GDP, FDI: ಮಧ್ಯಂತರ ಬಜೆಟ್: ಜಿಡಿಪಿ, ಎಫ್​ಡಿಐಗೆ ಹೊಸ ವ್ಯಾಖ್ಯಾನ ಕೊಟ್ಟ ನಿರ್ಮಲಾ ಸೀತಾರಾಮನ್

|

Updated on: Feb 01, 2024 | 3:24 PM

Nirmala Sitharaman Union budget Speech: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಜಿಡಿಪಿ ಮತ್ತು ಎಫ್​ಡಿಐ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದರು. ಜಿಡಿಪಿ ಎಂದರೆ ಗವರ್ನೆನ್ಸ್, ಡೆವಲಪ್ಮೆಂಟ್ ಮತ್ತು ಪರ್ಫಾರ್ಮೆನ್ಸ್ ಎಂದು ಅವರು ಬಣ್ಣಿಸಿದರು. ಇನ್ನು ಎಫ್​​ಡಿಐ ಅನ್ನು ಫಸ್ಟ್ ಡೆವಲಪ್ ಇಂಡಿಯಾ ಎಂದು ನಿರ್ಮಲಾ ಸೀತಾರಾಮನ್ ಕರೆದಿದ್ದಾರೆ.

GDP, FDI: ಮಧ್ಯಂತರ ಬಜೆಟ್: ಜಿಡಿಪಿ, ಎಫ್​ಡಿಐಗೆ ಹೊಸ ವ್ಯಾಖ್ಯಾನ ಕೊಟ್ಟ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ ಒಂದು ಗಂಟೆಯ ಬಜೆಟ್ ಭಾಷಣದಲ್ಲಿ ಹಲವು ಅಭಿವೃದ್ದಿ ಸಂಗತಿಗಳನ್ನು ಪ್ರಸ್ತಾಪಿಸಿ ವಿವರಿಸಿದ್ದಾರೆ. ಅಭಿವೃದ್ದಿ, ಕಾರ್ಯಸಾಧನೆ ಮತ್ತು ಆಡಳಿತದ ಬಗ್ಗೆ ಸರ್ಕಾರ ಸಮಾನ ಆದ್ಯತೆ ಕೊಡುತ್ತದೆ ಎಂದು ಹೇಳಿದ ಅವರು, ಬಡವರು, ಯುವ ಸಮುದಾಯದವರು, ಕೃಷಿಕರು ಮತ್ತು ಮಹಿಳೆಯರು (4 castes) ಇವರನ್ನು ನಾಲ್ಕು ಜಾತಿಗಳೆಂದು ಅವರು ವ್ಯಾಖ್ಯಾನಿಸಿ, ಈ ಜಾತಿಗಳನ್ನು ಮೇಲೆ ತರುವುದಕ್ಕೆ ಸರ್ಕಾರ ಕಟಿಬದ್ಧವಾಗಿದೆ ಎಂಬುದನ್ನು ತಿಳಿಸಿದರು.

ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಶೈಲಿಯಲ್ಲಿ ಎಫ್​ಡಿಐ ಮತ್ತು ಜಿಡಿಪಿ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿ ಗಮನ ಹರಿಸಿದರು.

ಜಿಡಿಪಿ (GDP) ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್. ಒಟ್ಟು ಆಂತರಿಕ ಉತ್ಪನ್ನ. ದೇಶದಲ್ಲಿ ಆಗುವ ಒಟ್ಟು ಉತ್ಪಾದನೆಯೇ ಜಿಡಿಪಿ ಆಗುತ್ತದೆ. ಆದರೆ, ನಿರ್ಮಲಾ ಸೀತಾರಾಮನ್ ಅವರು ಜಿಡಿಪಿಯನ್ನು ಗವರ್ನೆನ್ಸ್, ಡೆವಲಪ್ಮೆಂಟ್ ಮತ್ತು ಪರ್ಫಾರ್ಮೆನ್ಸ್ ಎಂದು ಬಣ್ಣಿಸಿದರು.

