ಈ ರಾಶಿಯವರು ಇಂದು ಸರ್ಕಾರದಿಂದ ಸಿಗುವ ಯೋಜನೆಯ ಫಲವನ್ನು ಪಡೆಯುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿ, ಮಂಗಳವಾರ ಉಪಕರಣದಿಂದ ತೊಂದರೆ, ಪ್ರಿತಿಯ ಹದ ತಪ್ಪುವುದು, ಗೆಲವುವಿಗೆ ಸಂಭ್ರಮ, ಅತಿಥಿ ಸತ್ಕಾರ ಇವೆಲ್ಲ ಇರುವುದು ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ತುಲಾ ರಾಶಿ: ಇಂದು ನಿಮ್ಮ ಜವಾಬ್ದಾರಿಯನ್ನು ಮಾತ್ರ ಮುಂದುವರಿಸುವುದು ಒಳ್ಳೆಯದು. ಕ್ರಮಬದ್ಧವಾದ ಯೋಜನೆಗಳು ಮುಂದಿನ ಕಾರ್ಯಕ್ಕೆ ಸ್ಫೂರ್ತಿಯನ್ನು ಕೊಡಬಹುದು. ಕಾನೂನಿನ ಚಟುವಟಿಕೆಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಇನ್ನೊಬ್ಬರಿಗೆ ಮಾಡುವ ತೊಂದರೆ ನಿಮಗೆ ಬರಲಿದೆ. ಹೊಸ ಕೆಲಸಕ್ಕೆ ಯಾರಿಗೂ ಗೊತ್ತಾಗದಂತೆ ಸೇರುವಿರಿ. ವ್ಯಾಪಾರ ಪಾಲುದಾರರ ಜೊತೆ ವಿವಾದ ಬರುವುದು. ಕಲಾವಿದರು ಉತ್ತಮ ಅವಕಾಶಗಳನ್ನು ಪಡೆಯಬಹುದು. ಮಕ್ಕಳ ಕಡೆಯಿಂದ ನಿರಾಶಾದಾಯಕ ಸಲಹೆಗಳನ್ನು ಕೇಳುವಿರಿ. ವಿದ್ಯಾರ್ಥಿಗಳು ಬೌದ್ಧಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುವಿರಕ. ನಿಮ್ಮ ಬಗ್ಗೆ ಸುಳ್ಳು ವದಂತಿಗಳು ಹರಡಬಹುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ಸಂಬಂಧವಿಲ್ಲದ ವಿಚಾರದಲ್ಲಿ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ.
ವೃಶ್ಚಿಕ ರಾಶಿ: ಇಂದು ಅಮೂಲ್ಯ ವಸ್ತುವಿನ ಮೇಲೆ ಹೂಡಿಕೆಗೆ ಉತ್ತೇಜನ ಸಿಗಲಿದೆ. ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಬೇಕು. ನಿಮ್ಮ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸುವಿರಿ. ಮಕ್ಕಳ ಮಾತಿಗೆ ಒಪ್ಪಿದರೂ ಕಷ್ಟ ಬಿಟ್ಟರೂ ಕಷ್ಟ. ವೃತ್ತಿಯಲ್ಲಿ ಸಹಕಾರವನ್ನು ಅಪೇಕ್ಷಿಸುವಿರಿ. ನಿಮ್ಮ ದೀರ್ಘಕಾಲದ ಯೋಜನೆಗೆ ವೇಗವನ್ನು ಕೊಡಿ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯ ತಯಾರಿಯಲ್ಲಿ ಶ್ರಮಿಸಬೇಕಾಗುತ್ತದೆ. ನಿಮ್ಮವರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗುವಿರಿ. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಲಿದೆ. ಹಳೆಯ ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಲೆಕ್ಕಪತ್ರದ ವಿಚಾರದಲ್ಲಿ ಪಾರದರ್ಶಕತೆ ಇರಲಿ. ಯಾರನ್ನೋ ಸಂಶಯಿಸುತ್ತ ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ.
