AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5G ಹರಾಜು ನಿರೀಕ್ಷೆಗಿಂತ ಕಡಿಮೆ: ಮೊದಲ ದಿನದ ಒಟ್ಟು ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ ಮೀರಿತು!

ಈಗ ₹ 4.3 ಲಕ್ಷ ಕೋಟಿ ಮೌಲ್ಯದ 72 GHz (gigahertz) 5G ಏರ್‌ವೇವ್‌ಗಳ ಭಾರತದ ಅತಿದೊಡ್ಡ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನವು ನಾಲ್ಕು ಸುತ್ತಿನ ಹರಾಜಿನ ನಂತರ ಕೊನೆಗೊಂಡಿದೆ.

5G ಹರಾಜು ನಿರೀಕ್ಷೆಗಿಂತ ಕಡಿಮೆ:  ಮೊದಲ ದಿನದ ಒಟ್ಟು ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ ಮೀರಿತು!
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Jul 26, 2022 | 9:25 PM

Share

5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ ಮಂಗಳವಾರ(ಜುಲೈ 26) ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿ ಸಂಜೆ 6 ಗಂಟೆವರೆಗೂ ನಡೆದಿದೆ. ಸದ್ಯ ಈಗ ₹ 4.3 ಲಕ್ಷ ಕೋಟಿ ಮೌಲ್ಯದ 72 GHz (gigahertz) 5G ಏರ್‌ವೇವ್‌ಗಳ ಭಾರತದ ಅತಿದೊಡ್ಡ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನವು ನಾಲ್ಕು ಸುತ್ತಿನ ಹರಾಜಿನ ನಂತರ ಕೊನೆಗೊಂಡಿದೆ. 5G ಹರಾಜು ನಿರೀಕ್ಷೆಗಿಂತ ಕಡಿಮೆಯಾಗಿದ್ದು ಮೊದಲ ದಿನದ ಒಟ್ಟು ಬಿಡ್ ಮೊತ್ತ 1.45 ಲಕ್ಷ ಕೋಟಿ ರೂ ಇದೆ.

  1. ಹರಾಜು ಪ್ರಕ್ರಿಯೆಯ ಮೊದಲ ದಿನವೇ ₹ 1.45 ಲಕ್ಷ ಕೋಟಿಗೂ ಅಧಿಕ ಮೊತ್ತದ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 700 ಮೆಗಾಹರ್ಟ್ಸ್ ಬ್ಯಾಂಡ್ ತರಂಗಾಂತರಗಳಿಗೆ ಬಿಡ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
  2.  ಐದನೇ ಸುತ್ತಿನ ಹರಾಜು ನಾಳೆಯಿಂದ(ಜುಲೈ 27) ಆರಂಭವಾಗಲಿದೆ. ಆಗಸ್ಟ್ 15 ರೊಳಗೆ ತರಂಗಾಂತರ ಹಂಚಿಕೆಯನ್ನು ಪೂರ್ಣಗೊಳಿಸುವ ಭರವಸೆ ಇದೆ. 2022 ರ ಅಂತ್ಯದ ವೇಳೆಗೆ ಅನೇಕ ನಗರಗಳಲ್ಲಿ 5G ಸೇವೆಗಳನ್ನು ನಿರೀಕ್ಷಿಸಲಾಗಿದೆ ಎಂದು ಶ್ರೀ ವೈಷ್ಣವ್ ಹೇಳಿದರು.
  3. ಬಿಲಿಯನೇರ್ ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ, ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಗೌತಮ್ ಅದಾನಿ ಅವರ ಅದಾನಿ ಎಂಟರ್‌ಪ್ರೈಸಸ್‌ನ ಘಟಕವು 5G ಸ್ಪೆಕ್ಟ್ರಮ್‌ಗಾಗಿ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದವು.
  4. ರೇಡಿಯೊವೇವ್‌ಗಳ ಬೇಡಿಕೆ ಮತ್ತು ವೈಯಕ್ತಿಕ ಬಿಡ್‌ದಾರರ ಕಾರ್ಯತಂತ್ರದ ಮೇಲೆ ಹರಾಜು ಪ್ರಕ್ರಿಯನ್ನು ವಿಸ್ತರಿಸಲಾಗುವುದು. ವಿಶಾಲ ಉದ್ಯಮದ ಒಮ್ಮತದಿಂದ ಈ ಪ್ರಕ್ರಿಯೆ ಎರಡು ದಿನಗಳವರೆಗೆ ಇರುತ್ತದೆ.
  5. 5G ಎಷ್ಟು ವೇಗವಾಗಿದೆ? 5G ಇಂಟರ್ನೆಟ್ ಅನ್ನು ಬಳಸಿಕೊಂಡು 5 GB ಚಲನಚಿತ್ರವನ್ನು ಕೇವಲ 35 ಸೆಕೆಂಡ್ಗಳಲ್ಲಿ ಡೌನ್‌ಲೋಡ್ ಮಾಡಬಹುದು. ಅದೇ 4G ಇಂಟರ್ನೆಟ್ನಲ್ಲಿ 40 ನಿಮಿಷ ಬೇಕಾಗುತ್ತೆ. ಆಗೂ 3G ಇಂಟರ್ನೆಟ್ನಲ್ಲಿ 2 ಗಂಟೆ ಬೇಕಾಗುತ್ತೆ.

Published On - 9:25 pm, Tue, 26 July 22