ನವದೆಹಲಿ, ಡಿಸೆಂಬರ್ 21: ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆ ಇನ್ಮುಂದೆ ಬದಲಾಗುತ್ತಿದೆ. ಪಾಸ್ಪೋರ್ಟ್ ಮಾಡಿಸುವಾಗ ಇರುವ ರೀತಿಯಲ್ಲಿ ಆಧಾರ್ಗೂ ವೆರಿಫಿಕೇಶನ್ ಪ್ರಕ್ರಿಯೆ (passport like verification process) ಇರಲಿದೆ. ಯುಐಡಿಎಐ ಸಂಸ್ಥೆ ಹೊರಡಿಸಿರುವ ಪ್ರಕಟಣೆ ಪ್ರಕಾರ 18 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು ಮೊದಲ ಬಾರಿಗೆ ಆಧಾರ್ ಕಾರ್ಡ್ ಮಾಡಿಸುವಾಗ ಫಿಸಿಕಲ್ ವೆರಿಫಿಕೇಶನ್ಗೆ ಒಳಪಡಬೇಕಾಗುತ್ತದೆ ಎಂದು ಹೇಳಲಾಗಿದೆ.
‘18 ವರ್ಷ ಮೇಲ್ಪಟ್ಟ ವಯಸ್ಸಿನವರು ಮೊದಲ ಬಾರಿಗೆ ಆಧಾರ್ ಮಾಡಿಸಬೇಕೆಂದರೆ ಪಾಸ್ಪೊರ್ಟ್ ರೀತಿ ವೆರಿಫಿಕೇಶನ್ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ,’ ಎಂದು ಯುಐಡಿಎಐ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಐಎಎನ್ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಇರುತ್ತದೆ.
ಆಧಾರ್ ವೆರಿಫಿಕೇಶನ್ಗಾಗಿ ಜಿಲ್ಲಾ ಹಾಗೂ ಉಪ ವಿಭಾಗೀಯ ಮಟ್ಟಗಳಲ್ಲಿ ನೋಡಲ್ ಅಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಮ್ಯಾಜಸ್ಟ್ರೇಟರ್ಗಳನ್ನು ರಾಜ್ಯ ಸರ್ಕಾರಗಳೇ ನೇಮಕ ಮಾಡಲಿವೆ.
ಇದನ್ನೂ ಓದಿ: ಭಾರತದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಈ ವರ್ಷ ಹಣದುಬ್ಬರದಿಂದ ಆದ ಅನಾಹುತಗಳೇನು?
18 ವರ್ಷ ಮೇಲ್ಪಟ್ಟವರು ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿದ್ದರೆ, ಅವರಿಗೆಂದೇ ನಿರ್ದಿಷ್ಟವಾಗಿರುವ ಕಚೇರಿಗಳಿರುತ್ತವೆ. ಯುಐಡಿಎಐ ನಿರ್ದಿಷ್ಟಪಡಿಸಿದ ಇಂಥ ಕೇಂದ್ರಗಳಲ್ಲಿ ಈ ವರ್ಗದ ಜನರು ಆಧಾರ್ ಮಾಡಿಸಬೇಕಾಗುತ್ತದೆ.
ಆಧಾರ್ಗೆಂದು ಈ ವರ್ಗದ ಜನರು ಸಲ್ಲಿಸುವ ಅರ್ಜಿಯ ಡಾಟಾ ಕ್ವಾಲಿಟಿ ಪರಿಶೀಲನೆ ಆಗುತ್ತದೆ. ಸರ್ವಿಸ್ ಪೋರ್ಟಲ್ನಲ್ಲಿ ವೆರಿಫಿಕೇಶನ್ ಪ್ರಕ್ರಿಯೆ ನಡೆಯುತ್ತದೆ. ಈ ಸರ್ವಿಸ್ ಪೋರ್ಟಲ್ನಲ್ಲಿ ಎಲ್ಲಾ ಆಧಾರ್ ಮನವಿಗಳ ವೆರಿಫಿಕೇಶನ್ ಪ್ರಕ್ರಿಯೆ ನಡೆದು 180 ದಿನದೊಳಗೆ ಕ್ಲಿಯರೆನ್ಸ್ ಜನರೇಟ್ ಆಗುತ್ತದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟರ್ಗಳು ಈ ಪ್ರಕ್ರಿಯೆ ನಿಗದಿತ ದಿನದೊಳಗೆ ಮುಗಿಯುವುದನ್ನು ಖಾತ್ರಿಪಡಿಸಬೇಕು.
ಇದನ್ನೂ ಓದಿ: GST Act: ನ್ಯಾಯಮಂಡಳಿ ನೇಮಕಾತಿ ನಿಯಮದಲ್ಲಿ ತಾಳಮೇಳ ತರಲು ಜಿಎಸ್ಟಿ ಕಾಯ್ದೆ ತಿದ್ದುಪಡಿ ಮಸೂದೆ ತಂದ ಸರ್ಕಾರ
ಈ ರೀತಿಯ ವೆರಿಫಿಕೇಶನ್ ಪ್ರಕ್ರಿಯೆ ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿರುವ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಅನ್ವಯ ಆಗುತ್ತದೆ. ಒಮ್ಮೆ ಈ ಪ್ರಕ್ರಿಯೆ ಮೂಲಕ ಆಧಾರ್ ಕಾರ್ಡ್ ಮಾಡಿಸಿದ ಬಳಿಕ ಅವರು ಆಧಾರ್ ಅಪ್ಡೇಟ್ ಇತ್ಯಾದಿ ಕಾರ್ಯಗಳನ್ನು ಮಾಮೂಲಿಯಾಗಿಯೇ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