AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಈ ಬಾರಿಯೂ ಬಡ್ಡಿದರ ಬದಲಾಗಲ್ಲ; ಹಣದುಬ್ಬರ ನಿರೀಕ್ಷೆಮೀರಿ ಹೆಚ್ಚಬಹುದು: ಸೆಂಟ್ರಲ್ ಬ್ಯಾಂಕ್ ಅಂದಾಜು

US Fed Reserve to continue interest rates: ಜಿರೋಮ್ ಪೋವೆಲ್ ಅಧ್ಯಕ್ಷತೆಯಲ್ಲಿ ನಡೆದ ಫೆಡರಲ್ ರಿಸರ್ವ್ ಎಫ್​ಒಎಂಸಿ ಸಭೆಯಲ್ಲಿ ಅಮೆರಿಕದ ಸೆಂಟ್ರಲ್ ಬ್ಯಾಂಕ್ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಲಾಗಿದೆ. ಹಾಗೆಯೇ, ಹಣದುಬ್ಬರ ಹೆಚ್ಚುವುದು ಮತ್ತು ಜಿಡಿಪಿ ಬೆಳವಣಿಗೆಯೂ ತುಸು ಏರಿಕೆ ಆಗಬಹುದು ಎಂದು ಫೆಡರಲ್ ರಿಸರ್ವ್ ಅಭಿಪ್ರಾಯಪಟ್ಟಿದೆ.

ಅಮೆರಿಕದಲ್ಲಿ ಈ ಬಾರಿಯೂ ಬಡ್ಡಿದರ ಬದಲಾಗಲ್ಲ; ಹಣದುಬ್ಬರ ನಿರೀಕ್ಷೆಮೀರಿ ಹೆಚ್ಚಬಹುದು: ಸೆಂಟ್ರಲ್ ಬ್ಯಾಂಕ್ ಅಂದಾಜು
ಜಿರೋಮ್ ಪೋವೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2026 | 11:07 AM

Share

ವಾಷಿಂಗ್ಟನ್, ಮಾರ್ಚ್ 19: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ತನ್ನ ಬಡ್ಡಿದರದಲ್ಲಿ (US Fed Reserve Rates) ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಈಗಿರುವ ಶೇ. 3.50-3.75 ಶ್ರೇಣಿಯಲ್ಲಿ ಬಡ್ಡಿದರ ಮುಂದುವರಿಸುವ ನಿರ್ಧಾರ ಮಾಡಿದೆ. ಫೆಡರಲ್ ರಿಸರ್ವ್​ನ ಛೇರ್ಮನ್ ಜಿರೋಮ್ ಪೋವೆಲ್ ನೇತೃತ್ವದಲ್ಲಿ ನಡೆದ ಎಫ್​ಒಎಂಸಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಆದರೆ, ಗಮನಾರ್ಹ ಅಂಶವೆಂದರೆ, ಬಡ್ಡಿದರ ಹೆಚ್ಚಳ ಸಾಧ್ಯತೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಬಡ್ಡಿದರ ಕಡಿಮೆ ಆಗುವ ಸುಳಿವನ್ನು ಈ ಸಭೆಯಲ್ಲಿ ಕೊಡಲಾಗಿದೆ.

ಆದರೆ, ಬಡ್ಡಿದರ ಕಡಿಮೆ ಆದರೂ ಸತತವಾಗಿ ಆಗುವುದಿಲ್ಲ ಎನ್ನಲಾಗಿದೆ. ಈ ವರ್ಷ ಒಮ್ಮೆ ಮಾತ್ರವೇ ಬಡ್ಡಿ ದರ ಕಡಿಮೆ ಮಾಡಬಹುದು. ಶೇ. 3.25-3.50 ಶ್ರೇಣಿಗೆ ಬಡ್ಡಿದರ ಇಳಿಯಬಹುದು. ಮುಂದಿನ ವರ್ಷ, ಅಂದರೆ 2027ಕ್ಕೆ ಬಡ್ಡಿ ಶೇ. 3.1ಕ್ಕೆ ಇಳಿಯಬಹುದು. ಅದಾಗಿ ಕೆಲ ವರ್ಷಗಳವರೆಗೂ ಬಡ್ಡಿದರ ಶೇ. 3ರ ಆಸುಪಾಸಿನಲ್ಲೇ ಇರಬಹುದು ಎನ್ನುವ ಸುಳಿವನ್ನು ಫೆಡರಲ್ ರಿಸರ್ವ್ ಕೊಟ್ಟಿದೆ. ಅಂದರೆ, ಮುಂದಿನ ಐದಾರು ವರ್ಷಗಳಲ್ಲಿ ಬಹಳ ನಿಧಾನಗತಿಯಲ್ಲಿ ಬಡ್ಡಿದರ ಇಳಿಸುವ ಪ್ಲಾನ್ ಫೆಡರಲ್ ರಿಸರ್ವ್​ನದ್ದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ಹಣದುಬ್ಬರವು ಸೆಂಟ್ರಲ್ ಬ್ಯಾಂಕ್ ನಿರೀಕ್ಷೆಮೀರಿ ಹೆಚ್ಚಲಿದೆ

