AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST Rates Revision: ಜಿಎಸ್​ಟಿ ಪರಿಷ್ಕರಣೆ ನಂತರ ದುಬಾರಿ- ಅಗ್ಗ ಆದ ವಸ್ತುಗಳು ಯಾವುವು ಎಂಬ ಪಟ್ಟಿ ಇಲ್ಲಿದೆ

ಜಿಎಸ್​ಟಿ ಪರಿಷ್ಕರಣೆ ಆದ ನಂತರ ಯಾವ್ಯಾವ ವಸ್ತುಗಳು ದುಬಾರಿ ಆದವು ಹಾಗೂ ಅಗ್ಗ ಆದವು ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

GST Rates Revision: ಜಿಎಸ್​ಟಿ ಪರಿಷ್ಕರಣೆ ನಂತರ ದುಬಾರಿ- ಅಗ್ಗ ಆದ ವಸ್ತುಗಳು ಯಾವುವು ಎಂಬ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 29, 2022 | 7:19 PM

Share

ಚಂಡೀಗಢದಲ್ಲಿ ನಡೆದ 47ನೇ ಜಿಎಸ್​ಟಿ (GST) ಕೌನ್ಸಿಲ್ ಸಮಿತಿ ಸಭೆಯಲ್ಲಿ ಇನ್ನಷ್ಟು ವಸ್ತುಗಳನ್ನು ಜಿಎಸ್​ಟಿ ವ್ಯಾಪ್ತಿಯೊಳಗೆ ತರುವುದಕ್ಕೆ ನಿರ್ಧರಿಸಲಾಗಿದೆ. ಇದರಿಂದಾಗಿ ಶ್ರೀ ಸಾಮಾನ್ಯರ ಪಾಲಿಗೆ ಕೆಲವು ಹೊರೆ ಆಗಲಿವೆ. ಪ್ರೀ ಪ್ಯಾಕ್ಡ್ ಆಹಾರ ವಸ್ತುಗಳ ಮೇಲೆ ಜಿಎಸ್​ಟಿ ಹಾಕುವುದಕ್ಕೆ ನಿರ್ಧರಿಸಲಾಗಿದೆ. ಅದರಲ್ಲಿ ಆಹಾರ ಧಾನ್ಯ ಸಹ ಒಳಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರ ಗುಂಪು ತಮ್ಮ ಶಿಫಾರಸುಗಳನ್ನು ಮಾಡಿದೆ. ಜಿಎಸ್​ಟಿ ಸಮಿತಿಯ ವಿನಾಯಿತಿ ಮತ್ತು ಇನ್ವರ್ಷನ್​ ತಿದ್ದುಪಡಿ ಈ ವರ್ಷದ ಜುಲೈ 18ರಿಂದ ಜಾರಿಗೆ ಬಂದಿದೆ. ಜಿಎಸ್​ಟಿ ಪರಿಷ್ಕರಣೆ ನಂತರ ಏರಿಕೆ ಹಾಗೂ ಇಳಿಕೆ ಕಾಣುವ ವಸ್ತುಗಳ ವಿವರ ಇಲ್ಲಿದೆ:

ದುಬಾರಿ ಆಗಲಿರುವ ವಸ್ತುಗಳು:

ಪ್ಯಾಕೇಜ್ಡ್ ಫುಡ್: ಪ್ರೀ- ಪ್ಯಾಕ್ಡ್, ಪ್ರೀ- ಲೇಬಲ್ಡ್ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಮತ್ತಿತರ.

ಬ್ಯಾಂಕ್​ ಚೆಕ್​ ಬುಕ್ ವಿತರಣೆ: ಬ್ಯಾಂಕ್ ಚೆಕ್​ಗಳ (ಬಿಡಿ ಅಥವಾ ಪುಸ್ತಕ ಸ್ವರೂಪದಲ್ಲಿ) ವಿತರಣೆ ಮೇಲೆ ಶೇ 18ರಷ್ಟು ಜಿಎಸ್​ಟಿ ಶುಲ್ಕ.

ಹೋಟೆಲ್ ಕೋಣೆಗಳು: ಒಂದು ದಿನಕ್ಕೆ 1000 ರೂಪಾಯಿ ಒಳಗಿನ ಹೋಟೆಲ್ ರೂಮ್​ಗೆ ಶೇ 12ರಷ್ಟು ಜಿಎಸ್​ಟಿಗೆ ತರಲಾಗಿದೆ. ಸದ್ಯಕ್ಕೆ ಅದು ವಿನಾಯಿತಿ ಕೆಟಗರಿಯಲ್ಲಿತ್ತು.

ಆಸ್ಪತ್ರೆ ಬೆಡ್​​ಗಳು: ರೂಮ್ ಬಾಡಿಗೆ (ಐಸಿಯು ಹೊರತುಪಡಿಸಿ) ದಿನಕ್ಕೆ 5 ಸಾವಿರ ರೂಪಾಯಿ ಮೇಲ್ಪಟ್ಟು ವಿಧಿಸುವ ಆಸ್ಪತ್ರೆಗಳಲ್ಲಿ ಶೇ 5ರಷ್ಟನ್ನು ಐಟಿಸಿ ಹೊರತು ನೀಡಬೇಕು.

