ನವದೆಹಲಿ, ಜುಲೈ 22: ಕೇಂದ್ರ ಮುಂಗಡ ಪತ್ರ ಮಂಡನೆ ಮಾಡಲು ಎರಡೇ ದಿನ ಬಾಕಿ ಇದೆ. ಮೋದಿ 3.0 ಸರ್ಕಾರ ಚೊಚ್ಚಲ ಬಜೆಟ್ ಇದಾಗಿರುವುದರಿಂದ ಆತ್ಮವಿಶ್ವಾಸದ ಹೆಜ್ಜೆ ಮತ್ತು ಹೊಸ ಭರವಸೆಯ ಹಾದಿ ತುಳಿಯುವ ನಿರೀಕ್ಷೆ ಹೆಚ್ಚಿದೆ. ದೇಶದ ಆರ್ಥಿಕತೆ ಗರಿಷ್ಠವಾಗಿ ಬೆಳೆಯಬೇಕಾದರೆ ಉದ್ಯಮ ವಲಯ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಬೇಕು. ದೇಶದಲ್ಲಿ ನಿರುದ್ಯೋಗ ಇಲ್ಲದಂತೆ ಉದ್ದಿಮೆಗಳು ಬೆಳೆಯಬೇಕು. ಯುವಕರ ಶಕ್ತಿ ಗರಿಷ್ಠವಾಗಿ ಬಳಕೆಯಾಗಬೇಕು. ಆ ನಿಟ್ಟಿನಲ್ಲಿ ಬಜೆಟ್ನಲ್ಲಿ ಯೋಜನೆಗಳು ಇರಬೇಕು ಎಂಬ ಆಶಯವನ್ನು ಉದ್ಯಮ ವಲಯ ಇಟ್ಟುಕೊಂಡಿದೆ. ಇದರಲ್ಲಿ ಪ್ರಮುಖವಾಗಿ ನವೋದ್ಯಮಗಳಿಗೆ ಆರಂಭಿಕ ಉತ್ತೇಜನ ನೀಡುವಂತಹ ಸ್ಟಾರ್ಟಪ್ ಇಂಡಿಯಾ ಸೀಡ್ ಫಂಡ್ ಯೋಜನೆಗೆ ಹೆಚ್ಚು ಹಣ ವಿನಿಯೋಗಿಸಬೇಕು ಎನ್ನುವ ಸಲಹೆ ಕೇಳಿಬಂದಿದೆ.
ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಸಾಕಷ್ಟು ಬೆಳವಣಿಗೆ ಹೊಂದಿದೆ. ಆದರೆ, ಉದ್ಯೋಗಸೃಷ್ಟಿ ಮಾತ್ರ ನಿರೀಕ್ಷಿತ ರೀತಿಯಲ್ಲಿ ಇಲ್ಲ. ಈ ಬಜೆಟ್ನಲ್ಲಿ ಸ್ಟಾರ್ಟಪ್ ಇಕೋಸಿಸ್ಟಂಗೆ ಪ್ರಾಧಾನ್ಯತೆ ಕೊಡಬಹುದು ಎಂದು ಭಾವಿಸಿರುವುದಾಗಿ ಕರ್ನಾಟಕದ ಎಂಜಿನಿಯರಿಂಗ್ ಪದವೀಧರೆಯೊಬ್ಬರ ಅಭಿಪ್ರಾಯವನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡುವ ಇಸಾಪ್ (ESOP: ಎಂಪ್ಲಾಯೀ ಸ್ಟಾಕ್ ಓನರ್ಶಿಪ್ ಪ್ಲಾನ್) ಮೇಲೆ ಡಬಲ್ ತೆರಿಗೆ ವಿಧಿಸುವುದನ್ನು ನಿಲ್ಲಿಸಬೇಕು. ಈ ರೀತಿಯಾಗಿ ವೃತ್ತಿಪರರಿಗೆ ಹೆಚ್ಚು ಉತ್ತೇಜನ ಸಿಕ್ಕಂತಾಗುತ್ತದೆ. ಹೆಚ್ಚು ಕ್ಷಮತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಾರ್ಥಕ್ ಭಡ್ಕಂಕರ್ ಹೇಳುತ್ತಾರೆ.
ಇದನ್ನೂ ಓದಿ: ರೈಲ್ವೆ ಬಜೆಟ್: ಹತ್ತು ವರ್ಷದ ಹಿಂದಿನದಕ್ಕಿಂತ ನಾಲ್ಕು ಪಟ್ಟು ಹೆಚ್ಚಾದ ಬಜೆಟ್ ಗಾತ್ರ; ಈ ಬಾರಿಯ ನಿರೀಕ್ಷೆಗಳಿವು…
ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ನಂತಹ ವಿಶೇಷ, ಪರಿಣಿತ ಮತ್ತು ಉನ್ನತ ತಂತ್ರಜ್ಞಾನ ವಲಯಗಳಲ್ಲಿ ಗ್ಲೋಬಲ್ ಸಪ್ಲೈ ಚೈನ್ನ ಭಾಗವಾಗುವಂತಹ ಯೋಜನೆಗಳ ಮೇಲೆ ಬಜೆಟ್ ಗಮನ ಕೊಡಬೇಕು ಉನ್ನತ ಕೌಶಲ್ಯದ ಕೆಲಸಗಾರರನ್ನು ಸೃಷ್ಟಿಸುವಂತಹ ಕ್ಷೇತ್ರಗಳಲ್ಲಿ ನಾವೀನ್ಯತೆಗೆ ಉತ್ತೇಜಿಸಬೇಕು. ಈ ರೀತಿ ಪಾಲಿಸಿಗಳಿಗೆ ಬಜೆಟ್ ಆದ್ಯತೆ ಕೊಟ್ಟರೆ ಆಗ ಯುವಜನರು ಆರ್ಥಿಕತೆಯ ಬೆಳವಣಿಗೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ ಎಂದು ಬೆಂಗಳೂರಿನ ಎಸ್ಎಪಿ ಲ್ಯಾಬ್ಸ್ನ ಯುವ ಉದ್ಯೋಗಿ ಆಯುಷ್ ಕುಮಾರ್ ಅಭಿಪ್ರಾಯಪಡುತ್ತಾರೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