ಅದಾನಿ ಹಿಂಡನ್ಬರ್ಗ್ ಪ್ರಕರಣ: ನ. 8ರಷ್ಟರಲ್ಲಿ ಅಂತಿಮ ದಾಖಲೆ ಸಲ್ಲಿಸುವಂತೆ ಎಲ್ಲರಿಗೂ ಸುಪ್ರೀಂಕೋರ್ಟ್ ಆದೇಶ

|

Updated on: Nov 06, 2023 | 3:40 PM

Adani-Hindenburg Case: ಅದಾನಿ ಹಿಂಡನ್ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಷ್ಟೂ ಬೇಗ ವಿಚಾರಣೆ ಆರಂಭಿಸುವಂತೆ ಸುಪ್ರೀಂಕೋರ್ಟ್​ನಲ್ಲಿ ಮನವಿ ಅರ್ಜಿದಾರರೊಬ್ಬರು ಮಾಡಿದ್ದಾರೆ. ಅರ್ಜಿದಾರನ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಕೋರ್ಟ್​ಗೆ ಈ ಮನವಿ ಮಾಡಿದ್ದಾರೆ. ಈ ಪ್ರಕರಣವನ್ನು ಲಿಸ್ಟ್​ಗೆ ಹಾಕಿಸಲು ಅರ್ಜಿದಾರರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಸಾಧ್ಯವಾಗಿಲ್ಲ ಎಂದು ವಕೀಲ ಪ್ರಶಾಂತ್ ಭೂಷನ್ ಹೇಳಿದರು. ಇನ್ನೊಂದೆಡೆ, ಸಾಲಿಸಿಟರ್ ಜನರಲ್ ಅವರು, ಸರ್ಕಾರ ಈ ಪ್ರಕರಣದಲ್ಲಿ ಎರಡು ಪುಟಗಳ ದಾಖಲೆಯನ್ನು ಸಲ್ಲಿಸಬೇಕಿದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.

ಅದಾನಿ ಹಿಂಡನ್ಬರ್ಗ್ ಪ್ರಕರಣ: ನ. 8ರಷ್ಟರಲ್ಲಿ ಅಂತಿಮ ದಾಖಲೆ ಸಲ್ಲಿಸುವಂತೆ ಎಲ್ಲರಿಗೂ ಸುಪ್ರೀಂಕೋರ್ಟ್ ಆದೇಶ
ಸುಪ್ರೀಂಕೋರ್ಟ್
Follow us on

ನವದೆಹಲಿ, ನವೆಂಬರ್ 6: ಅದಾನಿ ಹಿಂಡನ್ಬರ್ಗ್ ಪ್ರಕರಣಕ್ಕೆ (Adani Hindenburg case) ಸಂಬಂಧಿಸಿದಂತೆ ಆದಷ್ಟೂ ಬೇಗ ವಿಚಾರಣೆ ಆರಂಭಿಸುವಂತೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿದಾರರೊಬ್ಬರು ಮನವಿ ಮಾಡಿದ್ದಾರೆ. ಅರ್ಜಿದಾರನ (petitioner) ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಕೋರ್ಟ್​ಗೆ ಈ ಮನವಿ ಮಾಡಿದ್ದಾರೆ. ಆಗಸ್ಟ್ 28ಕ್ಕೆ ವಿಚಾರಣೆ ನಡೆಯಲು ಲಿಸ್ಟ್ ಆಗಿತ್ತಾದರೂ ಅದು ಮುಂದಕ್ಕೆ ಹೋಗಿದೆ. ಈಗ ಮತ್ತೆ ಲಿಸ್ಟ್ ಆಗುತ್ತಿಲ್ಲ. ಆದಷ್ಟೂ ಬೇಗ ಪ್ರಕರಣವು ಲಿಸ್ಟ್ ಆಗಿ, ವಿಚಾರಣೆ ಶುರುವಾಗಲಿ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಈ ಅರ್ಜಿಯನ್ನು ಆಲಿಸಿದ್ದು, ರಿಜಿಸ್ಟ್ರಾರ್​ಗೆ ಇದನ್ನು ಗಮನಿಸಲು ಹೇಳುವುದಾಗಿ ತಿಳಿಸಿತು. ಹಾಗೆಯೇ, ನಾಳೆ ಇದನ್ನು ಮತ್ತೆ ಪ್ರಸ್ತಾಪಿಸುವಂತೆಯೂ ಅರ್ಜಿದಾರರಿಗೆ ಸೂಚಿಸಿತು.

