Money Flow: ಬಜೆಟ್ 2024: ಸರ್ಕಾರದ ಆದಾಯ ಮತ್ತು ಖರ್ಚು ಹೇಗೆ? ಯಾವುದಕ್ಕೆ ಎಷ್ಟು ಹಣ ವಿನಿಯೋಗ? ಇಲ್ಲಿದೆ ಡೀಟೇಲ್ಸ್

Union Budget 2024: ಸರ್ಕಾರಕ್ಕೆ ಹರಿದುಬರುವ ಹಣದಲ್ಲಿ ಹೆಚ್ಚಿನವು ಸಾಲ ಇತ್ಯಾದಿ ಬಂಡವಾಳ ಹೂಡಿಕೆಗಳಿಂದ ಬರುವಂಥವು. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಜಿಎಸ್​ಟಿಗಳಿಂದ ಶೇ. 50ಕ್ಕಿಂತಲೂ ಹೆಚ್ಚು ವರಮಾನ ಸರ್ಕಾರಕ್ಕೆ ಇದೆ. ಸರ್ಕಾರ ಮಾಡುವ ವೆಚ್ಚದಲ್ಲಿ ಶೇ. 20ರಷ್ಟು ಭಾಗವು ಸಾಲಗಳಿಗೆ ಬಡ್ಡಿ ಕಟ್ಟಲೇ ಹೋಗುತ್ತದೆ.

Money Flow: ಬಜೆಟ್ 2024: ಸರ್ಕಾರದ ಆದಾಯ ಮತ್ತು ಖರ್ಚು ಹೇಗೆ? ಯಾವುದಕ್ಕೆ ಎಷ್ಟು ಹಣ ವಿನಿಯೋಗ? ಇಲ್ಲಿದೆ ಡೀಟೇಲ್ಸ್
ನಿರ್ಮಲಾ ಸೀತಾರಾಮನ್
Follow us
|

Updated on:Feb 01, 2024 | 2:50 PM

ನವದೆಹಲಿ, ಫೆಬ್ರುವರಿ 1: ಈ ಬಾರಿಯ ಮಧ್ಯಂತರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಪ್ರಮುಖ ಘೋಷಣೆಗಳನ್ನು ಮಾಡಿಲ್ಲ. ಹಿಂದಿನ ವರ್ಷಗಳಲ್ಲಿ ಆಗಿರುವ ಸಾಧನೆ, ಮುಂದಿನ ದಶಕಗಳಲ್ಲಿ ಸರ್ಕಾರ ಇಟ್ಟಿರುವ ಅಭಿವೃದ್ಧಿ ಗುರಿ, ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ದೂರದೃಷ್ಟಿಯ ಯೋಜನೆ ಇತ್ಯಾದಿ ಕಡೆ ಬಜೆಟ್ (Union Budget 2024) ಗಮನ ಕೊಟ್ಟಿತ್ತು. ಆದರೆ, ಜನಸಾಮಾನ್ಯರಿಗೆ ಹೆಚ್ಚು ಕುತೂಹಲ ಮೂಡಿಸುವುದು ಸರ್ಕಾರದ ಹಣ ಯಾವ್ಯಾವುದಕ್ಕೆ ವ್ಯಯವಾಗುತ್ತದೆ, ಸರ್ಕಾರಕ್ಕೆ ಬರುವ ಆದಾಯ ಎಷ್ಟು, ಅದು ಎಲ್ಲಿಗೆ ಹರಿದುಹೋಗುತ್ತದೆ ಎಂಬಿತ್ಯಾದಿ ವಿವರ ಇಲ್ಲಿದೆ.

ಸರ್ಕಾರಕ್ಕೆ ಹಣದ ಹರಿವು ಎಲ್ಲೆಲ್ಲಿಂದ?

  • ಸಾಲಗಳಿಂದ: ಶೇ. 28
  • ಆದಾಯ ತೆರಿಗೆ: ಶೇ. 19
  • ಕೇಂದ್ರ ಅಬಕಾರಿ ಸುಂಕ: ಶೇ. 5
  • ಕಾರ್ಪೊರೇಶನ್ ತೆರಿಗೆ: ಶೇ. 17
  • ಜಿಎಸ್​ಟಿ ಮತ್ತಿತರ ತೆರಿಗೆ: ಶೇ. 18
  • ತೆರಿಗೆಯೇತರ ಸ್ವೀಕೃತಿ: ಶೇ. 7
  • ಸಾಲವಲ್ಲದ ಬಂಡವಾಳ ಸ್ವೀಕೃತಿ: ಶೇ. 1
  • ಆಮದು ಸುಂಕ ಅಥವಾ ಕಸ್ಟಮ್ಸ್: ಶೇ. 4

ಇದನ್ನೂ ಓದಿ: ಆದಾಯ ತೆರಿಗೆ ಸ್ಲ್ಯಾಬ್​ನಲ್ಲಿ ಆಗಿಲ್ಲ ಬದಲಾವಣೆ; ಹಿಂದಿನ ವರ್ಷದ ಟ್ಯಾಕ್ಸ್ ರೇಟ್ ಎಷ್ಟಿದೆ?

