ಆಧಾರ್ ದುರ್ಬಳಕೆ; ಕಾದಿದೆ ಕಠಿಣ ಶಿಕ್ಷೆ; ಯಾವ್ಯಾವ ಅಪರಾಧಕ್ಕೆ ಯಾವ ಶಿಕ್ಷೆ, ಇಲ್ಲಿದೆ ಪಟ್ಟಿ

|

Updated on: May 19, 2024 | 4:49 PM

Punishment for various Aadhaar related offences: ಆಧಾರ್ ಕಾರ್ಡ್ ದುರ್ಬಳಕೆ ನಿಯಂತ್ರಿಸಲು ಹಲವು ಕಾನೂನುಗಳಿವೆ. ಆಧಾರ್ ಸಂಬಂಧಿಸಿದ ಬೇರೆ ಬೇರೆ ಅಪರಾಧಗಳಿಗೆ ಬೇರೆ ಶಿಕ್ಷೆಗಳನ್ನು ನಿಗದಿ ಮಾಡಲಾಗಿದೆ. ಬಯೊಮೆಟ್ರಿಕ್ ಇತ್ಯಾದಿ ವ್ಯಕ್ತಿಯ ಆಧಾರ್ ಮಾಹಿತಿಯನ್ನು ದುರ್ಬಳಕೆ ಮಾಡಿದರೆ ಮೂರು ವರ್ಷದವರೆಗೂ ಜೈಲುಶಿಕ್ಷೆ ಇರುತ್ತದೆ. ಆಧಾರ್ ಎನ್ರೋಲ್ಮೆಂಟ್ ಮಾಡಿಕೊಳ್ಳುವ ಏಜೆನ್ಸಿಗಳಿಂದ ದುರ್ಬಳಕೆ ಆದರೆ ಕಠಿಣ ಕಾನೂನು ಇರುತ್ತದೆ.

ಆಧಾರ್ ದುರ್ಬಳಕೆ; ಕಾದಿದೆ ಕಠಿಣ ಶಿಕ್ಷೆ; ಯಾವ್ಯಾವ ಅಪರಾಧಕ್ಕೆ ಯಾವ ಶಿಕ್ಷೆ, ಇಲ್ಲಿದೆ ಪಟ್ಟಿ
ಆಧಾರ್
Follow us on

ಆಧಾರ್ ಕಾರ್ಡ್ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುವ ಹಲವು ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬರುತ್ತಲೇ ಇರುತ್ತವೆ. ವ್ಯಕ್ತಿಗಳ ಬೆರಳಚ್ಚು (biometric), ವಿಳಾಸ ಇತ್ಯಾದಿ ಗುರುತು ಮಾಹಿತಿಯನ್ನು ಕದ್ದು ಹಣಕಾಸು ಅಪರಾಧ ಇತ್ಯಾದಿ ಕೃತ್ಯಗಳಿಗೆ ಬಳಸುವ ಸಾಧ್ಯತೆಗಳಿರುತ್ತವೆ. ಆಧಾರ್ ಮಾಹಿತಿಯನ್ನು ಹಲವು ರೀತಿಯಲ್ಲಿ ದುರ್ಬಳಕೆ (Aadhaar misuse) ಮಾಡಬಹುದು. ಆಧಾರ್ ನಂಬರ್ ಬಳಸಿ ಒಬ್ಬರ ಬ್ಯಾಂಕ್ ಅಕೌಂಟ್​ನಿಂದ ಹಣವನ್ನೂ ಹಿಂಪಡೆಯಬಹುದು. ಈ ರೀತಿ ಆಧಾರ್ ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ (laws against Aadhaar misuse) ಜರುಗಿಸಬಹುದು. ಹತ್ತು ವರ್ಷದವರೆಗೂ ಜೈಲುಶಿಕ್ಷೆ ಕಾದಿರುತ್ತದೆ. ಆಧಾರ್ ಸಂಬಂಧಿಸಿದ ಯಾವ್ಯಾವ ಅಪರಾಧಗಳಿಗೆ ಯಾವ್ಯಾವ ಶಿಕ್ಷೆ ಇದೆ, ಪಟ್ಟಿ ಇಲ್ಲಿದೆ.

