ಮೈಕ್ರೋಸಾಫ್ಟ್ (Microsoft) ಉದ್ಯೋಗಿಗಳಿಗೆ ಇಲ್ಲೊಂದು ಒಳ್ಳೆ ಸುದ್ದಿ ಇದೆ. ಅದೇನಪ್ಪಾ ಅಂತೀರಾ? ಸದ್ಯದಲ್ಲೇ ಸಿಬ್ಬಂದಿಗೆ ಸಂಬಳ ಹೆಚ್ಚಳ ಆಗಲಿದೆ. ಈ ಸುದ್ದಿಯನ್ನು ಕಂಪೆನಿಯ ಸಿಇಒ ಸತ್ಯ ನಾಡೆಲ್ಲಾ ಸ್ವತಃ ಖಾತ್ರಿಪಡಿಸಿದ್ದಾರೆ. ಮೈಕ್ರೋಸಾಫ್ಟ್ “ಜಾಗತಿಕ ಅರ್ಹತೆಯ ಬಜೆಟ್ ಅನ್ನು ಹತ್ತಿರ ಹತ್ತಿರ ದ್ವಿಗುಣಗೊಳಿಸಿದೆ” ಮತ್ತು ಇದು ತಮ್ಮ ವೃತ್ತಿಜೀವನದ ಮಧ್ಯದಲ್ಲಿ (mid career) ಇರುವವರಿಗೆ ಹೆಚ್ಚಿನ ಹಣವನ್ನು ವಿನಿಯೋಗಿಸುತ್ತಿದೆ ಎಂದು ಅವರು ಇಮೇಲ್ನಲ್ಲಿ ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಪ್ರಪಂಚದಾದ್ಯಂತದ ದೊಡ್ಡ ಟೆಕ್ ಕಂಪೆನಿಗಳು ತಮ್ಮಲ್ಲಿನ ಉತ್ತಮ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸುತ್ತಿವೆ.
“ನಮ್ಮ ಪ್ರತಿಭೆಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂಬುದನ್ನು ನೋಡುತ್ತಿದ್ದೇವೆ. ಏಕೆಂದರೆ, ನಮ್ಮ ಗ್ರಾಹಕರು- ಪಾಲುದಾರರನ್ನು ಸಬಲಗೊಳಿಸಲು ಮಾಡುವ ಅದ್ಭುತ ಕೆಲಸದಿಂದಾಗಿ. ನಾಯಕತ್ವದ ತಂಡದಲ್ಲಿ ನಿಮ್ಮ ಪ್ರ ಭಾವವಮ್ಮು ಗುರುತಿಸಲಾಗಿದೆ ಮತ್ತು ಆಳವಾಗಿ ಮೆಚ್ಚುಗೆ ಪಡೆದಿದೆ – ಮತ್ತು ಅದಕ್ಕಾಗಿ ನಾನು ನಿಮಗೆ ದೊಡ್ಡ ಧನ್ಯವಾದ ಹೇಳಲು ಬಯಸುತ್ತೇನೆ. ಅದಕ್ಕಾಗಿಯೇ ನಾವು ನಿಮ್ಮಲ್ಲಿನ ಪ್ರತಿಯೊಬ್ಬರಲ್ಲೂ ದೀರ್ಘಕಾಲೀನ ಹೂಡಿಕೆಗಳನ್ನು ಮಾಡುತ್ತಿದ್ದೇವೆ,” ಎಂದು ಉದ್ಯೋಗಿಗಳಿಗೆ ನಾಡೆಲ್ಲಾ ಅವರು ಇಮೇಲ್ ಮಾಡಿರುವುದಾಗಿ ಗೀಕ್ವೈರ್ಗೆ ತಿಳಿದುಬಂದಿದೆ.
ಅಂದಹಾಗೆ ಭಾರೀ ಪ್ರಮಾಣದ ವೇತನ ಹೆಚ್ಚಳವನ್ನು ಘೋಷಿಸಿದ ಏಕೈಕ ಕಂಪೆನಿ ಮೈಕ್ರೋಸಾಫ್ಟ್ ಏನೂ ಅಲ್ಲ. ಫೆಬ್ರವರಿಯಲ್ಲಿ ಅಮೆಜಾನ್ನಿಂದ ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಿಗಳಿಗೆ ಗರಿಷ್ಠ ಮೂಲವೇತನವನ್ನು 160,000 ಡಾಲರ್ನಿಂದ 350,000 ಡಾಲರ್ಗೆ ದ್ವಿಗುಣಗೊಳಿಸಿದೆ. ಉನ್ನತ ಪ್ರತಿಭಾವಂತರನ್ನು ನೇಮಿಸಿಕೊಳ್ಳಲು ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಹೀಗೆ ವೇತನ ಹೆಚ್ಚಿಸಲಾಗಿದೆ. ಕಂಪೆನಿಯು “ನಮ್ಮ ವೇತನ ಕಾರ್ಯಕ್ರಮಗಳಲ್ಲಿ ಗಮನಾರ್ಹವಾದ ಹೆಚ್ಚುವರಿ ಹೂಡಿಕೆ” ಮಾಡುತ್ತಿದೆ ಎಂದು ನಾಡೆಲ್ಲಾ ಉದ್ಯೋಗಿಗಳಿಗೆ ಮಾಹಿತಿ ನೀಡಿದ್ದು, ಇದು ಅದರ ಸಾಮಾನ್ಯ ಬಜೆಟ್‌ಗಿಂತ ಹೆಚ್ಚಾಗಿದೆ.
