ಷೇರುಪೇಟೆಯಲ್ಲಿ ಲಿಸ್ಟ್ ಆದ ಜಿಯೋ ಫೈನಾನ್ಷಿಯಲ್ ಸರ್ವಿಸಸ್; ಎರಡನೇ ಅತಿದೊಡ್ಡ ಎನ್​ಬಿಎಫ್​ಸಿ ಎನಿಸಿದ ಜೆಎಫ್​ಎಸ್

Jio financial services Shares Listed: ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರು ಇಂದು ಎನ್​ಎಸ್​ಇ ಮತ್ತು ಬಿಎಸ್​ಇಯಲ್ಲಿ ಕ್ರಮವಾಗಿ 262 ರೂ ಮತ್ತು 265 ರೂಗಳಿಗೆ ಲಿಸ್ಟ್ ಆಗಿದೆ. ಅದರ ಒಟ್ಟು ಷೇರು ಸಂಪತ್ತು 1.66 ಲಕ್ಷ ಕೋಟಿ ರೂ ಆಗಿದೆ. ಬಜಾಜ್ ಫೈನಾನ್ಸ್ ಬಿಟ್ಟರೆ ಜೆಎಫ್​ಎಸ್ ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿರುವ ಎನ್​ಬಿಎಫ್​ಸಿ ಎನಿಸಿದೆ.

ಷೇರುಪೇಟೆಯಲ್ಲಿ ಲಿಸ್ಟ್ ಆದ ಜಿಯೋ ಫೈನಾನ್ಷಿಯಲ್ ಸರ್ವಿಸಸ್; ಎರಡನೇ ಅತಿದೊಡ್ಡ ಎನ್​ಬಿಎಫ್​ಸಿ ಎನಿಸಿದ ಜೆಎಫ್​ಎಸ್
ಜಿಯೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 21, 2023 | 11:02 AM

ಮುಂಬೈ, ಆಗಸ್ಟ್ 21: ಮುಕೇಶ್ ಅಂಬಾನಿ ಮಾಲಿಕತ್ವದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ (Jio financial services) ಆಗಸ್ಟ್ 21ರಂದು ಷೇರುಪೇಟೆಗಳಲ್ಲಿ ಲಿಸ್ಟ್ ಆಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ 262 ರೂಗಳ ಆರಂಭಿಕ ಷೇರುಬೆಲೆ ಪಡೆದರೆ, ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ 265 ರೂ ಬೆಲೆಗೆ ಲಿಸ್ಟ್ ಆಗಿದೆ. ಇಂದು ಬೆಳಗ್ಗೆ ಷೇರುವಿನಿಮಯ ಮಾರುಕಟ್ಟೆ ತೆರೆಯುವ ಮುನ್ನ ನಡೆದ ಸ್ಪೆಷಲ್ ಸೆಷನ್​ನಲ್ಲಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಕಂಪನಿಯ ಷೇರು ಬೆಲೆ 261.85 ರೂ ಆಗುವ ಸೂಚಕ ಇತ್ತು. ಬಿಎಸ್​ಇನಲ್ಲಿ ತುಸು ಹೆಚ್ಚಿನ ದರದಲ್ಲೇ ಲಿಸ್ಟ್ ಆಗಿದೆ.

ಬಜಾಜ್ ಫೈನಾನ್ಸ್ ನಂತರ ಜೆಎಫ್​ಎಸ್ ಅತಿದೊಡ್ಡ ಎನ್​ಬಿಎಫ್​ಸಿ

ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್​ಬಿಎಫ್​ಸಿ) ಆಗಿದೆ. ಎನ್​ಬಿಎಫ್​ಸಿ ಮಾರುಕಟ್ಟೆ ಮಾತ್ರವಲ್ಲ, ಸಾಲ, ಇನ್ಷೂರೆನ್ಸ್, ಡಿಜಿಟಲ್ ಪೇಮೆಂಟ್, ಅಸೆಟ್ ಮ್ಯಾನೇಜ್ಮೆಂಟ್ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯಾಚರಿಸಲಿದೆ.

ಷೇರುಪೇಟೆಯಲ್ಲಿ ಲಿಸ್ಟ್ ಆದ ಬಳಿಕ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಒಟ್ಟು ಷೇರುಸಂಪತ್ತು 1.66 ಲಕ್ಷ ಕೋಟಿ ರೂ ಆಗಿದೆ. ಎನ್​ಬಿಎಫ್​ಸಿ ಸಂಸ್ಥೆಗಳ ಪೈಕಿ ಬಜಾಜ್ ಫೈನಾನ್ಸ್ ಬಿಟ್ಟರೆ ಜೆಎಫ್​ಎಸ್ ಮಾತ್ರವೇ ಅತಿಹೆಚ್ಚು ಷೇರುಸಂಪತ್ತು ಹೊಂದಿರುವುದು. ಬಜಾಜ್ ಫೈನಾನ್ಸ್ ಸಂಸ್ಥೆ 4.15 ಲಕ್ಷ ಕೋಟಿ ರೂ ಮೊತ್ತದ ಷೇರುಸಂಪತ್ತು ಹೊಂದಿದೆ. ಇನ್ನು, ಬಜಾಬ್ ಫಿನ್​ಸರ್ವ್ ಸಂಸ್ಥೆ 2.32 ಲಕ್ಷ ಕೋಟಿ ರೂ ಷೇರುಸಂಪತ್ತು ಹೊಂದಿದೆಯಾದರೂ ಅದು ಎನ್​ಬಿಎಫ್​ಸಿ ಅಲ್ಲ.

ಇದನ್ನೂ ಓದಿ: ಪ್ರೋಸಸಿಂಗ್ ಶುಲ್ಕ ಇಲ್ಲ; ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದವರಿಗೆ ಯೂನಿಯನ್ ಬ್ಯಾಂಕ್ ಭರ್ಜರಿ ಆಫರ್

ಜೆಎಫ್​ಎಸ್ ಷೇರುಗಳಿಗೆ ಭರ್ಜರಿ ಡಿಮ್ಯಾಂಡ್?

ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರುಗಳನ್ನು ಮುಂದಿನ 10 ಸೆಷನ್ ಕಾಲ ಟ್ರೇಡ್ ಟು ಟ್ರೇಡ್ ಸೆಗ್ಮೆಂಟ್​ನಲ್ಲಿ ಇರಿಸಲಾಗಿದೆ. ಅಂದರೆ, ಈ 10 ಸೆಷನ್​ವರೆಗೂ ಷೇರು ವಹಿವಾಟಿಗೆ ನಿರ್ಬಂಧಗಳು ಅನ್ವಯ ಆಗುತ್ತವೆ. ಅನಗತ್ಯ ಬೆಲೆ ವ್ಯತ್ಯಯ ತಡೆಯಲು ಈ ರೀತಿ ಕ್ರಮ ಕೈಗೊಳ್ಳಲಾಗುತ್ತದೆ.

ಇನ್ನು, ಗ್ರೇ ಮಾರ್ಕೆಟ್​ನಲ್ಲಿ ಜೆಎಫ್​ಎಸ್ ಷೇರಿಗೆ ಒಳ್ಳೆಯ ಬೇಡಿಕೆ ಇರುವುದು ಕಂಡುಬಂದಿದೆ. ಪ್ರೀಮಿಯಮ್​ಗಿಂತ 50 ರೂ ಹೆಚ್ಚು ಬೆಲೆ ಇದರಲ್ಲಿ ಇರುವುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಷೇರುಬೆಲೆ ಸುಲಭವಾಗಿ 300 ರೂ ದಾಟಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