Union Budget 2024: ಏನಿದು ನಿರ್ಮಲಾ ಉಲ್ಲೇಖಿಸಿದ ಲಖ್​ಪತಿ ದೀದಿ ಯೋಜನೆ: ಇಲ್ಲಿದೆ ವಿವರ

Lakhpati Didi Scheme: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಮಧ್ಯಂತರ ಬಜೆಟ್‌ನಲ್ಲಿ ದೊಡ್ಡ ಘೋಷಣೆ ಮಾಡಿದ್ದಾರೆ. ಈಗ ದೇಶದ 3 ಕೋಟಿ ಮಹಿಳೆಯರಿಗೆ ‘ಲಖ್​​ಪತಿ ದೀದಿ ಯೋಜನೆ’ಯ ಲಾಭ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಅಷ್ಟಕ್ಕೂ ಏನಿದು ಯೋಜನೆ, ಅದರ ಲಾಭವನ್ನು ಹೇಗೆ ಪಡೆಯುವುದು? ಇಲ್ಲಿದೆ ಮಾಹಿತಿ.

Union Budget 2024: ಏನಿದು ನಿರ್ಮಲಾ ಉಲ್ಲೇಖಿಸಿದ ಲಖ್​ಪತಿ ದೀದಿ ಯೋಜನೆ: ಇಲ್ಲಿದೆ ವಿವರ
ಏನಿದು ನಿರ್ಮಲಾ ಉಲ್ಲೇಖಿಸಿದ ಲಖ್​ಪತಿ ದೀದಿ ಯೋಜನೆ?
Follow us
Ganapathi Sharma
|

Updated on: Feb 01, 2024 | 2:15 PM

ನವದೆಹಲಿ, ಫೆಬ್ರವರಿ 1: ಮಧ್ಯಂತರ ಬಜೆಟ್ (Union Budget 2024) ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 3 ಕೋಟಿ ಮಹಿಳೆಯರನ್ನು ಸರ್ಕಾರದ ‘ಲಖ್​ಪತಿ ದೀದಿ (ಲಕ್ಷಾಧಿಪತಿ ದೀದಿ) ಯೋಜನೆ (Lakhpati Didi)’ ವ್ಯಾಪ್ತಿಗೆ ತರಲಾಗುವುದು ಎಂದರು. ಇದಕ್ಕಾಗಿ ಸರ್ಕಾರವೂ ಅಗತ್ಯ ಅನುದಾನ ನೀಡಲಿದೆ ಎಂದು ಹೇಳಿದರು. ಅಷ್ಟಕ್ಕೂ ಈ ಸ್ಕೀಮ್ ಯಾವುದು ಮತ್ತು ಲಖ್​​ಪತಿ ದೀದಿ ಎಂದರೆ ಯಾರು? ಈ ಕುರಿತ ವಿವರ ಇಲ್ಲಿದೆ.

ಇದುವರೆಗೆ ದೇಶದ 1 ಕೋಟಿ ಮಹಿಳೆಯರು ‘ಲಖ್​​ಪತಿ ದೀದಿ ಯೋಜನೆ’ಯ ಪ್ರಯೋಜನ ಪಡೆದಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಆರಂಭದಲ್ಲಿ ಈ ಯೋಜನೆಯ ಮೂಲಕ 2 ಕೋಟಿ ಮಹಿಳೆಯರನ್ನು ತಲುಪುವ ಗುರಿ ಹೊಂದಲಾಗಿತ್ತು, ಈಗ ಅದನ್ನು 3 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಖ್​​ಪತಿ ದೀದಿ ಯಾರು?

