ಹಿಂದೂ ಅವಿಭಕ್ತ ಕುಟುಂಬದವರು HUF ಕಾಯ್ದೆಯಡಿ PAN ಕಾರ್ಡ್ ಮಾಡಿಸಿ, ತೆರಿಗೆ ಉಳಿಸಬಹುದು ಎಂಬುದು ಗೊತ್ತೆ?
ನೀವು ಹಿಂದೂ ಅವಿಭಜಿತ ಕುಟುಂಬವನ್ನು ಹೊಂದಿದ್ದರೆ, HUF ಕಾಯ್ದೆಯಡಿ ಬ್ಯಾಂಕ್ ಖಾತೆ ತೆರೆದು ಪಾನ್ ಕಾರ್ಡ್ ಮಾಡಿಸಿ. ನಂತರ ಆದಾಯ ತೆರಿಗೆಯಲ್ಲಿ ಕಡಿತದ ಲಾಭವನ್ನು ಪಡೆಯಿರಿ.
ನೀವು ಹಿಂದೂ ಅವಿಭಕ್ತ ಕುಟುಂಬದ ಅಡಿಯಲ್ಲಿ ಬರುತ್ತೀರಾ? ಹಾಗಿದ್ದರೆ ಈ ಕೂಡಲೇ ಹಿಂದೂ ಅವಿಭಕ್ತ ಕುಟುಂಬ (HUF) ಕಾಯ್ದೆಯಡಿ ಪಾನ್ ಕಾರ್ಡ್ (Pan Card) ಮಾಡಿಸುವುದು ಉತ್ತಮ. ಇದರಲ್ಲಿ ಹಿಂದೂಗಳಲ್ಲದೆ ಬೌದ್ಧ, ಜೈನ, ಸಿಖ್ಖರು ಕೂಡ ಅವಿಭಕ್ತ ಕುಟುಂಬದ ಅಡಿಯಲ್ಲಿ ತಮ್ಮ ಬ್ಯಾಂಕ್ ಖಾತೆ (Bank Account)ತೆರೆದು, ಲಾಭ ಪಡೆಯಬಹುದು. ಹಿಂದೂ ಕುಟುಂಬದವರು ಒಟ್ಟುಗೂಡಿ ಒಂದು ಘಟಕವನ್ನು ರಚಿಸಬೇಕು. ಆ ಮೂಲಕ ಹೆಚ್ಚುವರಿ ತೆರಿಗೆ (Tax) ಪಾವತಿಸುವುದನ್ನು ತಪ್ಪಿಸಬಹುದು. ಈ ಸಂಗತಿ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಿದ್ದರೆ ಈ ಹಿಂದೂ ಅವಿಭಕ್ತ ಕುಟುಂಬದ ಅಡಿಯ ಖಾತೆ ಪ್ರಯೋಜನಗಳೇನು? ಆ ಮಾಹಿತಿಯನ್ನೇ ಇಲ್ಲಿ ತಿಳಿಸುತ್ತಿದ್ದೇವೆ.
HUF ಎಂದರೇನು?
ಹಿಂದೂ ಜನಾಂಗದವರು ಕೂಡಿ ರಚಿಸುವ ಘಟಕವನ್ನು ಹಿಂದೂ ಅವಿಭಕ್ತ ಕುಟುಂಬ ಎಂದು ಕರೆಯುತ್ತಾರೆ. ಉದಾಹರಣೆಗೆ: ರಾಮು ಮತ್ತು ಆತನ ಹೆಂಡತಿಗೆ ಇಬ್ಬರು ಮಕ್ಕಳಿರುತ್ತಾರೆ. ಒಂದೊಮ್ಮೆ ನಾಲ್ಕೂ ಮಂದಿ HUF ಅಡಿಯಲ್ಲಿ ಖಾತೆಯನ್ನು ತೆರೆಯಲು ನಿರ್ಧರಿಸಿದರೆ ಎಲ್ಲರಿಗೂ HUF ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು.