ಎಲ್​ಇಡಿ ದೀಪ, ಲ್ಯಾಂಪ್ಸ್: ಎಲ್​ಇಡಿ ದೀಪಗಳು, ಸಲಕರಣೆಗಳು, ಎಲ್​ಇಡಿ ಲ್ಯಾಂಪ್​ಗಳ ಬೆಲೆಯಲ್ಲಿ ಏರಿಕೆ ಆಗಲಿದೆ. ಜಿಎಸ್​ಟಿ ಸಮಿತಿಯು ಶಿಫಾರಸು ಮಾಡಿರುವಂತೆ ಇನ್ವರ್ಟೆಡ್ ಸುಂಕ ರಚನೆ ಶೇ 12ರಿಂದ 18ಕ್ಕೆ ಏರಿಸಲಾಗಿದೆ.

ಚಾಕುಗಳು: ಚಾಕುಗಳು ಜತೆಗೆ ಕತ್ತರಿಸಿದ ಬ್ಲೇಡ್​ಗಳು, ಪೇಪರ್ ಕತ್ತರಿಗಳು, ಪೆನ್ಸಿಲ್ ಶಾರ್ಪ್​ನರ್​ಗಳು ಮತ್ತು ಬ್ಲೇಡ್​ಗಳು, ಸ್ಕಿಮ್ಮರ್ಸ್, ಕೇಕ್ ಸರ್ವರ್ಸ್​ ಮುಂತಾದವುಗಳಿಗೆ ಶೇ 12ರಿಂದ 18ರಷ್ಟು ತೆರಿಗೆ ಹಾಕಲಾಗುತ್ತದೆ.

ಪಂಪ್ಸ್ ಮತ್ತು ಮಶೀನ್​ಗಳು; ಸಬ್​ ಮರ್ಸಬಲ್​ ಪಂಪ್​ಗಳು, ಬೈಸಿಕಲ್ ಪಂಪ್​ಗಳು ಸೇರಿದಂತೆ ಇತರ ಮಶೀನ್​ಗಳ ಮೇಲಿನ ಜಿಎಸ್​ಟಿಯನ್ನು ಶೇ 12ರಿಂದ ಶೇ 18ಕ್ಕೆ ಏರಿಸಲಾಗಿದೆ.

ಪರಿಷ್ಕರಣೆ ನಂತರ ಅಗ್ಗ ಆಗುವ ವಸ್ತುಗಳು:

ರೋಪ್​ವೇ ರೈಡ್​ಗಳು: ರೋಪ್​ವೇಗಳ ಮೂಲಕ ಸರಕುಗಳು ಮತ್ತು ಪ್ರಯಾಣಿಕರನ್ನು ಒಯ್ಯುವ ದರವನ್ನು ಶೇ 18ರಿಂದ ಶೇ 5ಕ್ಕೆ ಇಳಿಸಿದ್ದು, ಜತೆಗೆ ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್ ಸೇವೆ ದೊರೆಯುತ್ತದೆ.

ಗೂಡ್ಸ್ ಒಯ್ಯುವ ಬಾಡಿಗೆ: ಗೂಡ್ಸ್ ಒಯ್ಯುವುದು ಜತೆಗೆ ತೈಲ ಮತ್ತು ಆಪರೇಟರ್ಸ್ ವೆಚ್ಚ ಜಿಎಸ್​ಟಿ ಶೇ 18ರಿಂದ ಶೇ 12ಕ್ಕೆ ಇಳಿದಿದೆ.

ಅರ್ಥೋಪೆಡಿಕ್ ಅಪ್ಲೈಯನ್ಸಸ್: ಸ್ಪ್ಲಿಂಟ್ಸ್ ಮತ್ತು ದೇಹದ ಇತರ ಕೃತಕ ಭಾಗಗಳಿಗಾಗಿ ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ.

ರಕ್ಷಣಾ ವಸ್ತುಗಳು: ಖಾಸಗಿ ಮಾರಾಟಗಾರರು/ಸಂಸ್ಥೆಗಳು ಆಮದು ಮಾಡಿಕೊಳ್ಳುವ ನಿರ್ದಿಷ್ಟ ವಸ್ತುಗಳ ಮೇಲೆ ಐಜಿಎಸ್​ಟಿಯನ್ನು ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: GST: 1000 ರೂಪಾಯಿ ಒಳಗಿನ ಹೋಟೆಲ್ ಕೋಣೆಗಳಿಗೆ ವಿನಾಯಿತಿ ವಾಪಸ್, ಪ್ರೀ ಪ್ಯಾಕ್ಡ್ ಆಹಾರಗಳಿಗೆ ಜಿಎಸ್​ಟಿ

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​