ಧನು ರಾಶಿ: ನೀವು ಯಾರಿಗಾದರೂ ಕೊಟ್ಟ ಭರವಸೆಯನ್ನು ಪೂರೈಸುವಿರಿ. ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತ ಇರಬೇಡಿ. ನಿಮ್ಮ ಸಂಗಾತಿಯ ವೃತ್ತಿಜೀವನದ ಬಗ್ಗೆ ನೀವು ದೊಡ್ಡ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮಕ್ಕಳ ಶಿಕ್ಷಣದ ವಿಷಯಗಳು ಅನುಕೂಲಕರವಾಗಿರುತ್ತದೆ. ಉಸಿರಾಟದ ಸಮಸ್ಯೆ ಗುಣಮುಖವಾಗುತ್ತದೆ. ಸಮುದಾಯದಲ್ಲಿ ಮನ್ನಣೆ ದೊರೆಯುತ್ತದೆ. ಪ್ರಯಾಣದಿಂದ ಲಾಭವಾಗುತ್ತದೆ. ಕುಟುಂಬದ ಹಿರಿಯರಿಂದ ಬೆಂಬಲ ಸಿಗುತ್ತದೆ. ವಿವಾಹಕ್ಕಾಗಿ ಮಾಡುವ ಶುಭ ಪ್ರಯತ್ನಗಳು ಫಲ ನೀಡುತ್ತವೆ. ನೀವು ಬಹಳ ಸಮಯದ ಅನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಭಿನ್ನಾಭಿಪ್ರಾಯವನ್ನು ಮಾತನಾಡಿ ಪರಿಹರಿಸಬಹುದು. ನಿಮ್ಮ ಹಳೆಯ ತಪ್ಪುಗಳಿಂದ ನೀವು ಕಲಿಯಬೇಕು. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಮನೆಯ ಔಷಧಿಯಿಂದ ಅದನ್ನು ಸರಿ ಮಾಡಿಕೊಳ್ಳಿ. ನಿಮಗೆ ಬೇರೆ ಸಂಸ್ಥೆಯಲ್ಲಿ ಕಾರ್ಯವನ್ನು ನಿರ್ವಹಿಸಲು ಕರೆ ಬರಬಹುದು.
ಮಕರ ರಾಶಿ: ಇಂದಿನ ಕೆಲವು ಸಂದರ್ಭದಲ್ಲಿ ಅಗತ್ಯವನ್ನು ಹೇಳಬೇಕಾಗಬಹುದು. ಯಾವುದೇ ಕೆಲಸದಲ್ಲಿ ನೈತಿಕತೆಯನ್ನು ಬಿಟ್ಟು ಮುನ್ನಡೆಯುವುದು ಬೇಡ. ಪ್ರತಿಯೊಂದು ಪ್ರಯತ್ನಕ್ಕೂ ಪ್ರತಿಫಲ ದೊರೆಯುತ್ತದೆ. ಇಂದಿನ ಆದಾಯ ಸ್ಥಿರವಾಗಿರುತ್ತದೆ. ಹೊಸ ವಸ್ತುಗಳನ್ನು ಖರೀದಿಸಲಾಗುತ್ತದೆ. ಪ್ರೀತಿಪಾತ್ರರ ಪ್ರೋತ್ಸಾಹದಿಂದ ಕೆಲಸಗಳು ನೆರವೇರುತ್ತವೆ. ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹೊಸ ಯೋಜನೆಯನ್ನು ಪಡೆಯಲು ಅವಕಾಶಗಳು ಬರಲಿವೆ. ವೃತ್ತಿ ಕ್ಷೇತ್ರದಲ್ಲಿ ನೀವು ಉತ್ತಮ ಸ್ಥಾನವನ್ನು ಪಡೆಯಬಹುದು. ನಿಮ್ಮ ಸಂಪೂರ್ಣ ಗಮನವು ವೈಯಕ್ತಿಕ ವಿಷಯಗಳ ಮೇಲೆ ಇರುತ್ತದೆ. ನಿಮ್ಮ ಸಂತೋಷಕ್ಕಾಗಿ ನಿಮ್ಮ ಸ್ಥಾನ ಇರುವುದಿಲ್ಲ. ಮಕ್ಕಳ ಪಕ್ಷದಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಜೀವನ ಸಂಗಾತಿಯಿಂದ ನೀವು ಸಾಕಷ್ಟು ಬೆಂಬಲ ಪಡೆಯುವಿರಿ. ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲಪಡೆದವರು ನಿಮ್ಮನ್ನು ಪೀಡಿಸಬಹುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕಗಕೇ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ.