ಪಾನ್ ಕಾರ್ಡ್ ಪಡೆಯುವುದು ಹೇಗೆ? ಷರತ್ತುಗಳೇನು?
ಬ್ಯಾಂಕ್ನಲ್ಲಿ ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು. ಅದರ ನಂತರ, PAN ಅನ್ನು ಪಡೆಯಬಹುದು. ಮುಂದೆ ಕುಟುಂಬವು ತೆರಿಗೆ ಕಡಿತದ ಲಾಭ ಪಡೆಯಬಹುದು. ಮೊದಲೇ ಹೇಳಿದಂತೆ, ಹಿಂದೂಗಳಲ್ಲದೆ ಬೌದ್ಧರು, ಸಿಖ್ಖರು ಹಾಗೂ ಜೈನರೂ HUF ಅನ್ನು ರಚಿಸಬಹುದು. ಈ ಕಾಯ್ದೆಯು ಸಾಮಾನ್ಯ ಪೂರ್ವಜರನ್ನು ಮತ್ತು ಅವರ ಪತ್ನಿಯರು ಮತ್ತು ಅವಿವಾಹಿತ ಹೆಣ್ಣುಮಕ್ಕಳನ್ನು ಒಳಗೊಂಡಂತೆ ಅವರ ಎಲ್ಲ ವಂಶಾವಳಿಯನ್ನು ಒಳಗೊಂಡಿರುತ್ತದೆ. ಹೊಸದಾಗಿ ಮದುವೆಯಾಗಿ ಕುಟುಂಬಕ್ಕೆ ಸೇರ್ಪಡೆಗೊಂಡ ಸದಸ್ಯರಿಗೂ ತಾನೇತಾನಾಗಿ ಅನ್ವಯ ಆಗುತ್ತದೆ.
ಇದನ್ನೂ ಓದಿ: ವಾಣಿಜ್ಯ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
HUF ತನ್ನದೇ ಷರತ್ತುಗಳನ್ನು ಹೊಂದಿದ್ದು, ಘಟಕವನ್ನು ರಚಿಸಿದ ನಂತರ ಸದಸ್ಯರಿಗೆ ಬಂದ ಉಡುಗೊರೆ, ಉಯಿಲು ಅಥವಾ ಪೂರ್ವಜರ ಆಸ್ತಿಯನ್ನು ಔಪಚಾರಿಕವಾಗಿ ನೋಂದಾಯಿಸಬೇಕು. ಅದಕ್ಕೆ ಕಾನೂನು ಪತ್ರ ಇರಬೇಕು. ಪತ್ರವು ಹಿಂದೂ ಅವಿಭಕ್ತ ಕುಟುಂಬದ ಸದಸ್ಯರು ಮತ್ತು ವ್ಯವಹಾರದ ವಿವರಗಳನ್ನು ಹೊಂದಿರಬೇಕು.
HUF ಅನುಕೂಲಗಳು
- ಹೆಚ್ಚಿನ ಕುಟುಂಬಗಳು HUF ಅನ್ನು ರೂಪಿಸಲು ಒಂದು ಪ್ರಮುಖ ಕಾರಣವೆಂದರೆ ಅವರು ಎರಡು PAN ಕಾರ್ಡ್‌ಗಳನ್ನು ಪಡೆಯಬಹುದು ಮತ್ತು ತೆರಿಗೆಗಳನ್ನು ಪ್ರತ್ಯೇಕವಾಗಿ ಸಲ್ಲಿಸಬಹುದು.
- ಸದಸ್ಯರು ಇತರ ವ್ಯಕ್ತಿಗಳಂತೆ ತೆರಿಗೆಗಳನ್ನು ಪಾವತಿಸಲು ಹೊಣೆಗಾರರಾಗಿರುತ್ತಾರೆ.
- HUF ನ ಮುಖ್ಯಸ್ಥರು ಇತರ ಸದಸ್ಯರ ಪರವಾಗಿ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಲು ಎಲ್ಲ ಹಕ್ಕುಗಳನ್ನು ಹೊಂದಿರುತ್ತಾರೆ.
