ಹೋಳಿ ಆಡಿ ಕೊಳೆಯಾದ ಬಟ್ಟೆಗಳನ್ನು ಹೀಗೆ ಸ್ವಚ್ಛಗೊಳಿಸಿ
ಪ್ರೋಸಸಿಂಗ್ ಶುಲ್ಕ ಇಲ್ಲ; ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದವರಿಗೆ ಯೂನಿಯನ್ ಬ್ಯಾಂಕ್ ಭರ್ಜರಿ ಆಫರ್
Union Bank of India Offer: ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವ ತನ್ನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದು, ತನ್ನ ಗೃಹಸಾಲ ಮತ್ತು ವಾಹನ ಸಾಲಗಳ ಮೇಲೆ ಪ್ರೋಸಸಿಂಗ್ ಫೀಸ್ ಪಡೆಯದಿರಲು ನಿರ್ಧರಿಸಿದೆ. ಇದೇ ವೇಳೆ ಬ್ಯಾಂಕು ತನ್ನ ಷೇರುದಾರರಿಗೆ 1,712 ಕೋಟಿ ರೂ ಡಿವಿಡೆಂಡ್ ಬಿಡುಗಡೆ ಮಾಡಿದೆ.
ನವದೆಹಲಿ, ಆಗಸ್ಟ್ 21: ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದ ಸಾಲ ಸುಲಭವಾಗಿ ಸಿಗುತ್ತದೆ, ಹೆಚ್ಚು ಸಾಲವೂ ಸಿಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರೋಸಸಿಂಗ್ ಫೀಸ್ (Processing fees) ಅನ್ನೇ ಕೈಬಿಡಲು ನಿರ್ಧರಿಸಿದೆ. 700 ಹಾಗು ಅದಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಇರುವ ಯೂನಿಯನ್ ಬ್ಯಾಂಕ್ನ ಗ್ರಾಹಕರು ಸಾಲ ಪಡೆಯುವಾಗ ಯಾವುದೇ ಪ್ರೋಸಸಿಂಗ್ ಶುಲ್ಕ ಪಾವತಿಸಬೇಕಿಲ್ಲ. ಇದು ಗೃಹಸಾಲ ಹಾಗೂ ವಾಹನ ಸಾಲಗಳಿಗೆ ಅನ್ವಯಿಸುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಈ ಆಫರ್ 3 ತಿಂಗಳವರೆಗೆ ಮಾತ್ರ ಇದೆ. 2023ರ ಆಗಸ್ಟ್ 16ರಿಂದ ಶುರುವಾಗಿರುವ ಈ ಆಫರ್ ನವೆಂಬರ್ 15ರವರೆಗೂ ಇರಲಿದೆ.
ಉತ್ತಮ ಕ್ರೆಡಿಟ್ ಸ್ಕೋರ್ ಇರುವ ಗ್ರಾಹಕರು ಬೇರೆ ಬ್ಯಾಂಕುಗಳಲ್ಲಿರುವ ತಮ್ಮ ಸಾಲವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವರ್ಗಾಯಿಸಿಕೊಳ್ಳುವಾಗಲೂ ಪ್ರೋಸಸಿಂಗ್ ಶುಲ್ಕಕ್ಕೆ ಸಂಪೂರ್ಣ ವಿನಾಯಿತಿ ಇರಲಿದೆ.
ಯೂನಿಯನ್ ಬ್ಯಾಂಕ್ನಲ್ಲಿ ಶೇ. 7.6ರವರೆಗೂ ಎಫ್ಡಿ ದರಗಳು
ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ. 7ರವರೆಗೆ ಬಡ್ಡಿದರಗಳಿವೆ. 7 ದಿನಗಳಿಂದ ಹಿಡಿದು 10 ವರ್ಷದ ಅವಧಿಯವರೆಗೆ ವಿವಿಧ ಠೇವಣಿಗಳಿಗೆ ಶೇ. 3ರಿಂದ ಶೇ. 7ರವರೆಗೆ ಬಡ್ಡಿ ಕೊಡುತ್ತದೆ ಯೂನಿಯನ್ ಬ್ಯಾಂಕ್. ಹಿರಿಯ ನಾಗರಿಕರಿಗೆ 50 ಬೇಸಿಸ್ ಅಂಕಗಳಷ್ಟು ಹೆಚ್ಚು ಬಡ್ಡಿ ಕೊಡಲಾಗುತ್ತದೆ. ಇವರಗೆ ಕೊಡಲಾಗುವ ಬಡ್ಡಿದರ ಶೆ. 3.50ರಿಂದ ಶೇ. 7.50ರವರೆಗೆ ಇದೆ.
ಇದನ್ನೂ ಓದಿ: ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರದಿಂದ ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ, ಈ ವರ್ಷದ ಕೊನೆಯವರೆಗೂ
ಇನ್ನು, ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದ ತೆರಿಗೆ ಉಳಿತಾಯ ಠೇವಣಿಗಳಿಗೆ ವಾರ್ಷಿಕ ಶೇ. 6.70ರಷ್ಟು ಬಡ್ಡಿ ಆಫರ್ ಇದೆ. ಇನ್ನು, ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 7.20ರಷ್ಟು ಬಡ್ಡಿ ಕೊಡಲಾಗುತ್ತದೆ. ಇದು 5ರಿಂದ 10 ವರ್ಷ ಅವಧಿಯ ಠೇವಣಿಗಳಿಗೆ ಅನ್ವಯ ಆಗುತ್ತದೆ.
ಇದನ್ನೂ ಓದಿ: ಪಿಸಿ, ಲ್ಯಾಪ್ಟಾಪ್ ಆಮದು ನಿರ್ಬಂಧ: ಅಮೆರಿಕ ಸರ್ಕಾರದ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಯತ್ನ
ಷೇರುದಾರರಿಗೆ ಅತಿಹೆಚ್ಚು ಡಿವಿಡೆಂಡ್ ಕೊಟ್ಟ ಯೂನಿಯನ್ ಬ್ಯಾಂಕ್
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2022-23ರ ಹಣಕಾಸು ವರ್ಷಕ್ಕೆ ತನ್ನ ಷೇರುದಾರರಿಗೆ ಒಟ್ಟು 1,712 ಕೋಟಿ ರೂ ಡಿವಿಡೆಂಡ್ನ ಚಿಕ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಬ್ಯಾಂಕ್ನ ಎಂಡಿ ಎ ಮಣಿಮೇಗಲೈ ಅವರು ಚೆಕ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಿದ್ದರು. ಕುತೂಹಲ ಎಂದರೆ ಯಾವುದೇ ವರ್ಷದಲ್ಲಿ ಯೂನಿಯನ್ ಬ್ಯಾಂಕ್ ನೀಡಿರುವ ಅತಿಹೆಚ್ಚು ಮೊತ್ತದ ಲಾಭಾಂಶ ಇದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