ಈ ಪ್ರಕರಣವನ್ನು ಲಿಸ್ಟ್​ಗೆ ಹಾಕಿಸಲು ಅರ್ಜಿದಾರರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಸಾಧ್ಯವಾಗಿಲ್ಲ ಎಂದು ವಕೀಲ ಪ್ರಶಾಂತ್ ಭೂಷನ್ ಹೇಳಿದರು. ಇನ್ನೊಂದೆಡೆ, ಸಾಲಿಸಿಟರ್ ಜನರಲ್ ಅವರು, ಸರ್ಕಾರ ಈ ಪ್ರಕರಣದಲ್ಲಿ ಎರಡು ಪುಟಗಳ ದಾಖಲೆಯನ್ನು ಸಲ್ಲಿಸಬೇಕಿದೆ ಎಂಬ ವಿಚಾರವನ್ನು ತಿಳಿಸಿದರು. ಬಿಸಿನೆಸ್ ಟುಡೆಯಲ್ಲಿ ಬಂದ ವರದಿ ಪ್ರಕಾರ, ಸಿಜೆಐ ಚಂದ್ರಚೂಡ್ ಅವರು ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ ಸಂಬಂಧಿತ ಎಲ್ಲರೂ ಕೂಡ ಬುಧವಾರದೊಳಗೆ (ನ. 8) ಅಂತಿಮ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾದೇವ ಬೆಟ್ಟಿಂಗ್​ ಆ್ಯಪ್ ಸೇರಿ ಇತರೇ 21 ಆ್ಯಪ್​ ನಿಷೇಧ: ಕೇಂದ್ರ ಸರ್ಕಾರದ ಮಹತ್ವದ ಆದೇಶ

ಅದಾನಿ ಗ್ರೂಪ್​ನಿಂದ ಷೇರು ಅಕ್ರಮಗಳಾಗಿವೆ ಎಂದು ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಸ್ಫೋಟಕ ತನಿಖಾ ವರದಿ ಬಿಡುಗಡೆ ಮಾಡಿತ್ತು. ಆ ಘಟನೆ ಷೇರು ಮಾರುಕಟ್ಟೆಯನ್ನು ಅಲುಗಾಡಿಸಿತ್ತು. ಅದರಲ್ಲೂ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳ ಬೆಲೆ ಪಾತಾಳಕ್ಕೆ ಕುಸಿದಿತ್ತು. ವಿಶ್ವದ ನಂಬರ್ 3ನೇ ಶ್ರೀಮಂತರಾಗಿದ್ದ ಗೌತಮ್ ಅದಾನಿ 30ಕ್ಕೂ ಹೆಚ್ಚು ಸ್ಥಾನಗಳಷ್ಟು ಕುಸಿದಿದ್ದರು.

ಈ ಪ್ರಕರಣ ಭಾರತದಲ್ಲಿ ರಾಜಕೀಯ ತಿರುವು ಪಡೆಯಿತು. ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಇದೇ ವೇಳೆ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡು, ಸೆಬಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಮಾರ್ಚ್ 2ರಂದು ಆದೇಶಿಸಿತು.

ಸೆಬಿ ಈ ಪ್ರಕರಣದಲ್ಲಿ 24 ಅಂಶಗಳನ್ನು ತನಿಖೆ ಮಾಡಿದೆ. ಇದರಲ್ಲಿ 22 ತನಿಖೆಗಳು ಅಂತಿಮಗೊಂಡಿವೆ. ಇನ್ನೆರಡು ತನಿಖೆಯಲ್ಲಿ ಮಧ್ಯಂತರ ವರದಿಗಳು ಸಿದ್ಧವಾಗಿವೆ. ನವೆಂಬರ್ 8ಕ್ಕೆ ದೂರುದಾರರು, ಅದಾನಿ ಪರ ವಕೀಲರು, ಸರ್ಕಾರ ಮತ್ತು ಸೆಬಿ ಎಲ್ಲರೂ ಕೂಡ ಅಂತಿಮ ದಾಖಲೆಗಳನ್ನು ಸುಪ್ರೀಂ ನ್ಯಾಯಪೀಠಕ್ಕೆ ಸಲ್ಲಿಸಬೇಕಾಗುತ್ತದೆ. ಅದಾದ ಬಳಿಕ ಮುಂದಿನ ವಿಚಾರಣೆಗೆ ನ್ಯಾಯಪೀಠ ದಿನ ನಿಗದಿ ಮಾಡಲಿದೆ.

ಇದನ್ನೂ ಓದಿ: ಅದಾನಿ ವಿಲ್ಮರ್​ನ ಸಂಪೂರ್ಣ ಪಾಲು ಬಿಟ್ಟುಕೊಡಲು ಅದಾನಿ ಗ್ರೂಪ್ ಮುಂದು; ಎಣ್ಣೆ ಬಿಸಿನೆಸ್​ನಿಂದ ಅದಾನಿ ಹೊರಬರೋದು ಯಾಕೆ?

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಮಾಡಿರುವ ಆರೋಪಗಳನ್ನು ಅದಾನಿ ಗ್ರೂಪ್ ಬಲವಾಗಿ ತಳ್ಳಿಹಾಕಿದೆ. ಹಿಂಡನ್ಬರ್ಗ್ ಸಂಸ್ಥೆಗೆ ನೈತಿಕತೆ ಇಲ್ಲ. ಅದು ಬರೀ ಸುಳ್ಳುಗಳನ್ನು ಹೇಳುತ್ತಿದೆ ಎಂಬುದು ಅದಾನಿ ಗ್ರೂಪ್ ಪ್ರತ್ಯಾರೋಪ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Mon, 6 November 23