Aadhaar card: ಆಧಾರ್ ಕಾರ್ಡ್ ಅಪ್ಡೇಟ್ ಹಿಸ್ಟರಿ ಪರಿಶೀಲಿಸ್ಬೇಕಾ? ಹಾಗಾದ್ರೆ ಹೀಗೆ ಮಾಡಿ

ನಿಮ್ಮ ಆಧಾರ್‌ ಕಾರ್ಡ್‌ ಹಿಸ್ಟರಿಯಲ್ಲಿ ನೀವು ಈವರೆಗೆ ಎಷ್ಡು ಬಾರಿ ಹಾಗೂ ಏನೆಲ್ಲಾ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಯಬಹುದು. ಇದು ನಿಮ್ಮ ಅನುಮತಿಯಿಲ್ಲದೆ ಯಾರಾದರೂ ಆಧಾರ್ ಕಾರ್ಡ್‌ ವಿವರಗಳನ್ನು ಬದಲಾಯಿಸಿದ್ದಾರೆಯೇ ಎಂದು ತಿಳಿಯಲು ಸಹಾಯಕವಾಗಿದೆ. ಅದರ ಜತೆಗೆ ಹಳೆಯ ಅಪ್ಡೇಟ್‌ಗಳಲ್ಲಿ ಏನಾದರೂ ತಪ್ಪುಗಳಾಗಿದ್ದರೆ, ಅದನ್ನು ಗುರುತಿಸಿ ನೀವು ಸರಿಪಡಿಸಬಹುದು.

Aadhaar card: ಆಧಾರ್ ಕಾರ್ಡ್ ಅಪ್ಡೇಟ್ ಹಿಸ್ಟರಿ ಪರಿಶೀಲಿಸ್ಬೇಕಾ? ಹಾಗಾದ್ರೆ ಹೀಗೆ ಮಾಡಿ
ಆಧಾರ್‌ ಕಾರ್ಡ್‌
Image Credit source: steelerslounge.com

Updated on: Sep 09, 2026 | 7:00 PM

ಮುಖ್ಯಾಂಶಗಳು

  • ಭಾರತದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ
  • ಅಪ್ಡೇಟ್ ಹಿಸ್ಟರಿ ತಿಳಿಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
  • ಅಪ್ಡೇಟ್ ಹಿಸ್ಟರಿಯನ್ನು ತಿಳಿಯಲು ಯಾವುದೇ ದಾಖಲೆಗಳ ಅಗತ್ಯವಿಲ್ಲ

ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಹೀಗಾಗಿ ಹಣಕಾಸು ಕಾರ್ಯದಿಂದ ಹಿಡಿದು ಸರ್ಕಾರದ ಸೌಲಭ್ಯದ ಪಡೆಯಲು ಈ ದಾಖಲೆ ಬೇಕೇ ಬೇಕು. ಆದರೆ ಈ ದಾಖಲೆಯಲ್ಲಿ ಹೆಸರು, ವಿಳಾಸ, ಜನ್ಮ ದಿನಾಂಕ ಸೇರಿದಂತೆ ಇನ್ನಿತ್ತರ ವಿವರಗಳಲ್ಲಿ ನವೀಕರಣ ಮಾಡಿರುತ್ತೇವೆ. ಈ ಬಗ್ಗೆ ನೆನಪಿಲ್ಲದಿದ್ದರೆ ಅಪ್ಡೇಟ್ ಹಿಸ್ಟರಿ ತಿಳಿಯಲು ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿದರೆ ಈ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ಆಧಾರ್ ಕಾರ್ಡ್ ಅಪ್ಡೇಟ್ ಹಿಸ್ಟರಿ ಪರಿಶೀಲಿಸುವುದು ಹೇಗೆ?

ಹಂತ 1: UIDAI ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: ಮೈ ಆಧಾರ್ ಟ್ಯಾಬ್ ಅಡಿಯಲ್ಲಿರುವ ಅಪ್ಡೇಟ್ ಯುವರ್ ಆಧಾರ್ ವಿಭಾಗದಿಂದ ಆಧಾರ್ ಅಪ್ಡೇಟ್ ಹಿಸ್ಟರಿ ಆಯ್ಕೆಯನ್ನು ಆರಿಸಿ.

ಹಂತ 3: ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿ ಹಾಗೂ ಪರದೆಯ ಮೇಲೆ ಕಾಣಿಸುವ ಭದ್ರತಾ ಕೋಡ್ ನಮೂದಿಸಿಕೊಳ್ಳಿ.

ಹಂತ 4: ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯಲು ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ.

ಹಂತ 5: ಒಟಿಪಿ ನಮೂದಿಸಿ ಸಭ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಅಪ್ಡೇಟ್ ವಿವರಗಳು ಪರದೆ ಮೇಲೆ ಕಾಣಿಸುತ್ತದೆ.

ಇದನ್ನೂ ಓದಿ: ಈ ದಾಖಲೆಗಳಿದ್ರೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುವುದು ಸುಲಭ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಆಧಾರ್ ಕಾರ್ಡ್ ಹಿಸ್ಟರಿ ಪರಿಶೀಲಿಸುವುದು ಎಷ್ಟು ಮುಖ್ಯ?

ಉತ್ತರ: ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಅಥವಾ ವಿವರಗಳನ್ನು ಬದಲಾಯಿಸಿದ್ದಾರೆಯೇ ಎಂದು ತಿಳಿಯಲು ಹಿಸ್ಟರಿ ಪರಿಶೀಲಿಸುವುದು ಮುಖ್ಯ.. ಇದು ವಂಚನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಪ್ರಶ್ನೆ: ಆಧಾರ್ ಕಾರ್ಡ್ ಹಿಸ್ಟರಿ ಪರಿಶೀಲಿಸಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಆಧಾರ್ ಕಾರ್ಡ್ ಹಿಸ್ಟರಿ ಆನ್‌ಲೈನ್‌ನಲ್ಲಿ ಪರಿಶೀಲಿಸಲು ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ.

ಪ್ರಶ್ನೆ: ಆಧಾರ್ ಕಾರ್ಡ್ ಹಿಸ್ಟರಿ ಪರಿಶೀಲಿಸುವುದು ಹೇಗೆ?

ಉತ್ತರ: ನಿಮ್ಮ ಆಧಾರ್ ದೃಢೀಕರಣ ಇತಿಹಾಸವನ್ನು UIDAI ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us