ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್​ಗೂ ಸಿಕ್ಕಿತು ಎನ್​ಒಸಿ

Shankh Air, Al Hind, FlyExpress get NOC for airline operations: ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್​ಗೆ ವಿಮಾನ ಹಾರಾಟ ಸೇವೆ ಮಾಡಲು ಕೇಂದ್ರದಿಂದ ಎನ್​ಒಸಿ ಸಿಕ್ಕಿದೆ. ಇತ್ತೀಚೆಗಷ್ಟೇ ಶಂಖ್ ಏರ್​ಗೂ ಅನುಮತಿ ಕೊಡಲಾಗಿತ್ತು. ಸದ್ಯದಲ್ಲೇ ಮೂರು ಹೊಸ ಏರ್​ಲೈನ್ಸ್​ಗಳು ಭಾರತದ ಮಾರುಕಟ್ಟೆಗೆ ಅಡಿ ಇಡಲಿವೆ. ಸದ್ಯ ಭಾರತದ ಶೇ. 90 ರಷ್ಟು ಏವಿಯೇಶನ್ ಮಾರುಕಟ್ಟೆಯ ಪ್ರಾಬಲ್ಯ ಇಂಡಿಗೋ ಮತ್ತು ಏರ್ ಇಂಡಿಯಾಗಿದೆ.

ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್​ಗೂ ಸಿಕ್ಕಿತು ಎನ್​ಒಸಿ
ಅಲ್ ಹಿಂದ್ ಏರ್

Updated on: Dec 24, 2025 | 3:40 PM

ನವದೆಹಲಿ, ಡಿಸೆಂಬರ್ 24: ಇತ್ತೀಚೆಗಷ್ಟೇ ಶಂಖ್ ಏರ್ (Shankh Air) ಸಂಸ್ಥೆಗೆ ವಿಮಾನ ಹಾರಾಟ ಸೇವೆಗೆ ಅನುಮತಿಸಿದ್ದ ಕೇಂದ್ರ ಸರ್ಕಾರ ಈಗ ಇನ್ನೂ ಎರಡು ಸಂಸ್ಥೆಗಳಿಗೆ ಎನ್​ಒಸಿ ಕೊಟ್ಟಿದೆ. ಕೇರಳ ಮೂಲದ ಅಲ್ ಹಿಂದ್ (Al Hind) ಹಾಗೂ ಹೈದರಾಬಾದ್ ಮೂಲದ ಫ್ಲೈ ಎಕ್ಸ್​ಪ್ರೆಸ್ (FlyExpress) ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಿರಾಕ್ಷೇಪಣಾ ಪತ್ರ (ಎನ್​ಒಸಿ) ಕೊಟ್ಟಿದೆ. ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ ಹೊಂದಿರುವ ಪ್ರಾಬಲ್ಯವನ್ನು ಕಡಿಮೆ ಮಾಡಲು ಈ ಹೊಸ ಆಪರೇಟರ್​ಗಳಿಂದ ಸಾಧ್ಯವಾಗಬಹುದು.

ಸಿವಿಲ್ ಏವಿಯೇಶನ್ ಮಿನಿಸ್ಟರ್ ರಾಮಮೋಹನ್ ನಾಯ್ಡು ಕಿಂಜರಪು ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪೋಸ್ಟ್ ಹಾಕಿದ್ದಾರೆ. ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸಂಸ್ಥೆಗಳಿಗೆ ಉತ್ತೇಜನ ಕೊಡಲು ಸರ್ಕಾರ ಆದ್ಯತೆ ಕೊಟ್ಟಿದೆ. ಈ ನಿಟ್ಟಿನಲ್ಲಿ, ಕಳೆದ ವಾರದಲ್ಲಿ ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್​ಪ್ರೆಸ್​ನ ಪ್ರತಿನಿಧಿಗಳನ್ನು ಭೇಟಿ ಮಾಡಿದೆ. ಶಂಖ್ ಏರ್​ಗೆ ಈ ಹಿಂದೆ ಅನುಮತಿಸಲಾಗಿದೆ. ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್ ಎರಡಕ್ಕೂ ಈ ವಾರ ಎನ್​ಒಸಿ ಕೊಡಲಾಗಿದೆ.

ಇದನ್ನೂ ಓದಿ: ಭಾರತದೊಂದಿಗೆ ಇದು ಕೆಟ್ಟ ಒಪ್ಪಂದ: ನ್ಯೂಜಿಲೆಂಡ್ ಸರ್ಕಾರದೊಳಗೆಯೇ ಅಪಸ್ವರ; ಇವರ ತಕರಾರುಗಳೇನು?

ಕೇರಳದ ಅಲ್ ಹಿಂದ್ ಗ್ರೂಪ್ ಟ್ರಾವಲ್ ಮತ್ತು ಟೂರಿಸಂ ಸೇವೆ ನೀಡುತ್ತವೆ. ಅದರ ವಿಮಾನಗಳು ಕೊರಿಯರ್ ಸೇವೆಗೂ ಬಳಕೆ ಆಗುತ್ತವೆ. ಹೈದರಾಬಾದ್​ನ ಫ್ಲೈಎಕ್ಸ್​ಪ್ರೆಸ್ ಸಂಸ್ಥೆಯು ಸರಕು ಸಾಗಣೆಯ ವಿಮಾನ ಸೇವೆ ನೀಡುತ್ತದೆ.

ಈಗಾಗಲೇ ಎನ್​ಒಸಿ ಹೊಂದಿರುವ ಶಂಖ್ ಏರ್ ಸಂಸ್ಥೆ ಸದ್ಯದಲ್ಲೇ ಪ್ರಾದೇಶಿಕ ಮಟ್ಟದಲ್ಲಿ ವಿಮಾನ ಸೇವೆ ಆರಂಭಿಸಬಹುದು. ಉತ್ತರಪ್ರದೇಶದ ಲಕ್ನೋ, ವಾರಾಣಸಿ, ಆಗ್ರಾ, ಗೋರಖಪುರ್ ಮೊದಲಾದ ಪ್ರಮುಖ ನಗರಗಳ ನಡುವೆ ಶಂಕ್ ಏರ್ ವಿಮಾನಗಳು ಸಂಚರಿಸಲಿವೆ.

ಇದನ್ನೂ ಓದಿ: ಚೀನಾ ಹೇಳೋದು ಬೇರೆ, ವಾಸ್ತವ ಬೇರೆಯಾ? 2025ರಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ 3 ಮಾತ್ರವಾ?

ಕೇಂದ್ರ ಸರ್ಕಾರದ ಉಡಾನ್ ಸ್ಕೀಮ್ ಅಡಿಯಲ್ಲಿ ಸ್ಟಾರ್ ಏರ್, ಇಂಡಿಯಾ ಒನ್ ಏರ್, ಫ್ಲೈ91 ಇತ್ಯಾದಿ ಸಣ್ಣಪುಟ್ಟ ಸಂಸ್ಥೆಗಳು ಪ್ರಾದೇಶಿಕ ವಿಮಾನ ಸೇವೆ ಒದಗಿಸುತ್ತಿವೆ. ಆದರೆ, ದೇಶದ ಶೇ. 90ರಷ್ಟು ಮಾರುಕಟ್ಟೆಯು ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಗಳ ಹಿಡಿತದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