ಆಧಾರ್ ದುರ್ಬಳಕೆ ಮಾಡಿಕೊಂಡರೆ ಈ ಶಿಕ್ಷೆ ಕಾದಿದೆ:

  • ಆಧಾರ್​ಗೆ ನೊಂದಣಿ ಮಾಡಿಸುವಾಗ ಬಯೋಮೆಟ್ರಿಕ್ ಮತ್ತು ಹೆಸರು ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ತಪ್ಪಾಗಿ ನೀಡಿದರೆ 3 ವರ್ಷದವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗಬಹುದು. ಅಥವಾ 10,000 ರೂವರೆಗೆ ದಂಡ ಕಟ್ಟಬೇಕಾಗಬಹುದು. ಅಥವಾ ಎರಡೂ ದಂಡನೆ ಪಡೆಯಬಹುದು.
  • ವ್ಯಕ್ತಿಗಳ ಗುರುತು ದಾಖಲೆಯನ್ನು ಸಂಗ್ರಹಿಸುವ ಅಧಿಕೃತ ಸಂಸ್ಥೆ ಎಂದು ಹೇಳಿಕೊಂಡು ಮಾಹಿತಿ ಪಡೆದರೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂವರೆಗೂ ದಂಡ ವಿಧಿಸುವ ಅವಕಾಶ ಇರುತ್ತದೆ.

ಇದನ್ನೂ ಓದಿ: ನಿಮಗೆ ಆಧಾರ್ ನಂಬರ್ ಮರೆತೇಹೋಯ್ತಾ? ತುರ್ತಾಗಿ ಮಾಹಿತಿ ಬೇಕೆಂದರೆ ಹೀಗೆ ಮಾಡಿ

  • ಆಧಾರ್ ಎನ್ರೋಲ್ಮೆಂಟ್ ಅಥವಾ ದೃಢೀಕರಣದ ವೇಳೆ ಸಂಗ್ರಹಿಸಲಾದ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗೆ ರವಾನಿಸಿದರೆ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂವರೆಗೂ ದಂಡ ವಿಧಿಸುವ ಅವಕಾಶ ಇರುತ್ತದೆ.
  • ಆಧಾರ್ ದತ್ತಾಂಶ ಸಂಗ್ರಹವಾಗಿರುವ ಸಿಐಡಿಆರ್​ಗೆ ಅನಧಿಕೃತ ಪ್ರವೇಶ ಮಾಡಿದರೆ, ಅಥವಾ ಹ್ಯಾಕಿಂಗ್ ಮಾಡಿದರೆ 10 ವರ್ಷದವರೆಗೂ ಜೈಲು ಶಿಕ್ಷೆ ಹಾಗೂ ಕನಿಷ್ಠ 10 ಲಕ್ಷ ರೂ ದಂಡ ವಿಧಿಸಲಾಗುತ್ತದೆ.
  • ಸಿಐಡಿಆರ್​ನಲ್ಲಿನ ದತ್ತಾಂಶವನ್ನು ತಿರುಚಿದರೆ 10 ವರ್ಷದವರೆಗೆ ಜೈಲುಶಿಕ್ಷೆ ಮತ್ತು 10,000 ರೂವರೆಗೆ ದಂಡ ಕಟ್ಟಬೇಕಾಗಬಹುದು.
  • ಆಧಾರ್ ಕಾರ್ಡ್​ದಾರರ ಗುರುತು ಮಾಹಿತಿಯನ್ನು ಕೋರಿ ಪಡೆಯುವ ಸಂಸ್ಥೆ ಆ ಮಾಹಿತಿಯನ್ನು ಅನಧಿಕೃತವಾಗಿ ಬಳಕೆ ಮಾಡಿದರೆ 3 ವರ್ಷದವರೆಗೆ ಜೈಲುಶಿಕ್ಷೆ ಮತ್ತು 10,000 ರೂವರೆಗೆ ದಂಡ ಕಟ್ಟಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