ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ ಟಾಟಾ ಕರ್ವ್ ಕಾರಿನ ವಿಶೇಷತೆಗಳೇನು?
Post Office Updates: ಪೋಸ್ಟ್ ಆಫೀಸ್ ಉಳಿತಾಯ ಖಾತೆ ನಿಯಮಗಳಲ್ಲಿ 3 ಬದಲಾವಣೆಗಳಾಗಿವೆ, ಗಮನಿಸಿ
3 Changes In PO Savings Account Rules: ಪೋಸ್ಟ್ ಆಫೀಸ್ನಲ್ಲಿ ಸೇವಿಂಗ್ಸ್ ಅಕೌಂಟ್ಗೆ ಜಂಟಿ ಖಾತೆದಾರರ ಸಂಖ್ಯೆಯಲ್ಲಿ ಬದಲಾವಣೆ, ಖಾತೆಯಿಂದ ಹಣ ಹಿಂಪಡೆಯುವ ಕ್ರಮ, ಸೇವಿಂಗ್ಸ್ ಅಕೌಂಟ್ ಬ್ಯಾಲನ್ಸ್ಗೆ ಬಡ್ಡಿ ಹೀಗೆ ಮೂರು ನಿಯಮಗಳ ಬದಲಾವಣೆ ಮಾಡಲಾಗಿದೆ.
ಅಂಚೆ ಕಚೇರಿಯಲ್ಲಿ ಸೇವಿಂಗ್ಸ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರೂ ಗಮನಿಸಬೇಕಾದ ಸುದ್ದಿ ಇದು. ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ತಿದ್ದುಪಡಿ ಯೋಜನೆ (post office savings account amendment scheme 2023) ಮೂಲಕ ಇತ್ತೀಚೆಗೆ 3 ಬದಲಾವಣೆಗಳನ್ನು ತರಲಾಗಿದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ ಇ-ಗೆಜೆಟ್ ಅಧಿಸೂಚನೆ (notification) ಮೂಲಕ ಈ ಬದಲಾವಣೆಗಳನ್ನು ಬಹಿರಂಗಪಡಿಸಿದೆ. ಖಾತೆದಾರರ ಸಂಖ್ಯೆ, ಖಾತೆಯಿಂದ ಹಣ ಹಿಂಪಡೆಯುವುದು, ಖಾತೆಯಲ್ಲಿನ ಹಣಕ್ಕೆ ಬಡ್ಡಿ, ಈ ಮೂರು ವಿಚಾರಗಳಲ್ಲಿ ನಿಯಮ ಬದಲಾವಣೆ ಮಾಡಲಾಗಿದೆ.
ಪೋಸ್ಟ್ ಆಫೀಸ್ ಖಾತೆದಾರರ ಸಂಖ್ಯೆಯಲ್ಲಿ ಬದಲಾವಣೆ
ಬ್ಯಾಂಕುಗಳಲ್ಲಿರುವಂತೆ ಪೋಸ್ಟ್ ಆಫೀಸ್ನಲ್ಲೂ ಜಂಟಿ ಖಾತೆ ತೆರೆಯಲು ಅವಕಾಶ ಇದೆ. ಇಬ್ಬರು ಮಾತ್ರ ಜಾಯಿಂಟ್ ಅಕೌಂಟ್ ತೆರೆಯಲು ಆಸ್ಪದ ಇತ್ತು. ಈಗ ಮೂವರಿಗೆ ಅದನ್ನು ಹೆಚ್ಚಿಸಲಾಗಿದೆ. ಅಂದರೆ ಮೂವರು ಸೇರಿ ಪೋಸ್ಟ್ ಆಫೀಸ್ನಲ್ಲಿ ಜಾಯಿಂಟ್ ಸೇವಿಂಗ್ಸ್ ಅಕೌಂಟ್ ತೆರೆಯಬಹುದು.
ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ನಿಂದ ಹಣ ಹಿಂಪಡೆಯುವ ನಿಯಮ
ಪೋಸ್ಟ್ ಆಫೀಸ್ನ ಸೇವಿಂಗ್ಸ್ ಅಕೌಂಟ್ನಿಂದ ಹಣ ಹಿಂಪಡೆಯುವ ಕ್ರಮದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. 50 ರೂಗಿಂತ ಹೆಚ್ಚು ಮೊತ್ತದ ಹಣ ಹಿಂಪಡೆಯಲು ಫಾರ್ಮ್-2 ಅನ್ನು ಭರ್ತಿ ಮಾಡಿ ಸಲ್ಲಿಸಬೇಕಿತ್ತು. ಈಗ ಫಾರ್ಮ್-2 ಬದಲು ಫಾರ್ಮ್-3 ಅನ್ನು ಭರ್ತಿ ಮಾಡಿ ಪಾಸ್ಬುಕ್ ಜೊತೆಗೆ ಸಲ್ಲಿಸಬೇಕು ಎನ್ನುತ್ತದೆ ಹೊಸ ನಿಯಮ.
ಇದನ್ನೂ ಓದಿ: Bengaluru Girl: ಬೆಂಗಳೂರಿನ 22 ವರ್ಷದ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್
ಪೋಸ್ಟ್ ಆಫೀಸ್ ಖಾತೆಯಲ್ಲಿನ ಠೇವಣಿ ಮೇಲೆ ಬಡ್ಡಿ
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಕ್ತಿ ಮೃತಪಟ್ಟರೆ, ಅವರು ಸಾಯುವ ಹಿಂದಿನ ತಿಂಗಳ ಅಂತ್ಯದಲ್ಲಿ ಮಾತ್ರವೇ ಬಡ್ಡಿ ಹಾಕಲಾಗುತ್ತದೆ. ಈಗ ತಿದ್ದುಪಡಿ ನಿಯಮದ ಪ್ರಕಾರ, ಖಾತೆದಾರ ಮೃತಪಟ್ಟ ಹಿಂದಿನ ತಿಂಗಳವರೆಗೂ ಬಡ್ಡಿ ಕೊಡಲಾಗುತ್ತದೆ.
ಬ್ಯಾಂಕುಗಳಂತೆ ಅಂಚೆ ಕಚೇರಿಯಲ್ಲೂ ಉಳಿತಾಯ ಖಾತೆಯಲ್ಲಿ ಇರುವ ಹಣಕ್ಕೆ ಬಡ್ಡಿ ಕೊಡಲಾಗುತ್ತದೆ. ತಿಂಗಳ 11ನೆ ದಿನದಿಂದ ಹಿಡಿದು ತಿಂಗಳ ಕೊನೆಯವರೆಗಿನ ಅವಧಿಯಲ್ಲಿ ಖಾತೆಯಲ್ಲಿ ಇರುವ ಕನಿಷ್ಠ ಮೊತ್ತಕ್ಕೆ ವಾರ್ಷಿಕ ಶೇ. 4ರಷ್ಟು ಬಡ್ಡಿ ತುಂಬಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Tue, 22 August 23