AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದೊಂದಿಗೆ ಇದು ಕೆಟ್ಟ ಒಪ್ಪಂದ: ನ್ಯೂಜಿಲೆಂಡ್ ಸರ್ಕಾರದೊಳಗೆಯೇ ಅಪಸ್ವರ; ಇವರ ತಕರಾರುಗಳೇನು?

New Zealand foreign minister describes FTA with India as bad deal: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಅಂತಿಮಗೊಂಡಿರುವ ವ್ಯಾಪಾರ ಒಪ್ಪಂದದ ಬಗ್ಗೆ ನ್ಯೂಜಿಲೆಂಡ್ ಸರ್ಕಾರದೊಳಗೆ ಅಪಸ್ವರ ಎದ್ದಿದೆ. ಇದು ನ್ಯೂಜಿಲೆಂಡ್ ಪಾಲಿಗೆ ಕೆಟ್ಟ ಡೀಲ್ ಎಂದು ಅಲ್ಲಿಯ ಫಾರೀನ್ ಮಿನಿಸ್ಟರ್ ವಿನ್ಸ್​ಟನ್ ಪೀಟರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಎಲ್ಲವನ್ನೂ ಮುಕ್ತವಾಗಿ ಕೊಟ್ಟಿದ್ದೇವೆ. ಆದರೆ, ಅವರಿಂದ ಮುಕ್ತವಾಗಿ ಪಡೆದಿಲ್ಲ ಎಂಬುದು ಪೀಟರ್ಸ್ ಆಕ್ಷೇಪ.

ಭಾರತದೊಂದಿಗೆ ಇದು ಕೆಟ್ಟ ಒಪ್ಪಂದ: ನ್ಯೂಜಿಲೆಂಡ್ ಸರ್ಕಾರದೊಳಗೆಯೇ ಅಪಸ್ವರ; ಇವರ ತಕರಾರುಗಳೇನು?
ಭಾರತ ಮತ್ತು ನ್ಯೂಜಿಲೆಂಡ್​ನ ವಿದೇಶಾಂಗ ಮಂತ್ರಿಗಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 23, 2025 | 4:08 PM

Share

ನವದೆಹಲಿ, ಡಿಸೆಂಬರ್ 23: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India NZ FTA) ಏರ್ಪಟ್ಟಿರುವ ಬಗ್ಗೆ ಕಿವೀಸ್ ನಾಡಿನ ಸರ್ಕಾರದೊಳಗೆ ಅಪಸ್ವರ ಎದ್ದಿದೆ. ನ್ಯೂಜಿಲೆಂಡ್​ನ ವಿದೇಶಾಂಗ ಸಚಿವ ವಿನ್ಸ್​ಟನ್ ಪೀಟರ್ಸ್ (Winston Peters) ಅವರು ತಮ್ಮ ಸರ್ಕಾರದ ನಿಲುವನ್ನು ಟೀಕಿಸಿದ್ದು, ಈ ಎಫ್​ಟಿಎಯನ್ನು ಕೆಟ್ಟ ಒಪ್ಪಂದ ಎಂದು ಬಣ್ಣಿಸಿದ್ದಾರೆ. ಈ ಒಪ್ಪಂದಕ್ಕೆ ಸಹಿ ಹಾಕುವುದನ್ನು ತಾವು ಹಾಗೂ ತಮ್ಮ ನ್ಯೂಜಿಲ್ಯಾಂಡ್ ಫಸ್ಟ್ ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದಿದ್ದಾರೆ.

‘ವಿಷಾದದ ಸಂಗತಿ ಎಂದರೆ ಇದು ನ್ಯೂಜಿಲೆಂಡ್ ಪಾಲಿಗೆ ಕೆಟ್ಟ ಒಪ್ಪಂದವಾಗಿದೆ. ಭಾರತೀಯ ಉತ್ಪನ್ನಗಳಿಗೆ ನ್ಯೂಜಿಲೆಂಡ್ ಮಾರುಕಟ್ಟೆ ಪೂರ್ಣ ತೆರೆಯಲಾಗುತ್ತದೆ. ಆದರೆ, ನ್ಯೂಜಿಲೆಂಡ್​ನ ಪ್ರಮುಖ ಡೈರಿ ರಫ್ತುಗಳಿಗೆ ಭಾರತದ ಟ್ಯಾರಿಫ್ ತಡೆ ಇರುತ್ತದೆ. ಇದು ಯಾವ ನ್ಯಾಯ? ನಮ್ಮ ರೈತರು ಮತ್ತು ಕೃಷಿ ಸಮುದಾಯಗಳಿಗೆ ಉತ್ತರಿಸಲು ಸಾಧ್ಯವಾಗದಂಥದ್ದು’ ಎಂದು ನ್ಯೂಜಿಲೆಂಡ್​ನ ವಿದೇಶಾಂಗ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚೀನಾ ಹೇಳೋದು ಬೇರೆ, ವಾಸ್ತವ ಬೇರೆಯಾ? 2025ರಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ 3 ಮಾತ್ರವಾ?

