Budget 2022: ವಿತ್ತೀಯ ಕೊರತೆ ನಿರ್ವಹಣೆಗಾಗಿ ವೆಚ್ಚದ ಮೇಲೆ ನಿಗಾ ಇಡುವಂತೆ ವಿವಿಧ ಸಚಿವಾಲಯ, ಇಲಾಖೆಗಳಿಗೆ ಸೂಚನೆ

| Updated By: Praveen Sahu

Updated on: Jan 20, 2022 | 11:08 PM

ಕೇಂದ್ರ ಬಜೆಟ್ 2022-23ರ ಹಿನ್ನೆಲೆಯಲ್ಲಿ ವೆಚ್ಚವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಂತೆ ಹಣಕಾಸು ಸಚಿವಾಲಯದಿಂದ ವಿವಿಧ ಸಚಿವಾಲಯ, ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಕಾರಣ ಏನು ಎಂಬ ವಿವರ ಇಲ್ಲಿದೆ.

Budget 2022: ವಿತ್ತೀಯ ಕೊರತೆ ನಿರ್ವಹಣೆಗಾಗಿ ವೆಚ್ಚದ ಮೇಲೆ ನಿಗಾ ಇಡುವಂತೆ ವಿವಿಧ ಸಚಿವಾಲಯ, ಇಲಾಖೆಗಳಿಗೆ ಸೂಚನೆ
ಸಾಂದರ್ಭಿಕ ಚಿತ್ರ
Follow us on

2022-23ರ ಕೇಂದ್ರ ಬಜೆಟ್​ (Union Budget 2022-23) ಹಿನ್ನೆಲೆಯಲ್ಲಿ ತಮ್ಮ ವೆಚ್ಚಗಳನ್ನು ಈಗಾಗಲೇ ಮೀಸಲಿಟ್ಟಿರುವ ಮಿತಿಯಲ್ಲೇ ನಿಗದಿ ಮಾಡಿಕೊಳ್ಳುವಂತೆ ಹಣಕಾಸು ಸಚಿವಾಲಯವು ಇತರ ಸಚಿವಾಲಯಗಳಿಗೆ ಹೇಳಿದೆ. ಆ ಮೂಲಕ ವಿತ್ತೀಯ ಕೊರತೆಯನ್ನು ನಿರ್ವಹಣೆ ಮಾಡುವಂತೆ ತಿಳಿಸಲಾಗಿದೆ. ಮಾರ್ಚ್ 31ಕ್ಕೆ ಕೊನೆಯಾಗುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರವು ವಿತ್ತೀಯ ಕೊರತೆಯನ್ನು ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್​ನ (Gross Domestic Product) ಶೇ 6.8ರಷ್ಟು ಅಂದಾಜು ಮಾಡಿದೆ. ವೆಚ್ಚ ಮತ್ತು ತೆರಿಗೆ ಹಾಗೂ ಇತರ ಮೂಲಗಳಿಂದ ಬರುವ ರಸೀದಿಯ ಮಧ್ಯದ ಕೊರತೆಯನ್ನು ಸಂಭಾಳಿಸುವುದಕ್ಕೆ ಸರ್ಕಾರವು ಸಾಲವನ್ನು ಪಡೆಯುತ್ತದೆ. ಅದೇ ವಿತ್ತೀಯ ಕೊರತೆ. ಕಚೇರಿ ಸುತ್ತೋಲೆಯಲ್ಲಿ ಮೂರನೇ ಹಾಗೂ ಅಂತಿಮ ಕಂತಿನ ಪೂರಕ ಬೇಡಿಕೆ ಅನುದಾನವನ್ನು ಕೇಳಲು ಪ್ರಸ್ತಾವ ಸಲ್ಲಿಸುವಂತೆ ಹೇಲಾಗಿದೆ. ಫೆಬ್ರವರಿ 10ನೇ ತಾರೀಕಿನೊಳಗೆ ತಮ್ಮ ಪ್ರಸ್ತಾವವನ್ನು ಸಲ್ಲಿಸಿ ಎಂದು ಸಚಿವಾಲಯಗಳು ಮತ್ತು ಇಲಾಖೆಗಳಿಗೆ ತಿಳಿಸಿದೆ.