ಕುಂಭ ರಾಶಿ: ನಿಮ್ಮ ತಪ್ಪು ಮಾತುಗಳಿಗೆ ಇತರರಿಂದ ಅನುಮೋದನೆ ಸಿಗಬಹುದು. ಸರ್ಕಾರದಿಂದ ಸಿಗುವ ಯೋಜನೆಯ ಫಲವನ್ನು ಪಡೆಯುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಭಿವೃದ್ಧಿಯು ನೀವು ಮಾಡುವ ಕೆಲಸದ ವಿಧಾನದಿಂದ ಬದಲಾಗುತ್ತದೆ. ಹಳೆಯ ಸಾಲಗಳು ವಸೂಲಿಯಾಗಲಿವೆ. ಮಾನಸಿಕವಾಗಿ ಸಂತೋಷ ಇರುತ್ತೆ. ಮಕ್ಕಳ ವಿಷಯದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಮನೆಯನ್ನು ನವೀಕರಿಸಲು ಸಹ ನೀವು ಹೆಚ್ಚು ಗಮನಹರಿಸುತ್ತೀರಿ. ಕುಟುಂಬದ ಯಾವುದೇ ಸದಸ್ಯರಿಗೆ ನೀಡಿದ ಭರವಸೆಯನ್ನು ನೀವು ಪೂರೈಸಬೇಕಾಗುತ್ತದೆ. ಇಲ್ಲದಿದ್ದರೆ ಅವರು ನಿಮ್ಮ ಜೊತೆ ಅಸಮಾಧಾನಕ್ಕೆ ಕಾರಣ. ಆಕಸ್ಮಿಕ ಧನಲಾಭದಿಂದ ಸಂತಸ. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಉತ್ಸಾಹ. ನಿಮ್ಮ ಪ್ರೀತಿಗೆ ಬೆಲೆ ಸಿಗದೇಹೋದರೂ ಖುಷಿಯಿಂದಲೇ ಇರುವಿರಿ. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ.
ಮೀನ ರಾಶಿ: ಯಾವುದೇ ಕೆಲಸದಲ್ಲಿ ಪೂರ್ಣ ಲಕ್ಷ್ಯವಿರದು. ಬಂಧುಗಳ ಜೊತೆ ಆಪ್ತತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪಾಲುದಾರರ ಜೊತೆಗೆ ಓಡಾಟ. ಕೆಟ್ಟ ಸ್ನೇಹದಿಂದ ದೂರವಿರುವುದು ಉತ್ತಮ. ನಿಮ್ಮ ಹಣವನ್ನು ವಿವಿಧ ಕಡೆಗೆ ಖರ್ಚುಮಾಡಿಸುವರು. ಇದರ ವೆಚ್ಚದ ನಿಯಂತ್ರಣವನ್ನು ಮಾಡಿಕೊಳ್ಳಿ. ನೀವು ಇಂದಿನ ಗುರಿಯನ್ನು ಸುಲಭವಾಗಿ ಸಾಧಿಸುವಿರಿ. ನಿಮ್ಮ ವ್ಯಾಪಾರ ಚಟುವಟಿಕೆಯು ಎಂದಿಗಿಂತ ಚುರುಕಾಗಿರುವುದು. ಕಾನೂನಿನ ತಿಳಿವಳಿಕೆ ಇರದೇ ವ್ಯವಹಾರದಲ್ಲಿ ನಿಮ್ಮ ಗತಿಗೆ ಮೆಚ್ಚುಗೆ ಇರಲಿದೆ. ಸರಕು ವಹಿವಾಟಿನ ವಿಷಯಗಳಲ್ಲಿ ನೀವು ಅನಾದರ ತೋರಿಸುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಸಹೋದರನಿಂದ ಆರ್ಥಿಕ ಸಹಕಾರವನ್ನು ನಿರೀಕ್ಷಿಸುವಿರಿ. ಆರೋಗ್ಯವು ಉತ್ತಮವಾಗಿಸಿಕೊಂಡು ಮೊದಲಿನ ಸ್ಥಿತಿಗೆ ಮರಳುವಿರಿ. ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟಮಾಡುವ ಆಲೋಚನೆ ಇರಲಿದೆ. ನಿಮ್ಮ ಸ್ನೇಹಿತರಲ್ಲಿ ಇಂದು ದೊಡ್ಡ ಸಾಲವನ್ನು ಕೇಳುವಿರಿ.