ಭಾರತದೊಂದಿಗಿನ ವ್ಯಾಪಾರ ಒಪ್ಪಂದ ವಿಚಾರದಲ್ಲಿ ನ್ಯೂಜಿಲೆಂಡ್ ಸಚಿವರ ತಕರಾರುಗಳೇನು?

ವಿನ್ಸ್​ಟನ್ ಪೀಟರ್ಸ್ ಅವರು ಎತ್ತಿರುವ ತಕರಾರಿನಲ್ಲಿ ಎರಡು ಪ್ರಮುಖ ಸಂಗತಿಗಳಿವೆ. ಮೊದಲನೆಯದು, ನ್ಯೂಜಿಲ್ಯಾಂಡ್​ನ ಪ್ರಮುಖ ರಫ್ತು ಉತ್ಪನ್ನಗಳಾದ ಡೈರಿ ಉತ್ಪನ್ನಗಳಿಗೆ ಭಾರತದಿಂದ ಟ್ಯಾರಿಫ್ ದರ ಇಳಿಕೆ ಆಗಿಲ್ಲ ಎಂಬುದು. ಎರಡನೆಯದು ಎಂದರೆ, ನ್ಯೂಜಿಲ್ಯಾಂಡ್​ಗೆ ವಲಸೆ ಹೋಗಲು ಭಾರತೀಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಈ ಒಪ್ಪಂದದ ಪ್ರಕಾರ ಭಾರತೀಯ ನಾಗರಿಕರಿಗೆಂದೇ ಹೊಸ ಉದ್ಯೋಗ ವೀಸಾ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ವಲಸಿಗರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂಬುದು ಅವರ ತಗಾದೆಯಾಗಿದೆ.

ಭಾರತದ ಮೇಲೆ ವಿರೋಧವಲ್ಲ ಇದು…

ವಿನ್ಸ್​ಟನ್ ಪೀಟರ್ಸ್ ಅವರು ತಾನು ಈ ಒಪ್ಪಂದವನ್ನು ವಿರೋಧಿಸುತ್ತಿರುವುದೇ ವಿನಃ ಭಾರತವನ್ನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ಬಗ್ಗೆಯಾಗಲೀ, ಅಥವಾ ಒಪ್ಪಂದಕ್ಕೆ ಸಂಧಾನ ನಡೆಸಿದವರಾಗಲೀ ತಾನು ಆಕ್ಷೇಪಿಸುತ್ತಿಲ್ಲ. ನ್ಯೂಜಿಲ್ಯಾಂಡ್​ಗೆ ಒಪ್ಪುವಂಥದ್ದಲ್ಲದ ಈ ಒಪ್ಪಂದದ ಬಗ್ಗೆಯಷ್ಟೇ ತಮಗೆ ತಕರಾರು ಇರುವುದು. ತಾನು ಈ ವಿಚಾರದ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎ ಜೈಶಂಕರ್ ಅವರ ಗಮನಕ್ಕೂ ತಂದಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: WhatsApp vs Govt: ತಿಂಗಳಿಗೆ ಕೋಟಿ ನಂಬರ್ಸ್ ನಿಷೇಧಿಸಿದರೂ ಸರ್ಕಾರಕ್ಕೆ ಗುಟ್ಟು ಬಿಟ್ಟುಕೊಡದ ವಾಟ್ಸಾಪ್

ನ್ಯೂಜಿಲ್ಯಾಂಡ್​ನಲ್ಲಿ ಸಮ್ಮಿಶ್ರ ಸರ್ಕಾರ ಇದೆ. ವಿನ್ಸ್​ಟನ್ ಪೀಟರ್ಸ್ ಅವರು ನ್ಯೂಜಿಲೆಂಡ್ ಫಸ್ಟ್ ಪಕ್ಷದವರು. ಅಲ್ಲಿಯ ಪ್ರಧಾನಿಗಳು ನ್ಯಾಷನಲ್ ಪಾರ್ಟಿಯವರು. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆಯಾದರೂ ಇನ್ನೂ ಸಹಿ ಹಾಕಲಾಗಿಲ್ಲ. ಸಹಿ ಹಾಕುವ ಮುನ್ನ ನ್ಯೂಜಿಲೆಂಡ್ ಸರ್ಕಾರವು ತನ್ನ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿ ಒಪ್ಪಿಗೆ ಪಡೆಯಬೇಕು. ಈ ಹಂತದಲ್ಲಿ ತಾನು ವಿರೋಧಿಸುವುದಾಗಿ ನ್ಯೂಜಿಲೆಂಡ್ ಸಚಿವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?