ಸರ್ಕಾರದಿಂದ ಹಣದ ವೆಚ್ಚ ಎಲ್ಲಿಗೆ?

  • ಬಡ್ಡಿ ಪಾವತಿ: ಶೇ. 20
  • ಕೇಂದ್ರದ ಪ್ರಾಯೋಜಿತ ಯೋಜನೆಗಳು: ಶೇ. 8
  • ಪಿಂಚಣಿ: ಶೇ. 4
  • ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆ: ಶೇ. 20
  • ಹಣಕಾಸು ಆಯೋಗ ಮತ್ತಿತರ ವರ್ಗಾವಣೆ: ಶೇ. 8
  • ಕೇಂದ್ರ ವಲಯ ಸ್ಕೀಮ್​ಗಳು: ಶೇ. 16
  • ಸಬ್ಸಿಡಿ: ಶೇ. 6
  • ರಕ್ಷಣಾ ವಲಯ: ಶೇ. 8

ಯಾವ್ಯಾವ ಇಲಾಖೆಗೆ ಎಷ್ಟು ಹಣ ನಿಯೋಜನೆ

  • ರಕ್ಷಣಾ ಸಚಿವಾಲಯ: 6.2 ಲಕ್ಷ ಕೋಟಿ ರೂ
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ: 2.78 ಲಕ್ಷ ಕೋಟಿ ರೂ
  • ರೈಲ್ವೆ ಸಚಿವಾಲಯ: 2.55 ಲಕ್ಷ ಕೋಟಿ ರೂ
  • ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ: 2.13 ಲಕ್ಷ ಕೋಟಿ ರೂ
  • ಗೃಹ ವ್ಯವಹಾರಗಳ ಸಚಿವಾಲಯ: 2.03 ಲಕ್ಷ ಕೋಟಿ ರೂ
  • ಗ್ರಾಮೀಣಾಭಿವೃದ್ಧಿ ಸಚಿವಾಲಯ: 1.77 ಲಕ್ಷ ಕೋಟಿ ರೂ
  • ರಾಸಾಯನಿಕ ಮತ್ತು ರಸಗೊಬ್ಬರ: 1.68 ಲಕ್ಷ ಕೋಟಿ ರೂ
  • ಸಂವಹನ ಸಚಿವಾಲಯ: 1.37 ಲಕ್ಷ ಕೋಟಿ ರೂ
  • ಕೃಷಿ ಮತ್ತು ರೈತರ ಕಲ್ಯಾಣ: 1.27 ಲಕ್ಷ ಕೋಟಿ ರೂ

ಇದನ್ನೂ ಓದಿ: Budget 2024 PDF Download: ಬಜೆಟ್ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ

ಪ್ರಮುಖ ಯೋಜನೆಗಳಿಗೆ ಸಿಕ್ಕ ಹಣ

  • ಮನ್​ರೇಗಾ ಯೋಜನೆ: 60,000 ರಿಂದ 86,000 ಕೋಟಿ ರೂಗೆ ಏರಿಕೆ
  • ಆಯುಷ್ಮಾನ್ ಭಾರತ್: 7,200 ರಿಂದ 7,500 ಕೋಟಿ ರೂಗೆ ಏರಿಕೆ
  • ಪಿಎಲ್​ಐ ಸ್ಕೀಮ್: 4,645ರಿಂದ 6,200 ಕೋಟಿ ರೂಗೆ ಏರಿಕೆ
  • ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಯೋಜನೆ: 3,000ದಿಂದ 6,903 ಕೋಟಿ ರೂಗೆ ಏರಿಕೆ
  • ಸೌರ ವಿದ್ಯುತ್: 4,970ರಿಂದ 8,500 ಕೋಟಿ ರೂಗೆ ಏರಿಕೆ
  • ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್: 297ರಿಂದ 600 ಕೋಟಿ ರೂಗೆ ಏರಿಕೆ

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Thu, 1 February 24

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