ದೇಶದಲ್ಲಿ ಸುಮಾರು 83 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿವೆ. ಸುಮಾರು 9 ಕೋಟಿ ಮಹಿಳೆಯರು ಅವರೊಂದಿಗೆ ಸಂಬಂಧ ಹೊಂದಿದ್ದಾರೆ, ಅವರು ಸ್ವಾವಲಂಬಿಗಳಾಗಿದ್ದಾರೆ. ಈ ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದಂತೆ ಮತ್ತು ಇವುಗಳ ಮೂಲಕ ಮಹಿಳೆಯರ ಆದಾಯವನ್ನು ಹೆಚ್ಚಿಸಲು ಸರ್ಕಾರವು ‘ಲಖ್​​ಪತಿ ದೀದಿ ಯೋಜನೆ’ಯನ್ನು ಪ್ರಾರಂಭಿಸಿದೆ. ಇಲ್ಲಿಯವರೆಗೆ ಒಂದು ಕೋಟಿ ಮಹಿಳೆಯರು ಇದರ ಪ್ರಯೋಜನ ಪಡೆದಿದ್ದಾರೆ. ಲಖ್​​ಪತಿ ದೀದಿ ಎಂಬುದರ ಅರ್ಥ ಕುಟುಂಬಕ್ಕೆ ವಾರ್ಷಿಕ ಆದಾಯ ಕನಿಷ್ಠ 1 ಲಕ್ಷ ರೂ. ಇರುವ ಮಹಿಳೆ ಎಂದಾಗಿದೆ.

ಲಖ್​​ಪತಿ ದೀದಿ ಯೋಜನೆಯ ಪ್ರಯೋಜನಗಳೇನು?

ಲಖ್​​ಪತಿ ದೀದಿ ಯೋಜನೆಯು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಸರ್ಕಾರದಿಂದ ಹಲವು ರೀತಿಯ ಸೌಲಭ್ಯಗಳು, ಆರ್ಥಿಕ ಮತ್ತು ಕೌಶಲ್ಯ ತರಬೇತಿ ನೀಡಲಾಗುತ್ತದೆ. ಇದು ಆಕೆಯ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಅವಳು ಲಕ್ಷಾಧಿಪತಿಯಾಗಬಹುದಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಎಲ್‌ಇಡಿ ಬಲ್ಬ್‌ಗಳ ತಯಾರಿಕೆ, ಕೊಳಾಯಿ, ಡ್ರೋನ್ ದುರಸ್ತಿ ಮುಂತಾದ ತಾಂತ್ರಿಕ ಕೆಲಸಗಳನ್ನು ಕಲಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸಲು ನೆರವಾಗಲಾಗುತ್ತದೆ.

ಇದನ್ನೂ ಓದಿ: ವಂದೇ ಭಾರತ್​​ ಗುಣಮಟ್ಟಕ್ಕೆ 40 ಸಾವಿರ ಕೋಚ್​ಗಳ ಪರಿವರ್ತನೆ, ಬಜೆಟ್​ನಲ್ಲಿ ಘೋಷಣೆ

ಲಖ್​​ಪತಿ ದೀದಿ ಯೋಜನೆ ಅಡಿಯಲ್ಲಿ, ಮಹಿಳೆಯರಿಗೆ ಅನೇಕ ರೀತಿಯ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಅವರ ಆರ್ಥಿಕ ತಿಳುವಳಿಕೆಯನ್ನು ಸುಧಾರಿಸಲು ಅವರಿಗೆ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ ಮತ್ತು ಉಳಿತಾಯ ಆಯ್ಕೆಗಳು, ಸಣ್ಣ ಸಾಲಗಳು, ವೃತ್ತಿಪರ ತರಬೇತಿ, ಉದ್ಯಮಶೀಲತೆ ಬೆಂಬಲ ಮತ್ತು ವಿಮಾ ರಕ್ಷಣೆ ಒದಗಿಸಲಾಗುತ್ತದೆ. ಸರ್ಕಾರ ಅವರಿಗೆ ಉತ್ತಮ ಮಾರುಕಟ್ಟೆ ಬೆಂಬಲವನ್ನು ನೀಡುತ್ತದೆ. ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಮಹಿಳೆಯರು ಸ್ವಸಹಾಯ ಗುಂಪಿನ ಭಾಗವಾಗಿರಬೇಕು.

ಮತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