ಇದನ್ನೂ ಓದಿ: ಬಜೆಟ್ 2024: ಸರ್ಕಾರದ ಆದಾಯ ಮತ್ತು ಖರ್ಚು ಹೇಗೆ? ಯಾವುದಕ್ಕೆ ಎಷ್ಟು ಹಣ ವಿನಿಯೋಗ? ಇಲ್ಲಿದೆ ಡೀಟೇಲ್ಸ್

‘ಈ ಸಮಗ್ರ ಜಿಡಿಪಿ ಬಗ್ಗೆ ಸರ್ಕಾರ ಹೆಚ್ಚು ಗಮನ ಕೊಡುತ್ತದೆ. ನಮ್ಮ ಸರ್ಕಾರ ಪಾರದರ್ಶಕವಾದ, ಜನಮುಖಿಯಾದ ಮತ್ತು ವಿಶ್ವಾಸ ಆಧಾರಿತವಾದ ಆಡಳಿತದವನ್ನು ನೀಡಿದೆ. ನಾಗರಿಕರಿಗೆ ಆದ್ಯತೆ, ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ತತ್ವದಲ್ಲಿ ಸರ್ಕಾರ ನಡೆದಿದೆ,’ ಎಂದು ತಮ್ಮ ಹೊಸ ಜಿಡಿಪಿ ವ್ಯಾಖ್ಯಾನಕ್ಕೆ ಅವರು ವಿವರಣೆ ನೀಡಿದ್ದಾರೆ.

ಎಫ್​ಡಿಐಗೆ ಹೊಸ ವ್ಯಾಖ್ಯಾನ

ಎಫ್​ಡಿಐ (FDI) ಎಂದರೆ ಫಾರೀನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್. ವಿದೇಶೀ ನೇರ ಬಂಡವಾಳ ಹೂಡಿಕೆ. ಭಾರತದಲ್ಲಿ ಹೊರದೇಶಗಳಿಂದ ಹರಿದುಬರುವ ನೇರ ಹೂಡಿಕೆಯೇ ಎಫ್​ಡಿಐ. ಆದರೆ, ನಿರ್ಮಲಾ ಸೀತಾರಾಮನ್ ಈ ಪದಕ್ಕೆ ಫರ್ಸ್ ಡೆವಲಪ್ ಇಂಡಿಯಾ ಎಂದು ವ್ಯಾಖ್ಯಾನಿಸಿದ್ದಾರೆ. ಭಾರತದ ಅಭಿವೃದ್ದಿಗೆ ಮೊದಲ ಆದ್ಯತೆ ಎಂಬುದು ಇವರ ವಿವರಣೆ.

ಇದನ್ನೂ ಓದಿ: ಏನಿದು ನಿರ್ಮಲಾ ಉಲ್ಲೇಖಿಸಿದ ಲಖ್​ಪತಿ ದೀದಿ ಯೋಜನೆ: ಇಲ್ಲಿದೆ ವಿವರ

‘2014-23ರವರೆಗೆ ಭಾರತಕ್ಕೆ ಹರಿದುಬಂದ ಎಫ್​ಡಿಐ ಒಳಹರಿವು 596 ಬಿಲಿಯನ್ ಡಾಲರ್. 2005ರಿಂದ 2014ರವರೆಗೆ ಬಂದ ಹೂಡಿಕೆಗಿಂತ ಎರಡು ಪಟ್ಟು ಹೆಚ್ಚು. ಈ ನಿರಂತರ ವಿದೇಶೀ ಹೂಡಿಕೆಗೆ ಉತ್ತೇಜನ ನೀಡಲು ಫಸ್ಟ್ ಡೆವಲಪ್ ಇಂಡಿಯಾ ಆಶಯದಲ್ಲಿ ನಮ್ಮ ವಿದೇಶೀ ಪಾಲುದಾರರೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳನ್ನು ಅವಲೋಕಿಸುತ್ತಿದ್ದೆವೆ,’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