New Tax Rule: ಲೈಫ್ ಇನ್ಷೂರೆನ್ಸ್ ಪಾಲಿಸಿ ವಿಚಾರದಲ್ಲಿ ಹೊಸ ಆದಾಯ ತೆರಿಗೆ ನಿಯಮ; ವಿವರ ತಿಳಿಯಿರಿ
Life Insurance Schemes: ವರ್ಷಕ್ಕೆ 5 ಲಕ್ಷ ರೂಗಿಂತ ಕಡಿಮೆ ಪ್ರೀಮಿಯಮ್ ಇರುವ ಇನ್ಷೂರೆನ್ಸ್ ಪಾಲಿಸಿಗಳ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಹೆಚ್ಚಿನ ಪ್ರೀಮಿಯಮ್ನ ಪಾಲಿಸಿಗಳಿಗೆ ತೆರಿಗೆ ಅನ್ವಯ ಆಗುತ್ತದೆ. ಹಾಗಂತ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೊಸ ನಿಯಮ ರೂಪಿಸಿದೆ.
ತೆರಿಗೆ ಉಳಿಸಲು ವಿಮಾ ಪಾಲಿಸಿ ಸೋಗಿನಲ್ಲಿ ಹೂಡಿಕೆ ಸ್ಕೀಮ್ಗಳು ಚಾಲನೆಯಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನಿಯಮವೊಂದನ್ನು ರೂಪಿಸಿದೆ. ಹೆಚ್ಚು ಪ್ರೀಮಿಯಮ್ ಇರುವ ಲೈಫ್ ಇನ್ಷೂರೆನ್ಸ್ ಪಾಲಿಸಿಗಳಿಂದ ಬರುವ ಆದಾಯವನ್ನು ತೆರಿಗೆ ಗುಂಪಿಗೆ ಸೇರಲು ನಿರ್ಧರಿಸಲಾಗಿದೆ. 5 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಪ್ರೀಮಿಯಮ್ ಇರುವ ಇನ್ಷೂರೆನ್ಸ್ ಪಾಲಿಸಿಯ (Life Insurance Policy) ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ನಿಯಮಗಳ ಕಾಯ್ದೆ ಅಡಿ 11ಯುಎಸಿಎ ಎಂಬ ಹೊಸ ನಿಯಮವನ್ನು ಸಿಬಿಡಿಟಿ ಇತ್ತೀಚೆಗೆ ಸೇರಿಸಿದೆ.
ಇನ್ಷೂರೆನ್ಸ್ ಪಾಲಿಸಿ ಹೊಸ ನಿಯಮದ ವಿವರಣೆ
ವರ್ಷಕ್ಕೆ 5 ಲಕ್ಷ ರೂಗಿಂತ ಹೆಚ್ಚು ಪ್ರೀಮಿಯಮ್ ಹಣ ಇರುವ ಹಾಗೂ 2023ರ ಏಪ್ರಿಲ್ 1ರಿಂದ ನೀಡಲಾಗುವ ಜೀವ ವಿಮಾ ಪಾಲಿಸಿ ಮೆಚ್ಯೂರಿಟಿ ಬಳಿಕ ಅದರ ಅದಾಯಕ್ಕೆ ತೆರಿಗೆ ಅನ್ವಯ ಆಗುತ್ತದೆ. 5 ಲಕ್ಷ ರೂಗಿಂತ ಕಡಿಮೆ ವಾರ್ಷಿಕ ಪ್ರೀಮಿಯಮ್ ಇರುವ ಪಾಲಿಸಿಗಳಿಗೆ ಮಾತ್ರ ತೆರಿಗೆ ವಿನಾಯಿತಿ ಸೌಲಭ್ಯ ಇರುತ್ತದೆ. ಅದಕ್ಕಿಂತ ಹೆಚ್ಚು ಪ್ರೀಮಿಯಮ್ ಇರುವ ಪಾಲಿಸಿಗಳ ಮೆಚ್ಯೂರಿಟಿ ಹಣವನ್ನು ವ್ಯಕ್ತಿಯ ಆದಾಯದ ಬಾಗವಾಗಿ ಪರಿಗಣಿಸಲಾಗುತ್ತದೆ. ಅ ವ್ಯಕ್ತಿಯ ಆದಾಯ ಗುಂಪಿಗೆ ಅನುಗುಣವಾಗಿ ತೆರಿಗೆ ಅನ್ವಯ ಆಗುತ್ತದೆ. ಇದು ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಈ ಹೊಸ ನಿಯಮ ಅನ್ವಯ ಅಗುವುದಿಲ್ಲ.
ಇದನ್ನೂ ಓದಿ: ಪ್ರೋಸಸಿಂಗ್ ಶುಲ್ಕ ಇಲ್ಲ; ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದವರಿಗೆ ಯೂನಿಯನ್ ಬ್ಯಾಂಕ್ ಭರ್ಜರಿ ಆಫರ್
ಇನ್ಷೂರೆನ್ಸ್ ಪಾಲಿಸಿ ಹೊಸ ನಿಯಮ ಯಾಕಾಗಿ?
ಸರ್ಕಾರ ವಿಧಿಸುವ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಕೆಲವು ಮಾರ್ಗಗಳಿವೆ. ಅದರಲ್ಲಿ ಪ್ರಮುಖವಾದುದು ಇನ್ಷೂರೆನ್ಸ್ ಪಾಲಿಸಿ, ಪಿಪಿಎಫ್ ಇತ್ಯಾದಿ. ಜನರನ್ನು ಸೆಳೆಯಲು ಇನ್ಷೂರೆನ್ಸ್ ಪಾಲಿಸಿ ಸೋಗಿನಲ್ಲಿ ಹೂಡಿಕೆಗಳನ್ನು ಕೆಲ ಕಂಪನಿಗಳು ಆಫರ್ ಮಾಡುತ್ತವೆ. ಇವು ಇನ್ಷೂರೆನ್ಸ್ ಹೆಸರಿನಲ್ಲಿ ಇರುವ ಹೂಡಿಕೆ ಸ್ಕೀಮ್ಗಳಾಗಿವೆ. ಹೂಡಿಕೆ ಸ್ಕೀಮ್ ಆದರೆ ಆದಾಯ ತೆರಿಗೆ ಕಟ್ಟಬೇಕಾದೀತೆಂದು ಇನ್ಷೂರೆನ್ಸ್ ಪ್ಲಾನ್ ಎಂದು ತಳುಕು ಹಾಕಲಾಗುತ್ತದೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಲಿಸ್ಟ್ ಆದ ಜಿಯೋ ಫೈನಾನ್ಷಿಯಲ್ ಸರ್ವಿಸಸ್; ಎರಡನೇ ಅತಿದೊಡ್ಡ ಎನ್ಬಿಎಫ್ಸಿ ಎನಿಸಿದ ಜೆಎಫ್ಎಸ್
ಈ ರೀತಿಯ ದುರ್ಬಳಕೆಯನ್ನು ತಡೆಯಲು ಸಿಬಿಡಿಟಿ ಈಗ ತೆರಿಗೆ ನಿಯಮ ಬದಲಾಯಿಸಿದೆ. ಒಂದು ವರ್ಷದಲ್ಲಿ ನೀವು ಕಟ್ಟುವ ಪ್ರೀಮಿಮಯ್ಗಳು 5 ಲಕ್ಷ ಮೀರಿದರೆ, ಅ ಇನ್ಷೂರೆನ್ಸ್ ಪಾಲಿಸಿಯ ಆದಾಯಕ್ಕೆ ತೆರಿಗೆ ಅನ್ವಯ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