ಪೂರಕ ಅನುದಾನಕ್ಕೆ ಪ್ರಸ್ತಾವವನ್ನು ಪ್ರೊಸೆಸ್ ಮಾಡುವಾಗ ಅನುದಾನವನ್ನು ನಿಯಂತ್ರಿಸುವ ಪ್ರಾಧಿಕಾರವು ಆ ಅನುದಾನದಲ್ಲಿ ಎಷ್ಟು ಉಳಿತಾಯ ಮಾಡುವುದಕ್ಕೆ ಸಾಧ್ಯವೋ ಅದನ್ನು ಗುರುತಿಸಿ, ಹೆಚ್ಚುವರಿಯಾಗಿ ಆಗುವ ಅಥವಾ ಏರಿಕೆಯ ಪೂರಕ ಬೇಡಿಕೆಯನ್ನು ತಡೆಯುವುಕ್ಕೆ ಸಾಧ್ಯವೋ ಅಷ್ಟನ್ನು ಉಳಿಸಿ, ಸರೆಂಡರ್ ಮಾಡುವಂತೆ ತಿಳಿಸಿದೆ. ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಸಾದ್ಯಂತವಾಗಿ ಪರಿಶೀಲಿಸಿ ಹಾಗೂ ಉದ್ದೇಶವನ್ನು ಮೌಲ್ಯಮಾಪನ ಮಾಡಿ, ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ. ಎಲ್ಲ ಸಚಿವಾಲಯ ಹಾಗೂ ಇಲಾಖೆಗಳನ್ನು ಪರಿಷ್ಕೃತ ಅಂದಾಜು ಮಿತಿಯೊಳಗೆ ವೆಚ್ಚವನ್ನು ಇಟ್ಟುಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಸುತ್ತೋಲೆಯಲ್ಲಿ ಇನ್ನಷ್ಟು ಮುಂದುವರಿದು ತಿಳಿಸಿರುವಂಂತೆ, ಅನುದಾನದಲ್ಲಿ ಉಳಿತಾಯವನ್ನು ಸಾದ್ಯಂತವಾಗಿ ಪರಿಶೀಲನೆ ಮಾಡಿದ ನಂತರ ಬೇಡಿಕೆಯ ಪ್ರಸ್ತಾವವನ್ನು ಸಲ್ಲಿಸುವಂತೆ ಹೇಳಲಾಗಿದೆ.

ಅಸ್ತಿತ್ವದಲ್ಲಿ ಇರುವ ನಿಬಂಧನೆಗಳ ಪ್ರಕಾರ, ಪೂರಕ ಅಗತ್ಯ ಇಲ್ಲದೇ ಮರುವಿನಿಯೋಗ ಮಾಡಬಹುದಾದ ಸಂದರ್ಭಗಳಲ್ಲಿ ಟೋಕನ್ ಮೊತ್ತವನ್ನು ಒಳಗೊಂಡಂತೆ ಯಾವುದೇ ಪೂರಕ ಪ್ರಸ್ತಾಪವನ್ನು ಸಲ್ಲಿಸಬಾರದು. ಸಮರ್ಥ ಪ್ರಾಧಿಕಾರದ ಅನುಮೋದನೆಯನ್ನು ಪಡೆದ ನಂತರ ಉಳಿತಾಯದ ಮರು ವಿನಿಯೋಗದ ಮೂಲಕ ಅಂತಹ ಅವಶ್ಯಕತೆಗಳನ್ನು ಪೂರೈಸಬಹುದು ಎಂದು ಸುತ್ತೋಲೆಯಲ್ಲಿ ಹೇಳಿದೆ. ಅಂತಹ ಬೇಡಿಕೆಗಳ ಅಡಿಯಲ್ಲಿ ಸಂಯೋಜಿಸಲು ಅರ್ಹವಾಗಿರುವ ಪ್ರಕರಣಗಳು ಭಾರತದ ಆಕಸ್ಮಿಕ ನಿಧಿಯಿಂದ ಮುಂಗಡಗಳನ್ನು ನೀಡಲಾಗಿದ್ದನ್ನು ಒಳಗೊಂಡಿರುತ್ತದೆ. ಅಲ್ಲದೆ, ಬಜೆಟ್ ಅಧಿವೇಶನದಲ್ಲಿ ಪೂರಕ ಬೇಡಿಕೆಗಳನ್ನು ಮುನ್ನಡೆಸಲು ಹಣಕಾಸು ಸಚಿವಾಲಯವು ನಿರ್ದಿಷ್ಟವಾಗಿ ಸಲಹೆ ನೀಡಿದ ಸಂದರ್ಭಗಳಲ್ಲಿ ನ್ಯಾಯಾಲಯದ ತೀರ್ಪಿನ ವಿರುದ್ಧ ಪಾವತಿಗಳನ್ನು ಸೇರಿಸಲಾಗುವುದು ಎಂದು ಅದು ಹೇಳಿದೆ. ಅಂದಹಾಗೆ ಎರಡು ಹಂತದ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭವಾಗಿ ಏಪ್ರಿಲ್ 8ರ ವರೆಗೆ ನಡೆಯಲಿದೆ.

ಇದನ್ನೂ ಓದಿ: Union Budget 2022: ಆದಾಯ ತೆರಿಗೆ ಸ್ಲ್ಯಾಬ್ ಲೆಕ್ಕಾಚಾರ ಅರ್ಥ ಮಾಡಿಕೊಳ್ಳುವುದು ಹೇಗೆ? ನೀವೆಷ್ಟು ತೆರಿಗೆ ಪಾವತಿಸಬೇಕು?

Published On - 8:45 am, Thu, 20 January 22