AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗಡಿಯಲ್ಲಿ ಸಾಮಾನು ಖರೀದಿಸಿ ಬಿಲ್ ಅಪ್ಲೋಡ್ ಮಾಡಿ, 1 ಕೋಟಿ ರೂವರೆಗೆ ಬಹುಮಾನ ಗೆಲ್ಲಿ

GST reward scheme: ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದಾಗ ಅದರ ಜಿಎಸ್​ಟಿ ಬಿಲ್ ಪಡೆದು ಮೇರಾ ಬಿಲ್ ಮೆರಾ ಅಧಿಕಾರ್ ಆ್ಯಪ್​ಗೆ ಅಪ್​ಲೋಡ್ ಮಾಡಿ, ಲಕ್ಕಿ ಡ್ರಾನಲ್ಲಿ 1 ಕೋಟಿ ರೂವರೆಗೆ ಬಹುಮಾನ ಗೆಲ್ಲುವ ಅವಕಾಶವನ್ನು ಸರ್ಕಾರ ಕೊಟ್ಟಿದೆ.

ಅಂಗಡಿಯಲ್ಲಿ ಸಾಮಾನು ಖರೀದಿಸಿ ಬಿಲ್ ಅಪ್ಲೋಡ್ ಮಾಡಿ, 1 ಕೋಟಿ ರೂವರೆಗೆ ಬಹುಮಾನ ಗೆಲ್ಲಿ
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 21, 2023 | 1:16 PM

Share

ನವದೆಹಲಿ, ಆಗಸ್ಟ್ 21: ಜಿಎಸ್​ಟಿ ಬಿಲ್ ಬಳಕೆಯನ್ನು ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಸರ್ಕಾರ ವಿನೂತನ ಕ್ರಮಕ್ಕೆ ಮುಂದಾಗಿದೆ. ಜಿಎಸ್​ಟಿ ಬೆಲೆಪಟ್ಟಿ (Invoice) ಅಥವಾ ಇನ್ವಾಯ್ಸ್ ದಾಖಲೆಯನ್ನು ಮೊಬೈಲ್ ಆ್ಯಪ್​ಗೆ ಅಪ್​ಲೋಡ್ ಮಾಡುವ ವ್ಯಕ್ತಿಗಳಿಗೆ, ಲಕ್ಕಿ ಡ್ರಾ ಮೂಲಕ ಆಯ್ದು, 10 ಲಕ್ಷ ರೂನಿಂದ 1 ಕೋಟಿ ರೂವರೆಗೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುವ ಆಲೋಚನೆಯಲ್ಲಿ ಕೇಂದ್ರ ಸರ್ಕಾರ ಇದೆ. ವರದಿಗಳ ಪ್ರಕಾರ, ಇಂತಹದ್ದೊಂದು ಪ್ರಸ್ತಾಪ ಬಹಳ ದಿನಗಳಿಂದ ಇದೆಯಾದರೂ ಸರ್ಕಾರ ಈಗ ‘ಮೇರಾ ಬಿಲ್ ಮೇರಾ ಅಧಿಕಾರ್’ ಸ್ಕೀಮ್ ಅನ್ನು ಜಾರಿಗೊಳಿಸಲು ಹೊರಟಿದೆ ಎನ್ನಲಾಗಿದೆ.

ಇನ್ವಾಯ್ಸ್​ನಲ್ಲಿ ಜಿಎಸ್​ಟಿನ್ ನಂಬರ್ ಇತ್ಯಾದಿ ಇರಬೇಕು

ರೀಟೇಲ್ ಅಥವಾ ಹೋಲ್​ಸೇಲ್ ಅಂಗಡಿಯಿಂದ ಪಡೆಯುವ ಇನ್ವಾಯ್ಸ್ ಅನ್ನು ‘ಮೇರಾ ಬಿಲ್ ಮೇರಾ ಅಧಿಕಾರ್’ ಆ್ಯಪ್​ನಲ್ಲಿ ಅಪ್​ಲೋಡ್ ಮಾಡಬೇಕು. ಈ ದಾಖಲೆಯಲ್ಲಿ ಇನ್ವಾಯ್ಸ್ ನಂಬರ್, ಮಾರಾಟಗಾರರ ಜಿಎಸ್​ಟಿನ್ ನಂಬರ್, ಪಾವತಿಯಾದ ಹಣದ ವಿವರ, ತೆರಿಗೆ ಮೊತ್ತ ಇವೆಲ್ಲವೂ ಒಳಗೊಂಡಿರಬೇಕು.

