ಬೆಂಗಳೂರು: ಫೆಬ್ರವರಿ 10 ರಿಂದ 24 ರವರೆಗೆ ವಿಧಾನ ಸೌಧದಲ್ಲಿ ಬಜೆಟ್ ಅಧಿವೇಶನ ಹಿನ್ನೆಲೆ, ಅಧಿವೇಶನದ ಕಾರ್ಯಕಲಾಪಗಳಿಗೆ ಅಡಚಣೆ, ಸಾರ್ವಜನಿಕ ನೆಮ್ಮದಿಗೆ ಭಂಗ, ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿಯವರು ಐಪಿಸಿ ಸೆಕ್ಷನ್ 144 ರ ಪ್ರಕಾರ ಪ್ರತಿಬಂಧಕಾಜ್ಞೆ ಜಾರಿಮಾಡಿ ಆದೇಶಿಸಿದ್ದಾರೆ.
ಅಧೀವೇಶನ ನಡೆಯುವ ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 12 ರ ವರೆಗೆ ವಿಧಾನಸೌಧದ ಸುತ್ತಲೂ 2 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 5 ಕ್ಕಿಂತ ಹೆಚ್ಚು ಜನ ಒಂದೆಡೆ ಗುಂಪು ಸೇರುವಂತಿಲ್ಲ, ಮೆರವಣಿಗೆ, ಪ್ರತಿಭಟನೆ ಹಾಗೂ ಮಾರಕಾಸ್ತ್ರಗಳು, ಕಲ್ಲು, ಇಟ್ಟಿಗೆ ದೈಹಿಕ ಹಿಂಸೆ ಉಂಟುಮಾಡುವ ವಸ್ತುಗಳನ್ನ ಒಯ್ಯುವಂತಿಲ್ಲ. ಸ್ಪೋಟಕ ವಸ್ತುಗಳನ್ನ ಸಿಡಿಸುವುದು ಸಂಪೂರ್ಣ ನಿಷೇಧವಾಗಿದ್ದು, ಯಾವುದೇ ಪ್ರತಿಕೃತಿಗಳ ಪ್ರದರ್ಶನ, ದಹನ ಮಾಡುವಂತಿಲ್ಲ.
ಬಜೆಟ್ ಮಂಡನೆಯ ಬೆನ್ನಲ್ಲೆ 60 ಸಾವಿರದ ಗಡಿ ದಾಟಿದ ಚಿನ್ನದ ಬೆಲೆ
ಬೆಂಗಳೂರು: ಬಜೆಟ್ ಮಂಡನೆಯ ಬೆನ್ನಲ್ಲೆ ಚಿನ್ನದ ಬೆಲೆ ಏರಿಕೆಯಾಗಿದೆ. ಚಿನ್ನದ ಬೆಲೆ 60 ಸಾವಿರದ ಗಡಿ ದಾಟುವ ಮೂಲಕ ಆಭರಣ ಪ್ರೀಯರಿಗೆ ಶಾಕ್ ನೀಡಿದೆ. ಬಂಗಾರದ ಜೊತೆ ಬೆಳ್ಳಿಯ ಬೆಲೆ ಕೂಡ ಏರಿದ್ದು, ಒಂದು ಕೆ.ಜಿಗೆ ಬರೋಬ್ಬರಿ 75 ಸಾವಿರ ರೂಪಾಯಿಯಾಗಿದೆ. ಇಂದಿನ ಚಿನ್ನದ ದರ ನೋಡೋದಾದ್ರೇ 22 ಕ್ಯಾರೆಟ್ನ 10 ಗ್ರಾಂ ಬಂಗಾರಕ್ಕೆ 59,300ರೂಪಾಯಿಯಾಗುವ ಮೂಲಕ ಶಾಕ್ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಳ ಮಾಡಿತ್ತು. ಆದರೀಗಾ ಚಿನ್ನದ ಬೆಲೆ ಏರಿಕೆಯಾಗಿದ್ದು,
ಧರ್ನುಮಾಸ ಕಳೆದು ಮದುವೆ, ಶುಭ ಸಮಾರಂಭಗಳು ಆರಂಭವಾಗೋ ಹೊತ್ತಲ್ಲಿ ಬಂಗಾರದ ಬೆಲೆ ಏರಿಕೆಯಾಗಿದೆ.
Published On - 6:37 pm, Wed, 8 February 23