ಆಧಾರ್ ಕಾರ್ಡ್ ಭಾರತದಲ್ಲಿ ಒಂದು ಪ್ರಮುಖ ದಾಖಲೆ ಎನಿಸಿದೆ. ಇದು ನಾಗರಿಕರಿಗೆ ಗುರುತಿನ ಚೀಟಿಯೂ ಹೌದು, ಅಡ್ರೆಸ್ ಪ್ರೂಫ್ ಕೂಡ ಹೌದು. ಸರ್ಕಾರದ ಯೋಜನೆಗಳ ಫಲ ಪಡೆಯಲು ಬೇಕಾಗಿರುವ ಪ್ರಮುಖ ದಾಖಲೆಯೂ ಹೌದು. ವ್ಯಕ್ತಿಯ ಬೆರಳಚ್ಚು, ಕಣ್ಣಿನ ಗುರುತಿನ ಬಯೋಮೆಟ್ರಿಕ್ಗಳಂತಹ ಸೂಕ್ಷ್ಮ ಮಾಹಿತಿ ಆಧಾರ್ನಲ್ಲಿ ಇರುತ್ತವೆ. ಯುಐಡಿಎಐನಿಂದ ನಿರ್ವಹಿಸಲಾಗುವ ಆಧಾರ್ ಕಾರ್ಡ್ ಅನ್ನು ದುಷ್ಕರ್ಮಿಗಳು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಇದ್ದೇ ಇದೆ. ಈಗ ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಬಹುದಾದ್ದರಿಂದ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಿವೆ. ಯುಐಡಿಎಐ (UIDAI) ಆಗಾಗ್ಗೆ ಜನರಿಗೆ ಈ ವಂಚನೆಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುತ್ತದೆ. ಈಗ ವಂಚಕರು ಇಮೇಲ್ ಮತ್ತು ವಾಟ್ಸಾಪ್ ಮೂಲಕ ಆಧಾರ್ ಪ್ರೂಫ್ಗೆ ಸಂಬಂಧಿಸಿದ ದಾಖಲೆಗಳನ್ನು ಕೇಳುತ್ತಿರುವುದು ಹೆಚ್ಚಾಗಿದೆ. ಈ ಬಗ್ಗೆ ಆಧಾರ್ ಪ್ರಾಧಿಕಾರ ಸೋಷಿಯಲ್ ಮೀಡಿಯಾದಲ್ಲಿ ಅಲರ್ಟ್ ಮೆಸೇಜ್ ಪೋಸ್ಟ್ ಮಾಡಿದೆ.
‘ಆಧಾರ್ ಅನ್ನು ಅಪ್ಡೇಟ್ ಮಾಡಲು ಐಡಿ ಪ್ರೂಫ್ ಅಥವಾ ವಿಳಾಸ ಪ್ರೂಫ್ ದಾಖಲೆಗಳನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಯುಐಡಿಎಐ ಯಾವತ್ತೂ ಕೇಳುವುದಿಲ್ಲ. ವಂಚಕರ ಬಗ್ಗೆ ಹುಷಾರ್. ಮೈ ಆಧಾರ್ನ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಿ. ಅಥವಾ ನಿಮಗೆ ಸಮೀಪದ ಆಧಾರ್ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿ,’ ಎಂದು ಯುಐಡಿಎಐ ಹೇಳುತ್ತಿದೆ.
UIDAI never asks for your #AadhaarOTP or #mAadhaarApp PIN.
Update your Aadhaar either online through #myAadhaarPortal or visit Aadhaar centers near you. pic.twitter.com/p5E8SqgHUF
— Aadhaar (@UIDAI) August 7, 2023
ಇದನ್ನೂ ಓದಿ: ಭಾರತದಲ್ಲಿ ಈರುಳ್ಳಿ ಬೆಲೆ ಯಾಕೆ ಹೆಚ್ಚುತ್ತಿದೆ? ಶೇ. 40ರಷ್ಟು ರಫ್ತುಸುಂಕ ವಿಧಿಸುವ ಕ್ರಮ ಹಿಂದೆ ಏನಿದೆ ತಂತ್ರ?
ಆನ್ಲೈನ್ ಮೂಲಕ ನಾವು ಆಧಾರ್ ಅಪ್ಡೇಟ್ ಮಾಡಲು ಯತ್ನಿಸುವಾಗ ಕೆಲವೊಮ್ಮೆ ವಿಫಲವಾಗಬಹುದು. ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡದೇ ಇದ್ದಾಗ ಹೀಗಾಗಬಹುದು. ದಾಖಲೆಯ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅದನ್ನು ಅಪ್ಲೋಡ್ ಮಾಡಬೇಕು. ಹಾಗೆ ಮಾಡಿರದಿದ್ದರೆ ಅಪ್ಡೇಟ್ ಆಗದೇ ಇರಬಹುದು. ಹಾಗೆಯೇ, ಪ್ರೂಫ್ ದಾಖಲೆಗಳು ನಿಮ್ಮ ಹೆಸರಿನಲ್ಲಿ ಇಲ್ಲದೇ ಇದ್ದಾಗಲೂ ಹೀಗಾಗಬಹುದು.
ಸಮೀಪದ ಆಧಾರ್ ಕೇಂದ್ರವೊಂದಕ್ಕೆ ಹೋಗಿಯೂ ಆಧಾರ್ ಅಪ್ಡೇಶನ್ ಮಾಡಬಹುದು. ಹೋಗುವಾಗ ಜೊತೆಯಲ್ಲಿ ವಿಳಾಸ ಪ್ರೂಫ್ ಮತ್ತು ಐಡಿ ಪ್ರೂಫ್ ದಾಖಲೆಗಳನ್ನು ತೆಗೆದುಕೊಂಡು ಹೋಗಿ. ಅಲ್ಲಿ ಸಹಾಯಕ ಸಿಬ್ಬಂದಿಗೆ ನಿರ್ದಿಷ್ಟ ಶುಲ್ಕ ಪಾವತಿಸಿ ಆಧಾರ್ ಅಪ್ಡೇಟ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