ಲೇಟೆಸ್ಟ್ ಸಂಸ್ಥೆಯೊಂದು ಷೇರು ಮಾರುಕಟ್ಟೆ ಪ್ರವೇಶಿಸಿದ್ದು ಅದರ ಹಣಕಾಸಿನ ಬಗ್ಗೆ ಚಿಕ್ಕದಾಗಿ ವಿವರಿಸುವುದಾದರೆ… ಭಾರತೀಯ ಜೀವ ವಿಮಾ ನಿಗಮದ ಎಲ್ಐಸಿ (LIC) ಷೇರು ಮಾರುಕಟ್ಟೆಗೆ ಪ್ರವೇಶಿಸಿದ್ದು ಇಂದು (ಮೇ 17) ಮೊದಲ ಬಾರಿಗೆ ಲಿಸ್ಟಿಂಗ್ನಲ್ಲಿ ಕಾಣಿಸಿಕೊಂಡಿದೆ (Initial Public Offering). ಲಿಸ್ಟಿಂಗ್ಗೆ (LIC IPO) ಮುಂಚೆ ಎಲ್ಐಸಿ ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂಪಾಯಿ ಇತ್ತು. ಆದರೆ ಲಿಸ್ಟಿಂಗ್ ಆದ ಮೊದಲ ಕೆಲವು ನಿಮಿಷಗಳಲ್ಲೇ 5,57,675.05 ಕೋಟಿ ರೂಪಾಯಿಗೆ ಇಳಿಯಿತು. ಆದರೆ ಈಗಲೂ ಹಿಂದೂಸ್ತಾನ್ ಯುನಿಲಿವರ್ (5.33 ಲಕ್ಷ ಕೋಟಿ ರೂ), ಐಸಿಐಸಿಐ ಬ್ಯಾಂಕ್ (4.85 ಲಕ್ಷ ಕೋಟಿ ರೂಪಾಯಿ)ಗಿಂತ ಮುಂದಿದೆ. ಆದರೆ ಇನ್ಫೋಸಿಸ್ಗಿಂತ (6.32 ಲಕ್ಷ ಕೋಟಿ ರೂಪಾಯಿ) ಹಿಂದಿದೆ. ಸರ್ಕಾರಿ ಸ್ವಾಮ್ಯದ ಎಲ್ಐಸಿ ಬಿಎಸ್ಇಯಲ್ಲಿ ಶೇ 8.62ರಷ್ಟು ರಿಯಾಯಿತಿಯೊಂದಿಗೆ 867.2ರಲ್ಲಿ ಲಿಸ್ಟಿಂಗ್ ಹಾಗೂ ಎನ್ಎಸ್ಇಯಲ್ಲಿ ಶೇ 8.11ರಷ್ಟು ಕಡಿಮೆಗೆ ಲಿಸ್ಟಿಂಗ್ ಆಗಿದೆ. ಇದು ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಿದಾಗ ಅದರ ಮಾರುಕಟ್ಟೆ ಮೌಲ್ಯ ಹೇಗೆ ಬದಲಾಗುತ್ತದೆ ಎಂಬದಕ್ಕೆ ಒಂದು ತಾಜಾ ಉದಾಹರಣೆಯಷ್ಟೆ. ಇದಕ್ಕಿಂತ ಹಿಂದಿನ ಅಂದರೆ 1991ರ ಉದಾರೀಕರಣ ನಂತರದ ದಿನಗಳಲ್ಲಿ ಹೀಗೆ ಮಾರುಕಟ್ಟೆಗೆ ಬಂದ ಕಂಪನಿಗಳು ಎಷ್ಟು, ಅವು ಎತ್ತುವಳಿ ಮಾಡಿದ ಅಂದರೆ ಕ್ರೋಢೀಕರಿಸಿದ ಮೊತ್ತವೆಷ್ಟು ಎಂಬುದನ್ನು ಸ್ಥೂಲವಾಗಿ ನೋಡಿದಾಗ…
6,300 ಕಂಪನಿಗಳು 8.4 ಲಕ್ಷ ಕೋಟಿ ರೂ ಕ್ರೋಢೀಕರಿಸಿವೆ…
1990-91 ಮತ್ತು 2021-22 ನಡುವಣ ಅವಧಿಯಲ್ಲಿ 6,300 ಕಂಪನಿಗಳು ಸಾರ್ವಜನಿಕ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇವಿಷ್ಟೂ ಕಂಪನಿಗಳು 8.4 ಲಕ್ಷ ಕೋಟಿ ರೂಪಾಯಿ ಕ್ರೋಢೀಕರಿಸಿವೆ. ಇವುಗಳ ಪೈಕಿ ಆರಂಭದಲ್ಲಿಯೇ 1990-91 to 1995-96 ಅವಧಿಯಲ್ಲಿ ಮೂರನೆಯ ಎರಡರಷ್ಟು ಕಂಪನಿಗಳು ಮಾರುಕಟ್ಟೆಗೆ ಬಂದವು. ಆದರೆ ಬಂದ ಏಟಿಗೆ ಅವು ಹೆಚ್ಚು ಬಂಡವಾಳ ಕ್ರೋಢೀಕರಿಸುವಲ್ಲಿ ಎಡವಿದವು. ಕಳೆದ ಮೂರು ದಶಕದಲ್ಲಿ ಎಲ್ಲ ಕಂಪನಿಗಳೂ ಎತ್ತಿದ ಹಣದಲ್ಲಿ ಕೇವಲ ಶೇ. 5 ರಷ್ಟು ಮಾತ್ರವೇ ಹಣ ಕ್ರೋಢೀಕರಿಸುವಲ್ಲಿ ಏದುಸಿರು ಬಿಟ್ಟವು.