- ನೀವು HUF ನ ವಿವಿಧ ತೆರಿಗೆಯ ಘಟಕಗಳನ್ನು ರಚಿಸಬಹುದು. ಸೆಕ್ಷನ್ 80ರ ಅಡಿಯಲ್ಲಿ ಕಡಿತಗಳು ಮತ್ತು ಇತರ ವಿನಾಯಿತಿಗಳನ್ನು ಆದಾಯ ತೆರಿಗೆ ರಿಟರ್ನ್‌ನಲ್ಲಿ ಕ್ಲೇಮ್ ಮಾಡಬಹುದು.
- ತನ್ನ ಸದಸ್ಯರಿಗೆ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
ಹಾಗಿದ್ದರೆ ಅನನುಕೂಲಗಳೇನು?
- ಎಲ್ಲ ಸದಸ್ಯರು ಆಸ್ತಿಯ ಮೇಲೆ ಸಮಾನ ಹಕ್ಕುಗಳನ್ನು ಹೊಂದಿರುವುದರಿಂದ ಎಲ್ಲ ಸದಸ್ಯರ ಒಪ್ಪಿಗೆಯಿಲ್ಲದೆ ಸಾಮಾನ್ಯ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಒಮ್ಮೆ ಹಿಂದೂ ಅವಿಭಕ್ತ ಕುಟುಂಬ ಖಾತೆಯನ್ನು ಕ್ಲೋಸ್ ಮಾಡಿದರೆ ನಂತರ ಆಸ್ತಿಯನ್ನು ಕುಟುಂಬದ ಎಲ್ಲ ಸದಸ್ಯರ ನಡುವೆ ಹಂಚಬೇಕಾಗುತ್ತದೆ. ಇದು ದೊಡ್ಡ ಕಾರ್ಯವಾಗಬಹುದು.
- ಸದಸ್ಯರು ಆಸ್ತಿಗಾಗಿ ವಿವಾದವನ್ನು ಹೊಂದಿದ್ದು, ವಿಚ್ಛೇದನ ಪ್ರಕರಣಗಳು ಹೆಚ್ಚಾಗಿವೆ. ಹೀಗಿದ್ದಾಗ ಹಿಂದೂ ಅವಿಭಕ್ತ ಕುಟುಂಬವನ್ನು ವಿಸರ್ಜಿಸಬೇಕಾದರೆ ಎಲ್ಲರ ಒಪ್ಪಿಗೆ ಬೇಕು. ಇನ್ನೊಂದು ಆಸ್ತಿಗಳನ್ನು ಸದಸ್ಯರಿಗೆ ವಿತರಿಸಬೇಕಾಗುತ್ತದೆ. ಇದು ಬಹಳಷ್ಟು ವಿವಾದಗಳಿಗೆ ಕಾರಣವಾಗಬಹುದು ಮತ್ತು ಸಾಕಷ್ಟು ಕಾನೂನು ಹೋರಾಟಗಳು ನಡೆಯಬಹುದು.
- ಆದಾಯ ತೆರಿಗೆ ಇಲಾಖೆಯಿಂದ ಹಿಂದೂ ಅವಿಭಕ್ತ ಕುಟುಂಬವನ್ನು ಪ್ರತ್ಯೇಕ ತೆರಿಗೆಯ ಘಟಕವಾಗಿ ಗುರುತಿಸಲಾಗಿದೆ. ಆದಾಗ್ಯೂ, ವಿಭಕ್ತ ಕುಟುಂಬಗಳು ರೂಢಿಯಲ್ಲಿರುವ ಇಂದಿನ ಕಾಲದಲ್ಲಿ, ಅವಿಭಕ್ತ ಕುಟುಂಬವು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆ. ದಂಪತಿಗಳು ಅಥವಾ ಕುಟುಂಬಗಳು ಸಾಮಾನ್ಯ ಮನೆಯ ಖರ್ಚಿನ ಬಗ್ಗೆ ಜಗಳವಾಡುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಆಸ್ತಿಗಳನ್ನು ಸಂಗ್ರಹಿಸುವುದನ್ನು ಮರೆತುಬಿಡುತ್ತವೆ. ವಿಚ್ಛೇದನ ದರಗಳು ಹೆಚ್ಚುತ್ತಿವೆ. ಇದರಿಂದ, ತೆರಿಗೆ ವಾಹನವಾಗಿ ಹಿಂದೂ ಅವಿಭಕ್ತ ಕುಟುಂಬ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ.