ಇದನ್ನೂ ಓದಿ: ಈಗಷ್ಟೇ ಓದು ಮುಗಿಸಿರುವ ಹೈದರಾಬಾದ್ ಹುಡುಗಿಗೆ 2 ಕೋಟಿ ರೂಪಾಯಿ ಸಂಬಳದ ಕೆಲಸ ನೀಡಿದ ಮೈಕ್ರೋಸಾಫ್ಟ್
“ನಿರ್ದಿಷ್ಟವಾಗಿ ನಾವು ಜಾಗತಿಕ ಅರ್ಹತೆಯ ಬಜೆಟ್ ಅನ್ನು ದ್ವಿಗುಣಗೊಳಿಸುತ್ತಿದ್ದೇವೆ. ಸ್ಥಳೀಯ ಮಾರುಕಟ್ಟೆ ಡೇಟಾವನ್ನು ಆಧರಿಸಿ ಮೆರಿಟ್ ಬಜೆಟ್‌ಗಳು ದೇಶಕ್ಕೆ ಬದಲಾಗುತ್ತವೆ ಮತ್ತು ಮಾರುಕಟ್ಟೆ ಬೇಡಿಕೆಗಳು ಮತ್ತು ವೃತ್ತಿಜೀವನದ ಆರಂಭಿಕ ಹಂತಗಳ ಮೇಲೆ ಹೆಚ್ಚು ಅರ್ಥಪೂರ್ಣ ಹೆಚ್ಚಳವನ್ನು ಕೇಂದ್ರೀಕರಿಸಲಾಗುತ್ತದೆ. ಹಂತ 67 ಮತ್ತು ಕೆಳಗಿನ ಎಲ್ಲ ಹಂತಗಳಿಗೆ ನಾವು ವಾರ್ಷಿಕ ಸ್ಟಾಕ್ ಶ್ರೇಣಿಗಳನ್ನು ಕನಿಷ್ಠ ಶೇ 25ರಷ್ಟು ಹೆಚ್ಚಿಸುತ್ತಿದ್ದೇವೆ,” ಎಂದು ಅವರು ಹೇಳಿದ್ದಾರೆ. ಆದ್ದರಿಂದ ಈ ಹೆಚ್ಚಳವು ಇತ್ತೀಚೆಗೆ ಸಂಸ್ಥೆಗೆ ಸೇರಿದ ಉದ್ಯೋಗಿಗಳಿಗೆ ಮತ್ತು ಅವರ ವೃತ್ತಿಜೀವನದ ಮಧ್ಯದಲ್ಲಿರುವ ಉದ್ಯೋಗಿಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಮೈಕ್ರೋಸಾಫ್ಟ್‌ನ “ಪಾಲುದಾರರ ಮಟ್ಟವನ್ನು” ತಲುಪಿದ ಉದ್ಯೋಗಿಗಳು ಸಾಮಾನ್ಯ ವ್ಯವಸ್ಥಾಪಕರು, ಉಪಾಧ್ಯಕ್ಷರು ಮತ್ತು ಇತರ ಉನ್ನತ ಕಾರ್ಯನಿರ್ವಾಹಕರು ಇತರ ಉದ್ಯೋಗಿಗಳಿಗಿಂತ ಹೆಚ್ಚಿನದನ್ನು ಪಡೆಯದಿರಬಹುದು.
ಜನವರಿಯಲ್ಲಿ ಗೂಗಲ್ ತನ್ನ ನಾಲ್ವರು ಉನ್ನತ ಕಾರ್ಯನಿರ್ವಾಹಕರ ಸಂಬಳವನ್ನು ಹೆಚ್ಚಿಸಿತ್ತು. ಅವರ ಮೂಲ ವೇತನವನ್ನು 650,000 ಡಾಲರ್ರಿಂದ 1 ಮಿಲಿಯನ್ ಡಾಲರ್ಗೆ ಹೆಚ್ಚಿಸಲಾಯಿತು. ಹಿರಿಯ ಉಪಾಧ್ಯಕ್ಷ ಪ್ರಭಾಕರ ರಾಘವನ್ (ಗೂಗಲ್ ಸರ್ಚ್ ಉಸ್ತುವಾರಿ), ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ವ್ಯಾಪಾರ ಅಧಿಕಾರಿ ಫಿಲಿಪ್ ಶಿಂಡ್ಲರ್, ಜಾಗತಿಕ ವ್ಯವಹಾರಗಳ ಅಧ್ಯಕ್ಷ ಮತ್ತು ಮುಖ್ಯ ಕಾನೂನು ಅಧಿಕಾರಿ ಕೆಂಟ್ ವಾಕರ್ ಹಾಗೂ ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಟ್ ಹೆಚ್ಚಳವನ್ನು ಪಡೆದ ಉನ್ನತ ಉದ್ಯೋಗಿಗಳಲ್ಲಿ ಸೇರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Microsoft: ಮೈಕ್ರೋಸಾಫ್ಟ್ ಪ್ರತಿ ಸಿಬ್ಬಂದಿಗೆ 1 ಲಕ್ಷ ರೂ.ಗೂ ಹೆಚ್ಚು ಬೋನಸ್ ಘೋಷಣೆ; ಇದಕ್ಕಾಗಿ 1480 ಕೋಟಿ ರೂ. ವೆಚ್ಚ