ಇದನ್ನೂ ಓದಿ: LIC ಬಳಿ ಇದೆ ವಾರಸುದಾರರಿಲ್ಲದ 21,336 ಕೋಟಿ ರೂಪಾಯಿ! ಪಾಲಿಸಿದಾರರು ಅದನ್ನು ವಾಪಸ್ ಪಡೆಯುವ ಕ್ರಮ ಇಲ್ಲಿ ವಿವರಿಸಲಾಗಿದೆ
ಇದನ್ನೆ ಮತ್ತೊಂದು ಲೆಕ್ಕಾಚಾರದಲ್ಲಿ ತಾಳೆ ಹಾಕಿ ನೋಡಿದಾಗ ಕಳೆದ ಆರು ವರ್ಷಗಳಲ್ಲಿ (2016-17 ರಿಂದ 2021-22) ಅರ್ಧಕ್ಕರ್ಧ ಹಣ ಸಂಗ್ರಹವಾಗಿದೆ. 1990-91 to 1995-96 ಅವಧಿಯಲ್ಲಿ 4,363 ಪಬ್ಲಿಕ್ ಷೇರು ಕಂಪನಿಗಳು ಬಂದವು. ಮತ್ತು ಅವು 40,973 ಕೋಟಿ ಸಂಗ್ರಹಿಸಿದವು. ಇನ್ನು 2016 ರಿಂದ 2022 ಅವಧಿಯಲ್ಲಿ 360 ಪಬ್ಲಿಕ್ ಷೇರು ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿದವು. ಇವು ಮಾತ್ರ 4.1 ಲಕ್ಷ ಕೋಟಿ ರೂಪಾಯಿಯನ್ನೇ ಗುಡ್ಡೆ ಹಾಕಿದವು. ಈ ಮಧ್ಯೆ, 1996-97 to 2015-16 ಅವಧಿಯಲ್ಲಿ 1,642 ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಿ, 3.8 ಲಕ್ಷ ಕೋಟಿ ರೂಪಾಯಿ ಬಂಡವಾಳ ಬಾಚಿಕೊಂಡವು.
ಮೊದಲ ಆರು ವರ್ಷಗಳಲ್ಲಿ 1995-96 ನೇ ಆರ್ಥಿಕ ವರ್ಷದಲ್ಲಿ ಗರಿಷ್ಠ ಅಂದರೆ 1,402 ಕಂಪನಿಗಳು ತನ್ನ ಷೇರು ಬಿಟ್ಟವು. ಇನ್ನು ಗರಿಷ್ಠ ಬಂಡವಾಳ ಸಂಗ್ರಹಗೊಂಡಿದ್ದು 1994-95 ನೇ ಸಾಲಿನಲ್ಲಿ, ಒಟ್ಟು 12,928 ಕೋಟಿ ರೂಪಾಯಿ. ಕಳೆದ 6 ವರ್ಷಗಳಲ್ಲಿ ಅತ್ಯಧಿಕ ಷೇರು ಕಂಪನಿಗಳು (76) ಮತ್ತು ಗರಿಷ್ಠ ಹಣ ಸಂಗ್ರಹಗೊಂಡಿದ್ದು (1.3 ಲಕ್ಷ ಕೋಟಿ ರೂಪಾಯಿ) 2021-22 ಆರ್ಥಿಕ ವರ್ಷದಲ್ಲಿ.
2022-23 ನೇ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ (ಏಪ್ರಿಲ್) 4 ಕಂಪನಿಗಳು ಷೇರತು ಮಾರುಕಟ್ಟೆ ಪ್ರವೇಶಿಸಿ, ಬರೋಬ್ಬರಿ 3,204 ಕೋಟಿ ರೂಪಾಯಿ ಸಂಗ್ರಹಿಸಿದವು. ಹೀಗೆ ಷೇರು ಮಾರುಕಟ್ಟೆ ಭಾರೀ ಇಳುವರಿ ಕೊಟ್ಟಿದ್ದು 2017-18 ನೇ ಸಾಲಿನಲ್ಲಿ. ಆಗ 81 ಕಂಪನಿಗಳು 98,984 ಕೋಟಿ ರೂಪಾಯಿ ಸಂಗ್ರಹಿಸಿದವು. ವರ್ಷದಿಂದ ವರ್ಷಕ್ಕೆ IPO ಗಳು ಸಂಗ್ರಹಿಸುತ್ತಿರುವ ಬಂಡವಾಳದ ಮೊತ್ತ ಹೆಚ್ಚಾಗುತ್ತಾ ಸಾಗುತ್ತಿದೆ. ಇದರಿಂದ 1990ರ ದಶಕದಲ್ಲಿನ ಅಲ್ಪ ಸಂಖ್ಯೆಗಳನ್ನು ಮರೆಯುವಂತಿದೆ. 2010ರ ದಶಕದ ಬಳಿಕ ಈ ವಿದ್ಯಮಾನ ಮತ್ತಷ್ಟು ಗಟ್ಟಿಗೊಂಡಿದೆ.
(Source link)
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