- ಹಿಂದೂ ಅವಿಭಕ್ತ ಕುಟುಂಬ ರಚನೆಯಾಗಿ ವಿಭಜನೆಯು ನಡೆಯದ ಹೊರತು ನೀವು ಅದರ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವುದನ್ನು ಮುಂದುವರಿಸಬೇಕಾಗುತ್ತದೆ. ವಿಭಜನೆಗಾಗಿ ಮೌಲ್ಯಮಾಪಕ ಅಧಿಕಾರಿ, ಅಂತಹ ಕ್ಲೈಮ್ ಅನ್ನು ಸ್ವೀಕರಿಸಿದ ನಂತರ, ಸದಸ್ಯರಿಗೆ ಸರಿಯಾದ ಸೂಚನೆ ನೀಡಿದ ನಂತರ ವಿಚಾರಣೆಯನ್ನು ಮಾಡಬೇಕು. ವಿಭಜನೆಯಾದ ಆಸ್ತಿಯಿಂದ ಬರುವ ಆದಾಯವನ್ನು ಸದಸ್ಯರ ವೈಯಕ್ತಿಕ ಆದಾಯವಾಗಿ ತೆರಿಗೆ ವಿಧಿಸಲಾಗುತ್ತದೆ. ಸದಸ್ಯನು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಮತ್ತೊಂದು ಅವಿಭಕ್ತ ಕುಟುಂಬವನ್ನು ರಚಿಸಿದರೆ, ಮೂಲ ಹಿಂದೂ ಅವಿಭಕ್ತ ಕುಟುಂಬದಿಂದ ವರ್ಗಾಯಿಸಲಾದ ಆಸ್ತಿಯ ಆದಾಯವನ್ನು ಹೊಸ HUFಕ್ಕೆ ತೆರಿಗೆ ವಿಧಿಸಲಾಗುತ್ತದೆ.
ತೆರಿಗೆ ಉಳಿಸುವುದು ಹೇಗೆ?
ರಾಮು ಅವರು ತಂದೆಯ ಮರಣದ ನಂತರ ತಮ್ಮ ಹೆಂಡತಿ, ಮಗ ಮತ್ತು ಮಗಳನ್ನು ಸದಸ್ಯರಾಗಿ ಹಿಂದೂ ಅವಿಭಕ್ತ ಕುಟುಂಬ ಪ್ರಾರಂಭಿಸಲು ನಿರ್ಧರಿಸಿದರು. ರಾಮು ಅವರಿಗೆ ಒಡಹುಟ್ಟಿದವರಿಲ್ಲದ ಕಾರಣ, ಅವರ ತಂದೆ ಹೊಂದಿರುವ ಆಸ್ತಿಯನ್ನು ಕುಟುಂಬದ ಹೆಸರಿಗೆ ವರ್ಗಾಯಿಸಲಾಯಿತು. ರಾಮು ತಂದೆ ಹೊಂದಿರುವ ಆಸ್ತಿಯು ವಾರ್ಷಿಕ 7.5 ಲಕ್ಷ ರೂ.ಗಳ ಆದಾಯ ಗಳಿಸುತ್ತದೆ. ರಾಮು ಅವರ ಸಂಬಳದಿಂದ 20 ಲಕ್ಷ ರೂ. ಆದಾಯವಿದೆ. ಈಗ ರಾಮು, ಹಿಂದೂ ಅವಿಭಕ್ತ ಕುಟುಂಬ ರಚಿಸುವ ಮೂಲಕ 1,54,500 ರೂ. ತೆರಿಗೆ ಉಳಿಸುತ್ತಾರೆ. ರಾಮು ಮತ್ತು ಕುಟುಂಬದ ಸದಸ್ಯರು ಸೆಕ್ಷನ್ 80C ಅಡಿಯಲ್ಲಿ ಕಡಿತವನ್ನು ಪಡೆಯಬಹುದು.
