ಬೆಂಗಳೂರು, ಜುಲೈ 3: ಮೂಲ ಟಾಟಾ ಏಸ್ ಅಡಿ ಇಟ್ಟು ಎರಡು ದಶಕದ ಬಳಿಕ ಹೊಸ ಆರಂಭ ಪಡೆದಿದೆ. ಬಲಶಾಲಿ, ಸುರಕ್ಷತೆ, ಲಾಭದಾಯಕ ಎನಿಸುವ ರೀತಿಯಲ್ಲಿ ರೂಪಿಸಲಾಗಿರುವ ಏಸ್ ಪ್ರೋ ಅನ್ನು ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘ್ ಅವರು ಆ ಕ್ಷಣವನ್ನು ಅತೀ ಹೆಮ್ಮೆಪಡುವಂಥದ್ದು ಎಂದು ಬಣ್ಣಿಸಿದ್ದಾರೆ.
ಏಸ್ ಪ್ರೋ ಒಂದು ಕಮರ್ಷಿಯಲ್ ವಾಹನಕ್ಕಿಂತ ಮಿಗಿಲಾದುದು. ಭರವಸೆ, ಆಕಾಂಕ್ಷೆ ಮತ್ತು ಸ್ವಾವಲಂಬನೆಯನ್ನು ಅದು ಬಿಂಬಿಸುತ್ತದೆ. ಇವತ್ತಿನ ಉದ್ದಿಮೆದಾರರಿಗೆ ಅದು ಪುಷ್ಟಿ ಕೊಡುತ್ತದೆ. ನಾಳೆಯ ಕನಸುಗಾರರಿಗೆ ಸ್ಫೂರ್ತಿ ನೀಡುತ್ತದೆ. ‘ಅಬ್ ಮೇರಿ ಬಾರಿ’ (ಈಗ ನನ್ನ ಸರದಿ) ಎನ್ನುವುದು ಒಂದು ಆಂಕೋಲನ ಮಾತ್ರವಲ್ಲ, ಅದೊಂದು ಧೋರಣೆ. ಮುನ್ನುಗ್ಗಿ ತಮ್ಮತನ ತೋರಲು ಸಿದ್ಧರಾಗಿರುವವರಿಗೆ ನೀಡುತ್ತಿರುವ ಕರೆ ಅದು ಎಂದು ಟಾಟಾ ಮೋಟಾರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.
ಟಾಟಾ ಮೋಟಾರ್ಸ್ ಸಂಸ್ಥೆ ತನ್ನ ಏಸ್ ಪ್ರೋ ಮೂಲಕ ಒಂದು ವಾಹನವನ್ನಷ್ಟೇ ಮಾರುತ್ತಿಲ್ಲ, ತೊಡಕುಗಳನ್ನು ದಾಟಿ ಯಶಸ್ಸಿನ ಕಡೆಗೆ ಹೋಗುವ ಪ್ರಯಾಣವನ್ನು ಬೆಂಬಲಿಸುತ್ತಿದೆ. ವ್ಯಕ್ತಿಗಳು ಹಾಗೂ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಗಿರೀಶ್ ವಾಘ್ ತಿಳಿಸಿದ್ದಾರೆ.
ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Thu, 3 July 25