1000 Rs Notes: 2016ರಲ್ಲಿ ಬ್ಯಾನ್ ಆಗಿದ್ದ ಸಾವಿರ ರೂ ನೋಟು ಮತ್ತೆ ಬರುತ್ತಾ? ಆರ್​ಬಿಐ ಹೇಳುವುದೇನು?

|

Updated on: May 23, 2023 | 11:24 AM

RBI Governor Clarification on Rs. 1,000 Note: 2016ರಲ್ಲಿ ಬ್ಯಾನ್ ಆಗಿದ್ದ 1,000 ರೂ ಮುಖಬೆಲೆಯ ನೋಟುಗಳು ಮತ್ತೆ ಬಿಡುಗಡೆ ಆಗಬಹುದು ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬುತ್ತಿದೆ. ಇದು ನಿಜವಾ? ಆರ್​ಬಿಐ ಗವರ್ನರ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

1000 Rs Notes: 2016ರಲ್ಲಿ ಬ್ಯಾನ್ ಆಗಿದ್ದ ಸಾವಿರ ರೂ ನೋಟು ಮತ್ತೆ ಬರುತ್ತಾ? ಆರ್​ಬಿಐ ಹೇಳುವುದೇನು?
1,000 ರೂ ಮುಖಬೆಲೆಯ ನೋಟು
Follow us on

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ 2,000 ರೂ ಮುಖಬೆಲೆಯ ನೋಟುಗಳನ್ನು (Rs. 2,000 Note) ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಇವತ್ತಿನಿಂದ (ಮೇ 23) ಈ ನೋಟುಗಳ ಬದಲಾವಣೆ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕೊಡಲಾಗಿದೆ. ಇದೇ ಹೊತ್ತಲ್ಲಿ, 2016ರಲ್ಲಿ ಬ್ಯಾನ್ ಆಗಿದ್ದ 1,000 ರೂ ಮುಖಬೆಲೆಯ ನೋಟುಗಳು (Rs. 1,000 Note) ಮತ್ತೆ ಬಿಡುಗಡೆ ಆಗಬಹುದು ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬುತ್ತಿದೆ. ಆದರೆ, ನಿನ್ನೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಾಗಲೀ ಅಥವಾ ಆರ್​ಬಿಐನ ಪತ್ರಿಕಾಹೇಳಿಕೆಯಲ್ಲಾಗಲೀ ಇದನ್ನು ದೃಢಪಡಿಸಿಲ್ಲ. ವಾಸ್ತವದಲ್ಲಿ ಪತ್ರಕರ್ತರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಅವರನ್ನು ಕೇಳಿದಾಗ, ಅವರು ಇದು ಕೇವಲ ಗಾಳಿ ಸುದ್ದಿ ಎಂದು ತಳ್ಳಿಹಾಕಿದರು.

2,000 ರೂ ನೋಟು ಹಿಂಪಡೆದಿದ್ದರಿಂದ ಹಣಕಾಸು ಮಾರುಕಟ್ಟೆಗೆ ತೊಂದರೆ ಆಗುತ್ತಾ?

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಅವರು 2,000 ರೂ ನೋಟುಗಳ ಅನುಪಸ್ಥಿತಿಯಿಂದ ತೊಂದರೆ ಆಗಬಹುದು ಎಂಬ ಭಯವನ್ನು ನಿವಾರಿಸುವ ಪ್ರಯತ್ನ ಮಾಡಿದರು. ಭಾರತದಲ್ಲಿ ಚಲಾವಣೆಯಲ್ಲಿರುವ ಒಟ್ಟಾರೆ ಕರೆನ್ಸಿಯಲ್ಲಿ 2,000 ರೂ ಮುಖಬೆಲೆಯ ನೋಟು ಶೇ. 10.8 ಮಾತ್ರ ಇದೆ. ಹೀಗಾಗಿ, ಈ ನೋಟು ಹಿಂಪಡೆದಿದ್ದರಿಂದ ಆರ್ಥಿಕತೆಗೆ ಏನೂ ದುಷ್ಪರಿಣಾಮ ಬೀರುವುದಿಲ್ಲ ಎಂದು ಶಕ್ತಿಕಾಂತ ದಾಸ್ ಹೇಳಿದರು.

ಇದನ್ನೂ ಓದಿ2000 Rs Note Exchange: ಇಂದಿನಿಂದ 2000 ರೂ. ಮುಖಬೆಲೆ ನೋಟು ಬದಲಾವಣೆಗೆ ಅವಕಾಶ, ಪ್ರಕ್ರಿಯೆ ಹೇಗೆ? ಇಲ್ಲಿದೆ ವಿವರ

ಸಾಕಷ್ಟು ಸಂಖ್ಯೆಯಲ್ಲಿ 500 ರೂ ಮತ್ತು 100 ರೂ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ. ಜನರ ಅಗತ್ಯತೆಗಳನ್ನು ಈ ನೋಟುಗಳೇ ಪೂರೈಸುತ್ತಿವೆ. ಹೀಗಾಗಿ, ಹೆಚ್ಚು ಮೌಲ್ಯದ ಕರೆನ್ಸಿಯ ಅಗತ್ಯ ಇಲ್ಲ ಎಂದು ಹೇಳುವ ಮೂಲಕ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 1,000 ರೂ ಮತ್ತು 2,000 ರೂ ಮುಖಬೆಲೆಯ ನೋಟುಗಳ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಇಂದಿನಿಂದ (ಮೇ 23) 2,000 ರೂ ನೋಟುಗಳ ಬದಲಾವಣೆಗೆ ಬಾಗಿಲು

ಆರ್​ಬಿಐ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಇವುಗಳ ಬದಲಾವಣೆಗೆ 4 ತಿಂಗಳು ಕಾಲಾವಕಾಶ ಕೊಡಲಾಗಿದೆ. ಇಂದಿನಿಂದ ಎಲ್ಲಾ ಬ್ಯಾಂಕುಗಳಲ್ಲೂ ಈ ನೋಟುಗಳನ್ನು ಸಾರ್ವಜನಿಕರು ತಮ್ಮ ಖಾತೆಗೆ ಡೆಪಾಸಿಟ್ ಮಾಡಲು ಅಥವಾ ನೋಟು ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿGo First: ಗೋಫಸ್ಟ್ ಸಂಸ್ಥೆ ನಿರಾಳ: ಇನ್ಸಾಲ್ವೆನ್ಸಿ ಅವಕಾಶ ಎತ್ತಿಹಿಡಿದ ಎನ್​ಸಿಎಲ್​ಎಟಿ; ನ್ಯಾಯಮಂಡಳಿ ಬಳಿ ಬೇರೆ ಅರ್ಜಿ ಸಲ್ಲಿಸಲು ವಿಮಾನ ಮಾಲೀಕರಿಗೆ ಸೂಚನೆ

ನೋಟು ಬದಲಾವಣೆ ಮಾಡಬಯಸುವವರು ಒಮ್ಮೆಗೆ 10 ನೋಟುಗಳನ್ನು ಮಾತ್ರ ಎಕ್ಸ್​ಚೇಂಜ್ ಮಾಡಬಹುದು. ಆದರೆ, ಒಂದು ದಿನದಲ್ಲಿ ಎಷ್ಟು ಸಲ ಬೇಕಾದರೂ ಬದಲಾವಣೆ ಸಾಧ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