ಭಾರತದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಈ ವರ್ಷ ಹಣದುಬ್ಬರದಿಂದ ಆದ ಅನಾಹುತಗಳೇನು?
Year Ender Story: ಭಾರತದಲ್ಲಿ ರೀಟೇಲ್ ಮತ್ತು ಹೋಲ್ಸೇಲ್ ಹಣದುಬ್ಬರಗಳು ಹೆಚ್ಚಿನ ಮಟ್ಟದಲ್ಲಿವೆ. ಸಾಕಷ್ಟು ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರವನ್ನು ಮೇಲಕ್ಕೆ ನೂಕಿದೆ. ಸಗಟು ಮಾರಾಟದರ ಹಣದುಬ್ಬರ ಮಾರ್ಚ್ ಬಳಿಕ ನವೆಂಬರ್ನಲ್ಲಿ ಮೊದಲ ಬಾರಿಗೆ ಸೊನ್ನೆಗಿಂತ ಮೇಲೇರಿದೆ. ಆಹಾರವಸ್ತು, ಖನಿಜ, ಯಂತ್ರೋಪಕರಣ, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಮೋಟಾರು ವಾಹನ, ಸಾರಿಗೆ ಉಪಕರಣ ಮೊದಲಾದ ವಸ್ತುಗಳ ಬೆಲೆ ಹೆಚ್ಚಳವು ಹಣದುಬ್ಬರಕ್ಕೆ ಕಾರಣವಾಗಿದೆ.
ಬೆಂಗಳೂರು, ಡಿಸೆಂಬರ್ 21: ಭಾರತದಲ್ಲಿ ಹಣದುಬ್ಬರ ಕಳೆದ ಕೆಲ ತಿಂಗಳಿಂದ ಮೇಲ್ಮಟ್ಟದಲ್ಲೇ ಇದೆ. ರೀಟೇಲ್ ಹಣದುಬ್ಬರ (Retail Inflation) ಮತ್ತು ಹೋಲ್ಸೇಲ್ ಹಣದುಬ್ಬರ (WPI Inflation) ಎರಡೂ ಕೂಡ ಹೆಚ್ಚಾಗಿವೆ. ನವೆಂಬರ್ನಲ್ಲಿ ಚಿಲ್ಲರೆ ಮಾರಾಟ ಹಣದುಬ್ಬರ ಆರ್ಬಿಐನ ತಾಳಿಕೆ ಮಿತಿಯಾದ ಶೇ. 6ಕ್ಕೆ ಸಮೀಪ ಹೋಗಿದೆ. ಸಗಟು ಮಾರಾಟ ಹಣದುಬ್ಬರ ಹಲವು ತಿಂಗಳ ಬಳಿಕ ಸೊನ್ನೆ ಮಟ್ಟಕ್ಕಿಂತ ಮೇಲಕ್ಕೆ ಹೋಗಿದೆ. ಮಾರ್ಚ್ನಲ್ಲಿ ಡಬ್ಲ್ಯುಪಿಐ ಶೇ. 1.41ರಲ್ಲಿತ್ತು. ಅದಾದ ಬಳಿಕ ಸತತ ಏಳು ತಿಂಗಳು ಸೊನ್ನೆಗಿಂತ ಕೆಳಗಿತ್ತು. ಈಗ ಮತ್ತೊಮ್ಮೆ ಪಾಸಿಟಿವ್ ಸಂಖ್ಯೆಗೆ ಬಂದಿದೆ.
ನವೆಂಬರ್ನಲ್ಲಿ ಹಣದುಬ್ಬರ ಹೆಚ್ಚಿನ ಮಟ್ಟಕ್ಕೆ ಹೋಗಲು ಪ್ರಮುಖ ಸರಕುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳ ಕಾರಣ. ಆಹಾರವಸ್ತುಗಳು, ಖನಿಜ, ಯಂತ್ರೋಪಕರಣ, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಮೋಟಾರು ವಾಹನ, ಸಾರಿಗೆ ಉಪಕರಣ ಮೊದಲಾದ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು ಹಣದುಬ್ಬರ ಇನ್ನಷ್ಟು ಉಬ್ಬುವಂತೆ ಮಾಡಿದೆ.
ಹಣದುಬ್ಬರದ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದು ಆಹಾರವಸ್ತುಗಳ ಬೆಲೆ ಏರಿಕೆ. ಟೊಮೆಟೋ, ಈರುಳ್ಳಿ ಬೆಲೆ ಏರಿಕೆ ದೊಡ್ಡ ಮುಳುವಾಗಿ ಪರಿಣಮಿಸಿದೆ. ಆರ್ಬಿಐ ಕಳೆದ ತಿಂಗಳು ನಡೆಸಿದ ದ್ವೈಮಾಸಿಕ ಎಂಪಿಸಿ ಸಭೆಯಲ್ಲಿ ಹಣದುಬ್ಬರದ ಬಗ್ಗೆ ಚರ್ಚೆ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆ ಪರಿಣಾಮವಾಗಿ ಹಣದುಬ್ಬರ ಇನ್ನಷ್ಟು ಹೆಚ್ಚಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: RBI: ಭಾರತದ ಫಾರೆಕ್ಸ್ ದರ ವ್ಯವಸ್ಥೆ ಮರುವರ್ಗೀಕರಿಸಿದ ಐಎಂಎಫ್ನ ಕ್ರಮಕ್ಕೆ ಭಾರತ ಅಸಮಾಧಾನ
ಹಣದುಬ್ಬರದಿಂದ ಜೀವನ ದುಬಾರಿ
ಹಣದುಬ್ಬರ ಏರಿಕೆಯಿಂದಾಗಿ ಜನರ ಜೀವನ ವೆಚ್ಚ ಸಹಜವಾಗಿ ಹೆಚ್ಚಾಗುತ್ತದೆ. ಕುಟುಂಬಕ್ಕೆ ಹೆಚ್ಚು ಹಣ ಉಳಿತಾಯ ಸಾಧ್ಯವಾಗುತ್ತಿಲ್ಲ. ಹಣದುಬ್ಬರ ಮೀರಿಸುವಂತೆ ವೇತನ ಹೆಚ್ಚಾಗುತ್ತಿಲ್ಲದಿರುವುದು ಮಧ್ಯಮ ವರ್ಗದವರ ಬಜೆಟ್ಗೆ ಹೊಡೆತ ಬೀಳುತ್ತಿದೆ. ಜನರ ಖರೀದಿ ಶಕ್ತಿ ಕಡಿಮೆ ಆಗಿದೆ ಎನ್ನುವಂತಹ ಸಮೀಕ್ಷಾ ವರದಿಯೊಂದು ಪ್ರಕಟವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Thu, 21 December 23