ಇದನ್ನೂ ಓದಿ: Video: ಶಹಬ್ಬಾಸ್ ಹುಡುಗ; ಜಪಾನಿ ಮಗು ಬಾಯಲ್ಲಿ ಹಿಂದಿ ಕೇಳಿ ಖುಷಿಪಟ್ಟ ನರೇಂದ್ರ ಮೋದಿ
ಹಿಂದೂ ಅವಿಭಕ್ತ ಕುಟುಂಬದ ಕರ್ತಾ ಯಾರು?
ಹಿಂದೂ ಅವಿಭಕ್ತ ಕುಟುಂಬದ ಮುಖ್ಯಸ್ಥನನ್ನು ಕಾರ್ತಾ ಎಂದು ಕರೆಯಲಾಗುತ್ತದೆ. ಅವನು ಕುಟುಂಬದ ಅತ್ಯಂತ ಹಿರಿಯ ಪುರುಷನಾಗಿರುತ್ತಾನೆ. ಹಾಗಿದ್ದರೆ ಮಹಿಳೆ ಕುಟುಂಬದ ಸದಸ್ಯರಾಗಿದ್ದರೆ? ಜನವರಿ 2016 ರವರೆಗೆ, ಮಹಿಳೆ ಕರ್ತಾ ಆಗಲು ಸಾಧ್ಯವಿರಲಿಲ್ಲ. ಆದರೆ, ದೆಹಲಿ ಹೈಕೋರ್ಟ್ ಮಹಿಳೆಯೊಬ್ಬರು ಹಿಂದೂ ಅವಿಭಕ್ತ ಕುಟುಂಬದ ಕರ್ತಾ ಎಂದು ತೀರ್ಪು ನೀಡಿತು. ಆದರೆ, ಆದಾಯ ತೆರಿಗೆ ಕಾಯಿದೆಯಲ್ಲಿ ಇನ್ನೂ ಅಳವಡಿಸಲಾಗಿಲ್ಲ. ಕುಟುಂಬದ ಹಿರಿಯ ಕೊಂಡಿ (ಕರ್ತಾ) ಕಳಚಿತೆಂದರೆ, ಮೃತ ಕರ್ತಾನ ಹೆಂಡತಿ ಜೀವಂತವಾಗಿದ್ದರೂ ಕುಟುಂಬದ ಹಿರಿಯ ಪುರುಷ ಕರ್ತಾ ಆಗುತ್ತಾನೆ.
ಕಾಪರ್ಸೆನರ್ ಅಂದರೆ ಯಾರು?
ಪುರುಷ ಸದಸ್ಯರನ್ನು ಕಾಪರ್ಸೆನರ್‌ಗಳು ಎಂದು ಕರೆಯಲಾಗುತ್ತದೆ. ಆದರೆ ಸ್ತ್ರೀಯರನ್ನು ಕೇವಲ ಸದಸ್ಯರು ಎಂದು ಕರೆಯಲಾಗುತ್ತದೆ. ಎರಡರ ನಡುವಿನ ವ್ಯತ್ಯಾಸವೆಂದರೆ ಯಾವುದೇ ಕೋಪರ್ಸೆನರ್‌ಗಳು ಕುಟುಂಬದ ವಿಭಜನೆಯನ್ನು ಕೋರಬಹುದು. ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳು ಅವಿವಾಹಿತ ಹೆಣ್ಣುಮಕ್ಕಳನ್ನು ಕಾಪರ್ಸೆನರ್ ಆಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವುದನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ಮಹಿಳಾ ಸದಸ್ಯರಿಗೆ ಈ ಹಕ್ಕು ನೀಡಿಲ್ಲ. ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯಿದೆ 2005 ಜಾರಿಗೆ ಬಂದ ನಂತರದಿಂದ ತಾರತಮ್ಯವನ್ನು ತೆಗೆದುಹಾಕಲಾಯಿತು. ಅದೇ ರೀತಿಯಲ್ಲಿ ಗಂಡುಮಕ್ಕಳು ಮತ್ತು ಕುಟುಂಬದ ಆಸ್ತಿಗಳಲ್ಲಿ ಪುತ್ರರಂತೆಯೇ ಹಕ್ಕುಗಳನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ಮದುವೆ ದಿಬ್ಬಣದ ಕ್ರೂಸರ್ ಅಪಘಾತದಲ್ಲಿ 9 ಜನ ಸಾವು ಪ್ರಕರಣ: ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಘೋಷಿಸಿದ ಸಿಎಂ ಬೊಮ್ಮಾಯಿ
ವಿದೇಶದಲ್ಲಿ ನೆಲೆಸಿದ್ದರೆ ಏನು ಕಥೆ?
