Bengaluru Girl: ಬೆಂಗಳೂರಿನ 22 ವರ್ಷದ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್

Bill Gates Post On Kusuma: ಭಾರತದ ಅಂಚೆ ಕಚೇರಿ ವ್ಯವಸ್ಥೆ ಬಹಳಷ್ಟು ಮಂದಿಗೆ ಹಣಕಾಸು ಬಲ ಒದಗಿಸುವ ಕೆಲಸ ಮಾಡುತ್ತಿದೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚಿನ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಭಾರತದ ಅಂಚೆ ಕಚೇರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅಂಚೆ ಕಚೇರಿ ಉದ್ಯೋಗಿ ಕುಸುಮಾ ಎಂಬಾಕೆಯ ಕಾರ್ಯವನ್ನೂ ಪ್ರಶಂಸಿಸಿದ್ದಾರೆ.

Bengaluru Girl: ಬೆಂಗಳೂರಿನ 22 ವರ್ಷದ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್
ಕುಸುಮಾ ಜೊತೆ ಬಿಲ್ ಗೇಟ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 22, 2023 | 11:19 AM

ಬೆಂಗಳೂರು, ಆಗಸ್ಟ್ 22: ಭಾರತದ ಅಂಚೆ ಕಚೇರಿ ವ್ಯವಸ್ಥೆ ಕಳೆದ ಕೆಲ ವರ್ಷಗಳಿಂದ ಸಂಪೂರ್ಣ ಮಾರ್ಪಾಡು ಕಂಡಿದ್ದು ಹಲವು ದೇಶಗಳ ಗಮನ ಸೆಳೆದಿರುವುದು ಹೌದು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (bill gates) ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ (LinkedIn Post) ಭಾರತದ ಅಂಚೆ ಕಚೇರಿ ವ್ಯವಸ್ಥೆಯನ್ನು ಶ್ಲಾಘಿಸುತ್ತಾ, ಬೆಂಗಳೂರಿನ ಕುಸುಮಾ ಎಂಬ ಯುವತಿಯ ಉದಾಹರಣೆ ನೀಡಿದ್ದರು. ಕುಸುಮಾ ರೀತಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್​ಗಳು ತಮ್ಮ ಸಮುದಾಯದ ಜನರಿಗೆ ಹಣಕಾಸು ಸೇವೆ ಮಾತ್ರವಲ್ಲ, ಭರವಸೆಗಳನ್ನೂ ತಲುಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಲ್ ಗೇಟ್ಸ್ ಅವರ ಈ ಸೋಷಿಯಲ್ ಮೀಡಿಯಾ ಪೋಸ್ಟ್​ಗೆ ಕೇಂದ್ರ ಸಚಿವ ಎ ವೈಷ್ಣವ್ (Union Minister Ashwini Vaishnaw) ಸ್ಪಂದಿಸಿ ಪ್ರತಿಕ್ರಿಯೆ ನೀಡಿದ್ದಾರೆ.

‘ಭಾರತಕ್ಕೆ ನಾನು ಪ್ರವಾಸ ಹೋದ ಸಂದರ್ಭದಲ್ಲಿ, ಬದಲಾವಣೆಯ ಅದಮ್ಯ ಶಕ್ತಿಯನ್ನು ನಾನು ಭೇಟಿಯಾದೆ. ತನ್ನ ಸ್ಥಳೀಯ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಯುವತಿ ಕುಸುಮಾ ಅವರೇ ಆ ಶಕ್ತಿ.

‘ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಕುಸುಮಾರಂತಹ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್​ಗಳು ಸ್ಮಾರ್ಟ್​ಫೋನ್ ಸಾಧನ ಹಾಗು ಬಯೋಮೆಟ್ರಿಕ್ಸ್ ಬಳಸಿ ಭಾರತದಾದ್ಯಂತ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದ್ದಾರೆ. ಕುಸುಮಾ ಸಮಗ್ರ ಹಣಕಾಸು ಸೇವೆ ಒದಗಿಸುತ್ತಿರುವುದು ಮಾತ್ರವಲ್ಲ, ಆಕೆಯ ಸಮುದಾಯಕ್ಕೆ ಭರವಸೆ ಮತ್ತು ಹಣಕಾಸು ಬಲ ತಲುಪಿಸುತ್ತಿದ್ದಾರೆ’ ಎಂದು ಬಿಲ್ ಗೇಟ್ಸ್ ತಮ್ಮ ಲಿಂಕ್ಡ್ ಇನ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್​ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್​ನ ಯಶೋಗಾಥೆ

