದೆ.

ಈ ಬಜೆಟ್​ನಲ್ಲಿ ಡಿಜಿಟಲ್ ಹೆಲ್ತ್ ಮಿಷನ್ ಅನ್ನು ಇನ್ನಷ್ಟು ಬಲಯುತಗೊಳಿಸಲು ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಡಿಜಿಟಲ್ ಹೆಲ್ತ್ ರೆಕಾರ್ಡ್ ಪಾಲಿಸುವ ಆಭಾ ಐಡಿಯನ್ನು (ABHA ID) ಹೆಚ್ಚು ಪ್ರಚುರಗೊಳಿಸಬಹುದು.

ಇದನ್ನೂ ಓದಿ: ಬಜೆಟ್ ಪೂರ್ವ ಹಲ್ವಾ ಸಮಾರಂಭ; ಸಿಹಿ ಹಂಚಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಜಿಎಸ್​ಟಿ ವಿನಾಯಿತಿ

ಇನ್ಷೂರೆನ್ಸ್ ಪಾಲಿಸಿಗೆ ಜಿಎಸ್​ಟಿ ತೆರಿಗೆಯಿಂದ ವಿನಾಯಿತಿ ಕಲ್ಪಿಸಬೇಕೆಂಬ ಕೂಗು ವಿಮಾ ಕ್ಷೇತ್ರದಲ್ಲಿ ಇದೆ. ಇದಾದರೆ ಇನ್ಷೂರೆನ್ಸ್ ಪ್ರೀಮಿಯಮ್ ಹಣ ತುಸು ಕಡಿಮೆ ಆಗುತ್ತದೆ.

ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ

ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ಇರುವ ತೆರಿಗೆ ವಿನಾಯಿತಿ ಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕು. ಇದರಿಂದ ಇನ್ಷೂರೆನ್ಸ್ ಇತ್ಯಾದಿ ಯೋಜನೆಗಳಿಗೆ ಜನರು ಹೆಚ್ಚು ವೆಚ್ಚ ಮಾಡಲು ಉತ್ತೇಜನ ಸಿಕ್ಕಂತಾಗುತ್ತದೆ.

ಆ್ಯನ್ಯುಟಿ ರಿಟರ್ನ್ಸ್​ಗೆ ತೆರಿಗೆ ಬೇಡ

ಟರ್ಮ್ ಇನ್ಷೂರೆನ್ಸ್​ನ ರಿಟರ್ನ್ ಮೊತ್ತಕ್ಕೆ ತೆರಿಗೆ ವಿಧಿಸುವುದು ಬೇಡ. ಇದರಿಂದ ಇನ್ಷೂರೆನ್ಸ್​ನ ಆಕರ್ಷಣೆ ಕುಂದದಂತೆ ಎಚ್ಚರ ವಹಿಸಬಹುದು ಎಂಬುದು ವಿಮಾ ಕಂಪನಿಗಳ ಅನಿಸಿಕೆ.

ಇದನ್ನೂ ಓದಿ: Union Budget 2024: ಬಜೆಟ್ ಪದ ಬಳಕೆ ಆರಂಭವಾಗಿದ್ದು ಹೇಗೆ? ಆಯವ್ಯಯದ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ಮಾಹಿತಿ

ಕನಿಷ್ಠ ಬಂಡವಾಳ ಅವಶ್ಯಕತೆ

ಹೊಸ ಇನ್ಷೂರೆನ್ಸ್ ಕಂಪನಿಗಳು ಕನಿಷ್ಠ ಬಂಡವಾಳ ಹಾಕಬೇಕು ಎಂಬ ನಿಯಮ ಇದೆ. ಇದನ್ನು ಸಡಿಸಿಬೇಕೆಂಬ ಕೂಗು ಇದೆ. ಇದರಿಂದ ಸ್ಪರ್ಧಾತ್ಮಕತೆ ಹೆಚ್ಚಿಸಬಹುದು ಎಂಬುದು ಅನಿಸಿಕೆ.

ಇವಷ್ಟೇ ಅಲ್ಲದೇ ಇನ್ನೂ ಹಲವು ಅಪೇಕ್ಷೆಗಳು ವಿಮಾ ವಲಯದಲ್ಲಿ ಇದೆ. ಆದರೆ, ವಾಸ್ತವಿಕ ಬಜೆಟ್​ನಲ್ಲಿ ಈ ಅಪೇಕ್ಷೆಗಳು ಈಡೇರಿರುತ್ತವೆ ಎಂದು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