ಹಿಂದೂ ಅವಿಭಕ್ತ ಕುಟುಂಬದ ಸದಸ್ಯರು ಆಗಲು ಯಾವಾಗಲೂ ಭಾರತದ ನಿವಾಸಿಯಾಗಿರಲೇ ಬೇಕೆಂದಿಲ್ಲ. ಕುಟುಂಬದ ನಿಯಂತ್ರಣ ಮತ್ತು ನಿರ್ವಹಣೆಯು ಭಾರತದ ಹೊರಗೆ ನೆಲೆಗೊಂಡಿದ್ದರೆ, ಹಿಂದೂ ಅವಿಭಕ್ತ ಕುಟುಂಬ ಅನಿವಾಸಿಯಾಗಿರುತ್ತದೆ. ವಸತಿ ಸ್ಥಿತಿಯನ್ನು ಕರ್ತಾ ಎಲ್ಲಿ ವಾಸಿಸುತ್ತಾನೆ ಎಂಬುದರ ಆಧಾರದ ಮೇಲೆ ನಿರ್ಧರಿಸಲಾಗುವುದಿಲ್ಲ. ಆದರೆ ಕುಟುಂಬವನ್ನು ಎಲ್ಲಿಂದ ನಿರ್ವಹಿಸಲಾಗುತ್ತದೆ ಎಂಬುದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಹೂಡಿಕೆ ಮಾಡಿದರೆ ಏನು ಕಥೆ?
ಹಿಂದೂ ಅವಿಭಕ್ತ ಕುಟುಂಬ ಪ್ರತ್ಯೇಕ ತೆರಿಗೆ ಮೌಲ್ಯಮಾಪಕರಾಗಿರುವುದರಿಂದ, ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತವನ್ನು ಪಡೆಯಬಹುದು. ಆದಾಗ್ಯೂ, ಸದಸ್ಯರು ಮಾಡಿದ ಹೂಡಿಕೆ ಅಥವಾ ಮಾಡಿದ ವೆಚ್ಚಕ್ಕೆ ಸಂಬಂಧಿಸಿದಂತೆ ಕಡಿತವನ್ನು ಪಡೆಯಲು ಸಾಧ್ಯವಿಲ್ಲ.
HUF ಅನ್ನು ರೂಪಿಸಲು ಬಯಸಿದರೆ ನೀವು HUF ಅನ್ನು ಸಮತೋಲನದಲ್ಲಿಡುವುದನ್ನು ಖಚಿತಪಡಿಸಿಕೊಳ್ಳಿ. ನೀವು ಬುದ್ಧಿವಂತಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಏಕೆಂದರೆ, ಕುಟುಂಬದೊಳಗಿನ ಯಾವುದೇ ಜಗಳ ಅಥವಾ ವಿವಾದವು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: IND vs SA: ಐಪಿಎಲ್ನಲ್ಲಿ ಮಿಂಚಿ ಭರ್ಜರಿ ಫಾರ್ಮ್ನಲ್ಲಿದ್ದರೂ ಇವರಿಗಿಲ್ಲ ಅವಕಾಶ
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 12:14 pm, Mon, 23 May 22