ಇದನ್ನೂ ಓದಿ: New Tax Rule: ಲೈಫ್ ಇನ್ಷೂರೆನ್ಸ್ ಪಾಲಿಸಿ ವಿಚಾರದಲ್ಲಿ ಹೊಸ ಆದಾಯ ತೆರಿಗೆ ನಿಯಮ; ವಿವರ ತಿಳಿಯಿರಿ

ಮೊಬೈಲ್ ಆ್ಯಪ್​ನಲ್ಲಿ ಅಪ್​ಲೋಡ್ ಮಾಡಬೇಕಾದರೆ ಇನ್ವಾಯ್ಸ್ ಮೊತ್ತ ಕನಿಷ್ಠ 200 ರೂ ಆಗಿದ್ದಿರಬೇಕು. ಅಂದರೆ 200 ರೂಗಿಂತ ಹೆಚ್ಚು ಮೌಲ್ಯದ ವಸ್ತುವನ್ನು ಖರೀದಿಸಿ ಪಡೆದ ಬಿಲ್ ಆಗಿದ್ದಿರಬೇಕು. ಇಂಥ 25 ನೈಜ ಇನ್ವಾಯ್ಸ್​ಗಳನ್ನು ಒಂದು ತಿಂಗಳಲ್ಲಿ ಒಬ್ಬ ವ್ಯಕ್ತಿ ಅಪ್ಲೋಡ್ ಮಾಡಬಹುದು.

ಹ್ಯಾಂಡ್ಸಮ್ ಹಂಕ್ ಆದ ವಿಕ್ಕಿ ಕೌಶಲ್
ಹ್ಯಾಂಡ್ಸಮ್ ಹಂಕ್ ಆದ ವಿಕ್ಕಿ ಕೌಶಲ್
ಹ್ಯಾಂಡ್​​​ಬ್ಯಾಗ್ ಖರೀದಿಸುವ ಮುನ್ನ ಈ ಸಿಂಪಲ್​​​ ಟಿಪ್ಸ್​​ ನೆನಪಿನಲ್ಲಿಟ್ಟುಕೊಳ್ಳಿ
ಹ್ಯಾಂಡ್​​​ಬ್ಯಾಗ್ ಖರೀದಿಸುವ ಮುನ್ನ ಈ ಸಿಂಪಲ್​​​ ಟಿಪ್ಸ್​​ ನೆನಪಿನಲ್ಲಿಟ್ಟುಕೊಳ್ಳಿ

ಪ್ರತೀ ತಿಂಗಳು ಲಕ್ಕಿ ಡ್ರಾ ಮೂಲಕ 500 ಇನ್ವಾಯ್ಸ್​ಗಳನ್ನು ಆಯ್ಕೆ ಮಾಡಲಾಗುತ್ತದೆ. ಇವುಗಳಿಗೆ ಲಕ್ಷ ರೂವರೆಗೂ ಬಹುಮಾನ ಇರುತ್ತದೆ. ಇನ್ನು, ಪ್ರತೀ ಮೂರು ತಿಂಗಳಿಗೊಮ್ಮೆ ಎರಡು ಇನ್ವಾಯ್ಸ್​ಗಳನ್ನು ಲಕ್ಕಿ ಡ್ರಾ ಮೂಲಕ ಆರಿಸಿ 1 ಕೋಟಿ ರೂ ಬಹುಮಾನ ಕೊಡಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತರಕಾರಿ ಅಂಗಡಿಯಲ್ಲಿ ಯುಪಿಐ ಪಾವತಿ ಮಾಡಿ ದಂಗಾದ ಜರ್ಮನ್ ಮಿನಿಸ್ಟರ್

ವ್ಯಾಪಾರದ ವೇಳೆ ಜಿಎಸ್​ಟಿ ಬಿಲ್ ಕೇಳಿಪಡೆಯಲು ಗ್ರಾಹಕರನ್ನು ಪ್ರೋತ್ಸಾಹಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ತೆರಿಗೆ ಕಳ್ಳತನ ತಪ್ಪಿಸಬಹುದು ಎಂಬುದು ಸರ್ಕಾರ ಅನಿಸಿಕೆ. ಈ ತಿಂಗಳೊಳಗೆಯೇ ಸ್ಕೀಮ್ ಅನ್ನು ಜಾರಿಗೊಳಿಸುವ ಸಾಧ್ಯತೆ ಇದೆ.

ಜಿಎಸ್​ಟಿ ನೆಟ್ವರ್ಕ್ ಈಗಾಗಲೇ ತೆರಿಗೆ ಪಾವತಿ ವ್ಯವಸ್ಥೆಯನ್ನು ಬಳಕೆದಾರಸ್ನೇಹಿ ಕಾರ್ಯವಾಗಿಸಿದೆ. ಮೊಬೈಲ್ ಆ್ಯಪ್ ಮತ್ತು ಪೋರ್ಟಲ್​ನಲ್ಲಿ ನೊಂದಣಿ ಮಾಡಿಕೊಂಡು ಇನ್ವಾಯ್ಸ್​ಗಳನ್ನು ಅಪ್ಲೋಡ್ ಮಾಡುವುದು ಬಹಳ ಸುಲಭ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