ಇದೇ ಪೋಸ್ಟ್​ನಲ್ಲಿ ಬಿಲ್ ಗೇಟ್ಸ್ ಫೌಂಡೇಶನ್ ಜೊತೆ ಕುಸುಮಾ ಮಾತನಾಡಿರುವ ವಿಡಿಯೋವನ್ನೂ ಸೇರಿಸಲಾಗಿದೆ. ಹುಸ್ಕೂರಿನಲ್ಲಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಆಗಿರುವ ಕುಸುಮಾ, ತಮ್ಮ ಕೆಲಸದ ಬಗ್ಗೆ ಈ ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಆಕೆ ವಿಡಿಯೋದಲ್ಲಿ ಇಂಗ್ಲೀಷ್​ನಲ್ಲಿ ಮಾತನಾಡಿದ್ದಾರೆ. ಅವರು ಹೇಳಿರುವ ಮಾತುಗಳನ್ನು ಕನ್ನಡೀಕರಿಸಿ, ಅಕ್ಷರರೂಪದಲ್ಲಿ ಇಲ್ಲಿ ನೀಡಿದ್ದೇವೆ:

“ಯಾರದೇ ಜೀವನದಲ್ಲಿ ಸಿಗುವ ಅತ್ಯಂತ ದೊಡ್ಡ ಬಲ ಎಂದರೆ ಅವರ ಕುಟುಂಬದ್ದು. ನನ್ನ ತಂದೆ ಓದಬೇಕೆಂದುಕೊಂಡರೂ 15 ವರ್ಷ ವಯಸ್ಸಿದ್ದಾಗಲೇ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಲು ಆರಂಭಿಸಿದರು. ನನಗೆ ಪೋಸ್ಟಲ್ ಡಿಪಾರ್ಟ್ಮೆಂಟ್​ನಲ್ಲಿ ಕೆಲಸ ಸಿಕ್ಕಿದೆ ಅಂತ ಗೊತ್ತಾದಾಗ ಅವರ ಕಣ್ಣಲ್ಲಿ ಆನಂದಬಾಷ್ಪ ಸುರಿದಿತ್ತು.

“ನಾನು ಕುಸುಮಾ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದೇನೆ. ನಾನು 22 ವರ್ಷ ವಯಸ್ಸಿನವಳಾಗಿದ್ದು, ಇಂಡಿಯನ್ ಪೋಸ್ಟಲ್ ಡಿಪಾರ್ಟ್ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ಹುಸ್ಕೂರ್​ನಲ್ಲಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಆಗಿದ್ದೇನೆ. ಈ ಪ್ರದೇಶದಲ್ಲಿ ಅಂಚೆ ಕಚೇರಿಗೆ ಬರುವವರಲ್ಲಿ ಹೆಚ್ಚಿನವರು ಪಿಂಚಣಿಗಾಗಿ ಬರುತ್ತಾರೆ. ಒಂದು ತಿಂಗಳಲ್ಲಿ 250ರಿಂದ 300 ಮಂದಿ ಬರುತ್ತಾರೆ. ಬರುವವರು ಕೇವಲ ಹಣ ಹಿಂಪಡೆಯಲು ಮಾತ್ರವಲ್ಲ, ಹಣ ಹೇಗೆ ಉಳಿಸುವುದು ಅಂತಲೂ ಕೇಳುತ್ತಾರೆ. ಅವರು ನಮ್ಮ ಮೇಲೆ ಅಷ್ಟು ನಂಬುಗೆ ಇಟ್ಟಿರುತ್ತಾರೆ.

ಇದನ್ನೂ ಓದಿ: ಅಂಗಡಿಯಲ್ಲಿ ಸಾಮಾನು ಖರೀದಿಸಿ ಬಿಲ್ ಅಪ್ಲೋಡ್ ಮಾಡಿ, 1 ಕೋಟಿ ರೂವರೆಗೆ ಬಹುಮಾನ ಗೆಲ್ಲಿ

“ಜನರ ಜೊತೆ ಬೆರೆತು ಮಾತನಾಡುವುದು ನನ್ನ ಕೆಲಸದ ಬೆಸ್ಟ್ ಪಾರ್ಟ್. ಅವರ ಜೊತೆ ಏನಾದರೂ ಹಂಚಿಕೊಳ್ಳಲು, ಮತ್ತು ಅವರು ನನ್ನೊಂದಿಗೆ ಹಂಚಿಕೊಳ್ಳುವ ಅವಕಾಶ ಇರುತ್ತದೆ. ನನ್ನನ್ನು ಅವರ ಕುಟುಂಬದ ಸದಸ್ಯೆಯಂತೆಯೇ ಭಾವಿಸುತ್ತಾರೆ.

ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ
ಹ್ಯಾಚ್ ಬ್ಯಾಕ್ ಕಾರುಗಳ ಮೇಲೆ ಭರ್ಜರಿ ದೀಪಾವಳಿ ಆಫರ್ ಘೋಷಣೆ
ಹೋಳ್ಕರ್ ಮೈದಾನದಲ್ಲಿ ಯಾರ ಬ್ಯಾಟ್ ಹೆಚ್ಚು ಸದ್ದು ಮಾಡಿದೆ ಗೊತ್ತಾ?
ಹೋಳ್ಕರ್ ಮೈದಾನದಲ್ಲಿ ಯಾರ ಬ್ಯಾಟ್ ಹೆಚ್ಚು ಸದ್ದು ಮಾಡಿದೆ ಗೊತ್ತಾ?
ಹೋಳಿ ಹಬ್ಬಕ್ಕೆ ಈ ಖಾದ್ಯಗಳನ್ನು ತಯಾರಿಸಿ
ಹೋಳಿ ಹಬ್ಬಕ್ಕೆ ಈ ಖಾದ್ಯಗಳನ್ನು ತಯಾರಿಸಿ

“ನನ್ನ ಕೆಲಸದಲ್ಲಿ ಕಷ್ಟ ಎನಿಸುವ ಸಂದರ್ಭ ಎಂದರೆ ಜನರ ನೂಕುನುಗ್ಗಲು ಇರುವಾಗ. ಆ ಸಂದರ್ಭದಲ್ಲಿ ನಾನು ತುಸು ಒತ್ತಡಕ್ಕೊಳಗಾಗುತ್ತೇನೆ. ನನಗೆ ಮೊದಮೊದಲು ಜನರ ಜೊತೆ ಮಾತನಾಡಲು ಮುಜುಗರವಾಗುತ್ತಿತ್ತು. ಕಂಪನಿಗಳಲ್ಲಾದರೆ ಗ್ರಾಹಕರ ಜೊತೆ ನೇರವಾಗಿ ಸಂವಾದ ಮಾಡುವುದಿಲ್ಲ. ಆದರೆ ಇಲ್ಲಿ ನಾವು ಜನರ ಜೊತೆ ಮುಖಾಮುಖಿ ಮಾತನಾಡಬೇಕು. ಇದರಿಂದ ನನಗೆ ಆತ್ಮವಿಶ್ವಾಸ ಹೆಚ್ಚಿತು. ಸಮುದಾಯದೊಂದಿಗೆ ಮಾತನಾಡುವ ಸ್ಥೈರ್ಯ ಬಂದಿತು.

“ನಾನು ಇಲ್ಲಿ ಕೆಲಸ ಮಾಡುವುದು ಇತರ ಮಹಿಳೆಯರು ಮತ್ತು ಬಾಲಕಿಯರಿಗೆ ಸ್ಫೂರ್ತಿಯಾಗುತ್ತದೆ. ಹಣಕಾಸು ಕ್ಷೇತ್ರದಲ್ಲಿ ಪುರುಷರು ಮಾತ್ರ ಸಾಧಿಸಬಲ್ಲುರು ಎಂದೇನೂ ಅಲ್ಲ. ಮಹಿಳೆಯರೂ ಕೂಡ ಹಣಕಾಸು ಸಲಹೆಗಳನ್ನು ಕೊಡುವಷ್ಟು ಸಮರ್ಥಳು. ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ. ಮನಃಪೂರ್ವಕವಾಗಿ ಕೆಲಸ ಮಾಡುತ್ತಿದ್ದೇನೆ,” ಎಂದು ಕುಸುಮಾ ಈ ವಿಡಿಯೋದಲ್ಲಿ ಹೇಳಿದ್ದಾರೆ.

ಕುಸುಮಾ ಮಾತನಾಡಿರುವ ವಿಡಿಯೋ ಲಿಂಕ್ ಇಲ್ಲಿದೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:14 am, Tue, 22 August 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್