ಫೆಡರಲ್ ರಿಸರ್ವ್ ಸಭೆಯಲ್ಲಿ ಹಣದುಬ್ಬರದ ಬಗ್ಗೆ ಅಂದಾಜು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಮಾಡಿದ್ದ ಅಂದಾಜಿಗಿಂತ ಹಣದುಬ್ಬರ ಹೆಚ್ಚಿರಬಹುದು ಎಂದು ಹೇಳಲಾಗಿದೆ. ಸಭೆಯಲ್ಲಿ ಬಂದಿರುವ ಅಭಿಪ್ರಾಯದ ಪ್ರಕಾರ 2026ರಲ್ಲಿ ವೈಯಕ್ತಿಕ ಅನುಭೋಗ ವೆಚ್ಚ ಅಥವಾ ಪಿಸಿಇ ಆಧಾರಿತ ಹಣದುಬ್ಬರ ಶೇ. 2.7ರಷ್ಟು ಇರಬಹುದು. ಹಿಂದೆ ಮಾಡಲಾಗಿದ್ದ ಅಂದಾಜು ಪ್ರಕಾರ 2026ರಲ್ಲಿ ಶೇ 2.4ರಷ್ಟು ಹಣದುಬ್ಬರ ದರ ಇರಬಹುದು ಎನ್ನಲಾಗಿತ್ತು.

ಈ ಹಣದುಬ್ಬರ ಏರಿಕೆ 2026ರ ವರ್ಷಕ್ಕೆ ಮಾತ್ರ ಸೀಮಿತವಾಗಬಹುದು. ಮುಂದಿನ ವರ್ಷಗಳಲ್ಲಿ ನಿಧಾನಗತಿಯಲ್ಲಿ ಬೆಲೆ ಏರಿಕೆ ಪ್ರಮಾಣ ತಗ್ಗಬಹುದು. 2028ರಲ್ಲಿ ಫೆಡರಲ್ ರಿಸರ್ವ್​ನ ಹಣದುಬ್ಬರ ಗುರಿಯಾದ ಶೇ. 2ರ ಮಟ್ಟವನ್ನು ತಲುಪುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ

ಇನ್ನು, ಅಮೆರಿಕದ ಜಿಡಿಪಿ ಬೆಳವಣಿಗೆ ಬಗ್ಗೆಯೂ ಫೆಡರಲ್ ರಿಸರ್ವ್ ಅಂದಾಜು ಮಾಡಿದೆ. ಕಳೆದ ಬಾರಿಯ ಸಭೆಯಲ್ಲಿ 2026ರಲ್ಲಿ ಜಿಡಿಪಿ ಶೇ. 2.3ರಷ್ಟು ಹೆಚ್ಚಬಹುದು ಎನ್ನಲಾಗಿತ್ತು. ಈಗ ಅದರ ನಿರೀಕ್ಷೆಯನ್ನು ಶೇ. 2.4ಕ್ಕೆ ಏರಿಸಿದೆ. 2027ರಲ್ಲಿ ಶೇ. 2.3 ಮತ್ತು 2028ರಲ್ಲಿ ಶೇ. 2.1ರಷ್ಟು ಜಿಡಿಪಿ ಬೆಳವಣಿಗೆ ದರ ಇರಬಹುದು ಎಂದಿದೆ. ದೀರ್ಘಾವಧಿಯಲ್ಲಿ ಅಮೆರಿಕದ ಆರ್ಥಿಕ ಬೆಳವಣಿಗೆ ದರ ಶೇ. 2.0-1.8ರ ಶ್ರೇಣಯಲ್ಲಿ ಇರಬಹುದು ಎಂದು ಫೆಡರಲ್ ರಿಸರ್ವ್ ಅಂದಾಜಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್